Infinix Note 40X 5G: ಇಂದು ಅಬ್ಬರಿಸಲು ಬರ್ತಿದೆ ಹೊಸ ಫೋನ್: 108MP ಕ್ಯಾಮೆರಾ ಖಚಿತ!
ಇನ್ಫಿನಿಕ್ಸ್ (Infinix) ಕಂಪನಿಯು ಇಂದು (ಆಗಸ್ಟ್ 5 ರಂದು) ತನ್ನ ಬಹುನಿರೀಕ್ಷಿತ ಹೊಸ ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇದು ಇನ್ಫಿನಿಕ್ಸ್ ನೋಟ್ 40ಎಕ್ಸ್ 5G (Infinix Note 40X 5G) ಹೆಸರಿನೊಂದಿಗೆ ಲಾಂಚ್ ಆಗಲಿದೆ. ಈ ಹೊಸ ಸ್ಮಾರ್ಟ್‌ಫೋನ್ 108 ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಈ ಮೊಬೈಲ್ ಕಾರ್ಯನಿರ್ವಹಿಸುವುದು ಖಚಿತವಾಗಿದೆ.
ಹೌದು, ಇನ್ಫಿನಿಕ್ಸ್ ಕಂಪನಿಯು ತನ್ನ 'Note' ಸರಣಿಯಲ್ಲಿ ಹೊಸ ಫೋನನ್ನು ಇಂದು ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಫೋನ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಲಾಂಚ್ ಆಗಲಿದೆ. ಈ ಫೋನಿನ ಟಾಪ್ ವೇರಿಯಂಟ್ 12GB RAM ಅನ್ನು ಹೊಂದಿರಲಿದೆ ಮತ್ತು 256GB ಸ್ಟೋರೇಜ್ ಪಡೆದಿರುತ್ತದೆ. ಸಂಸ್ಥೆಯು 13,999 ರೂ.ಗಳ ಪ್ರಾರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಿದೆ. ಇದು Infinix Note 40 5G ಫೋನಿಗಿಂತ ಕಡಿಮೆ ಬೆಲೆಯನ್ನು ಹೊಂದಿರಲಿದೆ.

ನೂತನ ಇನ್ಫಿನಿಕ್ಸ್ ಫೋನನ್ನು AI (ಎಐ) ಫೀಚರ್ಸ್‌ನೊಂದಿಗೆ ಬಿಡುಗಡೆ ಮಾಡಲಾಗುತ್ತದೆ. ಇದು ತನ್ನ ಪ್ರೀಮಿಯಂ ನೋಟದೊಂದಿಗೆ ಮಾತ್ರವಲ್ಲದೆ, ಹಲವು ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಈ ಫೋನ್ ಉತ್ಪನ್ನ ಪುಟವನ್ನು ಬ್ರ್ಯಾಂಡ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಇಲ್ಲಿ Infinix Note 40X 5Gನ ಫೋಟೋಗಳು ಮತ್ತು ಇತರ ವಿವರಗಳನ್ನು ಕಾಣಬಹುದು.
Infinix ಇಂಡಿಯಾ ವೆಬ್‌ಸೈಟ್, YouTubeನಲ್ಲಿ ಲೈವ್
ಇನ್ಫಿನಿಕ್ಸ್ ತನ್ನ ಅಧಿಕೃತ ವೆಬ್‌ಸೈಟ್ ಮೂಲಕ ಇನ್ಫಿನಿಕ್ಸ್ ನೋಟ್ 40ಎಕ್ಸ್ 5G ಬಿಡುಗಡೆ ವಿವರಗಳನ್ನು ಬಹಿರಂಗಪಡಿಸಿದೆ. ಅದರಂತೆ, ಈ 5G ಫೋನ್ ಇಂದು ಭಾರತದಲ್ಲಿ ಬಿಡುಗಡೆಯಾಗಲಿದೆ. Infinix ಇಂಡಿಯಾ ವೆಬ್‌ಸೈಟ್, ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮತ್ತು ಬ್ರ್ಯಾಂಡ್‌ನ YouTube ಚಾನಲ್‌ಗಳಲ್ಲಿ ಈ ಫೋನ್ ಬಿಡುಗಡೆಯ ಕುರಿತು ಲೈವ್ ಮಾಹಿತಿಯನ್ನು ನೋಡಬಹುದು.
ಇನ್ಫಿನಿಕ್ಸ್ ನೋಟ್ 40ಎಕ್ಸ್ 5G ನಿರೀಕ್ಷಿತ ಫೀಚರ್ಸ್
ಇನ್ಫಿನಿಕ್ಸ್ ನೋಟ್ 40ಎಕ್ಸ್ 5G ಮೊಬೈಲ್ 6.78-ಇಂಚಿನ FHD+ ಡಿಸ್ಪ್ಲೇಯನ್ನು ಹೊಂದಿರಲಿದೆ. 1080 x 2460 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ 120Hz ರಿಫ್ರೆಶ್ ದರ ಒಳಗೊಂಡಿರಲಿದೆ. ಇನ್ನೂ, ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಇನ್ಫಿನಿಕ್ಸ್ ನೋಟ್ 40ಎಕ್ಸ್ 5G ಫೋನ್ ಕೆಲಸ ನಿರ್ವಹಿಸಲಿದೆ. ಇದನ್ನು ಆಂಡ್ರಾಯ್ಡ್ 14 ನಲ್ಲಿ ಬಿಡುಗಡೆ ಮಾಡಲಾಗುವುದು. ಇದರೊಂದಿಗೆ XOS 14 ಅನ್ನು ಒದಗಿಸಲಾಗಿದೆ.
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಖಚಿತ!
ಇನ್ಫಿನಿಕ್ಸ್ ನೋಟ್ 40ಎಕ್ಸ್ 5G ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾವನ್ನು ಹೊಂದಿರಲಿದೆ ಎಂದು ಕಂಪನಿಯು ದೃಢಪಡಿಸಿದೆ. ಇದರಲ್ಲಿ 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇರುತ್ತದೆ. 2MP ಸೆಕೆಂಡರಿ ಲೆನ್ಸ್ ಮತ್ತು ಮೂರನೇ ಬೆಳಕಿನ ಸಂವೇದಕವನ್ನು ಅದರ ಹಿಂಭಾಗದ ಫಲಕದಲ್ಲಿ ಕಾಣಬಹುದು. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8MP ಫ್ರಂಟ್ ಕ್ಯಾಮೆರಾವನ್ನು ಹೊಂದಿರಲಿದೆ.
ಬ್ಯಾಟರಿ ಮತ್ತು ಸ್ಟೋರೇಜ್ ವಿವರ
ಇನ್ಫಿನಿಕ್ಸ್ ನೋಟ್ 40ಎಕ್ಸ್ 5G ಸ್ಮಾರ್ಟ್‌ಫೋನ್ 12GB RAM ಮತ್ತು 8GB RAM ನೊಂದಿಗೆ ಬಿಡುಗಡೆಯಾಗಲಿದೆ. ವರ್ಚುವಲ್ RAM ತಂತ್ರಜ್ಞಾನವು ಫೋನಿನಲ್ಲಿ ಇರುತ್ತದೆ. ಇದು 12GB ವರ್ಚುವಲ್ RAMಗೆ 12GB RAM ಮತ್ತು 8GB ವರ್ಚುವಲ್ RAM ಅನ್ನು 8GB RAMಗೆ ಸೇರಿಸುತ್ತದೆ. ಬ್ಯಾಟರಿ ಬ್ಯಾಕಪ್ ಬಗ್ಗೆ ಹೇಳುವುದಾದರೆ, Infinix Note 40X 5G ಫೋನ್ 18W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ.
ಈ ಫೋನ್ 201 ಗ್ರಾಂ ತೂಕ ಹೊಂದಿರಲಿದೆ ಮತ್ತು 8.26mm ದಪ್ಪವನ್ನು ಹೊಂದಿರುತ್ತದೆ. ಹಸಿರು, ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿರಲಿದೆ. ಫೋನ್ 3.5mm ಹೆಡ್‌ಫೋನ್ ಜ್ಯಾಕ್ ಮತ್ತು USB-C ಪೋರ್ಟ್, ಸೈಡ್ ಫಿಂಗರ್‌ಪ್ರಿಂಟ್ ರೀಡರ್, DTS-ಟ್ಯೂನ್ಡ್ ಡ್ಯುಯಲ್ ಸ್ಪೀಕರ್‌ಗಳು, ಮೈಕ್ರೊ SD ಕಾರ್ಡ್ ಸ್ಲಾಟ್ ಅನ್ನು ಸಹ ಹೊಂದಿರಲಿದೆ.


Click it and Unblock the Notifications








