ಭಾರತದಲ್ಲಿ Infinix Note Edge 5G ಲಾಂಚ್: ಕಡಿಮೆ ಬೆಲೆಗೆ ಎಂತಹ ಫೀಚರ್ಸ್ ನೋಡಿ!
ಭಾರತದ ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಸ್ಪರ್ಧಿಯಾಗಿ Infinix Note Edge 5G ಸ್ಮಾರ್ಟ್‌ಫೋನ್ ಆಗಮನವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಒಂದು ತಿಂಗಳ ನಂತರ, ಬುಧವಾರ ದೇಶದಲ್ಲಿ Infinix Note Edge 5G ಸ್ಮಾರ್ಟ್‌ಫೋನ್ ಪರಿಚಯಗೊಂಡಿದ್ದು, 120Hz ರಿಫ್ರೆಶ್ ರೇಟ್ ಹೊಂದಿರುವ 3D ಕರ್ವ್ಡ್ AMOLED ಡಿಸ್‌ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 7100 ಚಿಪ್‌ಸೆಟ್ ಮತ್ತು 6,500mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಮತ್ತು ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಅತ್ಯಂತ ಸ್ಪರ್ಧಾತ್ಮಕ ಬೆಲೆಗೆ ತಂದಿದೆ. ಈ ಕುರಿತಂತೆ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.
Infinix Note Edge 5G : ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Infinix Note Edge 5G ಸ್ಮಾರ್ಟ್‌ಫೋನ್ ಬೆಲೆ 6GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ ರೂ. 21,999 ರಿಂದ ಪ್ರಾರಂಭವಾಗುತ್ತದೆ. ಇದನ್ನು 8GB + 128GB ಮತ್ತು 8GB + 256GB RAM ಮತ್ತು ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿಯೂ ನೀಡಲಾಗುತ್ತಿದ್ದು, ಇವುಗಳು ಕ್ರಮವಾಗಿ 23,999 ಮತ್ತು 25,999 ರೂ. ಬೆಲೆ ಹೊಂದಿವೆ. ಆದರೆ, ಉಡಾವಣಾ ಕೊಡುಗೆಗಳ ಭಾಗವಾಗಿ, ಎಸ್‌ಬಿಐ ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡ್‌ದಾರರು ರೂ. 2,000 ವರೆಗಿನ ತ್ವರಿತ ಬ್ಯಾಂಕ್ ರಿಯಾಯಿತಿಗಳನ್ನು ಪಡೆಯಬಹುದು.

ಇಷ್ಟೇ ಅಲ್ಲದೆ, ಖರೀದಿದಾರರು Infinix Note Edge 5G ಸ್ಮಾರ್ಟ್‌ಫೋನ್ ಖರೀದಿಸಿದ ದಿನಾಂಕದಿಂದ ಆರು ತಿಂಗಳೊಳಗೆ ಒಂದು ಬಾರಿ ಸ್ಕ್ರೀನ್ ಬದಲಿ ಮತ್ತು ಖರೀದಿ ದಿನಾಂಕದಿಂದ ಒಂದು ವರ್ಷದ ವಿಸ್ತೃತ ಖಾತರಿಯನ್ನು ಸಹ ಪಡೆಯುತ್ತಾರೆ ಎಂದು ಕಂಪೆನಿಯು ತಿಳಿಸಿದೆ. ಇನ್ನು ಗ್ರಾಹಕರು Infinix Note Edge 5G ಸ್ಮಾರ್ಟ್‌ಫೋನ್ ಅನ್ನು ಇದೇ ಫೆಬ್ರವರಿ 25 ರಿಂದ ಫ್ಲಿಪ್‌ಕಾರ್ಟ್ ಮತ್ತು ಇನ್ಫಿನಿಕ್ಸ್ ಇಂಡಿಯಾ ಆನ್‌ಲೈನ್ ಸ್ಟೋರ್ ಮೂಲಕ ಲೂನಾರ್ ಟೈಟಾನಿಯಂ, ಸ್ಟೆಲ್ಲರ್ ಬ್ಲೂ ಮತ್ತು ಸಿಲ್ಕ್ ಗ್ರೀನ್ ಬಣ್ಣಗಳ ಆಯ್ಕೆಗಳಲ್ಲಿ ಖರಿದಿಸಬಹುದು.
Infinix Note Edge 5G : ಪ್ರಮುಖ ವೈಶಿಷ್ಟ್ಯಗಳು
Infinix Note Edge 5G ಸ್ಮಾರ್ಟ್‌ಫೋನ್‌ನಲ್ಲಿ 6.78-ಇಂಚಿನ 1.5K (1,208x2,644 ಪಿಕ್ಸೆಲ್‌ಗಳು) LTPS 3D ಕರ್ವ್ಡ್ AMOLED ಡಿಸ್‌ಪ್ಲೇ ನೀಡಲಾಗಿದೆ. ಈ ಡಿಸ್‌ಪ್ಲೆಯು 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು ನೇರ ಬಿಸಿಲಿನಲ್ಲೂ ಸ್ಪಷ್ಟ ವೀಕ್ಷಣೆಗಾಗಿ 4,500 ನಿಟ್‌ಗಳವರೆಗೆ ಗರಿಷ್ಠ ಹೊಳಪನ್ನು ಹೊಂದಿದೆ. ಪ್ಯಾನೆಲ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆಯನ್ನು ಹೊಂದಿದೆ. ಸುರಕ್ಷತೆಗಾಗಿ, ಈ ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP65 ರೇಟಿಂಗ್ ಅನ್ನು ಹೊಂದಿದೆ.

ಕಾರ್ಯಕ್ಷಮತೆ ವಿಭಾಗದಲ್ಲಿ, Infinix Note Edge 5G ಯಲ್ಲಿ MediaTek Dimensity 7100 ಚಿಪ್‌ಸೆಟ್ ಬಳಸಲಾಗಿದೆ. 8GB ವರೆಗೆ RAM ಮತ್ತು 256GB ವರೆಗೆ ಸ್ಟೋರೇಜ್ ಆಯ್ಕೆಗಳಿದ್ದು, ದೈನಂದಿನ ಬಳಕೆ, ಮಲ್ಟಿಟಾಸ್ಕಿಂಗ್ ಹಾಗೂ ಲೈಟ್-ಟು-ಮಿಡ್ ಗೇಮಿಂಗ್‌ಗೆ ಸೂಕ್ತವಾಗಿದೆ. ಸಾಫ್ಟ್‌ವೇರ್ ವಿಭಾಗದಲ್ಲಿ, ಆಂಡ್ರಾಯ್ಡ್ 16-ಆಧಾರಿತ XOS 16 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಮೂರು ವರ್ಷಗಳ OS ಅಪ್‌ಗ್ರೇಡ್‌ಗಳು ಮತ್ತು ಐದು ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯುವ ಭರವಸೆ ಇದೆ.
ಕ್ಯಾಮೆರಾ ವಿಭಾಗದಲ್ಲಿ, Infinix Note Edge 5G ಡ್ಯುಯಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿದ್ದು, f/1.8 ಇದು ಅಪರ್ಚರ್ ಮತ್ತು ಡ್ಯುಯಲ್ ಫ್ಲ್ಯಾಷ್ ಸೆಟಪ್‌ನೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಮುಂಭಾಗದಲ್ಲಿ 13 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ವ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್ ಬೆಂಬಲ (ನ್ಯಾನೋ+ನ್ಯಾನೋ), 5.5G ಮತ್ತು 5G ನೆಟ್‌ವರ್ಕ್‌ಗಳು, ವೈ-ಫೈ, ಬ್ಲೂಟೂತ್ 5.4, ಜಿಪಿಎಸ್, ಎನ್‌ಎಫ್‌ಸಿ, ಯುಎಸ್‌ಬಿ ಟೈಪ್-ಸಿ, ಒಟಿಜಿ ಬೆಂಬಲ, ಎಫ್‌ಎಂ ರೇಡಿಯೋ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಸೇರಿವೆ.
ಬ್ಯಾಟರಿ ವಿಭಾಗದಲ್ಲಿ, Infinix Note Edge 5G ಯಲ್ಲಿ 6,500mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ನೀಡಲಾಗಿದ್ದು, ಇದಕ್ಕೆ 45W ಫಾಸ್ಟ್ ಚಾರ್ಜಿಂಗ್ ಬೆಂಬಲವಿದೆ. ಹೆಚ್ಚುವರಿಯಾಗಿ 10W ರಿವರ್ಸ್ ವೈರ್ಡ್ ಚಾರ್ಜಿಂಗ್ ಸೌಲಭ್ಯವೂ ಇದೆ. ಸುಮಾರು 190g ತೂಕವಿರುವ ಈ ಫೋನ್ 163.1 × 77.4 × 7.2mm ಅಳತೆ ಇದೆ. ಒಟ್ಟಿನಲ್ಲಿ, ದೊಡ್ಡ ಡಿಸ್‌ಪ್ಲೇ, ಬಲಿಷ್ಠ ಬ್ಯಾಟರಿ ಮತ್ತು ದೀರ್ಘಾವಧಿಯ ಸಾಫ್ಟ್‌ವೇರ್ ಬೆಂಬಲವನ್ನು ಹುಡುಕುತ್ತಿರುವವರಿಗೆ Infinix Note Edge 5G ಒಂದು ಸ್ಪರ್ಧಾತ್ಮಕ ಆಯ್ಕೆ. ಮಧ್ಯಮ ಬೆಲೆಯ ವಿಭಾಗದಲ್ಲಿ ಇದು ಹೇಗೆ ಸ್ಪರ್ಧೆ ನೀಡುತ್ತದೆ ಎಂಬುದು ಕಾದುನೋಡಬೇಕು.


Click it and Unblock the Notifications