Infinix Hot 50 5G ಬೆಲೆ ಲೀಕ್: ಅತೀ ಕಡಿಮೆ ದರ.. ಲಾಂಚ್ ಯಾವಾಗ?
ಹೊಸ ಫೋನ್ ಖರೀದಿಸಲು ಯೋಜಿಸಿದ್ದೀರಾ? ಹಾಗಿದ್ರೆ, ಸ್ವಲ್ಪ ಕಾಯಿರಿ. ಅತೀ ಕಡಿಮೆ ಬೆಲೆಗೆ 5G ಫೋನ್ ಭಾರತಕ್ಕೆ ಎಂಟ್ರಿ ಕೊಡುತ್ತಿದೆ. ಹೌದು, ಇನ್ಫಿನಿಕ್ಸ್ ಕಂಪನಿಯು ತನ್ನ Hot ಸರಣಿಯಲ್ಲಿ ನೂತನ ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಇನ್ಫಿನಿಕ್ಸ್ ಹಾಟ್ 50 5G (Infinix Hot 50 5G) ಅನ್ನು ಇದೇ ಸೆಪ್ಟೆಂಬರ್ 6 ರಂದು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಫೋನಿನ ಬೆಲೆ, ವಿನ್ಯಾಸ ಸೋರಿಕೆಯಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಹೌದು, ಇನ್ಫಿನಿಕ್ಸ್ ಹಾಟ್ 50 5G ಸ್ಮಾರ್ಟ್‌ಫೋನ್ ಅನ್ನು ಸೆಪ್ಟೆಂಬರ್ 5 ರಂದು ಭಾರತದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ, ಈಗಾಗಲೇ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಮೈಕ್ರೋಸೈಟ್ ಲೈವ್ ಆಗಿದೆ. ಇಲ್ಲಿ ಕಂಪನಿಯು ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. ಮತ್ತೊಂದೆಡೆ, ಬಿಡುಗಡೆಯ ಮೊದಲೇ ಈ ಫೋನಿನ ಬೆಲೆ ಮತ್ತು ಇತರೆ ಪ್ರಮುಖ ವೈಶಿಷ್ಟ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ ಆಗಿದೆ.

ಇನ್ಫಿನಿಕ್ಸ್ ಹಾಟ್ 50 5G ನಿರೀಕ್ಷಿತ ಬೆಲೆ
ಇನ್ಫಿನಿಕ್ಸ್ ಹಾಟ್ 50 5G ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ 9,000 ರೂ.ಗಿಂತ ಕಡಿಮೆ ಬೆಲೆಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇದು ಈ ಫೋನಿನ ಮೂಲ ರೂಪಾಂತರದ ಬೆಲೆ ಆಗಿರುತ್ತದೆ. ಇದರೊಂದಿಗೆ ಬ್ಯಾಂಕ್ ಆಫರ್ ಕೂಡ ಸೇರಿರುತ್ತದೆ. ಇನ್ಫಿನಿಕ್ಸ್ ಹಾಟ್ 50 5G ಮೊಬೈಲ್ ಸುಮಾರು 16GB RAM ಅನ್ನು ಹೊಂದಿರುತ್ತದೆ. ಅಂದರೆ 8GB ಸಾಮಾನ್ಯ ಮತ್ತು 8GB ವರ್ಚುವಲ್ RAM, 128GB ಇಂಟರ್ನಲ್ ಸ್ಟೋರೇಜ್ ಅನ್ನು ಒಳಗೊಂಡಿರಲಿದೆ.
ಮುಂಬರುವ ಈ ಹೊಸ ಫೋನ್ 120Hz ರಿಫ್ರೆಶ್ ದರದೊಂದಿಗೆ ಡೈನಾಮಿಕ್ ಬಾರ್ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಜೊತೆಗೆ, ಇದು TUV ಪ್ರಮಾಣೀಕರಣದೊಂದಿಗೆ ಬರಲಿದೆ. ಇನ್ಫಿನಿಕ್ಸ್ ಹಾಟ್ 50 5G ಫೋನ್ ಸೆಗ್ಮೆಂಟ್ ಮೊದಲ TUV SUD A ಮಟ್ಟದ 60 ತಿಂಗಳ ವಾರಂಟಿಯೊಂದಿಗೆ ಬರುತ್ತದೆ. ಇದು 5 ವರ್ಷಗಳ ಕಾಲ ನಿರಂತರವಾಗಿ ಬಲವಾದ ಕಾರ್ಯಕ್ಷಮತೆಯನ್ನು ನೀಡಲು ಸಹಾಯ ಮಾಡುತ್ತದೆ.
ಇನ್ಫಿನಿಕ್ಸ್ ಹಾಟ್ 50 5G ಫೋನಿನ ವಿನ್ಯಾಸ
ಇನ್ಫಿನಿಕ್ಸ್ ಹಾಟ್ 50 5G ಫೋನ್ ಹಿಂದಿನ ಪ್ಯಾನೆಲ್‌ನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು LED ಫ್ಲ್ಯಾಷ್ ಅನ್ನು ಹೊಂದಿರುತ್ತದೆ. ಇದರ ಮುಂಭಾಗದಲ್ಲಿ ಪಂಚ್ ಹೋಲ್ ನಾಚ್ ಇರುತ್ತದೆ. ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP54 ರೇಟಿಂಗ್ ಅನ್ನು ಪಡೆದಿದೆ ಎಂದು ಖಚಿತಪಡಿಸಲಾಗಿದೆ. ಈ ಫೋನ್ ಮೂರು ಬಣ್ಣ ಆಯ್ಕೆಗಳನ್ನು ಹೊಂದಿರುತ್ತದೆ. ನೀವು ನೀಲಿ, ಕಪ್ಪು ಮತ್ತು ಹಸಿರು ಬಣ್ಣದ ಆಯ್ಕೆಯಲ್ಲಿ ಖರೀದಿಸಲು ಸಾಧ್ಯವಾಗಲಿದೆ.
ಇನ್ಫಿನಿಕ್ಸ್ ಹಾಟ್ 50 5G ಫೋನಿನ ಕ್ಯಾಮೆರಾ
ಮಾಹಿತಿಯ ಪ್ರಕಾರ, ಇನ್ಫಿನಿಕ್ಸ್ ಹಾಟ್ 50 5G ಫೋನ್ 48 ಮೆಗಾಪಿಕ್ಸೆಲ್ ಡ್ಯುಯಲ್ ಎಐ (AI) ಕ್ಯಾಮೆರಾವನ್ನು ಹೊಂದಿರಲಿದೆ. ಇದು ಡ್ಯುಯಲ್ LED ಫ್ಲ್ಯಾಷ್ ಮತ್ತು 12+ ಮೋಡ್‌ನೊಂದಿಗೆ ಬರುತ್ತದೆ ಎಂದು ಹೇಳಲಾಗಿದೆ. ವಿಶೇಷವೆಂದರೆ, ಈ ಸ್ಮಾರ್ಟ್‌ಫೋನ್ 7.8 ಎಂಎಂ ದಪ್ಪವನ್ನು ಹೊಂದಿದೆ ಎಂದು ಕಂಪನಿ ಈಗಾಗಲೇ ದೃಢಪಡಿಸಿದೆ. ಈ ಸ್ಲಿಮ್ ವಿನ್ಯಾಸವು ಗ್ರಾಹಕರ ಗಮನ ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇನ್ಫಿನಿಕ್ಸ್ ಹಾಟ್ 50 5G ಫೋನಿನ ಫೀಚರ್ಸ್
ಇನ್ಫಿನಿಕ್ಸ್ ಹಾಟ್ 50 5G ಫೋನ್ 1600×720 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ HD+ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಕಂಪನಿಯು ಈ ಫೋನನ್ನು ಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌ನೊಂದಿಗೆ ಪರಿಚಯಿಸಲಿದೆ. ಈ ಚಿಪ್‌ಸೆಟ್ ಬಹುಕಾರ್ಯಕ ಮತ್ತು ವೇಗದ ಸಂಪರ್ಕಕ್ಕೆ ಸೂಕ್ತವಾಗಿದೆ. ಬಾಕ್ಸ್ ಹೊರಗೆ Android 14 OS ಅನ್ನು ರನ್ ಮಾಡುತ್ತದೆ.
ಇನ್ಫಿನಿಕ್ಸ್ ಹಾಟ್ 50 5Gಮೊಬೈಲ್ 128GB UFS 2.2 ಸ್ಟೋರೇಜ್, 4GB ಮತ್ತು 8GB RAM ಒಳಗೊಂಡಿರಲಿದೆ. ಈ ಫೋನ್ 4900mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಈ ಫೋನ್ ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.


Click it and Unblock the Notifications








