Home
ಮೊಬೈಲ್

ಭಾರತದಲ್ಲಿ Infinix Note 50X 5G ಫೋನ್ ಬಿಡುಗಡೆ: ಕೊಡುಗೆಯ ಬೆಲೆ 10,499 ರೂ. ಮಾತ್ರ!

ಬಜೆಟ್ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ಪ್ರಸಿದ್ಧವಾದ Infinix, ದೇಶದಲ್ಲಿಂದು ತನ್ನ ಬಹು ನಿರೀಕ್ಷಿತ "Infinix Note 50X 5G" ಸ್ಮಾರ್ಟ್‌ಫೋನನ್ನು ಭರ್ಜರಿಯಾಗಿ ಬಿಡುಗಡೆ ಮಾಡಿದೆ. ಗುರುವಾರ Infinix ಆಯೋಜಿಸಿದ ಕಾರ್ಯಕ್ರಮದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿಯೇ Infinix Note 50X 5G ಸ್ಮಾರ್ಟ್‌ಫೋನನ್ನು ಪರಿಚಯಿಸಲಾಗಿದ್ದು, ಈ ಬಜೆಟ್ ಬೆಲೆಯ ಸ್ಮಾರ್ಟ್‌ಫೋನಿನಲ್ಲಿ 120Hz ರಿಫ್ರೆಶ್ ರೇಟ್‌ ಹೊಂದಿರುವ 6.67-ಇಂಚಿನ ಡಿಸ್‌ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಅಲ್ಟಿಮೇಟ್ ಚಿಪ್‌ಸೆಟ್‌, 8GB RAM, ಮತ್ತು 45W ವೇಗದ ಚಾರ್ಜಿಂಗ್ ಬೆಂಬಲದ 5,500mAh ಬ್ಯಾಟರಿ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ. ಹಾಗಾದರೆ, ಹೊಸ Infinix Note 50X 5G ಸ್ಮಾರ್ಟ್‌ಫೋನಿನ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆಗಳು ಎಷ್ಟು ಎಂಬುದನ್ನು ಮುಂದೆ ಓದಿ ತಿಳಿಯೋಣ ಬನ್ನಿ.

Infinix Note 50X 5G ಸಂಪೂರ್ಣ ವೈಶಿಷ್ಟ್ಯಗಳು ಹೀಗಿವೆ,

ನೂತತನ Infinix Note 50X 5G ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್‌ನೊಂದಿಗೆ 6.67-ಇಂಚಿನಷ್ಟು ದೊಡ್ಡದಾದ HD+ ಡಿಸ್‌ಪ್ಲೇಯನ್ನು ಹೊಂದಿದೆ. ಪ್ರೊಸೆಸರ್ ವಿಭಾಗದಲ್ಲಿ, ಕ್ಟಾ-ಕೋರ್ 4nm ಮೀಡಿಯಾಟೆಕ್ ಡೈಮೆನ್ಸಿಟಿ 7300 ಅಲ್ಟಿಮೇಟ್ ಚಿಪ್‌ಸೆಟ್‌ನಲ್ಲಿ 8GB ವರೆಗೆ RAM ಮತ್ತು 128GB ವರೆಗೆ ಸಂಗ್ರಹಣೆಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ XOS 15 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿರುವ ಹೊಸ ಮೀಡಿಯಾಟೆಕ್ ಡೈಮೆನ್ಸಿಟಿ 7300 ಅಲ್ಟಿಮೇಟ್ SoC ಅನ್ನು ಪ್ಯಾಕ್ ಮಾಡಿದ ವಿಶ್ವದ ಮೊದಲ ಫೋನ್ ಇದಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇದಲ್ಲದೆ, ಮೆಮ್‌ಫ್ಯೂಷನ್ ತಂತ್ರಜ್ಞಾನದೊಂದಿಗೆ, ಈ ಸ್ಮಾರ್ಟ್‌ಫೋನಿನ ಆನ್‌ಬೋರ್ಡ್ ಮೆಮೊರಿಯನ್ನು ವಾಸ್ತವಿಕವಾಗಿ 6GB ಯಿಂದ 12GB ಗೆ ಮತ್ತು 8GB ಯಿಂದ 16GB ವರೆಗೆ ವಿಸ್ತರಿಸಲು ಅವಕಾಶವಿದೆ.

ಭಾರತದಲ್ಲಿ Infinix Note 50X 5G ಫೋನ್ ಬಿಡುಗಡೆ: ಬೆಲೆ 10,499 ರೂ. ಮಾತ್ರ!

ಕ್ಯಾಮೆರಾ ವಿಬಾಗದಲ್ಲಿ, ಈ Infinix Note 50X 5G ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ. ಇದು 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವನ್ನು ಹೊಂದಿದೆ. ಮುಂಭಾಗದಲ್ಲಿ, ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ 8-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ಇದರ ಪ್ರಾಥಮಿಕ ಕ್ಯಾಮೆರಾ 4K ರೆಸಲ್ಯೂಶನ್ ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಮತ್ತು 12 ಕ್ಕೂ ಹೆಚ್ಚು ಛಾಯಾಗ್ರಹಣ ಮೋಡ್‌ಗಳನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಇಷ್ಟೇ ಅಲ್ಲದೆ, ಈ ಸ್ಮಾರ್ಟ್‌ಫೋನ್ 'ಜೆಮ್-ಕಟ್' ಕ್ಯಾಮೆರಾ ಮಾಡ್ಯೂಲ್ ಆಕ್ಟಿವ್ ಹ್ಯಾಲೊ ಲೈಟಿಂಗ್ ಎಂಬ ಎಲ್‌ಇಡಿ ಲೈಟಿಂಗ್ ಅನ್ನು ಹೊಂದಿದೆ. ಇದು ಅಧಿಸೂಚನೆಗಳು, ಕರೆಗಳು ಮತ್ತು ಚಾರ್ಜಿಂಗ್ ವೇಳೆಯಲ್ಲಿ ಬೆಳಗುತ್ತದೆ. ಆದರೆ, ದ್ವಿತೀಯ ಕ್ಯಾಮೆರಾ ಕುರಿತು ಹೆಚ್ಚು ಮಾಹಿತಿ ಲಭ್ಯವಿಲ್ಲ.

ಬ್ಯಾಟರಿ ವಿಭಾಗದಲ್ಲಿ Infinix Note 50X 5G ಸ್ಮಾರ್ಟ್‌ಫೋನ್ 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,500mAh ಬ್ಯಾಟರಿಯನ್ನುಹೊಂದಿದೆ. ಈ ಬ್ಯಾಟರಿ 10W ವೈರ್ಡ್ ರಿವರ್ಸ್ ಚಾರ್ಜಿಂಗ್ ಮತ್ತು ಬೈಪಾಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಇನ್ನುಳಿದಂತೆ, ಈ ಸ್ಮಾರ್ಟ್‌ಫೋನಿನಲ್ಲಿ ಡಿಟಿಎಸ್-ಚಾಲಿತ ಡ್ಯುಯಲ್ ಸ್ಪೀಕರ್‌ಗಳು ಮತ್ತು ಮಿಲಿಟರಿ-ಗ್ರೇಡ್ (MIL-STD-810H) ಬಾಳಿಕೆ ಪ್ರಮಾಣೀಕರಣವನ್ನು ನೀಡಲಾಗಿದೆ. ಹಾಗೂ ಈ ಫೋನ್ ನೀರು ಮತ್ತು ಧೂಳು ನಿರೋಧಕತೆಗಾಗಿ IP64-ರೇಟೆಡ್ ಬಿಲ್ಡ್ ಅನ್ನು ಹೊಂದಿದೆ. ಇದು ಒನ್-ಟ್ಯಾಪ್ ಇನ್ಫಿನಿಕ್ಸ್ AI ಕಾರ್ಯನಿರ್ವಹಣೆಯೊಂದಿಗೆ ಬಂದಿದ್ದು, ಆನ್-ಸ್ಕ್ರೀನ್ ಅವೇರ್ನೆಸ್, AI ನೋಟ್, ಸರ್ಕಲ್ ಟು ಸರ್ಚ್, ರೈಟಿಂಗ್ ಅಸಿಸ್ಟೆಂಟ್ ಮತ್ತು ಇನ್ಫಿನಿಕ್ಸ್‌ನ AI ಅಸಿಸ್ಟೆಂಟ್, ಫೋಲಾಕ್ಸ್‌ನಂತಹ ಹಲವಾರು AI-ಆಧಾರಿತ ವೈಶಿಷ್ಟ್ಯಗಳನ್ನು ನೀಡುತ್ತದೆ.

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Infinix Note 50X 5G ಸ್ಮಾರ್ಟ್‌ಫೋನಿನ ಬೆಲೆ 11,499 ರೂ.ಗಳಿಂದ ಆರಂಭವಾಗುತ್ತದೆ. ಆದರೆ, ಹೊಸ ಫೋನ್ ಖರೀದಿಸುವಾಗ ಗ್ರಾಹಕರು ರೂ. 1,000 ರ ತ್ವರಿತ ಬ್ಯಾಂಕ್ ರಿಯಾಯಿತಿಯೊಂದಿಗೆ ಕೇವಲ 10,499 ರೂ.ಗಳಿಗೆ Infinix Note 50X 5G ಸ್ಮಾರ್ಟ್‌ಫೋನನ್ನು ಖರೀದಿಸಬಹುದು ಎಂದು Infinix ಕಂಪನಿಯು ತಿಳಿಸಿದೆ. ಈ Infinix Note 50X 5G 6GB RAM + 128GB ಸ್ಟೋರೇಜ್ ಮಾದರಿ ಸ್ಮಾರ್ಟ್‌ಫೋನಿನ ಬೆಲೆ 11,499 ರೂ. ಆಗಿದ್ದರೆ, ಇದರ 8GB RAM + 128GB ಸ್ಟೋರೇಜ್ ಮಾದರಿಯ ಬೆಲೆ 12,999 ರೂ. ಆಗಿದೆ. ಗ್ರಾಹಕರು ಈ ಸ್ಮಾರ್ಟ್‌ಫೋನನ್ನು ಏಪ್ರಿಲ್ 3 ರಿಂದ ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದಾಗಿದ್ದು, ಎನ್‌ಚ್ಯಾಂಟೆಡ್ ಪರ್ಪಲ್, ಸೀ ಬ್ರೀಜ್ ಗ್ರೀನ್ ಮತ್ತು ಟೈಟಾನಿಯಂ ಗ್ರೇ ಬಣ್ಣಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದು.

FAQs
Infinix Note 50X 5G ಸ್ಮಾರ್ಟ್‌ಫೋನಿನ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಎಂಬುದನ್ನು ಬುಲೆಟ್ ಪಾಯಿಂಟ್‌ಗಳಲ್ಲಿ ವಿವರಿಸಲು ಸಾಧ್ಯವೇ?

* ಇನ್ಫಿನಿಕ್ಸ್ ನೋಟ್ 50X 5G ಡ್ಯುಯಲ್ ಸಿಮ್ (ನ್ಯಾನೋ) ಅನ್ನು ಬೆಂಬಲಿಸುತ್ತದೆ ಮತ್ತು ಆಂಡ್ರಾಯ್ಡ್ 15 ಆಧಾರಿತ XOS 15 ನಲ್ಲಿ ಕಾರ್ಯನಿರ್ವಹಿಸುತ್ತದೆ.
* ಇದು 120Hz ರಿಫ್ರೆಶ್ ರೇಟ್‌ನೊಂದಿಗೆ 6.67-ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ.
* ಈ ಫೋನ್ ಆಕ್ಟಾ-ಕೋರ್ 4nm ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಅಲ್ಟಿಮೇಟ್ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ, ಮತ್ತು 8GB RAM ವರೆಗೆ ಬೆಂಬಲಿಸುತ್ತದೆ.
* ಇದರಲ್ಲಿ 128GB ವರೆಗೆ ಸಂಗ್ರಹಣಾ ಸಾಮರ್ಥ್ಯವನ್ನು ನೀಡಲಾಗಿದೆ.
* ಕ್ಯಾಮೆರಾ ವಿಭಾಗದಲ್ಲಿ, ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದೊಂದಿಗೆ ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
* ಮುಂಭಾಗದಲ್ಲಿ, ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 8-ಮೆಗಾಪಿಕ್ಸೆಲ್ ಶೂಟರ್ ಅನ್ನು ನೀಡಲಾಗಿದೆ.
* ಇದು ಡಿಟಿಎಸ್-ಚಾಲಿತ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದೆ ಮತ್ತು ಮಿಲಿಟರಿ-ಗ್ರೇಡ್ (MIL-STD-810H) ಬಾಳಿಕೆ ಪ್ರಮಾಣೀಕರಣವನ್ನು ಪಡೆದಿದೆ.
* ಈ ಫೋನ್ ನೀರು ಮತ್ತು ಧೂಳು ನಿರೋಧಕತೆಗಾಗಿ IP64-ರೇಟೆಡ್ ಬಿಲ್ಡ್ ಅನ್ನು ಹೊಂದಿದೆ.
* ಇದು 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,500mAh ಬ್ಯಾಟರಿಯನ್ನು ಹೊಂದಿದೆ.

GizBot Technology
Best Mobiles in India

English summary
Infinix Note 50X 5G Featuring MediaTek Dimensity 7300 Ultimate Chipset Launched in India: Price, Specifications, and Complete Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+