Subscribe to Gizbot

8,999 ರೂ.ಗೆ 20MP ಸೆಲ್ಫಿ ಕ್ಯಾಮೆರಾ, 4000mAh ಬ್ಯಾಟರಿ ಫೋನ್ ಇಂದು ಬಿಡುಗಡೆ!!..ಮಾರುಕಟ್ಟೆಗೆ ಶಾಕ್!!

Posted By:

ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೂ ಸೆಡ್ಡು ಹೊಡೆಯುತ್ತಿರು ಇನ್ಫಿನಿಕ್ಸ್ ಕಂಪೆನಿ ಭಾರತೀಯ ಮಾರುಕಟ್ಟೆಯಲ್ಲಿಯೇ ಅತ್ಯಂತ ಕಡಿಮೆ ಬೆಲೆಗೆ 20MP ಸೆಲ್ಫಿ ಕ್ಯಾಮೆರಾ ಸ್ಮಾರ್ಟ್‌ಪೋನ್ ಬಿಡುಗಡೆ ಮಾಡಿ ಮೊಬೈಲ್ ಮಾರುಕಟ್ಟೆಗೆ ಅಚ್ಚರಿ ಮೂಡಿಸಿದೆ.! 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಹೈ ಎಂಡ್ ಫೀಚರ್‌ಗಳಿರುವ ನೂತನ ಫೋನ್ ಇದೀಗ ವೈರೆಲ್ ಆಗಿದೆ.!!

8,999 ರೂ.ಗೆ 20MP ಸೆಲ್ಫಿ ಕ್ಯಾಮೆರಾ, 4000mAh ಬ್ಯಾಟರಿ ಫೋನ್ ಇಂದು ಬಿಡುಗಡೆ!!

"ಇಂಡಿಯಾ ಫಸ್ಟ್" ಸ್ಮಾರ್ಟ್‌ಫೋನ್ ಹೆಸರಿನಲ್ಲಿ ಬಜೆಟ್ ಆಧಾರಿತ ಸೆಲ್ಫಿ ಸ್ಮಾರ್ಟ್‌ಫೋನ್ ಇನ್ಫಿನಿಕ್ಸ್ ಹಾಟ್ ಎಸ್ 3 ಸ್ಮಾರ್ಟ್‌ಫೋನ್ ಇಂದು ಬಿಡುಗಡೆಯಾಗಿದ್ದು, 4000mAh ಬ್ಯಾಟರಿ, ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯಂತಹ ಫೀಚರ್ಸ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಫೀಚರ್ಸ್ ಯಾವುವು? ಸ್ಮಾರ್ಟ್‌ಫೋನ್ ವಿಶೇಷತೆಗಳೇನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ ಮತ್ತು ವಿನ್ಯಾಸ!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

ಇನ್ಫಿನಿಕ್ಸ್ ಹಾಟ್ ಎಸ್ 3 18:9 ಪ್ರದರ್ಶನದೊಂದಿಗೆ ಬಂದಿದ್ದು, 565 ಇಂಚ್ (1,440 × 720 ಪಿಕ್ಸೆಲ್) ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ.! ಸ್ಮಾರ್ಟ್‌ಫೋನ್ ಸಾಕಷ್ಟು ಕಿರಿದಾದ ಬೆಜೆಲ್‌ಗಳನ್ನು ಹೊಂದಿದ್ದು, ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಕ್ಯಾಮೆರಾ, ಒಂದು ರಿಯರ್ ಕ್ಯಾಮೆರಾ ಹಾಗೂ ಫ್ಲ್ಯಾಶ್‌ನೊಂದಿಗೆ ವಿನ್ಯಾಸವಾಗಿದೆ.!!

ಪ್ರೊಸೆಸರ್ ಮತ್ತು ಒಎಸ್!!

ಪ್ರೊಸೆಸರ್ ಮತ್ತು ಒಎಸ್!!

ಕ್ವಾಲ್ಕಾಮ್ ಓಕ್ಟಾ-ಕೋರ್ ಸ್ನ್ಯಾಪ್‌ಡ್ರಾಗನ್ 430 ಪ್ರೊಸೆಸರ್ ಅನ್ನು ಕಡಿಮೆ ಬೆಲೆಯ ಇನ್ಫಿನಿಕ್ಸ್ ಹಾಟ್ ಎಸ್3 ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿದೆ.! ಇನ್ನು ನೂತನ ಗೂಗಲ್ ಆಂಡ್ರಾಯ್ಡ್ ಓರಿಯೋ ಮೂಲಕ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ನೀಡಲಿದೆ.!!

RAM ಮತ್ತು ಮೆಮೊರಿ!!

RAM ಮತ್ತು ಮೆಮೊರಿ!!

ಇನ್ಫಿನಿಕ್ಸ್ ಹಾಟ್ ಎಸ್3 ಸ್ಮಾರ್ಟ್‌ಫೋನ್ ಎರಡು ವೆರೆಯಂಟ್‌ಗಳಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದ್ದು, 3GB RAM ಮತ್ತು 32GB ಆಂತರಿಕ ಮೆಮೊರಿ ಹಾಗೂ 4GB RAM ಮತ್ತು 64GB ಆಂತರಿಕ ಮೆಮೊರಿಯ ಎರಡು ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ.!! ಎರಡೂ ಫೋನ್‌ಗಳ ಮೆಮೊರಿಯನ್ನು ಎಸ್‌ಡಿ ಕಾರ್ಡ್ ಮೂಲಕ ಹೆಚ್ಚಿಸಬಹುದಾದ ಆಯ್ಕೆ ಲಭ್ಯವಿದೆ.!!

4000 mAh ಬ್ಯಾಟರಿ!!

4000 mAh ಬ್ಯಾಟರಿ!!

ಚೀನಾ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗೆ ನೇರಾ ನೇರಾ ಸೆಡ್ಡುಹೊಡೆಯುತ್ತಿರುವ ಇನ್ಫಿನಿಕ್ಸ್ ಹಾಟ್ ಎಸ್3 ಸ್ಮಾರ್ಟ್‌ಫೋನ್ 4000 mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ.! ಬಜೆಟ್ ಬೆಲೆಯಲ್ಲಿ ಎಲ್ಲಾ ಫೀಚರ್ಸ್‌ಗಳನ್ನು ನೀಡಿರುವ ಇನ್ಫಿನಿಕ್ಸ್ ಕಂಪೆನಿ ಬ್ಯಾಟರಿ ವಿಷಯದಲ್ಲಿ ರಾಜಿಯಾಗದೇ ಮಾರುಕಟ್ಟೆಗೆ ಕಾಲಿಟ್ಟಿದೆ.!!

20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ!!

20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ!!

ಮೊದಲೇ ಹೇಳಿದಂತೆ ಅತ್ಯಂತ ಕಡಿಮೆ ಬೆಲೆಗೆ 20MP ಸೆಲ್ಫಿ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಪೋನ್ ಇದಾಗಿದ್ದು, ಡಿಎಸ್ಎಲ್ಆರ್-ರೀತಿಯ ಬೊಕೆ ಪರಿಣಾಮಗಳ ಸೆಲ್ಫಿ ತೆಗೆಯಬಹುದು ಎಂದು ಹೇಳಲಾಗಿದೆ. ಎರಡೂ ಕಡೆಗಳಲ್ಲಿ ಎಲ್‌ಇಡಿ ಫ್ಲಾಶ್ ಹೊಂದಿರುವ ಈ ಫೋನ್ 13MP ರಿಯರ್ ಕ್ಯಾಮೆರಾವನ್ನು ಹೊಂದಿದೆ.!!

ಸ್ಮಾರ್ಟ್‌ಪೋನ್ ಬೆಲೆ ಎಷ್ಟು?

ಸ್ಮಾರ್ಟ್‌ಪೋನ್ ಬೆಲೆ ಎಷ್ಟು?

ಇನ್ಫಿನಿಕ್ಸ್ ಹಾಟ್ ಎಸ್ 3 ಸ್ಮಾರ್ಟ್‌ಫೋನಿನ ಆರಂಭಿಕ ಬೆಲೆ 8,999 ರೂಪಾಯಿಗಳಿಂದ ಆರಂಭವಾಗಿದೆ. ಭಾರತದಲ್ಲಿ 3 ಜಿಬಿ + 32 ಜಿಬಿ ವೆರಿಯಂಟ್ ಸ್ಮಾರ್ಟ್‌ಫೋನ್ ಬೆಲೆ 8,999 ರೂಪಾಯಿಗಳಾಗಿದ್ದರೆ, 4GB + 64GB ವೆರಿಯಂಟ್ ಫೋನ್ ಬೆಲೆ 10,999 ರೂಪಾಯಿಗಳಾಗಿವೆ.!!

Do you know what all u can do by Downloading Hike Messenger app.?
ಮಾರಾಟ ಯಾವಾಗ ಶುರು?

ಮಾರಾಟ ಯಾವಾಗ ಶುರು?

ಇನ್ಫಿನಿಕ್ಸ್ ಹಾಟ್ ಎಸ್ 3 ಫೋನ್ ಸ್ಯಾಂಡ್‌ ಸ್ಟೋನ್ ಕಪ್ಪು ಮತ್ತು ಬ್ರಷ್ ಗೋಲ್ಡ್ ಎರಡು ಬಣ್ಣಗಳಲ್ಲಿ ಲಭ್ಯವಿದ್ದು, ಫ್ಲಿಪ್‌ಕಾರ್ಟ್ನಲ್ಲಿ ಇದೇ ತಿಂಗಳ (ಫೆಬ್ರವರಿ) 12 ನೇ ತಾರೀಖಿನಿಂದ ಮಾರಾಟವಾಗಲಿದೆ.! ಹಾಗಾದರೆ, ತಡ ಯಾಕೆ? ಖರೀದಿಸಲು ರೆಡಿಯಾಗಿ.!!

ತೆರಿಗೆ ಎಫೆಕ್ಟ್..ಆಪಲ್ ಐಫೋನ್‌ಗಳ ಬೆಲೆಯಲ್ಲಿ ಭಾರೀ ಏರಿಕೆ!..ಇಲ್ಲಿದೆ ಫುಲ್ ಲೀಸ್ಟ್!!

ತೆರಿಗೆ ಎಫೆಕ್ಟ್..ಆಪಲ್ ಐಫೋನ್‌ಗಳ ಬೆಲೆಯಲ್ಲಿ ಭಾರೀ ಏರಿಕೆ!..ಇಲ್ಲಿದೆ ಫುಲ್ ಲೀಸ್ಟ್!!

ಐಫೋನ್ ಎಕ್ಸ್‌ (256ಜಿಬಿ)
ಕಸ್ಟಮ್ಸ್ ಸುಂಕ ಏರಿಕೆ ಮೊದಲು 1,05,000 ಬೆಲೆಯನ್ನು ಹೊಂದಿದ್ದ ಐಫೋನ್ ಎಕ್ಸ್‌ 256ಜಿಬಿ ವೆರಿಯಂಟ್ ಫೋನ್ ಬೆಲೆ ಇದೀಗ 3,210ರೂಗಳಷ್ಟು ಹೆಚ್ಚಾಗಿದೆ. ಪ್ರಸ್ತುತ ಐಫೋನ್ ಎಕ್ಸ್‌ 256ಜಿಬಿ ವೆರಿಯಂಟ್ ಫೋನ್ ಖರೀದಿಸಲು ₹ 1.08 ಲಕ್ಷ ರೂ.ಹಣವನ್ನು ಪಾವತಿಸಬೇಕಿದೆ!

ಐಫೋನ್ ಎಕ್ಸ್‌ ( 64GB)

ಐಫೋನ್ ಎಕ್ಸ್‌ ( 64GB)

ಐಫೋನ್ ಎಕ್ಸ್ 64GB ವೆರಿಯಂಟ್ ಫೋನ್ ಬೆಲೆ ಕೂಡ ಸರಿಸುಮಾರು ಮೂರು ಸಾವಿರ ರೂಪಾಯಿಗಳಷ್ಟು ಹೆಚ್ಚಾಗಿದ್ದು, 92,430 ರೂ. ಬೆಲೆ ಹೊಂದಿದ್ದ ಐಫೋನ್ ಎಕ್ಸ್ 64GB ವೆರಿಯಂಟ್ ಫೋನ್ ಬೆಲೆ ಇದೀಗ 95,390 ಸಾವಿರ ರೂಪಾಯಿಗಳಾಗಿದೆ.!!

ಐಫೋನ್ 8 ಸಿರೀಸ್ !!

ಐಫೋನ್ 8 ಸಿರೀಸ್ !!

ಐಫೋನ್ ಎಕ್ಸ್ ನಂತರ ಹೆಚ್ಚು ಬೇಡಿಕೆಯಲ್ಲಿರುವ ಐಫೋನ್ 8 64GB ವೆರಿಯಂಟ್ ಫೋನ್ ಬೆಲೆ 66,120 ರೂ.ಗಳಿಂದ 67,940 ರೂ.ಗಳಿಗೆ ಹೆಚ್ಚಾಗಿದೆ.!! ಇನ್ನು 256GB ವೆರಿಯಂಟ್ ಐಫೋನ್ 8 ಬೆಲೆ 79,420 ರೂಪಾಯಿಗಳಿಂದ 81,500 ರೂಪಾಯಿಗಳಿಗೆ ಬಂದು ನಿಂತಿದೆ.!!

ಐಫೋನ್ 7 ಸಿರೀಸ್

ಐಫೋನ್ 7 ಸಿರೀಸ್

ಆಪಲ್ ಐಫೋನ್ 7 32 ಜಿಬಿ ವೆರಿಯಂಟ್ ಫೋನ್ ಬೆಲೆ ಶೇಕಡ 3.1 ಏರಿಕೆಯಾಗಿ ಪ್ರಸ್ತುತ 52,370 ರೂ. ಬೆಲೆಯನ್ನು ಹೊಂದಿದೆ. ಇನ್ನು ಐಫೋನ್ 7 128 ಜಿಬಿ ಜಿಬಿ ವೆರಿಯಂಟ್ ಐಫೋನ್ ಬೆಲೆ 59,910 ರೂ.ಗಳಿಂದ 61,560 ರೂಪಾಯಿಗಳಿಗೆ ಏರಿಕೆಯಾಗಿದೆ.!!

ಐಫೋನ್ 6 ಎಸ್ ಸಿರೀಸ್!!

ಐಫೋನ್ 6 ಎಸ್ ಸಿರೀಸ್!!

ಸುಮಾರು ಮೂರು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಐಫೋನ್ 6 ಎಸ್ 32 ಜಿಬಿ ವೆರಿಯಂಟ್ ಫೋನ್ ಬೆಲೆ ಇದೀಗ 42,900 ರೂ.ಗಳಿಂದ ಆರಂಭವಾಗಲಿದೆ ಮತ್ತು 128 ಜಿಬಿ ಆವೃತ್ತಿಯ ಐಫೋನ್ 6 ಎಸ್ ಪ್ಲಸ್ 52,100 ರೂ. ಬೆಲೆಯನ್ನು ಹೊಂದಿದೆ.!!

ಆಪಲ್ ಐಫೋನ್ 6

ಆಪಲ್ ಐಫೋನ್ 6

2014 ರಲ್ಲಿ ಬಿಡುಗಡೆಯಾದ ಆಪಲ್ ಐಫೋನ್ 6 ಹೊಸ ಬೆಲೆಯಲ್ಲಿ ಹೆಚ್ಚೇನು ಬದಲಾವಣೆಯಾಗಿಲ್ಲ. ಆಪಲ್ ಐಫೋನ್ 6 ಈ ಮೊದಲು 30,780 ರೂಪಾಯಿಗಳ ಬೆಲೆಯನ್ನು ಹೊಂದಿದ್ದರೆ, ಪ್ರಸ್ತುತ 31,900 ರೂಪಾಯಿಗಳಿಗೆ ಏರಿಕೆಯಾಗಿದೆ.!!

ಆಪಲ್ ವಾಚ್ ಸೀರೀಸ್

ಆಪಲ್ ವಾಚ್ ಸೀರೀಸ್

ಭಾರತದಲ್ಲಿಗ ಆಪಲ್ 3 ಜಿಪಿಎಸ್ 38 ಎಂಎಂ ಆಪಲ್ ವಾಚ್ ಬೆಲೆ 29,300 ರೂ.ಗಳಿಂದ ಏರಿಕೆಯಾಗಿ 32,380 ರೂ.ಗಳಾಗಿವೆ. 3 ಜಿಪಿಎಸ್ 38 42 ಎಂಎಂ ಬೆಲೆ 31,900 ರೂ.ಗಳಿಂದ ಏರಿಕೆಯಾಗಿ ಪ್ರಸ್ತುತ 34,410 ರೂಪಾಯಿಗಳಾಗಿವೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
It will be interesting to see the Infinix Hot S3 compete with the likes of Vivo V7+, Oppo F5 and more.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot