ವಾವ್! 108MP ಕ್ಯಾಮೆರಾ.. 5,000mAh ಬ್ಯಾಟರಿ.. ಶೀಘ್ರ ಹೊಸ Infinix ಫೋನ್ ಲಾಂಚ್: ಯಾವುದು?
ಇನ್ಫಿನಿಕ್ಸ್ (Infinix) ಕಂಪನಿಯು ಅಗ್ಗದ ಹಾಗೂ ಬಜೆಟ್ ದರದ ಸ್ಮಾರ್ಟ್‌ಫೋನ್‌ಗಳ ಮೂಲಕ ಪ್ರಖ್ಯಾತಿ ಪಡೆದಿದೆ. ಇದೀಗ, ಇನ್ಫಿನಿಕ್ಸ್ ಸಂಸ್ಥೆಯು ಹೊಸದಾಗಿ ಇನ್ಫಿನಿಕ್ಸ್ ನೋಟ್ 40ಎಕ್ಸ್ 5G (Infinix Note 40X 5G) ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಹೌದು, ಟೆಕ್ ಬ್ರ್ಯಾಂಡ್ ಇನ್ಫಿನಿಕ್ಸ್ ಭಾರತದಲ್ಲಿ ತನ್ನ 'ನೋಟ್' ಸರಣಿಯನ್ನು ವಿಸ್ತರಿಸಲಿದೆ. ಆಗಸ್ಟ್ 5 ರಂದು ಭಾರತದಲ್ಲಿ ಇನ್ಫಿನಿಕ್ಸ್ ನೋಟ್ 40ಎಕ್ಸ್ 5G ಫೋನ್ ಅನ್ನು ಬಿಡುಗಡೆ ಮಾಡುವುದಾಗಿ ಕಂಪನಿ ಘೋಷಿಸಿದೆ. ಈ ಫೋನ್ ಉತ್ಪನ್ನ ಪುಟವನ್ನು ಬ್ರ್ಯಾಂಡ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸಹ ಬಿಡುಗಡೆ ಮಾಡಲಾಗಿದೆ. ಇಲ್ಲಿ Infinix Note 40X 5Gನ ಫೋಟೋಗಳು ಮತ್ತು ಇತರ ವಿವರಗಳನ್ನು ನೋಡಬಹುದು.
ಇನ್ಫಿನಿಕ್ಸ್ ನೋಟ್ 40ಎಕ್ಸ್ 5G ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾವನ್ನು ಹೊಂದಿರಲಿದೆ ಎಂದು ಕಂಪನಿಯು ತಿಳಿಸಿದೆ. ಇದರಲ್ಲಿನ ಪ್ರಾಥಮಿಕ ಕ್ಯಾಮೆರಾ 108 ಮೆಗಾಪಿಕ್ಸೆಲ್ ಆಗಿರುತ್ತದೆ. Infinix Note 40X 5G ಅನ್ನು ಒಂದಕ್ಕಿಂತ ಹೆಚ್ಚು ಮೆಮೊರಿ ರೂಪಾಂತರಗಳಲ್ಲಿ ತರಲಾಗುವುದು. ಈ ಫೋನ್‌ನ ಅತಿದೊಡ್ಡ ಮಾದರಿಯು 12GB RAM ಅನ್ನು ಹೊಂದಿರಲಿದೆ ಮತ್ತು 256GB ಸ್ಟೋರೇಜ್ ಅನ್ನು ಒಳಗೊಂಡಿರುತ್ತದೆ. ಇದು ಯುಎಸ್‌ಬಿ ಟೈಪ್-ಸಿ ಅನ್ನು ಹೊಂದಿದ್ದು, ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಸಹ ಹೊಂದಿದೆ.

Infinix Note 40X 5G ಅಧಿಕೃತ ಬಿಡುಗಡೆ ದಿನಾಂಕ
ಇನ್ಫಿನಿಕ್ಸ್ ತನ್ನ ಅಧಿಕೃತ ವೆಬ್‌ಸೈಟ್ ಮೂಲಕ ಇನ್ಫಿನಿಕ್ಸ್ ನೋಟ್ 40ಎಕ್ಸ್ 5G ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ. ಈ 5G ಫೋನ್ ಭಾರತದಲ್ಲಿ ಆಗಸ್ಟ್ 5 ರಂದು ಬಿಡುಗಡೆಯಾಗಲಿದೆ. ಅದೇ ದಿನ ಮೊಬೈಲ್‌ನ ಬೆಲೆ ಮತ್ತು ಇತರ ಫೀಚರ್ಸ್‌ಗಳ ಮಾಹಿತಿಯನ್ನು ಸಹ ಬಹಿರಂಗಗೊಳಿಸಲಾಗುತ್ತದೆ. ಈ ಫೋನ್ ಬಿಡುಗಡೆಯ ಕುರಿತು ಲೈವ್ ಮಾಹಿತಿಯನ್ನು Infinix ಇಂಡಿಯಾ ವೆಬ್‌ಸೈಟ್, ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮತ್ತು ಬ್ರ್ಯಾಂಡ್‌ನ YouTube ಚಾನಲ್‌ಗಳಲ್ಲಿ ಕಾಣಬಹುದು.
Infinix Note 40X 5G ವಿಶೇಷತೆಗಳು
ಡಿಸ್ಪ್ಲೇ: ಸೋರಿಕೆಯಾದ ಪೋಸ್ಟರ್ ಪ್ರಕಾರ, Infinix Note 40X 5G ಫೋನ್ 1080 x 2460 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ 6.78-ಇಂಚಿನ FHD+ ಡಿಸ್ಪ್ಲೇಯೊಂದಿಗೆ ಬಿಡುಗಡೆಯಾಗುತ್ತದೆ. ಇದು 120Hz ರಿಫ್ರೆಶ್ ದರದಲ್ಲಿ ಕಾರ್ಯನಿರ್ವಹಿಸುತ್ತದೆ.
ಪ್ರೊಸೆಸರ್: Infinix Note 40X 5G ಫೋನ್ ಅನ್ನು ಆಂಡ್ರಾಯ್ಡ್ 14 ನಲ್ಲಿ ಬಿಡುಗಡೆ ಮಾಡಲಾಗುವುದು. ಇದರೊಂದಿಗೆ XOS 14 ಅನ್ನು ಕಾಣಬಹುದಾಗಿದೆ. ಸೋರಿಕೆಯ ಪ್ರಕಾರ, ಈ ಮೊಬೈಲ್ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಆಕ್ಟಾಕೋರ್ ಪ್ರೊಸೆಸರ್ ಹೊಂದಿರಲಿದೆ.
ಮೊಮೊರಿ: ಲಭ್ಯವಾಗಿರುವ ಮಾಹಿತಿಯ ಪ್ರಕಾರ, Infinix Note 40X 5G ಫೋನ್ 12GB RAM ಮತ್ತು 8GB RAM ನೊಂದಿಗೆ ಬಿಡುಗಡೆಯಾಗಲಿದೆ. ವರ್ಚುವಲ್ RAM ತಂತ್ರಜ್ಞಾನವು ಫೋನ್‌ನಲ್ಲಿ ಇರುತ್ತದೆ. ಇದು 12GB ವರ್ಚುವಲ್ RAMಗೆ 12GB RAM ಮತ್ತು 8GB ವರ್ಚುವಲ್ RAM ಅನ್ನು 8 GB RAMಗೆ ಸೇರಿಸುತ್ತದೆ.
ಕ್ಯಾಮೆರಾ: ಈ ಸ್ಮಾರ್ಟ್‌ಫೋನ್ 108 ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾವನ್ನು ಹೊಂದಿರಲಿದೆ. 2MP ಸೆಕೆಂಡರಿ ಲೆನ್ಸ್ ಮತ್ತು ಮೂರನೇ ಬೆಳಕಿನ ಸಂವೇದಕವನ್ನು ಅದರ ಹಿಂಭಾಗದ ಫಲಕದಲ್ಲಿ ಕಾಣಬಹುದು. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ.
ಬ್ಯಾಟರಿ: ಬ್ಯಾಟರಿ ಬ್ಯಾಕಪ್ ಬಗ್ಗೆ ನೋಡುವುದಾದರೆ, Infinix Note 40X 5G ಫೋನ್ ಅನ್ನು 5,000mAh ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು. ಇಯರ್‌ಫೋನ್ ಬಳಸಿ ಹಾಡುಗಳನ್ನು ಕೇಳಲು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಸಹ ನೀಡಲಾಗುತ್ತದೆ.


Click it and Unblock the Notifications








