Home
ಮೊಬೈಲ್

ಇನ್ಫಿನಿಕ್ಸ್ ಜಿಟಿ 50 ಪ್ರೊ: ಗೇಮಿಂಗ್‌ಗೆ ಬೆಸ್ಟ್ ಫೋನ್? ಕೂಲಿಂಗ್ ಮತ್ತು ಬ್ಯಾಟರಿ ಪರ್ಫಾರ್ಮೆನ್ಸ್ ಹೇಗಿದೆ?

ಇಂದಷ್ಟೇ (ಅಕ್ಟೋಬರ್ 27) ಇನ್ಫಿನಿಕ್ಸ್ ಜಿಟಿ 50 ಪ್ರೊ (Infinix GT 50 Pro) ಭಾರತದ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಗೇಮಿಂಗ್‌ ಪ್ರಿಯರನ್ನು ಸೆಳೆಯಲು ಬಂದಿರುವ ಈ ಫೋನ್‌ನಲ್ಲಿ ಹೈಡ್ರೋಫ್ಲೋ ಕೂಲಿಂಗ್ ಸಿಸ್ಟಮ್ ಹಾಗೂ ಶೋಲ್ಡರ್ ಜಿಟಿ ಟ್ರಿಗರ್‌ಗಳನ್ನು ನೀಡಲಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ ಲಭ್ಯವಿರುವ ಈ ಸ್ಮಾರ್ಟ್‌ಫೋನ್‌ನಲ್ಲಿ 6,500mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಜೊತೆಗೆ 45W ವೈರ್ಡ್ ಹಾಗೂ 30W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಇದೆ. ಭಾರತೀಯ ಗ್ರಾಹಕರಿಗೆ ಅಗತ್ಯವಿರುವ ರಿಯಲ್ ಎಫ್‌ಪಿಎಸ್ ಸ್ಟೆಬಿಲಿಟಿ, ಫೋನ್ ಬಿಸಿಯಾಗುವ ತೀವ್ರತೆ ಮತ್ತು 45W ಚಾರ್ಜಿಂಗ್ ಸ್ಪೀಡ್ ಕುರಿತ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ಇನ್ಫಿನಿಕ್ಸ್‌ನ ಟೀಸರ್ ಪ್ರಕಾರ, ಇದರ 'ಎಕ್ಸ್‌ಪ್ಲಿಸಿಟ್ ವ್ಯೂಪೋರ್ಟ್ ಡಿಸೈನ್'ನಿಂದಾಗಿ ಒಳಗಿನ ಕೂಲಿಂಗ್ ಚಾನೆಲ್‌ಗಳು ಹೊರಗಿನಿಂದಲೇ ಕಣ್ಣಿಗೆ ಕಾಣಿಸುತ್ತವೆ. ಗೇಮಿಂಗ್ ಆಡುವಾಗ ವೈರ್‌ಲೆಸ್ ಬೈಪಾಸ್ ಚಾರ್ಜಿಂಗ್ ಸೌಲಭ್ಯ ನೀಡುವ 'ಮ್ಯಾಗ್ ಚಾರ್ಜ್ ಕೂಲರ್ 2.0' (MagCharge Cooler 2.0) ಒಳಗೊಂಡ ಜಿಟಿ ಈಕೋಸಿಸ್ಟಮ್ ಕುರಿತೂ ಕಂಪನಿ ಸುಳಿವು ನೀಡಿದೆ. "ಮೊಬೈಲ್ ಗೇಮಿಂಗ್‌ನಲ್ಲೂ ಕನ್ಸೋಲ್ ಶೈಲಿಯ ಕಂಟ್ರೋಲ್ ನೀಡಲು ಜಿಟಿ 50 ಪ್ರೊನಲ್ಲಿ ಜಿಟಿ ಟ್ರಿಗರ್ ಸಿಸ್ಟಮ್ ನೀಡಲಾಗಿದೆ" ಎಂದು ಕಂಪನಿ ಹೇಳಿದೆ. ಇದರಿಂದ ಗೇಮ್ ಆಡುವಾಗ ಫೋನ್ ಹೆಚ್ಚು ಬಿಸಿಯಾಗುವುದಿಲ್ಲ ಮತ್ತು ಕಂಟ್ರೋಲಿಂಗ್ ಕೂಡ ಆರಾಮದಾಯಕವಾಗಿರುತ್ತದೆ.

ಇನ್ಫಿನಿಕ್ಸ್ ಜಿಟಿ 50 ಪ್ರೊ: ಗೇಮಿಂಗ್‌ಗೆ ಬೆಸ್ಟ್ ಫೋನ್?

Infinix GT 50 Pro ಎಫ್‌ಪಿಎಸ್ ಮತ್ತು ಥರ್ಮಲ್ ಪರ್ಫಾರ್ಮೆನ್ಸ್

ಆಯ್ದ ಪ್ರಮುಖ ಗೇಮ್‌ಗಳಲ್ಲಿ 144 ಎಫ್‌ಪಿಎಸ್ (FPS) ನೀಡುತ್ತದೆ ಎಂದು ಇನ್ಫಿನಿಕ್ಸ್ ಹೇಳಿಕೊಳ್ಳುತ್ತಿದೆ. ಆದರೆ ಇದು ಆಯಾ ಗೇಮ್‌ಗಳ ಮೇಲೂ ಆಧಾರಪಟ್ಟಿರುತ್ತದೆ. 'ಕಾಲ್ ಆಫ್ ಡ್ಯೂಟಿ: ಮೊಬೈಲ್' ಗೇಮ್‌ ವೈಟ್‌ಲಿಸ್ಟ್ ಪ್ರಕ್ರಿಯೆಯಿಂದಾಗಿ ಹಲವು ಡಿವೈಸ್‌ಗಳಲ್ಲಿ 120fps ಬದಲಿಗೆ 60fps ಗಷ್ಟೇ ಸೀಮಿತವಾಗುತ್ತಿದೆ ಎಂಬ ವರದಿಗಳಿವೆ. ಆದಾಗ್ಯೂ ಜಿಟಿ 50 ಪ್ರೊ ರಿವ್ಯೂ ವಿಡಿಯೋಗಳಲ್ಲಿ ಬಿಜಿಎಂಐ (BGMI) ಗೇಮ್‌ಗಾಗಿ 90 ಅಥವಾ 120 ಎಫ್‌ಪಿಎಸ್ ಆಪ್ಷನ್ ಸಪೋರ್ಟ್ ಇರುವುದು ಸ್ಪಷ್ಟವಾಗಿದೆ. ಇನ್ನು ಫೋನ್‌ಗೆ ಕೂಲರ್ ಅಳವಡಿಸಿ ಗೇಮ್ ಆಡಿದಾಗ ಪರ್ಫಾರ್ಮೆನ್ಸ್ ಮತ್ತಷ್ಟು ಸ್ಟೇಬಲ್ ಆಗಿರುತ್ತದೆ ಎಂದು ರಿವ್ಯೂವರ್‌ಗಳು ಗಮನಿಸಿದ್ದಾರೆ.

Infinix GT 50 Pro ಬ್ಯಾಟರಿ ಲೈಫ್ ಮತ್ತು 45W ಚಾರ್ಜಿಂಗ್

ಈ ಫೋನಿನ ಬ್ಯಾಟರಿ ಬ್ಯಾಕಪ್ ಮತ್ತು ಚಾರ್ಜಿಂಗ್ ಸಾಮರ್ಥ್ಯವನ್ನು ಈಗಾಗಲೇ ವಿವಿಧ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. GSMArena ನಡೆಸಿರುವ ಪರೀಕ್ಷೆಯಂತೆ, ಇದರ ಆಕ್ಟಿವ್ ಯೂಸ್ ಸ್ಕೋರ್ 15 ಗಂಟೆ 28 ನಿಮಿಷ ದಾಖಲಾಗಿದ್ದು, ಸತತ 10 ಗಂಟೆಗಳ ಕಾಲ ಗೇಮಿಂಗ್ ಆಡಬಹುದು. ಬಾಕ್ಸ್‌ನಲ್ಲಿ ಸಿಗುವ 45W ಅಡಾಪ್ಟರ್ ಬಳಸಿ 0 ಯಿಂದ 100 ಪ್ರತಿಶತ ಚಾರ್ಜ್ ಮಾಡಲು 67 ನಿಮಿಷ ಬೇಕಾಗಲಿದ್ದು, 15 ನಿಮಿಷದಲ್ಲಿ ಶೇ.29 ರಷ್ಟು ಚಾರ್ಜ್ ಆಗುತ್ತದೆ. ಇದರೊಂದಿಗೆ 30W ವೈರ್‌ಲೆಸ್ ಚಾರ್ಜಿಂಗ್ ಹಾಗೂ ಮ್ಯಾಗ್‌ಚಾರ್ಜ್ ಕೂಲರ್ 2.0 ಜೊತೆಗೆ ವೈರ್‌ಲೆಸ್ ಬೈಪಾಸ್ ಚಾರ್ಜಿಂಗ್ ಸಪೋರ್ಟ್ ಕೂಡ ಇಲ್ಲಿದೆ.

ಪರೀಕ್ಷಿತ ಅಂಶಫಲಿತಾಂಶ
ಗೇಮಿಂಗ್ ಬ್ಯಾಟರಿ ಬ್ಯಾಕಪ್ಸತತ ~10 ಗಂಟೆ ಗೇಮಿಂಗ್
0–100% ವೈರ್ಡ್ ಚಾರ್ಜಿಂಗ್67 ನಿಮಿಷಗಳು
15 ನಿಮಿಷಗಳ ಚಾರ್ಜ್29% ಚಾರ್ಜ್
ವೈರ್‌ಲೆಸ್ ಚಾರ್ಜಿಂಗ್30W; ಕೂಲರ್ ಜೊತೆ ವೈರ್‌ಲೆಸ್ ಬೈಪಾಸ್ ಬೆಂಬಲವಿದೆ

Infinix GT 50 Pro ಡಿಸ್‌ಪ್ಲೇ, ಟಚ್ ರೆಸ್ಪಾನ್ಸ್ ಮತ್ತು ಬ್ರೈಟ್‌ನೆಸ್ ವಿವರ

ಇನ್ಫಿನಿಕ್ಸ್ ಫೋನಿನ ಡಿಸ್‌ಪ್ಲೇ ಫೀಚರ್‌ಗಳು ಆಕರ್ಷಕವಾಗಿವೆ. GSMArena ಪರೀಕ್ಷೆಯ ಪ್ರಕಾರ, ಇದು 704 ನಿಟ್ಸ್ ಸಾಮಾನ್ಯ ಬ್ರೈಟ್‌ನೆಸ್ ಹಾಗೂ ಹೈ-ಬ್ರೈಟ್‌ನೆಸ್ ಮೋಡ್‌ನಲ್ಲಿ 1,694 ನಿಟ್ಸ್ ನೀಡಲಿದ್ದು, ಗರಿಷ್ಠ ಬ್ರೈಟ್‌ನೆಸ್ (Peak Brightness) 2,200 ನಿಟ್ಸ್‌ಗಿಂತಲೂ ಹೆಚ್ಚಿರಲಿದೆ. 144Hz ಡಿಸ್‌ಪ್ಲೇ ಹೊಂದಿದ್ದರೂ, ಹೆಚ್ಚಿನ ಆ್ಯಪ್‌ಗಳು 120Hz ನಲ್ಲೇ ರನ್ ಆಗುತ್ತವೆ. ಇನ್ನು ಇದರಲ್ಲಿ 330Hz ಟಚ್ ಸ್ಯಾಂಪ್ಲಿಂಗ್ ರೇಟ್ ನೀಡಲಾಗಿದೆ. ನೇರ ಬಿಸಿಲಿನಲ್ಲಿ ಇದರ ಬ್ರೈಟ್‌ನೆಸ್ ಸಾಮರ್ಥ್ಯ ಹಾಗೂ ಗೇಮಿಂಗ್ ವೇಳೆಯ ಟಚ್ ರೆಸ್ಪಾನ್ಸ್ ಹೇಗಿರಲಿದೆ ಎಂಬುದನ್ನು ನಾವು ಇಂದು ಪರಿಶೀಲಿಸಲಿದ್ದೇವೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+