Infinix Note 40X 5G: ಈ ಟಾಪ್ 5 ಫೀಚರ್ಸ್‌ಗಳೊಂದಿಗೆ ಬಿಡುಗಡೆಗೆ ಸಿದ್ಧ! ಯಾವಾಗ ನೋಡಿ
Infinix Note 40X 5G India Launch: ಟೆಕ್ ಬ್ರ್ಯಾಂಡ್ ಇನ್ಫಿನಿಕ್ಸ್ (Infinix) ಕಂಪನಿಯ ಬಹುನಿರೀಕ್ಷಿತ ಹೊಸ ಫೋನ್ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ. ಇದುವೇ ಇನ್ಫಿನಿಕ್ಸ್ ನೋಟ್ 40ಎಕ್ಸ್ 5G (Infinix Note 40X 5G) ಸ್ಮಾರ್ಟ್‌ಫೋನ್. ಮೊಬೈಲ್ ಪ್ರಿಯರನ್ನು ಆಕರ್ಷಿಸಿರುವ ಈ ಫೋನ್, ಇದೇ ಆಗಸ್ಟ್ 5 ರಂದು ಅಧಿಕೃತವಾಗಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಹೊಸ ಮೊಬೈಲ್ 108 ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾದೊಂದಿಗೆ ಬರಲಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಈ ಫೋನ್ ಕಾರ್ಯನಿರ್ವಹಿಸುವುದು ಖಚಿತವಾಗಿದೆ.
ಹೌದು, ಇನ್ಫಿನಿಕ್ಸ್ ಕಂಪನಿಯು ತನ್ನ 'Note' ಸರಣಿಯಲ್ಲಿ ಹೊಸ ಫೋನನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಫೋನ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ. ಈ ಫೋನ್‌ನ ಅತಿದೊಡ್ಡ ಮಾದರಿಯು 12GB RAM ಅನ್ನು ಹೊಂದಿರಲಿದೆ ಮತ್ತು 256GB ಸ್ಟೋರೇಜ್ ಒಳಗೊಂಡಿರುತ್ತದೆ. ಕಂಪನಿಯು 13,999 ರೂ. ಬೆಲೆಯಲ್ಲಿ ಪರಿಚಯಿಸಲಿದೆ. ಇದು ಯುಎಸ್‌ಬಿ ಟೈಪ್-ಸಿ ಅನ್ನು ಹೊಂದಿದ್ದು, ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಕೂಡ ಹೊಂದಿದೆ. ಈ ಫೋನಿ ಟಾಪ್ 5 ಫೀಚರ್ಸ್‌ಗಳನ್ನು ತಿಳಿಯೋಣ ಬನ್ನಿ.

ಇನ್ಫಿನಿಕ್ಸ್ ನೋಟ್ 40ಎಕ್ಸ್ 5G ಬಿಡುಗಡೆ ವಿವರ
ಇನ್ಫಿನಿಕ್ಸ್ ತನ್ನ ಅಧಿಕೃತ ವೆಬ್‌ಸೈಟ್ ಮೂಲಕ ಇನ್ಫಿನಿಕ್ಸ್ ನೋಟ್ 40ಎಕ್ಸ್ 5G ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ. ಈ 5G ಫೋನ್ ಭಾರತದಲ್ಲಿ ಆಗಸ್ಟ್ 5 ರಂದು ಬಿಡುಗಡೆಯಾಗಲಿದೆ. ಈ ಫೋನ್ ಬಿಡುಗಡೆಯ ಕುರಿತು ಲೈವ್ ಮಾಹಿತಿಯನ್ನು Infinix ಇಂಡಿಯಾ ವೆಬ್‌ಸೈಟ್, ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮತ್ತು ಬ್ರ್ಯಾಂಡ್‌ನ YouTube ಚಾನಲ್‌ಗಳಲ್ಲಿ ಕಾಣಬಹುದು. ಆಗಸ್ಟ್ 5 ರಂದು ಸ್ಮಾರ್ಟ್‌ಫೋನಿನ ಬೆಲೆ ಮತ್ತು ಇತರ ವೈಶಿಷ್ಟ್ಯಗಳ ಮಾಹಿತಿಯನ್ನು ಬಹಿರಂಗಗೊಳಿಸಲಾಗುತ್ತದೆ.
ಹೊಸ ಇನ್ಫಿನಿಕ್ಸ್ ಫೋನಿನ ಟಾಪ್ 5 ಫೀಚರ್ಸ್
ಡಿಸ್ಪ್ಲೇ: ಇನ್ಫಿನಿಕ್ಸ್ ನೋಟ್ 40ಎಕ್ಸ್ 5G ಸ್ಮಾರ್ಟ್‌ಫೋನ್ 6.78-ಇಂಚಿನ FHD+ ಡಿಸ್ಪ್ಲೇಯನ್ನು ಹೊಂದಿರಲಿದೆ. 1080 x 2460 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ 120Hz ರಿಫ್ರೆಶ್ ದರ ಒಳಗೊಂಡಿರಲಿದೆ.
ಪ್ರೊಸೆಸರ್: ಇನ್ಫಿನಿಕ್ಸ್ ನೋಟ್ 40ಎಕ್ಸ್ 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದನ್ನು ಆಂಡ್ರಾಯ್ಡ್ 14 ನಲ್ಲಿ ಬಿಡುಗಡೆ ಮಾಡಲಾಗುವುದು. ಇದರೊಂದಿಗೆ XOS 14 ಅನ್ನು ಕಾಣಬಹುದಾಗಿದೆ.
ಸ್ಟೋರೇಜ್: ಇನ್ಫಿನಿಕ್ಸ್ ನೋಟ್ 40ಎಕ್ಸ್ 5G ಸ್ಮಾರ್ಟ್‌ಫೋನ್ 12GB RAM ಮತ್ತು 8GB RAM ನೊಂದಿಗೆ ಬಿಡುಗಡೆಯಾಗಲಿದೆ. ವರ್ಚುವಲ್ RAM ತಂತ್ರಜ್ಞಾನವು ಫೋನ್‌ನಲ್ಲಿ ಇರುತ್ತದೆ. ಇದು 12GB ವರ್ಚುವಲ್ RAMಗೆ 12GB RAM ಮತ್ತು 8GB ವರ್ಚುವಲ್ RAM ಅನ್ನು 8GB RAMಗೆ ಸೇರಿಸುತ್ತದೆ.
ಕ್ಯಾಮೆರಾ: ಇನ್ಫಿನಿಕ್ಸ್ ನೋಟ್ 40ಎಕ್ಸ್ 5G ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾವನ್ನು ಹೊಂದಿರಲಿದೆ ಎಂದು ಕಂಪನಿಯು ತಿಳಿಸಿದೆ. ಇದರಲ್ಲಿನ ಪ್ರಾಥಮಿಕ ಕ್ಯಾಮೆರಾ 108 ಮೆಗಾಪಿಕ್ಸೆಲ್ ಆಗಿರುತ್ತದೆ. 2MP ಸೆಕೆಂಡರಿ ಲೆನ್ಸ್ ಮತ್ತು ಮೂರನೇ ಬೆಳಕಿನ ಸಂವೇದಕವನ್ನು ಅದರ ಹಿಂಭಾಗದ ಫಲಕದಲ್ಲಿ ಕಾಣಬಹುದು. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ.
ಬ್ಯಾಟರಿ: ಬ್ಯಾಟರಿ ಬ್ಯಾಕಪ್ ಬಗ್ಗೆ ಹೇಳುವುದಾದರೆ, Infinix Note 40X 5G ಫೋನ್ ಅನ್ನು 5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು. ಇಯರ್‌ಫೋನ್ ಬಳಸಿ ಹಾಡುಗಳನ್ನು ಕೇಳಲು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಸಹ ನೀಡಲಾಗುತ್ತದೆ.
ಇನ್ಫಿನಿಕ್ಸ್‌ನ ಮುಂಬರುವ ಹೊಸ ಫೋನನ್ನು AI ತಂತ್ರಜ್ಞಾನದೊಂದಿಗೆ ಪರಿಚಯಿಸಲಾಗುತ್ತದೆ. ಇದು ತನ್ನ ಪ್ರೀಮಿಯಂ ನೋಟದೊಂದಿಗೆ ಮಾತ್ರವಲ್ಲದೆ, ಹಲವು ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಈ ಫೋನ್ ಉತ್ಪನ್ನ ಪುಟವನ್ನು ಬ್ರ್ಯಾಂಡ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಇಲ್ಲಿ Infinix Note 40X 5Gನ ಫೋಟೋಗಳು ಮತ್ತು ಇತರ ವಿವರಗಳನ್ನು ನೋಡಬಹುದು.


Click it and Unblock the Notifications








