Home
ಮೊಬೈಲ್

9 ಸಾವಿರಕ್ಕಿಂತ ಕಡಿಮೆ!..6000mAh ಬ್ಯಾಟರಿಯ 5G ಫೋನ್ ಸೇಲ್ ಇಂದಿನಿಂದ!

ಜನಪ್ರಿಯ ಮೊಬೈಲ್ ಬ್ರ್ಯಾಂಡ್ Infinix ದೇಶದಲ್ಲಿ ಇತ್ತೀಚಿಗಷ್ಟೇ ಪರಿಚಯಿಸಿದ್ದ Infinix Hot 60i 5G ಸ್ಮಾರ್ಟ್‌ಫೋನ್ ಇಂದಿನಿಂದ ಮೊದಲ ಬಾರಿಗೆ ಮಾರಾಟಕ್ಕೆ ಬಂದಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ ದೇಶದಲ್ಲಿ Infinix Hot 60i 5G ಫೋನ್ ಸೇಲ್ ಫ್ಲಿಪ್‌ಕಾರ್ಟ್‌ನಲ್ಲಿ ಆರಂಭವಾಗಿದ್ದು, ಗ್ರಾಹಕರು ಹಲವು ಉತ್ತಮ ರಿಯಾಯಿತಿಗಳು ಮತ್ತು ಕೊಡುಗೆಗಳನ್ನು ಪಡೆಯಬಹುದು ಎಂದು ಕಂಪೆನಿಯು ತಿಳಿಸಿದೆ. 9 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಲು ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿರುವ ಈ ಹೊಸ ಫೋನ್ ಕುರಿತ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.

Infinix Hot 60i 5G: ಬೆಲೆ ಮತ್ತು ಆಫರ್ಸ್
ದೇಶದಲ್ಲಿ Infinix Hot 60i 5G ಫೋನ್‌ ಅನ್ನು ₹9,299 ರೂ.ಗೆ ಪರಿಚಯಿಸಲಾಗಿದೆ. ಆದರೆ, ಮೊದಲ ಮಾರಾಟದಲ್ಲಿ ಬ್ಯಾಂಕ್ ಆಫರ್‌ಗಳ ಮೂಲಕ ಈ ಫೋನ್ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ. ನಿರ್ದಿಷ್ಟ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಹಿವಾಟುಗಳ ಮೇಲೆ ₹300 ರಿಯಾಯಿತಿ ಸಿಗಲಿದೆ. ಇದು ಸ್ಮಾರ್ಟ್‌ಫೋನ್‌ನ ಬೆಲೆಯನ್ನು ಕೇವಲ ₹8,999 ಕ್ಕೆ ಇಳಿಸುತ್ತದೆ ಎಂದು ಕಂಪೆನಿ ತಿಳಿಸಿದೆ. ಇದರ ಜೊತೆಗೆ, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ 5% ಕ್ಯಾಶ್‌ಬ್ಯಾಕ್ ಮತ್ತು MobiKwik ಹಾಗೂ Paytm UPI ವಹಿವಾಟುಗಳ ಮೇಲೆ ಹೆಚ್ಚುವರಿ ಕ್ಯಾಶ್‌ಬ್ಯಾಕ್ ಸಹ ಲಭ್ಯವಿದೆ.

9 ಸಾವಿರಕ್ಕಿಂತ ಕಡಿಮೆ!..6000mAh ಬ್ಯಾಟರಿಯ 5G ಫೋನ್ ಸೇಲ್ ಇಂದಿನಿಂದ!

Infinix Hot 60i 5G: ಪ್ರಮುಖ ವೈಶಿಷ್ಟ್ಯಗಳು
ಹೊಸ nfinix Hot 60i 5G ಫೋನ್‌ ಬಜೆಟ್ ಬೆಲೆಯಲ್ಲಿ ಆಕರ್ಷಕ ವೈಶಿಷ್ಟ್ಯಗಳನ್ನು ನೀಡುತ್ತದೆ. ಇದು 6.75-ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ, ಇದು 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿದೆ. ಇದರಿಂದ ಸ್ಮೂತ್ ಸ್ಕ್ರೋಲಿಂಗ್ ಮತ್ತು ಉತ್ತಮ ಗೇಮಿಂಗ್ ಅನುಭವ ಪಡೆಯಬಹುದು. ಡಿಸ್ಪ್ಲೇ 670 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಹೊಂದಿದ್ದು, ಬಿಸಿಲಿನಲ್ಲಿಯೂ ಸ್ಪಷ್ಟವಾಗಿ ಕಾಣುತ್ತದೆ. ಇದರ ವಿನ್ಯಾಸವು IP64 ರೇಟಿಂಗ್ ಹೊಂದಿದ್ದು, ಧೂಳು ಮತ್ತು ನೀರಿನ ಹನಿಗಳಿಂದ ರಕ್ಷಣೆ ನೀಡುತ್ತದೆ.

ಕಾರ್ಯಕ್ಷಮತೆಗಾಗಿ, ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6400 ಪ್ರೊಸೆಸರ್ ಹೊಂದಿದೆ, ಇದು ದೈನಂದಿನ ಕೆಲಸ ಮತ್ತು ಮಧ್ಯಮ ಹಂತದ ಗೇಮಿಂಗ್‌ಗೆ ಉತ್ತಮ ಪ್ರದರ್ಶನ ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಈ ಫೋನ್ 4GB LPDDR4X RAM ಮತ್ತು 128GB eMMC ಸ್ಟೋರೇಜ್ ಹೊಂದಿದೆ. ಇದನ್ನು ಮೈಕ್ರೊ SD ಕಾರ್ಡ್ ಮೂಲಕ 2TB ವರೆಗೆ ವಿಸ್ತರಿಸಬಹುದು. ಇದು ಆಂಡ್ರಾಯ್ಡ್ 15 ಆಧಾರಿತ Infinix ನ ಕಸ್ಟಮ್ XOS 5.1 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ.

9 ಸಾವಿರಕ್ಕಿಂತ ಕಡಿಮೆ!..6000mAh ಬ್ಯಾಟರಿಯ 5G ಫೋನ್ ಸೇಲ್ ಇಂದಿನಿಂದ!

ಕ್ಯಾಮೆರಾ ವಿಭಾಗದಲ್ಲಿ, Infinix Hot 60i 5G ಪೋನಿನ ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಇದ್ದು, f/1.6 ಅಪರ್ಚರ್ ಹೊಂದಿದೆ, ಇದು ಕಡಿಮೆ ಬೆಳಕಿನಲ್ಲಿಯೂ ಉತ್ತಮ ಫೋಟೋಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ ಎಂದು ಕಂಪೆನಿಯು ತಿಳಿಸಿದೆ. ಸೆಲ್ಫಿಗಾಗಿ, 5-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ. ಬ್ಯಾಟರಿ ವಿಭಾಗದಲ್ಲಿ ಫೋನ್‌ಗೆ ಶಕ್ತಿ ತುಂಬಲು 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಇದ್ದು, 18W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಇಷ್ಟೇ ಅಲ್ಲದೆ,

ಇತ್ತೀಚಿನ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಈ ಫೋನ್‌ನಲ್ಲಿ AI-ಆಧಾರಿತ ಹಲವು ವೈಶಿಷ್ಟ್ಯಗಳಿವೆ. ಇದರಲ್ಲಿ 'ಸರ್ಕಲ್ ಟು ಸರ್ಚ್', 'AI ಕಾಲ್ ಟ್ರಾನ್ಸ್‌ಲೇಷನ್', 'AI ಸಾರಾಂಶ', ಮತ್ತು 'AI ವಾಲ್‌ಪೇಪರ್ ಜನರೇಟರ್' ಸೇರಿವೆ. 'ಫೋಲಾಕ್ಸ್ ವಾಯ್ಸ್ ಅಸಿಸ್ಟೆಂಟ್' ಕೂಡ ಇರುವುದರಿಂದ ಹ್ಯಾಂಡ್ಸ್-ಫ್ರೀ ಅನುಭವ ಸಾಧ್ಯವಾಗುತ್ತದೆ. 5G, Wi-Fi, ಬ್ಲೂಟೂತ್ 5.4, GPS, 3.5mm ಆಡಿಯೊ ಜ್ಯಾಕ್ ಮತ್ತು USB ಟೈಪ್-C ಪೋರ್ಟ್‌ನಂತಹ ಕನೆಕ್ಟಿವಿಟಿ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಈ Infinix Hot 60i 5G ಸ್ಮಾರ್ಟ್‌ಫೋನ್ Shadow Blue, Monsoon Green, Plum Red ಮತ್ತು Sleek Black ಎಂಬ ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದ್ದು, ಬಜೆಟ್ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಹುಡುಕುತ್ತಿರುವ ಗ್ರಾಹಕರಿಗೆ ಅತ್ಯುತ್ತಮ ಆಯ್ಕೆಯಾಗಬಹುದು.

Best Mobiles in India

English summary
Hot Deal Alert: Infinix Hot 60i 5G, The new 5G phone with a 6000mAh battery and AI features is now on sale for under ₹9,000
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+