Home
ಮೊಬೈಲ್

Infinix: 108MP ಕ್ಯಾಮೆರಾ.. 1TB ಸ್ಟೋರೇಜ್.. 35% ಡಿಸ್ಕೌಂಟ್; ಯಾವ ಫೋನ್?

ಇನ್ಫಿನಿಕ್ಸ್‌ ಫೋನ್‌ಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಕಂಪನಿಯು ಯುವಕರನ್ನು ಸೆಳೆಯುವಲ್ಲಿ ಸೈ ಎನಿಸಿಕೊಂಡಿದೆ. ಹೌದು, ಇನ್ಫಿನಿಕ್ಸ್‌ ಬಜೆಟ್‌ ಬೆಲೆಗೆ ಉತ್ತಮ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಜೊತೆಗೆ, ಆಗಾಗ್ಗೆ ತನ್ನ ಮೊಬೈಲ್‌ಗಳ ಬೆಲೆಯನ್ನು ಇಳಿಕೆ ಮಾಡುತ್ತದೆ. ಪ್ರಸ್ತುತ, ಇನ್ಫಿನಿಕ್ಸ್‌ ನೋಟ್‌ 40X 5G (Infinix Note 40X 5G) ಫೋನನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ನಿಮಗೆ 3000 ರೂ. ರಿಯಾಯಿತಿ ಸಿಗುತ್ತದೆ. ಬನ್ನಿ, ಈ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಇನ್ಫಿನಿಕ್ಸ್‌ ನೋಟ್‌ 40X 5G ಫೋನ್ ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ನೀವು, ಈ ಫೋನನ್ನು 12,000 ರೂ. ಬಜೆಟ್‌ನಲ್ಲಿ ಖರೀದಿಸುವ ಅವಕಾಶವಿದೆ. ಈ ಮೊಬೈಲ್‌ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಫೋನಿನಲ್ಲಿ 6.78 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಜೊತೆಗೆ 256GB ಸ್ಟೋರೇಜ್‌, 5000mAh ಬ್ಯಾಟರಿ ಮತ್ತು 18W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Infinix: 108MP ಕ್ಯಾಮೆರಾ.. 1TB ಸ್ಟೋರೇಜ್.. 35% ಡಿಸ್ಕೌಂಟ್; ಯಾವ ಫೋನ್?

ಇನ್ಫಿನಿಕ್ಸ್‌ ನೋಟ್‌ 40X 5G ಹೊಸ ಬೆಲೆ

ಇನ್ಫಿನಿಕ್ಸ್‌ ನೋಟ್‌ 40X 5G ಫೋನಿನ 8GB RAM + 256GB ಸ್ಟೋರೇಜ್ ರೂಪಾಂತರವನ್ನು 19,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ, ಫ್ಲಿಪ್‌ಕಾರ್ಟ್‌ನಲ್ಲಿ ರಿಯಾಯಿತಿಯೊಂದಿಗೆ 15,999 ರೂ.ಗೆ ಲಭ್ಯವಿದೆ. ಜೊತೆಗೆ 3000 ರೂ. ಬ್ಯಾಂಕ್ ಡಿಸ್ಕೌಂಟ್ ಲಭ್ಯವಿದೆ. ನೀವು 12,999 ರೂ.ಗೆ ಈ ಮೊಬೈಲ್ ಕೊಳ್ಳಬಹುದು. ಇದು ಕಪ್ಪು, ಲೈಮ್ ಗ್ರೀನ್, ಪಾಮ್ ಬ್ಲೂ ಮತ್ತು ಸ್ಟಾರ್ ಲೈಟ್ ಬ್ಲಾಕ್‌ ಬಣ್ಣಗಳಲ್ಲಿ ಮಾರಾಟವಾಗುತ್ತಿದೆ.

ಇನ್ಫಿನಿಕ್ಸ್‌ ನೋಟ್‌ 40X 5G ವೈಶಿಷ್ಟ್ಯಗಳು

ದೊಡ್ಡ ಡಿಸ್ಪ್ಲೇ

ಇನ್ಫಿನಿಕ್ಸ್‌ ನೋಟ್‌ 40X 5G ಮೊಬೈಲ್ 6.78 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಪೂರ್ಣ ಎಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್ಪ್ಲೇ ಆಗಿದೆ. ಡಿಸ್ಪ್ಲೇಯು 1080 x 2460 ಪಿಕ್ಸೆಲ್ ರೆಸಲ್ಯೂಶನ್‌, 500 ನಿಟ್ಸ್‌ ಬ್ರೈಟ್‌ನೆಸ್ ಮತ್ತು 120Hz ರಿಫ್ರೆಶ್ ದರದ ಬೆಂಬಲ ಹೊಂದಿದೆ.

ಪ್ರೊಸೆಸರ್ ಯಾವುದು?

ಇನ್ಫಿನಿಕ್ಸ್‌ ನೋಟ್‌ 40X 5G ಫೋನನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಆಕ್ಟಾಕೋರ್ ಪ್ರೊಸೆಸರ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ XOS 14 ನಲ್ಲಿ ಕೆಲಸ ಮಾಡುತ್ತದೆ. ಇದು ಗ್ರಾಫಿಕ್ಸ್‌ಗಾಗಿ, ಆರ್ಮ್ ಮಾಲಿ G57 MC2 ಜಿಪಿಯು ಹೊಂದಿದೆ.

ಸ್ಟೋರೇಜ್ ಆಯ್ಕೆ

ಇನ್ಫಿನಿಕ್ಸ್‌ ನೋಟ್‌ 40X 5G ಸ್ಮಾರ್ಟ್‌ಫೋನ್ 12GB RAM, 8GB RAM ಮತ್ತು 256GB ಸ್ಟೋರೇಜ್‌ ಹೊಂದಿದೆ. ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಸ್ಟೋರೇಜ್ ಹೆಚ್ಚಿಸಬಹುದು. ಈ ಫೋನ್ ವರ್ಚುವಲ್ RAM ತಂತ್ರಜ್ಞಾನ ಸಹ ಹೊಂದಿದೆ.

ಕ್ಯಾಮೆರಾ ಸೆಟಪ್

ಇನ್ಫಿನಿಕ್ಸ್‌ ನೋಟ್‌ 40X 5G ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 108 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಇದು ಎಐ (AI) ತಂತ್ರಜ್ಞಾನದೊಂದಿಗೆ ಕ್ವಾಡ್ ಎಲ್‌ಇಡಿ ಫ್ಲ್ಯಾಷ್ ಹೊಂದಿದೆ. ಜೊತೆಗೆ, 2 ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 8 ಮೆಗಾಪಿಕ್ಸೆಲ್ ಫ್ರಂಟ್‌ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ಇನ್ಫಿನಿಕ್ಸ್‌ ನೋಟ್‌ 40X 5G ಫೋನನ್ನು 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 18W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ.

Best Mobiles in India

English summary
Infinix Note 40X 5G with 108mp camera gets 35 percent discount in flipkart sale: Know price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+