Home
ಮೊಬೈಲ್

ಬರ್ತಿದೆ Infinixನ ಜಬರ್ದಸ್ತ್‌ ಫೋನ್‌: ಬಿಡುಗಡೆ ದಿನಾಂಕ ಘೋಷಣೆ; ಕಡಿಮೆ ಬೆಲೆ!

ಚೀನಾದ ಸ್ಮಾರ್ಟ್‌ಫೋನ್ ಬ್ರಾಂಡ್ ಇನ್ಫಿನಿಕ್ಸ್ (Infinix) ಶೀಘ್ರದಲ್ಲೇ ತನ್ನ Hot ಸರಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ. ಈ ಮೊಬೈಲ್ ಇನ್ಫಿನಿಕ್ಸ್ ಹಾಟ್ 50 5G (Infinix Hot 50 5G) ಎಂಬ ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಹೌದು, ಇನ್ಫಿನಿಕ್ಸ್ ಕಂಪನಿಯು ಭಾರತದ ಬಿಡುಗಡೆ ದಿನಾಂಕ, ವಿನ್ಯಾಸ ಮತ್ತು ಇನ್ಫಿನಿಕ್ಸ್ ಹಾಟ್ 50 5G ಫೋನಿನ ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. ಈ ಫೋನ್ ಕಡಿಮೆ ಬೆಲೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಬನ್ನಿ, ಈ ಫೋನಿನ ಬಿಡುಗಡೆ ದಿನಾಂಕ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಇನ್ಫಿನಿಕ್ಸ್ ಹಾಟ್ 50 5G (Infinix Hot 50 5G) ಬಿಡುಗಡೆ ದಿನಾಂಕವನ್ನು ಅಂತಿಮಗೊಳಿಸಲಾಗಿದೆ. ಇನ್ಫಿನಿಕ್ಸ್ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 6 ರಂದು ಭಾರತದಲ್ಲಿ ಲೋಕಾರ್ಪಣೆಗೊಳಿಸಲಾಗುತ್ತದೆ. ವಿಶೇಷವೆಂದರೆ ಈ ಸ್ಮಾರ್ಟ್‌ಫೋನ್ 7.8 ಎಂಎಂ ದಪ್ಪವನ್ನು ಹೊಂದಿದೆ. ಈ ಸ್ಲಿಮ್ ವಿನ್ಯಾಸವು ಸ್ಮಾರ್ಟ್‌ಫೋನ್‌ ಪ್ರಿಯರನ್ನು ಆಕರ್ಷಿಸುವಲ್ಲಿ ಯಾವುದೇ ಅನುಮಾನವಿಲ್ಲ. ಇದು ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ.

ಬರ್ತಿದೆ Infinixನ ಜಬರ್ದಸ್ತ್‌ ಫೋನ್‌: ಬಿಡುಗಡೆ ದಿನಾಂಕ ಘೋಷಣೆ; ಕಡಿಮೆ ಬೆಲೆ!

ಇನ್ಫಿನಿಕ್ಸ್ ಹಾಟ್ 50 5G ಫೋನಿನ ವಿನ್ಯಾಸ

ಮುಂಬರುವ ಇನ್ಫಿನಿಕ್ಸ್ ಹಾಟ್ 50 5Gಯು ಸ್ಮಾರ್ಟ್‌ಫೋನ್ ವಿಭಾಗದಲ್ಲಿ ತೆಳುವಾದ ಮೊಬೈಲ್ ಎಂದು ಕಂಪನಿಯು ಹೇಳಿದೆ. ಇನ್ಫಿನಿಕ್ಸ್ ಹಾಟ್ 50 5G ಫೋನಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಹಿಂದಿನ ಪ್ಯಾನೆಲ್‌ನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು LED ಫ್ಲ್ಯಾಷ್ ಇದೆ. ಮುಂಭಾಗದಲ್ಲಿ ಪಂಚ್ ಹೋಲ್ ನಾಚ್ ಇದೆ.

ಇನ್ಫಿನಿಕ್ಸ್ ಹಾಟ್ 50 5G ಫೋನ್ IP54 ನೀರು ಮತ್ತು ಧೂಳಿನ ನಿರೋಧಕ ರೇಟಿಂಗ್‌ನೊಂದಿಗೆ ಬರುತ್ತದೆ. ಟೀಸರ್‌ನಲ್ಲಿ ಕಂಡುಬರುವ ಫೋನ್ ನೀಲಿ ಮತ್ತು ಹಸಿರು ಬಣ್ಣಗಳಲ್ಲಿದೆ. ಈ ಫೋನ್ ಹಿಂದಿನ ಮಾದರಿಗಿಂತ ವಿಭಿನ್ನ ಲುಕ್‌ನೊಂದಿಗೆ ಬರಲಿದೆ ಎಂದು ತಿಳಿದುಬಂದಿದೆ.

ಇನ್ಫಿನಿಕ್ಸ್ ಹಾಟ್ 50 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ: ಇನ್ಫಿನಿಕ್ಸ್ ಹಾಟ್ 50 5G ಫೋನ್ 1600 X 720 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ HD+ ಡಿಸ್ಪ್ಲೇಯನ್ನು ಹೊಂದಿರುತ್ತದೆ.

ಪ್ರೊಸೆಸರ್: ಇನ್ಫಿನಿಕ್ಸ್ ಹಾಟ್ 50 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌ ಅನ್ನು ಹೊಂದಿರಲಿದೆ. ಈ ಚಿಪ್‌ಸೆಟ್ ಬಹುಕಾರ್ಯಕ ಮತ್ತು ವೇಗದ ಸಂಪರ್ಕಕ್ಕೆ ಸೂಕ್ತವಾಗಿದೆ. ಬಾಕ್ಸ್ ಹೊರಗೆ Android 14 OS ಅನ್ನು ರನ್ ಮಾಡುತ್ತದೆ.

ಬರ್ತಿದೆ Infinixನ ಜಬರ್ದಸ್ತ್‌ ಫೋನ್‌: ಬಿಡುಗಡೆ ದಿನಾಂಕ ಘೋಷಣೆ; ಕಡಿಮೆ ಬೆಲೆ!

ಸ್ಟೋರೇಜ್: ಈ ಹೊಸ ಮೊಬೈಲ್ 128GB UFS 2.2 ಸ್ಟೋರೇಜ್, 4GB ಮತ್ತು 8GB RAM ಒಳಗೊಂಡಿರಲಿದೆ. ಈ ವಿಭಾಗದಲ್ಲಿ ಮೊದಲ ಬಾರಿಗೆ, ಇನ್ಫಿನಿಕ್ಸ್ ಹಾಟ್ 50 5G ಫೋನ್ TUV SUD A ಮಟ್ಟದ 60 ತಿಂಗಳ ನಿರರ್ಗಳ ಭರವಸೆಯೊಂದಿಗೆ ಬರುತ್ತದೆ. ಅದರಂತೆ ಈ ಫೋನ್ 5 ವರ್ಷಗಳವರೆಗೆ ಶಕ್ತಿಯುತವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಬಹುದು.

ಬ್ಯಾಟರಿ: ಕಂಪನಿಯು ಮುಂಬರು ಇನ್ಫಿನಿಕ್ಸ್ ಹಾಟ್ 50 5G ಫೋನಿನಲ್ಲಿ 4900mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಲಿದೆ. ಈ ಫೋನ್ ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಚಾರ್ಜಿಂಗ್ ವೇಗದ ವಿವರಗಳು ಇನ್ನೂ ಲಭ್ಯವಾಗಿಲ್ಲ.

ಇನ್ನೂ, ಇನ್ಫಿನಿಕ್ಸ್ ಹಾಟ್ 50 5G ಸ್ಮಾರ್ಟ್‌ಫೋನ್ IP54 ರೇಟೆಡ್ ಪಡೆದಿದೆ. ಮತ್ತು ಆರ್ದ್ರ ಸ್ಪರ್ಶ ಬೆಂಬಲವನ್ನು ಹೊಂದಿದೆ. ಈ ಫೋನ್ ಅನ್ನು ನೀರಿನ ಚಿಮುಕಿಸುವಿಕೆಯೊಂದಿಗೆ (ವಾಟರ್ ಸ್ಪ್ಲಾಶ್) ಬಳಸಬಹುದಾಗಿದೆ. ಉಳಿದಂತೆ, ಹೆಚ್ಚಿನ ವೈಶಿಷ್ಟ್ಯಗಳನ್ನು ಸೆಪ್ಟೆಂಬರ್ 2 ರಂದು ಬಹಿರಂಗಪಡಿಸಲಾಗುವುದು ಎಂದು ಕಂಪನಿ ಹೇಳಿದೆ.

Best Mobiles in India

English summary
Infinix Hot 50 5G India Launch Date Confirmed: Know design, specs and More Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+