Home
ಮೊಬೈಲ್

14,999 ಸಾಕು! 64MP ಕ್ಯಾಮೆರಾ.. 5500mAh ಬ್ಯಾಟರಿ.. ಹೊಸ Infinix ಫೋನಿನ ಸೇಲ್ ಶುರು! ಆಫರ್ ಏನಿದೆ?

ಇನ್ಫಿನಿಕ್ಸ್ ದೇಶೀಯ ಮಾರುಕಟ್ಟೆಯಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಇದೀಗ, ಹೊಸ 5G ಫೋನ್ ಆಫರ್‌ಗಳೊಂದಿಗೆ ಲಭ್ಯವಿದೆ. ಹೌದು, ಇತ್ತೀಚೆಗೆ ಭಾರತದಲ್ಲಿ ಇನ್ಫಿನಿಕ್ಸ್ ನೋಟ್ 50s 5G+ (Infinix Note 50S 5G+) ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿತ್ತು. ಕಂಪನಿಯು ಇದನ್ನು ತನ್ನ 'ನೋಟ್' ಸರಣಿಯಲ್ಲಿ ಪರಿಚಯಿಸಿತ್ತು. ಅಂದಹಾಗೆ, ಈ ಫೋನ್ ಪ್ರಸ್ತುತ ತನ್ನ ಮೊದಲ ಮಾರಾಟ ಪ್ರಾರಂಭಿಸಿದೆ. ಆರಂಭಿಕ ಮಾರಾಟದಲ್ಲಿ ಕಂಪನಿಯು ಬೊಂಬಾಟ್ ಆಫರ್ ನೀಡುತ್ತಿದೆ. ಈ ಫೋನಿನ ಬೆಲೆ, ರಿಯಾಯಿತಿ ಎಷ್ಟು ಮತ್ತು ವಿಶೇಷತೆಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಇನ್ಫಿನಿಕ್ಸ್ ನೋಟ್ 50s 5G+ ಫೋನನ್ನು ಸೆಂಟ್ ಟೆಕ್ ವೈಶಿಷ್ಟ್ಯದೊಂದಿಗೆ ಪರಿಚಯಿಸಲಾಗಿದೆ. ಇದು ಕಡಿಮೆ ಬೆಲೆಯ ಫೋನ್ ಆಗಿದ್ದು, ಫೀಚರ್ ಮತ್ತು ಕಾರ್ಯಕ್ಷಮತೆಯಲ್ಲಿ ಕಂಪನಿಯು ಯಾವುದೇ ರಾಜಿ ಮಾಡಿಕೊಂಡಿಲ್ಲ. ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಅಲ್ಟಿಮೇಟ್ ಪ್ರೊಸೆಸರ್ ಹೊಂದಿದೆ. ಇದು 6.78 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಫೋನಿನಲ್ಲಿ 64 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 8GB RAM + 256GB ಸ್ಟೋರೇಜ್, 45W ವೇಗದ ಚಾರ್ಜಿಂಗ್ ಮತ್ತು 5,500mAh ಬ್ಯಾಟರಿ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಮಾರಾಟವಾಗುತ್ತಿದೆ.

14,999 ಸಾಕು! ಹೊಸ Infinix ಫೋನಿನ ಸೇಲ್ ಶುರು.. ವಿಶೇಷತೆಗಳೇನು? ಆಫರ್ ಏನಿದೆ?

ಇನ್ಫಿನಿಕ್ಸ್ ನೋಟ್ 50s 5G+ ಬೆಲೆ ಮತ್ತು ಆಫರ್

8GB RAM + 128GB ಸ್ಟೋರೇಜ್ ಬೆಲೆ = 15,999 ರೂ.
ರಿಯಾಯಿತಿ ಬೆಲೆ = 14,999 ರೂ.

8GB RAM + 256GB ಸ್ಟೋರೇಜ್ ಬೆಲೆ = 17,999 ರೂ.
ರಿಯಾಯಿತಿ ಬೆಲೆ = 16,999 ರೂ.

ಇನ್ಫಿನಿಕ್ಸ್ ನೋಟ್ 50s 5G+ ಮೊಬೈಲ್ 8GB RAM ನೊಂದಿಗೆ ಬಿಡುಗಡೆಯಾಗಿದೆ. ಇದನ್ನು 15,999 ರೂ.ಗಳ ಆರಂಭಿಕ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಫೋನ್ ಮೆರೈನ್ ಡ್ರಿಫ್ಟ್ ಬ್ಲೂ, ಟೈಟಾನಿಯಂ ಗ್ರೇ ಮತ್ತು ಬರ್ಗಂಡಿ ರೆಡ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಆರಂಭಿಕ ಮಾರಾಟದ ಪ್ರಯುಕ್ತ ಕಂಪನಿಯು 1,000 ರೂ.ಗಳ ರಿಯಾಯಿತಿ ಸಹ ನೀಡಲಿದೆ. ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗುತ್ತಿದೆ. ನೀವು, ಎಲ್ಲಾ ಆಫರ್ ಬಳಿಕ ಕೇವಲ 14,999 ರೂ.ಗೆ ಈ ಫೋನನ್ನು ನಿಮ್ಮದಾಗಿಸಿಕೊಳ್ಳಬಹುದು.

ಇನ್ಫಿನಿಕ್ಸ್ ನೋಟ್ 50s 5G+ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಇನ್ಫಿನಿಕ್ಸ್ ನೋಟ್ 50s 5G+ ಸ್ಮಾರ್ಟ್‌ಫೋನ್ 6.78 ಇಂಚಿನ ಫುಲ್ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 3D ಕರ್ವ್ ಅಮೋಲೆಡ್ ಸ್ಕ್ರೀನ್ ಆಗಿದೆ. ಈ ಡಿಸ್ಪ್ಲೇಯು 2436 × 1080 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಇದರೊಂದಿಗೆ 144Hz ರಿಫ್ರೆಶ್ ದರ, 1300 ನಿಟ್ಸ್ ಗರಿಷ್ಠ ಬ್ರೈಟೆನೆಸ್ ಬೆಂಬಲ ಹೊಂದಿದೆ. ಈ ಮೊಬೈಲ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನವನ್ನು ಹೊಂದಿದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ ಬರುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ಇನ್ಫಿನಿಕ್ಸ್ ನೋಟ್ 50s 5G+ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಅಲ್ಟಿಮೇಟ್ ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ತಯಾರಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ XOS 15 ಜೊತೆಗೆ ಕೆಲಸ ನಿರ್ವಹಿಸುತ್ತದೆ. ಗೇಮಿಂಗ್‌ಗಾಗಿ, ಈ ಫೋನಿನಲ್ಲಿ ಮೀಡಿಯಾ ಟೆಕ್ ಹೈಪರ್‌ಎಂಜಿನ್, NPU 665 ಮತ್ತು ಮಾಲಿ G615 ಜಿಪಿಯು ಅಳವಡಿಸಲಾಗಿದೆ.

14,999 ಸಾಕು! ಹೊಸ Infinix ಫೋನಿನ ಸೇಲ್ ಶುರು.. ವಿಶೇಷತೆಗಳೇನು? ಆಫರ್ ಏನಿದೆ?

RAM ಮತ್ತು ಸ್ಟೋರೇಜ್

ಇನ್ಫಿನಿಕ್ಸ್ ನೋಟ್ 50s 5G+ ಮೊಬೈಲ್ 8GB RAM ನೊಂದಿಗೆ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್ 8GB ವಿಸ್ತೃತ RAM ತಂತ್ರಜ್ಞಾನವನ್ನು ಹೊಂದಿದೆ. ನೀವು 16GB RAM (8GB + 8GB) ವರೆಗೆ ಬಳಸಬಹುದು. ಈ ಫೋನ್ 128GB ಮತ್ತು 256GB ಆಂತರಿಕ ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ.

ಕ್ಯಾಮೆರಾ ಸೆಟಪ್

ಇನ್ಫಿನಿಕ್ಸ್ ನೋಟ್ 50s 5G+ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಷ್ ಜೊತೆಗೆ 64 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು 10X ಡಿಜಿಟಲ್ ಜೂಮ್ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 13 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಇನ್ಫಿನಿಕ್ಸ್ ನೋಟ್ 50s 5G ಪ್ಲಸ್ ಫೋನ್ 5,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಸ್ಮಾರ್ಟ್‌ಫೋನ್ 45W ಆಲ್ ರೌಂಡ್ ಫಾಸ್ಟ್‌ ಚಾರ್ಜಿಂಗ್ 3.0 ತಂತ್ರಜ್ಞಾನ ಹೊಂದಿದೆ. ನೀವು 60 ನಿಮಿಷಗಳಲ್ಲಿ ಸಂಪೂರ್ಣವಾಗಿ (ಶೇ.100 ರಷ್ಟು ) ಚಾರ್ಜ್ ಮಾಡಬಹುದು. ಈ ನೀರಿನಿಂದ ರಕ್ಷಣೆಗೆ MIL-STD-810H ಮಿಲಿಟರಿ ಪ್ರಮಾಣೀಕರಣ ಮತ್ತು IP64 ರೇಟಿಂಗ್ ಪಡೆದಿದೆ.

Best Mobiles in India

English summary
Infinix Note 50S 5G+ now available for purchase in India; check out price, offers, specifications, features
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+