ಕೇವಲ 8,999 ರೂ.! ಬಂದೇ ಬಿಡ್ತು Infinix Hot 50 5G ಫೋನ್; ಹೇಗಿದೆ?
ದಿ ವೇಟ್ ಈಸ್ ಓವರ್..! ಸ್ಮಾರ್ಟ್‌ಫೋನ್ ಪ್ರಿಯರ ನಿರೀಕ್ಷೆಯಂತೆಯೇ ಹೊಸ ಇನ್ಫಿನಿಕ್ಸ್ ಫೋನ್ ಭಾರತಕ್ಕೆ ಲಗ್ಗೆ ಇಟ್ಟಿದೆ. ಅದೂ ಕೂಡ ಅತ್ಯಂತ ಕಡಿಮೆ ಬೆಲೆಗೆ! ಹೌದು, ಚೀನಾದ ಸ್ಮಾರ್ಟ್‌ಫೋನ್ ಬ್ರಾಂಡ್ ಇನ್ಫಿನಿಕ್ಸ್ (Infinix) ಕಂಪನಿಯು ತನ್ನ 'Hot' ಸರಣಿಯಲ್ಲಿ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಅದುವೇ, ಇನ್ಫಿನಿಕ್ಸ್ ಹಾಟ್ 50 5G (Infinix Hot 50 5G) ಮೊಬೈಲ್. ಗ್ರಾಹಕರ ಬಜೆಟ್ ಗಮನದಲ್ಲಿಟ್ಟುಕೊಂಡು ಈ ಫೋನನ್ನು ಪರಿಚಯಿಸಿದೆ. ಬನ್ನಿ, ಈ ನೂತನ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ಇನ್ಫಿನಿಕ್ಸ್ ಹಾಟ್ 50 5G ಫೋನ್ ಭಾರತದಲ್ಲಿ ಅಧಿಕೃತವಾಗಿ ಇಂದು ಲೋಕಾರ್ಪಣೆಯಾಗಿದೆ. ಈ ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ದರದೊಂದಿಗೆ 6.7 ಇಂಚಿನ HD + LCD ಡಿಸ್ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಷನ್ 6300 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಡುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. 48 ಮೆಗಾಪಿಕ್ಸೆಲ್ ಪ್ರಾಥಮಿಕ ಸೋನಿ IMX582 ಕ್ಯಾಮೆರಾ, 18W ವೇಗದ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಇನ್ಫಿನಿಕ್ಸ್ ಹಾಟ್ 50 5G ಫೋನಿನ ಬೆಲೆ, ಆಫರ್ ಮತ್ತು ಲಭ್ಯತೆ
4GB RAM + 128GB ಸ್ಟೋರೇಜ್ ಬೆಲೆ = 9,999 ರೂ.
8GB RAM + 128 GB ಸ್ಟೋರೇಜ್ ಬೆಲೆ = 10,999 ರೂ.
ಇನ್ಫಿನಿಕ್ಸ್ ಹಾಟ್ 50 5G ಫೋನನ್ನು ವೈಬ್ರೆಂಟ್ ಬ್ಲೂ, ಸ್ಲೀಕ್ ಬ್ಲಾಕ್, ಸೇಜ್ ಗ್ರೀನ್ ಮತ್ತು ಡ್ರೀಮಿ ಪರ್ಪಲ್ ಎಂಬ ನಾಲ್ಕು ಬಣ್ಣಗಳಲ್ಲಿ ಖರೀದಿಸಬಹುದು. ಈ ಫೋನ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ. ಫೋನಿನ ಫೋನ್‌ನ 4GB RAM + 128GB ಸ್ಟೋರೇಜ್ ಬೆಲೆ 9,999 ರೂ. ಇದೆ. ಟಾಪ್ ಮಾಡೆಲ್ 8GB RAM + 128GB ಸ್ಟೋರೇಜ್ ಬೆಲೆ 10,999 ರೂ.ಗೆ ಬಿಡುಗಡೆಯಾಗಿದೆ.
ಈ ಹೊಸ ಇನ್ಫಿನಿಕ್ಸ್ ಹಾಟ್ 50 5G ಇದೇ ಸೆಪ್ಟೆಂಬರ್ 9 ರಂದು ಮಧ್ಯಾಹ್ನ 2 ಗಂಟೆಯಿಂದ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ. ಕಂಪನಿಯು ಕೆಲವು ಲಾಂಚ್ ಆಫರ್‌ಗಳನ್ನು ಸಹ ಘೋಷಿಸಿದೆ. ಕೆಲವು ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೇಲೆ ನೀವು 1,000 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು.
ಇನ್ಫಿನಿಕ್ಸ್ ಹಾಟ್ 50 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ಇನ್ಫಿನಿಕ್ಸ್ ಹಾಟ್ 50 5G ಫೋನ್ 6.7 ಇಂಚಿನ HD ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಈ ಫೋನಿನಲ್ಲಿರುವ ಅಪ್ಲಿಕೇಶನ್‌ಗಳ ಪ್ರಕಾರ 60, 90 ಮತ್ತು 120 Hz ರಿಫ್ರೆಶ್ ದರವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಕಂಪನಿ ಹೇಳಿದೆ. 93.9% ಸ್ಕ್ರೀನ್ ಟು ಬಾಡಿ ಅನುಪಾತ ಮತ್ತು ಪಂಚ್ ಹೋಲ್ ವಿನ್ಯಾಸವು ಈ ಫೋನಿನ ಡಿಸ್ಪ್ಲೇಯ ಮೇಲೆ ಕಾಣಿಸುತ್ತದೆ.
ಪ್ರೊಸೆಸರ್: ಇನ್ಫಿನಿಕ್ಸ್ ಹಾಟ್ 50 5G ಫೋನ್ ಮೀಡಿಯಾ ಟೆಕ್ ಡೈಮೆನ್ಶನ್ 6300 ಚಿಪ್‌ಸೆಟ್ ಅನ್ನು ಹೊಂದಿದೆ. ಈ ಫೋನಿನ ಪ್ರೊಸೆಸರ್ 2.4GHz ವರೆಗಿನ ಹೆಚ್ಚಿನ ಗಡಿಯಾರದ ವೇಗವನ್ನು ನೀಡುತ್ತದೆ. ಇದು ಉತ್ತಮ ಡೌನ್‌ಲೋಡ್ ವೇಗ ಮತ್ತು ಗೇಮ್‌ಗಳನ್ನು ಆಡುವ ಸಾಮರ್ಥ್ಯವನ್ನು ನೀಡುತ್ತದೆ.
ಸ್ಟೋರೇಜ್: ಕಂಪನಿಯು ಈ ಫೋನನ್ನು 4GB + 128GB ಮತ್ತು 8GB + 128GB ಸ್ಟೋರೇಜ್ ರೂಪಾಂತರಗಳಲ್ಲಿ ಪರಿಚಯಿಸಿದೆ. ಈ ಫೋನ್ 8GB ವರೆಗೆ ವಿಸ್ತೃತ RAMಗೆ ಬೆಂಬಲವನ್ನು ಸಹ ಒಳಗೊಂಡಿದೆ. ಇದರ ಸಹಾಯದಿಂದ ಒಟ್ಟು 16GB ವರೆಗೆ ಬಳಸಬಹುದು.

ಕ್ಯಾಮೆರಾ: ಇನ್ಫಿನಿಕ್ಸ್ ಹಾಟ್ 50 5G ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಫೋನಿನ ಹಿಂದಿನ ಪ್ಯಾನೆಲ್‌ನಲ್ಲಿ ಎಲ್‌ಇಡಿ ಫ್ಲ್ಯಾಷ್ ಲೈಟ್‌ನೊಂದಿಗೆ 48 ಮೆಗಾಪಿಕ್ಸೆಲ್ ಪ್ರಾಥಮಿಕ ಸೋನಿ IMX582 ಕ್ಯಾಮೆರಾ ಲೆನ್ಸ್ ಇದೆ. ಇದರಲ್ಲಿ ಎಐ (AI) ಲೆನ್ಸ್ ಕೂಡ ಇದೆ. ಈ ಕ್ಯಾಮೆರಾದಲ್ಲಿ ನೀವು 12ಕ್ಕೂ ಹೆಚ್ಚು ಮೋಡ್‌ಗಳನ್ನು ಪಡೆಯಬಹುದು. ಇದು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಎಲ್ಇಡಿ ಫ್ಲ್ಯಾಷ್‌ನೊಂದಿಗೆ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ: ಕಂಪನಿಯು ಈ ಫೋನನ್ನು 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ನೀವು ಇಡೀ ದಿನದ ಬ್ಯಾಕಪ್ ಅನ್ನು ಸುಲಭವಾಗಿ ಪಡೆಯಬಹುದು. ಇದು 18W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಎಐ ಚಾರ್ಜ್ ರಕ್ಷಣೆ, ಪವರ್ ಮ್ಯಾರಥಾನ್, ಸ್ಮಾರ್ಟ್ ಮೋಡ್, ಅಲ್ಟ್ರಾ ಪವರ್ ಸೇವಿಂಗ್ ಮೋಡ್‌ನಂತಹ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ.
ಇತರೆ ವೈಶಿಷ್ಟ್ಯಗಳು: ಇನ್ಫಿನಿಕ್ಸ್ ಹಾಟ್ 50 5G ಫೋನಿನಲ್ಲಿ ಭದ್ರತೆಗಾಗಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಫೇಸ್ ಅನ್‌ಲಾಕ್ ವೈಶಿಷ್ಟ್ಯ ಮತ್ತು ಹಲವು ಎಐ ತಂತ್ರಜ್ಞಾನ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, ವೈ-ಫೈ, ಬ್ಲೂಟೂತ್ ಲಭ್ಯವಿದೆ. ಡೈನಾಮಿಕ್ ಬಾರ್ ಇಂಟರಾಕ್ಟಿವ್ ಸ್ಕ್ರೀನ್ ಕೂಡ ಇದರಲ್ಲಿರುವುದು ವಿಶೇಷ. ಈ ಮೊಬೈಲ್ ವಿಭಾಗ-ಮೊದಲ TUV SUD A ಮಟ್ಟದ 60 ತಿಂಗಳ ನಿರರ್ಗಳ ಭರವಸೆಯನ್ನು ಪಡೆಯುತ್ತದೆ. ಇದು 5 ವರ್ಷಗಳವರೆಗೆ ನಿರಂತರ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ.


Click it and Unblock the Notifications








