Home
ಮೊಬೈಲ್

Infinix GT 30 Pro ಗೇಮಿಂಗ್ ಫೋನ್ ಬಿಡುಗಡೆಗೆ ಸಜ್ಜು!

ಟ್ರಾನ್ಸ್‌ಷನ್ ಹೋಲ್ಡಿಂಗ್ಸ್‌ನ ಉಪ ಬ್ರ್ಯಾಂಡ್ ಆಗಿರುವ Infinix ತನ್ನ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ Infinix GT 30 Pro ಅನ್ನು ಮುಂದಿನ ವಾರ ಬಿಡುಗಡೆ ಮಾಡಲು ಸಿದ್ಧವಾಗಿದೆ. ಕಂಪನಿಯು ಸಾಮಾಜಿಕ ಮಾಧ್ಯಮದ ಪೋಸ್ಟ್ ಮೂಲಕ ಈ ಮಾಹಿತಿಯನ್ನು ಖಚಿತಪಡಿಸಿದ್ದು, ಈ ಹೊಸ ಫೋನ್ ಕಳೆದ ವರ್ಷ ಭಾರತದಲ್ಲಿ ಬಿಡುಗಡೆಯಾದ Infinix GT 20 Pro ಸರಣಿಯ ಮುಂದುವರೆದ ಭಾಗವಾಗಿ ಬರುತ್ತಿದೆ. ಗೇಮಿಂಗ್ ಅನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಈ ಫೋನ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು Infinix ಕಂಪನಿ ತಿಳಿಸಿದೆ. ಆದರೆ, ಇದೀಗ ಈ ಪೋನ್ ಮಲೇಷ್ಯಾದಲ್ಲಿ ಮಾತ್ರ ಬಿಡುಗಡೆಯಾಗುತ್ತಿದೆ.

ಹೌದು, Infinix ಮಲೇಷ್ಯಾ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, ಈ ಸ್ಮಾರ್ಟ್‌ಫೋನ್ ಅನ್ನು ಮಲೇಷ್ಯಾದಲ್ಲಿ ಮೇ 21 ರಂದು ಮಧ್ಯಾಹ್ನ 3:00 ಗಂಟೆಗೆ (ಭಾರತೀಯ ಕಾಲಮಾನ ಮಧ್ಯಾಹ್ನ 12:30) ಅನಾವರಣಗೊಳಿಸಲಾಗುವುದು ಎಂದು ಘೋಷಿಸಿದೆ. ಈ ಬಿಡುಗಡೆ ಕಾರ್ಯಕ್ರಮವನ್ನು ಇನ್ಫಿನಿಕ್ಸ್‌ನ ಅಧಿಕೃತ ಫೇಸ್‌ಬುಕ್ ಮತ್ತು ಟಿಕ್‌ಟಾಕ್ ಖಾತೆಗಳಲ್ಲಿ ನೇರಪ್ರಸಾರ ಮಾಡಲಾಗುತ್ತದೆ. Infinix GT 30 Pro ಕುರಿತಾದ ಹೆಚ್ಚಿನ ತಾಂತ್ರಿಕ ವಿವರಗಳನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ. ಆದರೂ, ಇದು 144Hz ರಿಫ್ರೆಶ್ ದರದೊಂದಿಗೆ AMOLED ಡಿಸ್ಪ್ಲೇಯನ್ನು ಹೊಂದಿರುವ ಸಾಧ್ಯತೆ ಇದೆ. ಅಲ್ಲದೆ, ಶಕ್ತಿಯುತವಾದ ಮೀಡಿಯಾ ಟೆಕ್ ಡೈಮೆನ್ಸಿಟಿ 8350 ಅಲ್ಟಿಮೇಟ್ ಚಿಪ್‌ಸೆಟ್ ಅನ್ನು ಈ ಫೋನಿನಲ್ಲಿ ಅಳವಡಿಸುವ ನಿರೀಕ್ಷೆಯಿದೆ, ಇದು ಗೇಮಿಂಗ್ ಮತ್ತು ಇತರ ಕಾರ್ಯಕ್ಷಮತೆ-ಆಧಾರಿತ ಅಪ್ಲಿಕೇಶನ್‌ಗಳಿಗೆ ಅತ್ಯುತ್ತಮ ಅನುಭವವನ್ನು ನೀಡಬಲ್ಲದು ಎನ್ನಲಾಗಿದೆ.

ಬಿಡುಗಡೆಗೆ ಮುಂಚಿನ ಟೀಸರ್ ಚಿತ್ರಗಳು "ಕ್ಯಾರಿ ಲೈಕ್ ಎ ಪ್ರೊ" ಎಂಬ ಟ್ಯಾಗ್‌ಲೈನ್ ಅನ್ನು ಹೊಂದಿದೆ ಈ ಫೋನ್ ಮೀಡಿಯಾ ಟೆಕ್ ಚಿಪ್‌ಸೆಟ್‌ನೊಂದಿಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು ಟೀಸರ್ ದೃಢಪಡಿಸಿದೆ. ಇತ್ತೀಚಿನ ಸೋರಿಕೆಗಳ ಪ್ರಕಾರ, Infinix GT 30 Pro 6.78-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿರಲಿದ್ದು, ಇದು 1.5K ರೆಸಲ್ಯೂಶನ್ ಮತ್ತು 144Hz ನಷ್ಟು ಹೆಚ್ಚಿನ ರಿಫ್ರೆಶ್ ದರವನ್ನು ನೀಡುತ್ತದೆ. ಇದು RGB ಲೈಟಿಂಗ್ ಅಂಶಗಳನ್ನು ಸಹ ಒಳಗೊಂಡಿರುವ ಸಾಧ್ಯತೆ ಇದೆ, ಇದು ಫೋನಿಗೆ ವಿಶಿಷ್ಟವಾದ ನೋಟವನ್ನು ನೀಡುತ್ತದೆ. ಕಾರ್ಯಕ್ಷಮತೆಯ ವಿಷಯದಲ್ಲಿ, ಈ ಫೋನ್ 12GB ವರೆಗಿನ RAM ಮತ್ತು 512GB ವರೆಗಿನ ಆಂತರಿಕ ಸಂಗ್ರಹಣೆಯೊಂದಿಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 8350 ಅಲ್ಟಿಮೇಟ್ SoC ಯಿಂದ ಚಾಲಿತವಾಗುವ ನಿರೀಕ್ಷೆಯಿದೆ. ಇದು ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ XOS 15 ಸ್ಕಿನ್ ಅನ್ನು ಒಳಗೊಂಡಿರಬಹುದು.

Infinix GT 30 Pro ಗೇಮಿಂಗ್ ಫೋನ್ ಬಿಡುಗಡೆಗೆ ಸಜ್ಜು!

ಕ್ಯಾಮೆರಾ ವಿಭಾಗದಲ್ಲಿ, Infinix GT 30 Pro ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಅನ್ನು ಬೆಂಬಲಿಸುವ 108-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಶೂಟರ್ ಅನ್ನು ಒಳಗೊಂಡಿರುವ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು. ಮುಂಭಾಗದಲ್ಲಿ, 13-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸುವ ಸಾಧ್ಯತೆ ಇದೆ. ಬ್ಯಾಟರಿ ವಿಷಯಕ್ಕೆ ಬಂದರೆ, ಇದು 67W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವ ನಿರೀಕ್ಷೆಯಿದೆ. ಗೇಮಿಂಗ್ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸಲು, ಈ ಫೋನ್ ಕೆಪ್ಯಾಸಿಟಿವ್ ಶೋಲ್ಡರ್ ಟ್ರಿಗ್ಗರ್‌ಗಳೊಂದಿಗೆ ಬರಬಹುದು ಎಂದು ಹೇಳಲಾಗುತ್ತಿದೆ. Infinix GT 30 Pro ಜೊತೆಗೆ, ಕಂಪನಿಯು ಹೊಸ ಇನ್ಫಿನಿಕ್ಸ್ ಎಕ್ಸ್‌ಪ್ಯಾಡ್ ಜಿಟಿ ಗೇಮಿಂಗ್ ಟ್ಯಾಬ್ಲೆಟ್ ಮತ್ತು ಜಿಟಿ ಬಡ್ಸ್ ಅನ್ನು ಸಹ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಹಿಂದಿನ ಮಾದರಿಯಾದ Infinix GT 20 Pro ಅನ್ನು ಕಳೆದ ವರ್ಷ ಮೇ ತಿಂಗಳಲ್ಲಿ ಭಾರತದಲ್ಲಿ ರೂ. 22,999 ರ ಆರಂಭಿಕ ಬೆಲೆಯೊಂದಿಗೆ ಬಿಡುಗಡೆ ಮಾಡಲಾಗಿತ್ತು. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಅಲ್ಟಿಮೇಟ್ SoC, 5,000mAh ಬ್ಯಾಟರಿ, 108-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ, 45W ವೇಗದ ಚಾರ್ಜಿಂಗ್ ಮತ್ತು 6.78-ಇಂಚಿನ ಫುಲ್-HD+ LTPS AMOLED ಡಿಸ್ಪ್ಲೇಯಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿತ್ತು. ಈ ಹಿನ್ನೆಲೆಯಲ್ಲಿ, Infinix GT 30 Pro ಕೂಡ ತನ್ನ ಹಿಂದಿನ ಮಾದರಿಯ ಯಶಸ್ಸನ್ನು ಮುಂದುವರೆಸಿಕೊಂಡು ಹೋಗುವ ನಿರೀಕ್ಷೆಯಿದೆ. ಆದರೆ, ಭಾರತದಲ್ಲಿ ಈ ಸ್ಮಾರ್ಟ್‌ಫೋನ್ ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಕಂಪೆನಿಯಿಂದ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ. ಭಾರತವು Infinix ಕಂಪೆನಿಗೆ ದೊಡ್ಡ ಮಾರುಕಟ್ಟೆಯಾಗಿರುವುದರಿಂದ, ಶೀಘ್ರದಲ್ಲೇ ದೇಶದಲ್ಲೂ ಸಹ Infinix GT 30 Pro ಫೋನ್ ಬಿಡುಗಡೆಯನ್ನು ನಾವು ನಿರೀಕ್ಷಿಸಬಹುದು.

Best Mobiles in India

English summary
The teaser images feature the tagline "Carry Like A Pro" and confirm that the Infinix GT 30 Pro will be powered by a MediaTek chipset.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+