Home
ಮೊಬೈಲ್

Infinix Note 40X 5G ಫೋನ್ ಲಾಂಚ್.. ರಾಶಿ ಫೀಚರ್ಸ್‌, ಕಡಿಮೆ ಬೆಲೆ!

ಇನ್ಫಿನಿಕ್ಸ್‌ (Infinix) ಕಂಪನಿಯು ಬಜೆಟ್‌ ಬೆಲೆಯ ಫೋನ್‌ಗಳ ಮೂಲಕ ಸದ್ದು ಮಾಡುತ್ತಿದೆ. ಇದೀಗ, ಹೊಸದಾಗಿ 'Note 40' ಸರಣಿಯಲ್ಲಿ ಮತ್ತೊಂದು ಕೈಗೆಟುಕುವ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಹೌದು, ಇನ್ಫಿನಿಕ್ಸ್ ಸಂಸ್ಥೆಯ ಇನ್ಫಿನಿಕ್ಸ್‌ ನೋಟ್‌ 40ಎಕ್ಸ್ 5G (Infinix Note 40X 5G) ಹೆಸರಿನ ಫೋನ್‌ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಹೊಸ ಫೋನ್ ಸ್ಟೈಲಿಶ್‌ ಲುಕ್ ಜೊತೆಗೆ ಕೆಲವು ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಎಂಟ್ರಿ ಕೊಟ್ಟಿದೆ.

ಹೌದು, ಇನ್ಫಿನಿಕ್ಸ್‌ ನೋಟ್‌ 40ಎಕ್ಸ್ 5G (Infinix Note 40X 5G) ಸ್ಮಾರ್ಟ್‌ಫೋನ್‌ ಭಾರತದಲ್ಲಿ ಇಂದು ಲಾಂಚ್‌ ಆಗಿದೆ. ಈ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಷನ್ 6300 ಪ್ರೊಸೆಸರ್‌ನೊಂದಿಗೆ ಕಾರ್ಯ ನಿರ್ವಹಿಸಲಿದೆ. 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 5000mAh ಬ್ಯಾಟರಿ, 12 GB RAM ಮತ್ತು 256 GB ಸ್ಟೋರೇಜ್‌ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ. ಬನ್ನಿ, ಈ ಫೋನಿನ ಬೆಲೆ, ಲಭ್ಯತೆ ಮತ್ತು ಇನ್ನುಳಿದ ಫೀಚರ್ಸ್‌ಗಳನ್ನು ಸಂಪೂರ್ಣವಾಗೊ ತಿಳಿಯೋಣ.

Infinix Note 40X 5G ಫೋನ್ ಲಾಂಚ್.. ರಾಶಿ ಫೀಚರ್ಸ್‌, ಕಡಿಮೆ ಬೆಲೆ!

Infinix Note 40X 5G ಬೆಲೆ ಮತ್ತು ಲಭ್ಯತೆ

ಕಂಪನಿಯು ಹೊಸ ಇನ್ಫಿನಿಕ್ಸ್‌ ಸ್ಮಾರ್ಟ್‌ಫೋನ್ ಅನ್ನು ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದೆ. ಈ ಫೋನಿನ 8GB RAM + 256 GB ಸ್ಟೋರೇಜ್‌ ವೇರಿಯಂಟ್‌ ಬೆಲೆ ಕೇವಲ 14,999 ರೂ. ಆಗಿದೆ. 12 GB RAM + 256 GB ಸ್ಟೋರೇಜ್ ಹೊಂದಿರುವ ಟಾಪ್ ಮಾಡೆಲ್ ಬೆಲೆ 15,999 ರೂ. ಇದೆ. ಈ ಫೋನನ್ನು ನಾಲ್ಕು ಬಣ್ಣಗಳ ಆಯ್ಕೆಗಳಲ್ಲಿ ಪರಿಚಯಿಸಲಾಗಿದೆ. ಕಪ್ಪು, ಲೈಮ್ ಗ್ರೀನ್, ಪಾಮ್ ಬ್ಲೂ ಮತ್ತು ಸ್ಟಾರ್ ಲೈಟ್ ಬ್ಲಾಕ್‌ ಬಣ್ಣಗಳಲ್ಲಿ ಖರೀದಿಸಬಹುದು.

1,500 ರೂ.ಗಳ ಡಿಸ್ಕೌಂಟ್‌ ಲಭ್ಯ

ನೀವು ಎಸ್‌ಬಿಐ ಮತ್ತು ಎಚ್‌ಡಿಎಫ್‌ಸಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಈ ಫೋನ್ ಅನ್ನು ಖರೀದಿಸಿದರೆ, 1,500 ರೂ.ಗಳ ಡಿಸ್ಕೌಂಟ್‌ ಪಡೆಯಬಹುದು. ಇದಲ್ಲದೇ, 6 ತಿಂಗಳವರೆಗೆ (2,250 ರೂ.ನಿಂದ ಪ್ರಾರಂಭ) ನೋ ಕಾಸ್ಟ್ ಇಎಂಐ (EMI) ಆಯ್ಕೆಯನ್ನು ಪಡೆಯಬಹುದು. ಈ ಸ್ಮಾರ್ಟ್‌ಫೋನ್ ಆಗಸ್ಟ್ 9 ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಪ್ರಾರಂಭಿಸಲಿದೆ.

Infinix Note 40X 5G ಫೀಚರ್ಸ್‌

ಡಿಸ್ಪ್ಲೇ: Infinix Note 40X 5G ಫೋನ್ 6.78-ಇಂಚಿನ FHD+ LCD ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ 1080 x 2460 ಪಿಕ್ಸೆಲ್ ರೆಸಲ್ಯೂಶನ್‌, 120Hz ರಿಫ್ರೆಶ್ ದರದಲ್ಲಿ ಕಾರ್ಯನಿರ್ವಹಿಸುತ್ತದೆ.

ಪ್ರೊಸೆಸರ್: Infinix Note 40X 5G ಫೋನ್ ಆರ್ಮ್ ಮಾಲಿ G57 MC2 GPU ಜೊತೆಗೆ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 6nm ಪ್ರೊಸೆಸರ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಧಾರಿತ XOS 14 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಸ್ಟೋರೇಜ್: Infinix Note 40X 5G ಫೋನ್ 12GB RAM ಮತ್ತು 8GB RAM, 256GB UFS 2.2 ಸ್ಟೋರೇಜ್‌ನೊಂದಿಗೆ ಬಿಡುಗಡೆಯಾಗಿದೆ. ಮೈಕ್ರೊ SD ಜೊತೆಗೆ 1TB ವರೆಗೆ ವಿಸ್ತರಿಸಬಹುದಾದ ಮೆಮೊರಿ ಹೊಂದಿದೆ. ಫೋನಿನಲ್ಲಿ ವರ್ಚುವಲ್ RAM ತಂತ್ರಜ್ಞಾನ ಸಹ ಇದೆ.

ಕ್ಯಾಮೆರಾ: nfinix Note 40X 5G ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 108 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ, AI ತಂತ್ರಜ್ಞಾನದೊಂದಿಗೆ ಕ್ವಾಡ್ LED ಫ್ಲ್ಯಾಷ್ ಸಹ ಒಳಗೊಂಡಿದೆ. 2MP ಸೆಕೆಂಡರಿ ಲೆನ್ಸ್. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8MP ಫ್ರಂಟ್‌ ಕ್ಯಾಮೆರಾ ಇದೆ. ನೀವು ಡ್ಯುಯಲ್ ವಿಡಿಯೋ, ಫಿಲ್ಮ್ ಮೋಡ್, ಪ್ರೊ ಮೋಡ್‌ನಂತಹ ಹಲವು ಆಯ್ಕೆಗಳನ್ನು ಪಡೆಯಬಹುದು.

ಬ್ಯಾಟರಿ: Infinix Note 40X 5G ಫೋನ್ 5,000mAh ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. 18W ಫಾಸ್ಟ್ ಚಾರ್ಜಿಂಗ್ ಸಫೋರ್ಟ್‌ ಲಭ್ಯವಿದೆ. 15 ಗಂಟೆಗಳ ವರೆಗೆ ವಿಡಿಯೋ, 90 ಗಂಟೆಗಳ ವರೆಗೆ ಹಾಡು, 6 ಗಂಟೆಗಳ ವರೆಗೆ ಕರೆ ಮತ್ತು 10 ಗಂಟೆಗಳ ಬ್ರೌಸಿಂಗ್ ಅನ್ನು ಮಾಡಬಹುದು ಎಂದು ಕಂಪನಿ ತಿಳಿಸಿದೆ.

ಇತರೆ ಫೀಚರ್ಸ್‌: ಈ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, DTS, ಡ್ಯುಯಲ್ ಮೈಕ್ರೊಫೋನ್‌ಗಳೊಂದಿಗೆ ಸ್ಟೀರಿಯೋ ಸ್ಪೀಕರ್‌ಗಳು, 5G SA, ಡ್ಯುಯಲ್ 4G VoLTE, Wi-Fi 5, ಬ್ಲೂಟೂತ್ 5.3, USB ಟೈಪ್-C, NFC ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Best Mobiles in India

English summary
Infinix Note 40X 5G launched in India starting at Rs. 14,999. First Sale Slated for August 9. Check Price, Discount, Offer and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+