Home
ಮೊಬೈಲ್

ಭಾರತದಲ್ಲಿ ಲಾಂಚ್‌ ಆದ ಇನ್ಫಿನಿಕ್ಸ್‌ ಹಾಟ್ 6 ಪ್ರೋ ಸ್ಮಾರ್ಟ್‌ಫೋನ್..!

By Gizbot Bureau

ಭಾರತಕ್ಕೆ ಮತ್ತೊಂದು ಫೋನಿನ ಎಂಟ್ರಿ ಆಗಿದೆ. ಅದುವೇ ಇನ್ಫಿನಿಕ್ಸ್ ಹಾಟ್ 6 ಪ್ರೋ. ಟ್ರಾನ್ಸಿಷನ್ ಹೋಲ್ಡಿಂಗ್ಸ್ ಮಾಲೀಕತ್ವದ ಆನ್ ಲೈನ್ ಸ್ಮಾರ್ಟ್ ಫೋನ್ ಬ್ರಾಂಡ್ ಇನ್ಫಿನಿಕ್ಸ್ ಇಂದು ಈ ಪ್ರಕಟಣೆ ನೀಡಿದ್ದು, ಭಾರತದಲ್ಲಿ ಬಿಡುಗಡೆಯ ಮಾಹಿತಿ ನೀಡಿದೆ.

ಭಾರತದಲ್ಲಿ ಲಾಂಚ್‌ ಆದ ಇನ್ಫಿನಿಕ್ಸ್‌ ಹಾಟ್ 6 ಪ್ರೋ ಸ್ಮಾರ್ಟ್‌ಫೋನ್..!

ಪ್ರಮುಖವಾಗಿ ಈ ಫೋನಿನಲ್ಲಿ ಫುಲ್ ವ್ಯೂ ಡಿಸ್ಪ್ಲೇ ಇದೆ, ಹಿಂಭಾಗದಲ್ಲಿ ಎರಡು ಕ್ಯಾಮರಾಗಳು, ಫೇಸ್ ಅನ್ ಲಾಕ್ ಸೇರಿದಂತೆ 4000 mAh ನ ಬ್ಯಾಟರಿಯನ್ನು ಇದು ಒಳಗೊಂಡಿದೆ. ಈ ಲೇಟೆಸ್ಟ್ ಫೋನಿನ ಮಾರಾಟಕ್ಕೆ ಇನ್ಫಿನಿಕ್ಸ್ ಫ್ಲಿಪ್ ಕಾರ್ಟ್ ಜೊತೆ ಕೈಜೋಡಿಸಿದೆ.

5.99 ಇಂಚ್ HD+ ಡಿಸ್‌ಪ್ಲೇ

5.99 ಇಂಚ್ HD+ ಡಿಸ್‌ಪ್ಲೇ

ಡುಯಲ್ ನ್ಯಾನೋ ಸಿಮ್ ಬಳಸಬಹುದಾದ ಇನ್ಫಿನಿಕ್ಸ್ ಹಾಟ್ 6 ಪ್ರೋ XOS 3.2 ನಲ್ಲಿ ರನ್ ಆಗುತ್ತದೆ ಮತ್ತು 5.99-ಇಂಚಿನ HD+ (720x1440 ಪಿಕ್ಸಲ್) ಫುಲ್ ವ್ಯೂ ಎಲ್ ಸಿಡಿ ಡಿಸ್ಪ್ಲೇಯನ್ನು ಹೊಂದಿದ್ದು 18:9 ಅನುಪಾತವನ್ನು ಹೊಂದಿದೆ. ಜೊತೆಗೆ,83.4 ಶೇಕಡಾದಷ್ಟು ಸ್ಕ್ರೀನ್ ಟು ಬಾಡಿ ಅನುಪಾತವಿದೆ, 2.5D ಬಾಗಿದ ಗಾಜಿನ ಮೇಲ್ಮೈಯನ್ನು ಹೊಂದಿದೆ. ಇದು ಕ್ವಾರ್ಡ್-ಕೋರ್-64-ಬಿಟ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 425 ಸಾಕೆಟ್ ಹೊಂದಿದೆ ಮತ್ತು Adreno 308 GPU ಜೊತೆಗೆ ಪೇರ್ ಆಗಿರಲಿದೆ. 3ಜಿಬಿಯDDR3 ಮೆಮೊರಿ ಮತ್ತು 32ಜಿಬಿ ಇನ್ ಬಿಲ್ಟ್ ಸ್ಟೋರೇಜ್ ಇರಲಿದೆ. ಇದನ್ನು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಇನ್ನಷ್ಟು ಹಿಗ್ಗಿಸಿಕೊಳ್ಳಬಹುದು.

13MP ಕ್ಯಾಮೆರಾ

13MP ಕ್ಯಾಮೆರಾ

ಕ್ಯಾಮರಾ ವಿಚಾರಕ್ಕೆ ಬರುವುದಾದರೆ ಹಾಟ್ 6 ಪ್ರೋ ಪ್ರೈಮರಿ 13 ಮೆಗಾಪಿಕ್ಸಲ್ ನ ಸೆನ್ಸರ್ ಜೊತೆಗೆ f/2.0 ದ್ಯುತಿರಂಧ್ರ, ಆಟೋಫೋಕಸ್ ಮತ್ತು PDAF ಕ್ಯಾಮರಾ ಹೊಂದಿದೆ. ಸೆಕೆಂಡರಿ ಕ್ಯಾಮರಾವು 2 ಮೆಗಾಪಿಕ್ಸಲ್ ಫಿಕ್ಸ್ಡ್ ಫೋಕಸ್ ಇರುವ ಕ್ಯಾಮರಾವಾಗಿದ್ದು ಎರಡೂ ಕ್ಯಾಮರಾಗಳೂ ಕೂಡ ಡುಯಲ್ ಎಲ್ಇಡಿ ಫ್ಲ್ಯಾಶ್ ಹೊಂದಿದೆ.

ಪೋರ್ಟ್‌ರೈಟ್‌ ಮೋಡ್

ಪೋರ್ಟ್‌ರೈಟ್‌ ಮೋಡ್

ಹಿಂಭಾಗದ ಕ್ಯಾಮರಾದಲ್ಲಿ ಪೋಟ್ರೈಟ್ ಮೋಡ್, ಪ್ರೊಫೆಷನಲ್ ಮೋಡ್, ಟೈಮ್ ಲ್ಯಾಪ್ಸ್, ನೈಟ್ ಮೋಡ್, ಪನೋರಮಾ,ಮತ್ತು ಹೆಚ್ ಡಿಆರ್ ಅವಕಾಶಗಳು ಲಭ್ಯವಿದೆ. ಸೆಲ್ಫೀ ಕ್ಯಾಮರಾ ಮುಂಭಾಗದಲ್ಲಿದ್ದು, ಇದು 5 ಮೆಗಾಪಿಕ್ಸಲ್ ಫಿಕ್ಸ್ಡ್ ಫೋಕಸ್ ಸೆನ್ಸರ್ ಜೊತೆಗೆ f/2.0 ದ್ಯುತಿರಂಧ್ರವನ್ನು ಹೊಂದಿದೆ.ಸಾಫ್ಟ್ ಲೈಟ್ ಫ್ಲ್ಯಾಶ್ ಮತ್ತು ಬೊಕೆಷ್ ಸೆಲ್ಫೀ ಮತ್ತು ಫೇಸ್ ಅನ್ ಲಾಕ್ ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ.

ಕನೆಕ್ಟಿವಿಟಿ

ಕನೆಕ್ಟಿವಿಟಿ

ಕನೆಕ್ಟಿವಿಟಿ ಆಯ್ಕೆಗಳ ಬಗ್ಗೆ ತಿಳಿಸುವುದಾದರೆ ಇನ್ಫಿನಿಕ್ಸ್ ಹಾಟ್ 6 ಪ್ರೋ 4G VoLTE, ವೈ-ಫೈ,ಬ್ಲೂಟೂತ್ 4.1, ಮೈಕ್ರೋ-USB ಜೊತೆಗೆ OTG, FM ರೇಡಿಯೋ, ಮತ್ತು 3.5mm ಹೆಡ್ ಫೋನ್ ಜಾಕ್ ನ್ನು ಒಳಗೊಂಡಿರುತ್ತದೆ.

4000mAh ಬ್ಯಾಟರಿ

4000mAh ಬ್ಯಾಟರಿ

ಹ್ಯಾಂಡ್ ಸೆಟ್ ನ ಸೆನ್ಸರ್ ನಲ್ಲಿ ಆಂಬಿಯಂಟ್ ಲೈಟ್ ಸೆನ್ಸರ್, ಡಿಜಿಟಲ್ ಕಂಪಾಸ್, ಫಿಂಗರ್ ಪ್ರಿಂಟ್ ಸೆನ್ಸರ್, ಗ್ರಾವಿಟಿ ಸೆನ್ಸರ್, ಹಾಲ್ ಸೆನ್ಸರ್, ಮತ್ತು ಪ್ರಾಕ್ಸಿಮಿಟಿ ಸೆನ್ಸರ್ ಗಳಿವೆ. 4000mAh ಬ್ಯಾಟರಿಯನ್ನು ಇದು ಒಳಗೊಂಡಿದ್ದು ಇದಕ್ಕೆ 6W ಚಾರ್ಜಿಂಗ್ (5V/ 1.2A) ನ ಬೆಂಬಲಿವಿದೆ. ಇನ್ನು ಈ ಮೊಬೈಲ್ 160.43x76.21x8.6mm ಉದ್ದಗಲವಿದ್ದು 158ಗ್ರಾಮ್ ನಷ್ಟು ತೂಕವಿದೆ. ಈ ಸ್ಮಾರ್ಟ್ ಫೋನ್ ಖರೀದಿಸಿದರೆ ಅದರ ಜೊತೆಗೆ ಅಡಪ್ಟರ್, ಮೈಕ್ರೋ ಯುಎಸ್ ಬಿ ಕೇಬಲ್, TPU ಕೇಸ್, ಪ್ರೊಟೆಕ್ಟಿವ್ ಫಿಲ್ಮ್, ಯ್ಯೂಸರ್ ಮ್ಯಾನುವಲ್, ವಾರೆಂಟಿ ಕಾರ್ಡ್ ಮತ್ತು ಸಿಮ್ ಇಜೆಕ್ಟರ್ ಟೂಲ್ ಗಳು ಲಭ್ಯವಾಗುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ಫಿನಿಕ್ಸ್ ಹಾಟ್ 6 ಪ್ರೋ ನ 3ಜಿಬಿ ಮೆಮೊರಿ ಮತ್ತು 32 ಜಿಬಿ ಸ್ಟೋರೇಜ್ ಇರುವ ಮೊಬೈಲಿನ ಬೆಲೆ ಭಾರತದಲ್ಲಿ 7,999 ರುಪಾಯಿ ಆಗಿದೆ. ಇನ್ನು ಒಂದು ವಾರದಲ್ಲಿ ಈ ಸ್ಮಾರ್ಟ್ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗಲಿದ್ದು ಎಕ್ಸ್ ಕ್ಲೂಸಿವ್ ಆಗಿ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಾಗಲಿದೆ. ಇದು ಸ್ಯಾಂಡ್ ಸ್ಟೋನ್ ಬ್ಲಾಕ್, ಮ್ಯಾಜಿಕ್ ಗೋಲ್ಡ್, ಮತ್ತು ಕೆಂಪು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ.

Best Mobiles in India

English summary
Infinix Hot 6 Pro With Face Unlock, Dual Rear Cameras Launched in India: Price, Specifications. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+