Home
ಮೊಬೈಲ್

7,999 ರೂ.ಬೆಲೆಯಲ್ಲಿ ಇದಕ್ಕಿಂತ ಮತ್ತೊಂದು ಸ್ಮಾರ್ಟ್‌ಪೋನ್ ಇಲ್ಲ!!..ಏಕೆ ಗೊತ್ತಾ?

By Bhaskar N J

ಶಿಯೋಮಿ ಫೋನ್‌ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವ ಹಾಂಗ್‌ಕಾಂಗ್ ಮೂಲದ ಇನ್ಫಿನಿಕ್ಸ್ ಮೊಬೈಲ್ ಕಂಪೆನಿ ಈಗ ಮತ್ತೊಂದು ಅತ್ಯುತ್ತಮ ಸ್ಮಾರ್ಟ್‌ಪೋನ್ ಒಂದನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಕೆಲವು ದಿನಗಳ ಹಿಂದಷ್ಟೆ ಬಿಡುಗಡೆಗೊಂಡಿರುವ ಇನ್ಫಿನಿಕ್ಸ್ 'ಹಾಟ್ ಪ್ರೊ 6' ಈಗ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸುತ್ತಿದೆ.

ಹೌದು, ಕೇವಲ 7999 ರೂಪಾಯಿಗಳಿಗೆ ಭಾರತದ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿರುವ ಇನ್ಫಿನಿಕ್ಸ್ 'ಹಾಟ್ ಪ್ರೊ 6' ಸ್ಮಾರ್ಟ್‌ಫೋನ್ ತನ್ನ ಫೀಚರ್ಸ್‌ಗಳಿಂದಲೇ ಹೆಚ್ಚು ಹೆಸರಾಗುತ್ತಿದೆ. 8 ಸಾವಿರ ರೂ.ಒಳಗೆ ಲಭ್ಯವಿರುವ ಅತ್ಯುತ್ತಮ ಡ್ಯುಯಲ್ ಕ್ಯಾಮೆರಾ ಸ್ಮಾರ್ಟ್‌ಫೋನ್‌ ಫೀಚರ್ ಹೊಂದಿರುವ ಸ್ಮಾರ್ಟ್‌ಫೋನ್ ಆಗಿ ಇನ್ಫಿನಿಕ್ಸ್ 'ಹಾಟ್ ಪ್ರೊ 6' ಹೊರಹೊಮ್ಮಿದೆ.

7,999 ರೂ.ಬೆಲೆಯಲ್ಲಿ ಇದಕ್ಕಿಂತ ಮತ್ತೊಂದು ಸ್ಮಾರ್ಟ್‌ಪೋನ್ ಇಲ್ಲ!!..ಏಕೆ ಗೊತ್ತಾ?

ಹಾಗಾದರೆ, ಪ್ರಖ್ಯಾತ ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಎಸ್‌ಕ್ಲೂಸಿವ್ ಮಾರಾಟ ಕಾಣುತ್ತಿರುವ ಇನ್ಫಿನಿಕ್ಸ್ 'ಹಾಟ್ ಪ್ರೊ 6' ಸ್ಮಾರ್ಟ್‌ಫೋನ್ ಹೊಂದಿರುವ ಎಲ್ಲಾ ಫೀಚರ್ಸ್ ಯಾವುವು? 'ಹಾಟ್ ಪ್ರೊ 6' ಸ್ಮಾರ್ಟ್‌ಫೋನ್ ಖರೀದಿಸಲು ಇರುವ ಕಾರಣಗಳೇನು? ಖರೀದಿಸಲು ಯೋಗ್ಯವಾಗ ಮೊಬೈಲ್ ಇದಾಗಿದೆಯೇ ಎಂಬುದನ್ನು ಮುಂದೆ ತಿಳಿಯಿರಿ.

'ಹಾಟ್ ಪ್ರೊ 6' ವಿನ್ಯಾಸ ಮತ್ತ ಡಿಸ್‌ಪ್ಲೇ!!

'ಹಾಟ್ ಪ್ರೊ 6' ವಿನ್ಯಾಸ ಮತ್ತ ಡಿಸ್‌ಪ್ಲೇ!!

ಇನ್ಫಿನಿಕ್ಸ್ ಹಾಟ್‌ 6 ಡ್ಯುಯಲ್-ಸಿಮ್ ಸ್ಮಾರ್ಟ್‌ಪೋನ್ 15.21-ಸೆಂ.ದೊಡ್ಡದಾದ (5.99) ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಹಿಂಬಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ ಫಿಂಗರ್‌ಪ್ರಿಂಟ್ ರೀಡರ್ ಆಯ್ಕೆಗಳನ್ನು ಹೊಂದಿರುವ ಸ್ಮಾರ್ಟ್‌ಪೋನ್, 7999 ರೂ.ಬೆಲೆಗೆ ಸಿಗುತ್ತಿರುವ ಅತ್ಯುತ್ತಮ ವಿನ್ಯಾಸದ ಸ್ಮಾರ್ಟ್‌ಫೋನ್ ಆಗಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಇನ್ಫಿನಿಕ್ಸ್ 'ಹಾಟ್ ಪ್ರೊ 6' ಸ್ಮಾರ್ಟ್‌ಫೋನಿನಲ್ಲಿ ಕ್ವಾಲ್ಕಾಮ್ ಕಂಪೆನಿಯ ಸ್ನ್ಯಾಪ್ಡ್ರಾಗನ್ 425 ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ನೀಡಲಾಗಿದೆ. ಇನ್ನು 3GB RAM ಮತ್ತು 32GB ಆಂತರಿಕ ಮೆಮೊರಿಯನ್ನು ಹೊಂದಿರುವ ಈ ಫೋನಿನ ಮೆಮೊರಿಯನ್ನು ಎಸ್‌ಡಿ ಕಾರ್ಡ್ ಸಹಾಯದಿಂದ 128GB ವರೆಗೂ ವಿಸ್ತರಿಸಬಹುದಾದ ಆಯ್ಕೆ ಇದೆ.

ಕ್ಯಾಮೆರಾ ಗುಣಮಟ್ಟ ಹೇಗಿದೆ?

ಕ್ಯಾಮೆರಾ ಗುಣಮಟ್ಟ ಹೇಗಿದೆ?

ಇನ್ಫಿನಿಕ್ಸ್ 'ಹಾಟ್ ಪ್ರೊ 6' ಸ್ಮಾರ್ಟ್‌ಫೋನ್ 13MP + 2MP ಡ್ಯುಯಲ್ ರಿಯರ್ ಕ್ಯಾಮೆರಾಗಳು ಹಾಗೂ 5 ಎಂಪಿ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಪೊಟ್ರೆಟ್, ಬ್ಯೂಟಿ, ಹೆಚ್‌ಡಿಆರ್, ಪನೋರಮಾ, ನೈಟ್ ಮೂಡ್ ಹಾಗೂ ಟೈಮ್‌ ಲ್ಯಾಪ್ಸ್‌ನಂತಹ ಕ್ಯಾಮರಾ ಫೀಚರ್ಸ್‌ಗಳನ್ನು ನಾವು ಸ್ಮಾರ್ಟ್‌ಪೋನಿನಲ್ಲಿ ಕಾಣಬಹುದುದಾಗಿದೆ.

ಬ್ಯಾಟರಿ ಶಕ್ತಿ ಎಷ್ಟು?

ಬ್ಯಾಟರಿ ಶಕ್ತಿ ಎಷ್ಟು?

ಕೇವಲ 7999 ರೂಪಾಯಿಗಳಿಗೆ ಬಿಡುಗಡೆಯಾಗಿರುವ ಇನ್ಫಿನಿಕ್ಸ್ 'ಹಾಟ್ ಪ್ರೊ 6' ಸ್ಮಾರ್ಟ್‌ಫೋನಿನಲ್ಲಿ 4000mAH ಬ್ಯಾಟರಿಯನ್ನು ನೀಡಲಾಗಿದೆ. ಸ್ಮಾರ್ಟ್‌ಫೋನಿನ ಬ್ಯಾಟರಿ ಶಕ್ತಿ 12 ಗಂಟೆಗಳ ನಿರಂತರ ವೀಡಿಯೋ ಪ್ಲೇಬ್ಯಾಕ್ ಮತ್ತು 37 ಗಂಟೆಗಳ ಸಂಗೀತ ಪ್ಲೇಬ್ಯಾಕ್ ಅನ್ನು ನೀಡಲು ಸಮರ್ಥವಾಗಿದೆ ಎಂದು ಇನ್ಫಿನಿಕ್ಸ್ ಕಂಪೆನಿ ತಿಳಿಸಿದೆ.

ಇತರೆ ಏನೆಲ್ಲಾ ಫೀಚರ್ಸ್ ಇವೆ?

ಇತರೆ ಏನೆಲ್ಲಾ ಫೀಚರ್ಸ್ ಇವೆ?

158 ಗ್ರಾಂ ತೂಕವಿರುವ ಇನ್ಫಿನಿಕ್ಸ್ 'ಹಾಟ್ ಪ್ರೊ 6' ಡೆಡಿಕೆಟೆಡ್ ಮೆಮೊರಿ ಸ್ಲಾಟ್, ಆಂಡ್ರಾಯ್ಡ್ ಓರಿಯೋ(8.0), ಬ್ಲೂಟೂತ್ 4.1, ಜಿ ಸೆನ್ಸರ್, ಹಾಗೂ 4G ವೋಲ್ಟ್ ಸೇರಿದಂತೆ ಎಲ್ಲಾ ಮಾದರಿಯ ನೆಟ್‌ವರ್ಕ್‌ಗಳಿಗೂ ಸಪೋರ್ಟ್ ಆಗುತ್ತದೆ. 720 x 1440 ಪಿಕ್ಸೆಲ್ ಸಾಮರ್ಥದ ಡಿಸ್‌ಪ್ಲೇಯು ವಿಡಿಯೊ ಮನರಂಜನೆ ಪ್ರಿಯರಿಗೆ ಹೇಳಿಮಾಡಿಸಿದಂತಿದೆ.

ಖರೀದಿಸಲು ಯೋಗ್ಯವಾಗ ಮೊಬೈಲ್?

ಖರೀದಿಸಲು ಯೋಗ್ಯವಾಗ ಮೊಬೈಲ್?

ಇಷ್ಟೆಲ್ಲಾ ಫೀಚರ್ಸ್ ಹೊಂದಿರುವ ಇನ್ಫಿನಿಕ್ಸ್ 'ಹಾಟ್ ಪ್ರೊ 6' ಸ್ಮಾರ್ಟ್‌ಪೋನ್ ಅನ್ನು 7999 ರೂ. ಬೆಲೆ ತೆತ್ತು ಖರೀದಿಸಬಹುದಾಗಿದೆ. ಭಾರತದಂತಹ ಬಜೆಟ್ ಸ್ಮಾರ್ಟ್‌ಪೋನ್ ಪ್ರಿಯ ದೇಶದಲ್ಲಿ ಇನ್ಫಿನಿಕ್ಸ್ 'ಹಾಟ್ ಪ್ರೊ 6' ಸ್ಮಾರ್ಟ್‌ಪೋನ್ ನಾವು ನೀಡುವ ಹಣಕ್ಕೆ ಒಂದು ಅತ್ಯುತ್ತಮ ಸ್ಮಾರ್ಟ್‌ಪೋನ್ ಆಗಿದೆ ಎಂದು ಹೇಳಬಹುದು.

Best Mobiles in India

English summary
The Hot Pro 6 comes in Sandstone Black, Magic Gold, City Blue, and Bordeaux Red colour options.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+