Home
ಮೊಬೈಲ್

Infinix: ಇಂದು 2 ಹೊಸ ಫೋನ್‌ ಸೇಲ್: 256GB ಸ್ಟೋರೇಜ್‌, 108MP ಕ್ಯಾಮೆರಾ.. ಕಡಿಮೆ ಬೆಲೆ!

ಇನ್ಫಿನಿಕ್ಸ್‌ (Infinix) ಕಂಪನಿಯು ತನ್ನ ನೋಟ್ 40 ಸರಣಿಯ ಸ್ಮಾರ್ಟ್‌ಫೋನ್‌ಗಳ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೊಸದಾಗಿ ಪ್ರಾರಂಭಿಸಲಾದ ರೇಸಿಂಗ್ ಆವೃತ್ತಿಯು Infinix Note 40 Pro ಮತ್ತು Infinix Note 40 Pro+ ಅನ್ನು ಒಳಗೊಂಡಿದೆ. Infinix Note 40 ಸರಣಿಯನ್ನು BMW ಡಿಸೈನ್‌ ವರ್ಕ್ಸ್‌ನ ಸಹಯೋಗದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಮತ್ತು F1 ಪ್ರೇರಿತ ವಿನ್ಯಾಸವನ್ನು ಹೊಂದಿದೆ. ಅಂದಹಾಗೆ, ಈ ಫೋನ್‌ಗಳು ಇಂದಿನಿಂದ (ಆಗಸ್ಟ್ 26) ಇ-ಕಾಮರ್ಸ್ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗಲಿದೆ. ಈ ಫೋನಿನ ಬೆಲೆ, ಆಫರ್‌ಗಳು ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.

ಹೊಸ ಇನ್ಫಿನಿಕ್ಸ್‌ ಮೊಬೈಲ್‌ಗಳು 6.78 ಇಂಚಿನ ಡಿಸ್ಲ್ಪೇಯನ್ನು ಹೊಂದಿವೆ. ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7020 6nm ಪ್ರೊಸೆಸರ್‌ನೊಂದಿಗೆ ಕೆಲಸ ನಿರ್ವಹಿಸಲಿದೆ. 108 ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾ, 32 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಒಳಗೊಂಡಿವೆ. ಇನ್ಫಿನಿಕ್ಸ್‌ ನೋಟ್‌ 40 ಪ್ರೊ ಪ್ಲಸ್ 100W ಚಾರ್ಜರ್‌ನೊಂದಿಗೆ 4500mAh ಬ್ಯಾಟರಿ ಮತ್ತು ಇನ್ಫಿನಿಕ್ಸ್‌ ನೋಟ್‌ 40 ಪ್ರೊ 45W ಚಾರ್ಜರ್‌ನೊಂದಿಗೆ 5000mAh ಬ್ಯಾಟರಿ ಹೊಂದಿದೆ.

Infinix: ಇಂದು 2 ಹೊಸ ಫೋನ್‌ ಸೇಲ್: 256GB ಸ್ಟೋರೇಜ್‌, 108MP ಕ್ಯಾಮೆರಾ

ಇನ್ಫಿನಿಕ್ಸ್‌ ನೋಟ್‌ 40 ಪ್ರೊ ಮತ್ತು ಇನ್ಫಿನಿಕ್ಸ್‌ ನೋಟ್‌ 40 ಪ್ರೊ ಪ್ಲಸ್ ಬೆಲೆ

ಕಂಪನಿಯು ಇನ್ಫಿನಿಕ್ಸ್‌ ನೋಟ್‌ 40 ಪ್ರೊ ರೇಸಿಂಗ್ ಆವೃತ್ತಿಯ ಇನ್ಫಿನಿಕ್ಸ್‌ ನೋಟ್‌ 40 ಪ್ರೊ ಫೋನನ್ನು ಕೇವಲ 8GB ಮತ್ತು 256GB ಸ್ಟೋರೇಜ್‌ ವೇರಿಯಂಟ್‌ನಲ್ಲಿ ಬಿಡುಗಡೆ ಮಾಡಿದೆ. ಈ ಫೋನಿನ ಬೆಲೆ 15,999 ರೂ. ಆಗಿದೆ. ಇನ್ಫಿನಿಕ್ಸ್‌ ನೋಟ್‌ 40 ಪ್ರೊ ಪ್ಲಸ್ ಫೋನನ್ನು 12GB ಮತ್ತು 256GB ಸ್ಟೋರೇಜ್‌ ಆಯ್ಕೆಯಲ್ಲಿ ಪರಿಚಯಿಸಿದೆ. ಇದು 18,999 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಈ ಫೋನ್‌ಗಳ ಬೆಲೆಯು ಬ್ಯಾಂಕ್ ಆಫರ್‌ಗಳು ಮತ್ತು ಎಕ್ಸ್‌ಚೇಂಜ್‌ ಆಫರ್‌ಗಳನ್ನು ಒಳಗೊಂಡಿದೆ. ಇನ್ಫಿನಿಕ್ಸ್‌ ನೋಟ್‌ 40 ಪ್ರೊ ವೇರಿಯಂಟ್‌ ಮತ್ತು ಇನ್ಫಿನಿಕ್ಸ್‌ ನೋಟ್‌ 40 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್‌ಗಳು ಇಂದು (ಆಗಸ್ಟ್ 26) ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ ಮೂಲಕ ಮಾರಾಟ ಪ್ರಾರಂಭಿಸಲಿವೆ. ಉಳಿದಂತೆ, ಇತರೆ ಡಿಸ್ಕೌಂಟ್ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಇನ್ಫಿನಿಕ್ಸ್‌ ನೋಟ್‌ 40 ಪ್ರೊ ಮತ್ತು ಇನ್ಫಿನಿಕ್ಸ್‌ ನೋಟ್‌ 40 ಪ್ರೊ ಪ್ಲಸ್ ವೈಶಿಷ್ಟ್ಯಗಳು

ಡಿಸ್ಲ್ಪೇ: ಎರಡೂ ಸ್ಮಾರ್ಟ್‌ಫೋನ್‌ಗಳು 6.78 ಇಂಚಿನ ಪೂರ್ಣ HD+ ಬಾಗಿದ LTPS AMOLED ಡಿಸ್ಲ್ಪೇಯನ್ನು ಹೊಂದಿವೆ. ಇದು 1,080 x 2,436 ಪಿಕ್ಸೆಲ್‌ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್‌ನೊಂದಿಗೆ ಮತ್ತು 1,300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿವೆ.

ಪ್ರೊಸೆಸರ್: ಹೊಸ ಇನ್ಫಿನಿಕ್ಸ್‌ ರೇಸಿಂಗ್ ಆವೃತ್ತಿಯ ಎರಡು ಫೋನ್‌ಗಳು ಮೀಡಿಯಾ ಟೆಕ್ ಡೈಮೆನ್ಸಿಟಿ 7200 SoC ಪ್ರೊಸೆಸರ್‌ ಹೊಂದಿವೆ. 12GB RAM ಮತ್ತು 256GB ಸ್ಟೋರೇಜ್‌ ಸೌಲಭ್ಯ ಇದೆ.

ಕ್ಯಾಮೆರಾ: ಇನ್ಫಿನಿಕ್ಸ್‌ ನೋಟ್‌ 40 ಪ್ರೊ ಮತ್ತು ಇನ್ಫಿನಿಕ್ಸ್‌ ನೋಟ್‌ 40 ಪ್ರೊ ಪ್ಲಸ್ ಫೋನ್‌ಗಳು 108 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿವೆ. ಜೊತೆಗೆ ಎರಡು ಅನಿರ್ದಿಷ್ಟ 2 ಮೆಗಾ ಪಿಕ್ಸೆಲ್ ಸೆನ್ಸಾರ್‌ ಇದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ ಎರಡೂ ಫೋನ್‌ಗಳು 32 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಪಡೆದಿವೆ.

ಬ್ಯಾಟರಿ: ಇನ್ಫಿನಿಕ್ಸ್‌ ನೋಟ್‌ 40 ಪ್ರೊ ಫೋನ್ 5,000mAh ಬ್ಯಾಟರಿಯನ್ನು ಹೊಂದಿದೆ. ಇದು 45W ವೇಗದ ಚಾರ್ಜಿಂಗ್‌ ಸಪೋರ್ಟ್‌ ಪಡೆದಿದೆ. ಇನ್ಫಿನಿಕ್ಸ್‌ ನೋಟ್‌ 40 ಪ್ರೊ ಪ್ಲಸ್ ಮೊಬೈಲ್ 4,600mAh ಬ್ಯಾಟರಿಯನ್ನು ಹೊಂದಿದೆ. ಇದು 100W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬರುತ್ತದೆ.

ಇತರೆ ಫೀಚರ್ಸ್: ಎರಡೂ ಫೋನ್‌ಗಳು ಡ್ಯುಯಲ್ JBL ಟ್ಯೂನ್ಡ್ ಸ್ಪೀಕರ್‌ಗಳನ್ನು ಒಳಗೊಂಡಿರುತ್ತವೆ. ಮತ್ತು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿವೆ. 5G, 4G LTE, Wi-Fi, ಬ್ಲೂಟೂತ್, GPS, NFC ಮತ್ತು USB ಟೈಪ್-ಸಿ ಪೋರ್ಟ್‌ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒಳಗೊಂಡಿವೆ.

Best Mobiles in India

English summary
Infinix Note 40 Series Racing Edition First Sale goes on Today via Flipkart: Know Price, Offer and More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+