ಭಾರತಕ್ಕೆ ಬಜೆಟ್ ಬೆಲೆಯಲ್ಲಿ Infinix Hot 60 5G+: AI ಜೊತೆಗೆ ಭರ್ಜರಿ ಎಂಟ್ರಿ!
ಭಾರತದ ಮೊಬೈಲ್ ಮಾರುಕಟ್ಟೆಯ ನಿರೀಕ್ಷೆಗೆ ತಕ್ಕಂತೆ ಬಹುನಿರೀಕ್ಷಿತ Infinix Hot 60 5G+ ಸ್ಮಾರ್ಟ್‌ಫೋನ್ ಇಂದು (ಜುಲೈ 11, 2025) ಬಜೆಟ್ ಸ್ನೇಹಿ ಬೆಲೆಯಲ್ಲಿ ಅನಾವರಣಗೊಂಡಿದೆ. Infinix ಕಂಪನಿಯು ತನ್ನ ಈ ಹೊಸ ಡಿವೈಸ್‌ನಲ್ಲಿ ಕಸ್ಟಮೈಸ್ ಮಾಡಬಹುದಾದ AI ಬಟನ್, ಗೂಗಲ್‌ನ ಸರ್ಕಲ್ ಟು ಸರ್ಚ್ ಮತ್ತು ಇನ್ಫಿನಿಕ್ಸ್‌ನ ಸ್ವಂತ ಫೋಲಾಕ್ಸ್ AI ಅಸಿಸ್ಟೆಂಟ್‌ಗಳನ್ನು ಪರಿಚಯಿಸಿದ್ದು, ಗಮನ ಸೆಳೆದಿದೆ. ಜೊತೆಗೆ ಇದರ ಬೆಲೆ ಕೇವಲ ₹10,499 ರೂ. ಆಗಿದೆ. ಹಾಗಾದರೆ, ಹೊಸ Infinix Hot 60 5G+ ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.
Infinix Hot 60 5G+ ಬೆಲೆ ಮತ್ತು ಲಭ್ಯತೆ:
ಭಾರತದಲ್ಲಿ Infinix Hot 60 5G+ ಫೋನಿನ 6GB RAM + 128GB ಸ್ಟೋರೇಜ್ ಮಾದರಿಯು ₹10,499 ರೂ.ಗೆ ಬಿಡುಗಡೆಯಾಗಿದೆ. ಈ ಫೋನ್ ಶ್ಯಾಡೋ ಬ್ಲೂ, ಸ್ಲೀಕ್ ಬ್ಲ್ಯಾಕ್ ಮತ್ತು ಟಂಡ್ರಾ ಗ್ರೀನ್ ಎಂಬ ಆಕರ್ಷಕ ಬಣ್ಣಗಳಲ್ಲಿ ಪರಿಚಯಗೊಂಡಿದ್ದು, ಗ್ರಾಹಕರು ಜುಲೈ 17 ರಿಂದ ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಇದನ್ನು ಖರೀದಿಸಬಹುದು.
Infinix Hot 60 5G+ ಪ್ರಮುಖ ವೈಶಿಷ್ಟ್ಯಗಳು:
ಡಿಸ್‌ಪ್ಲೇ ಮತ್ತು ಕಾರ್ಯಕ್ಷಮತೆ:
Infinix Hot 60 5G+ ಪೋನ್ 120Hz ರಿಫ್ರೆಶ್ ರೇಟ್ ಮತ್ತು 700 ನಿಟ್ಸ್ ಬ್ರೈಟ್‌ನೆಸ್ ಹೊಂದಿರುವ 6.7-ಇಂಚಿನ HD+ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 7020 SoC ಪ್ರೊಸೆಸರ್‌ನಿಂದ ಶಕ್ತಿ ಪಡೆಯಲಿದ್ದು, 6GB LPDDR5x RAM ಮತ್ತು 128GB ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ ಬರುತ್ತದೆ. ಇನ್ನು ಸಾಫ್ಟ್‌ವೇರ್ ವಿಭಾಗದಲ್ಲಿ, ಫೋನ್ ಆಂಡ್ರಾಯ್ಡ್ 15 ಆಧಾರಿತ XOS 15 ನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಗೇಮಿಂಗ್ ಮತ್ತು ಕನೆಕ್ಟಿವಿಟಿ:
Infinix Hot 60 5G+ ಹೈಪರ್ ಎಂಜಿನ್ 5.0 ಲೈಟ್ ಗೇಮಿಂಗ್ ತಂತ್ರಜ್ಞಾನ ಮತ್ತು ಮೀಸಲಾದ XBoost AI ಗೇಮ್ ಮೋಡ್ ಅನ್ನು ಹೊಂದಿದೆ. ಇದು 90fps ವರೆಗೆ ಗೇಮಿಂಗ್ ಅನ್ನು ಬೆಂಬಲಿಸುವ ಮೊದಲ ಹ್ಯಾಂಡ್‌ಸೆಟ್ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಈ ಫೋನ್ ಅಲ್ಟ್ರಾಲಿಂಕ್ ಕನೆಕ್ಟಿವಿಟಿಯನ್ನು ಹೊಂದಿದ್ದು, ಇದು ಬಳಕೆದಾರರಿಗೆ ಕಡಿಮೆ ಅಥವಾ ನೆಟ್‌ವರ್ಕ್ ಇಲ್ಲದ ಪ್ರದೇಶಗಳಲ್ಲಿ ಧ್ವನಿ ಕರೆಗಳ ಮೂಲಕ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ. ಆದರೆ, ಈ ವೈಶಿಷ್ಟ್ಯವು ಇನ್ಫಿನಿಕ್ಸ್-ಟು-ಇನ್ಫಿನಿಕ್ಸ್ ಫೋನ್‌ಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ.

AI ವೈಶಿಷ್ಟ್ಯಗಳು:
ಈ ಫೋನ್‌ನ ಪ್ರಮುಖ ಹೈಲೈಟ್‌ಗಳಲ್ಲಿ ಒಂದಾದ, ಕಸ್ಟಮೈಸ್ ಮಾಡಬಹುದಾದ AI ಬಟನ್, ವಾಲ್ಯೂಮ್ ರಾಕರ್ ಮತ್ತು ಪವರ್ ಬಟನ್‌ಗಳ ಕೆಳಗೆ ಬಲ ಅಂಚಿನಲ್ಲಿ ಇದೆ. ಈ ಬಟನ್ ಸಿಂಗಲ್-ಪ್ರೆಸ್ ಮತ್ತು ಲಾಂಗ್-ಪ್ರೆಸ್ ಕಾರ್ಯಗಳನ್ನು ನೀಡುತ್ತದೆ. ಇದು YouTube, Google ನಕ್ಷೆಗಳು ಸೇರಿದಂತೆ 30 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳಿಗೆ ವೈಯಕ್ತೀಕರಿಸಿದ ಪ್ರವೇಶವನ್ನು ಒದಗಿಸುತ್ತದೆ. ಬಳಕೆದಾರರು AI ಬಟನ್ ಅನ್ನು ದೀರ್ಘಕಾಲ ಒತ್ತಿ, Infinix ನ AI ಧ್ವನಿ ಸಹಾಯಕ, ಫೋಲಾಕ್ಸ್ ಅನ್ನು ಸಕ್ರಿಯಗೊಳಿಸಬಹುದು. ಇದಲ್ಲದೆ, ಫೋನ್ AI ಕಾಲ್ ಅಸಿಸ್ಟೆಂಟ್, AI ರೈಟಿಂಗ್ ಅಸಿಸ್ಟೆಂಟ್ ಮತ್ತು Google ನ ಜನಪ್ರಿಯ ಸರ್ಕಲ್ ಟು ಸರ್ಚ್ ವೈಶಿಷ್ಟ್ಯವನ್ನು ಸಹ ಬೆಂಬಲಿಸುತ್ತದೆ.
ಕ್ಯಾಮೆರಾ ಮತ್ತು ಬ್ಯಾಟರಿ :
ಕ್ಯಾಮೆರಾ ವಿಭಾಗದಲ್ಲಿ, Infinix Hot 60 5G+ ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದ್ದು, ಡ್ಯುಯಲ್-ಮೋಡ್ ವಿಡಿಯೋ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ. ಸೆಲ್ಫಿಗಾಗಿ 8-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ನೀಡಲಾಗಿದೆ. ಬ್ಯಾಟಿ ವಿಭಾಗದಲ್ಲಿInfinix Hot 60 5G+ ಬೃಹತ್ 5,200mAh ಬ್ಯಾಟರಿಯಿಂದ ಬೆಂಬಲಿತವಾಗಿದೆ, ಇದು ಬೈಪಾಸ್ ಚಾರ್ಜಿಂಗ್ ಮತ್ತು ರಿವರ್ಸ್ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಜೊತೆಗೆ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ, ಪೋನ್ IP64 ರೇಟಿಂಗ್ ಹೊಂದಿದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, Infinix Hot 60 5G+ ಭಾರತೀಯ ಮಾರುಕಟ್ಟೆಯಲ್ಲಿ ತನ್ನ AI-ಕೇಂದ್ರಿತ ವೈಶಿಷ್ಟ್ಯಗಳು, ಉತ್ತಮ ಕಾರ್ಯಕ್ಷಮತೆ ಮತ್ತು ಕೈಗೆಟುಕುವ ಬೆಲೆಯೊಂದಿಗೆ ಒಂದು ವಿಶಿಷ್ಟ ಸ್ಥಾನವನ್ನು ಪಡೆದುಕೊಳ್ಳಲು ಸಿದ್ಧವಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








