Home
ಮೊಬೈಲ್

Infinix: ಆ.5ಕ್ಕೆ ಬರುತ್ತೆ ಹೊಸ ಫೋನ್: 108MP ಟ್ರಿಪಲ್ ಕ್ಯಾಮೆರಾ ಗ್ಯಾರಂಟಿ! ಬೆಲೆ ನೀವೆ ನೋಡಿ

ಆಗಸ್ಟ್ ತಿಂಗಳಲ್ಲಿ ಅನೇಕ ಕಂಪನಿಗಳು ತಮ್ಮ ಮೊಬೈಲ್ ಪ್ರಿಯರಿಗಾಗಿ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಿವೆ. ಈ ಪಟ್ಟಿಯಲ್ಲಿ ಇನ್ಫಿನಿಕ್ಸ್‌ (Infinix) ಕೂಡ ಸೇರ್ಪಡೆಯಾಗಿದೆ. ಹೌದು, ಇನ್ಫಿನಿಕ್ಸ್‌ ತನ್ನ ಭಾರತೀಯ ಗ್ರಾಹಕರಿಗೆ ಮಧ್ಯಮ ಶ್ರೇಣಿಯ ಹೊಸ ಮೊಬೈಲ್‌ ಅನ್ನು ಬಿಡುಗಡೆ ಮಾಡಲಿದೆ. ಕಂಪನಿಯು ಇನ್ಫಿನಿಕ್ಸ್‌ ನೋಟ್‌ 40ಎಕ್ಸ್ 5G (Infinix Note 40X 5G) ಫೋನನ್ನು ತನ್ನ ಅಭಿಮಾನಿಗಳಿಗೆ 15,000 ರೂ.ಗಳ ಬಜೆಟ್‌ನಲ್ಲಿ ಪರಿಚಯಿಸುತ್ತಿದೆ. ಕಂಪನಿಯು AI ಫೀಚರ್ಸ್‌ಗಳೊಂದಿಗೆ ಫೋನನ್ನು ತರುತ್ತಿದೆ. ಆಗಸ್ಟ್ ತಿಂಗಳ ಮೊದಲ ವಾರದಲ್ಲೇ ಈ ಫೋನ್ ಗ್ರಾಹಕರ ಕೈ ಸೇರಲಿದೆ.

ಹೌದು, ಟೆಕ್ ಬ್ರ್ಯಾಂಡ್ ಇನ್ಫಿನಿಕ್ಸ್ ಭಾರತದಲ್ಲಿ ತನ್ನ 'Note' ಸರಣಿಯನ್ನು ವಿಸ್ತರಿಸಲಿದೆ. ಆಗಸ್ಟ್ 5 ರಂದು ಭಾರತದಲ್ಲಿ ಇನ್ಫಿನಿಕ್ಸ್‌ ನೋಟ್‌ 40ಎಕ್ಸ್ 5G ಫೋನನ್ನು ಬಿಡುಗಡೆ ಮಾಡುತ್ತಿದೆ. ಈ ಮೊಬೈಲ್ ಬಿಡುಗಡೆಗೂ ಮೊದಲೇ, ಕೆಲವು ಫೀಚರ್ಸ್‌ಗಳನ್ನು ಬಹಿರಂಗಪಡಿಸಲಾಗಿದೆ. ನೀವು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಖರೀದಿಸಲು ತಯಾರಿ ನಡೆಸುತ್ತಿದ್ದರೆ, ನೀವು ಇನ್ಫಿನಿಕ್ಸ್‌ನ ಮುಂಬರುವ ಹೊಸ ಫೋನಿನ ಬಗ್ಗೆ ತಿಳಿಯುವುದು ಉತ್ತಮ.

Infinix: ಆ.5ಕ್ಕೆ ಬರುತ್ತೆ ಹೊಸ ಫೋನ್: 108MP ಟ್ರಿಪಲ್ ಕ್ಯಾಮೆರಾ ಗ್ಯಾರಂಟಿ!

ಇನ್ಫಿನಿಕ್ಸ್‌ ನೋಟ್‌ 40ಎಕ್ಸ್ 5G ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆಯನ್ನು ಹೊಂದಿರಲಿದೆ ಎಂದು ಕಂಪನಿ ತಿಳಿಸಿದೆ. ಇದು 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿರುತ್ತದೆ. Infinix Note 40X 5G ಫೋನನ್ನು ಒಂದಕ್ಕಿಂತ ಹೆಚ್ಚು ಮೆಮೊರಿ ರೂಪಾಂತರಗಳಲ್ಲಿ ಪರಿಚಯಿಸಲಾಗುವುದು. ಈ ಫೋನಿನ ಟಾಪ್ ವೇರಿಯಂಟ್ 12GB RAM ಅನ್ನು ಹೊಂದಿರಲಿದೆ ಮತ್ತು 256GB ಸ್ಟೋರೇಜ್‌ ಒಳಗೊಂಡಿರುತ್ತದೆ. ಇದು ಯುಎಸ್‌ಬಿ ಟೈಪ್-ಸಿ ಹೊಂದಿದ್ದು, ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಸಹ ಹೊಂದಿದೆ.

ಮುಂಬರುವ ಇನ್ಫಿನಿಕ್ಸ್‌ ಫೋನಿನಲ್ಲಿ ಹೊಸತೇನಿದೆ?

ಪ್ರಸ್ತುತ ದಿನಗಳಲ್ಲಿ ಎಲ್ಲವೂ AI ಮಯವಾಗಿದೆ. ಅದರಂತೆ, ಇನ್ಫಿನಿಕ್ಸ್‌ನ ಮುಂಬರುವ ಫೋನ್ ಅನ್ನು ಸುಧಾರಿತ AI ತಂತ್ರಜ್ಞಾನದೊಂದಿಗೆ ತರಲಾಗುತ್ತಿದೆ ಎಂದು ಕಂಪನಿ ಹೇಳಿದೆ. ಇದರೊಂದಿಗೆ ಫೋನ್ ಬಳಸುವ ಬಳಕೆದಾರರ ಅನುಭವವು ತುಂಬಾ ವಿಶೇಷವಾಗಿರುತ್ತದೆ. ಇನ್ಫಿನಿಕ್ಸ್‌ನ ಈ ಹೊಸ ಫೋನ್ ತನ್ನ ಪ್ರೀಮಿಯಂ ನೋಟದೊಂದಿಗೆ ಮಾತ್ರವಲ್ಲದೆ, ಅದರ ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

Infinix Note 40X 5G ಫೋನಿನ ಫೀಚರ್ಸ್‌

ಡಿಸ್ಪ್ಲೇ: ಈ ಹೊಸ ಇನ್ಫಿನಿಕ್ಸ್‌ ಫೋನ್ 6.78-ಇಂಚಿನ FHD+ ಡಿಸ್ಪ್ಲೇ, 1080 x 2460 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬಿಡುಗಡೆಯಾಗಲಿದೆ. ಇದು 120Hz ರಿಫ್ರೆಶ್ ದರ ಹೊಂದಿರಲಿದೆ.

ಪ್ರೊಸೆಸರ್: Infinix Note 40X 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 (MediaTek Dimensity 6300) ಆಕ್ಟಾಕೋರ್ ಪ್ರೊಸೆಸರ್‌ ಹೊಂದಿರಲಿದೆ ಎಂದು ಕಂಪನಿ ದೃಢಪಡಿಸಿದೆ. ಫೋನನ್ನು ಆಂಡ್ರಾಯ್ಡ್ 14ನಲ್ಲಿ ಬಿಡುಗಡೆ ಮಾಡಲಾಗುವುದು.

Infinix: ಆ.5ಕ್ಕೆ ಬರುತ್ತೆ ಹೊಸ ಫೋನ್: 108MP ಟ್ರಿಪಲ್ ಕ್ಯಾಮೆರಾ ಗ್ಯಾರಂಟಿ!

ಸ್ಟೋರೇಜ್: ಈ ಫೋನ್ ಮಲ್ಟಿಟಾಸ್ಕಿಂಗ್‌ಗೆ ಪರಿಪೂರ್ಣ ಸಾಧನವಾಗಲಿದೆ ಎಂದು ಕಂಪನಿ ಹೇಳಿದೆ. ನೀವು ಫೋನಿನಲ್ಲಿ ಅಪ್ಲಿಕೇಶನ್‌ಗಳು, ಗೇಮ್‌ಗಳಿಗೆ ಸಾಕಷ್ಟು ಸ್ಟೋರೇಜ್ ಪಡೆಯಬಹುದು. ಈ ಫೋನನ್ನು 12GB RAM ಮತ್ತು 256GB ಸ್ಟೋರೇಜ್‌ನೊಂದಿಗೆ ಪರಿಚಯಿಸಲಾಗುತ್ತಿದೆ. ವರ್ಚುವಲ್ RAM ತಂತ್ರಜ್ಞಾನವು ಫೋನ್‌ನಲ್ಲಿ ಇರುತ್ತದೆ.

ಕ್ಯಾಮೆರಾ: ನೂತನ ಇನ್ಫಿನಿಕ್ಸ್‌ ಫೋನನ್ನು 108MP ಟ್ರಿಪಲ್ ರಿಯರ್ ಕ್ಯಾಮೆರಾದೊಂದಿಗೆ ತರಲಾಗುವುದು. 2MP ಸೆಕೆಂಡರಿ ಲೆನ್ಸ್, ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8MP ಫ್ರಂಟ್ ಕ್ಯಾಮೆರಾವನ್ನು ಹೊಂದಿರಲಿದೆ.

ಬ್ಯಾಟರಿ: ಈ ಫೋನ್ 5000mAh ಬ್ಯಾಟರಿ ಬ್ಯಾಕಪ್ ಮತ್ತು 18W ವೇಗದ ಚಾರ್ಜಿಂಗ್‌ನೊಂದಿಗೆ ಬಿಡುಗಡೆ ಮಾಡಲಾಗುತ್ತದೆ. 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಸಹ ನೀಡಲಾಗುತ್ತದೆ.

Infinix ಇಂಡಿಯಾ ವೆಬ್‌ಸೈಟ್, YouTubeನಲ್ಲಿ ಲೈವ್

ಒಟ್ಟಾರೆ, ಹೊಸ Infinix Note 40X 5G ಫೋನ್ ಭಾರತದಲ್ಲಿ ಆಗಸ್ಟ್ 5 ರಂದು ಬಿಡುಗಡೆಯಾಗಲಿದೆ. ಅಂದು ಮೊಬೈಲ್‌ನ ಬೆಲೆ ಮತ್ತು ಇತರ ಫೀಚರ್ಸ್‌ಗಳು ಬಹಿರಂಗಗೊಳ್ಳಲಿವೆ. ಈ ಫೋನಿನ ಬಿಡುಗಡೆಯ ಕುರಿತು ಲೈವ್ ಮಾಹಿತಿಯನ್ನು Infinix ಇಂಡಿಯಾ ವೆಬ್‌ಸೈಟ್, ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮತ್ತು ಬ್ರ್ಯಾಂಡ್‌ನ YouTube ಚಾನಲ್‌ಗಳಲ್ಲಿ ನೋಡಬಹುದು.

Best Mobiles in India

English summary
Infinix Note 40x 5G India launch date confirmed for august 5: know the all details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+