ಭಾರತಕ್ಕೆ ಮುಂದಿನ ವಾರ Infinix Note Edge 5G ಆಗಮನ ಅಧಿಕೃತ!
ಇತ್ತೀಚೆಗೆ ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿ ಗಮನಸೆಳೆದಿದ್ದ ಹೊಸ Infinix Note Edge 5G ಸ್ಮಾರ್ಟ್‌ಫೋನ್ ಇದೀಗ ಭಾರತಕ್ಕೆ ಪ್ರವೇಶಿಸಲು ಸಿದ್ಧವಾಗಿದೆ. ಜಾಗತಿಕವಾಗಿ ಪಾದಾರ್ಪಣೆ ಮಾಡಿದ ಸುಮಾರು ಒಂದು ತಿಂಗಳ ನಂತರ, ಫೆಬ್ರವರಿ 18 ರಂದು ಭಾರತದಲ್ಲಿ Infinix Note Edge 5G ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದ್ದು, ಮಧ್ಯಮ ಬೆಲೆ ವಿಭಾಗದಲ್ಲಿ ಗಮನ ಸೆಳೆಯಲು ತಯಾರಾಗಿದೆ. ಈಗಾಗಲೇ ಈ ಫೋನ್‌ಗಾಗಿ ಮೀಸಲಾದ ಮೈಕ್ರೋಸೈಟ್ ಲೈವ್ ಆಗಿದ್ದು, ಪ್ರಮುಖ ಮಾಹಿತಿಗಳು ಸಹ ಬಹಿರಂಗವಾಗಿವೆ.
Infinix Note Edge 5G: ಬೆಲೆ ಮತ್ತು ಲಭ್ಯತೆ
Infinix ಸಂಸ್ಥೆಯ ಘೋಷಣೆಯ ಪ್ರಕಾರ, ಈ ಫೋನ್ ಫೆಬ್ರವರಿ 18 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆ ಆಗಲಿದೆ ಮತ್ತು Stellar Blue, Silk Green ಮತ್ತು Lunar Titanium ಎಂಬ ಮೂರು ಆಕರ್ಷಕ ಬಣ್ಣ ಆಯ್ಕೆಗಳಲ್ಲಿ ಲಭ್ಯವಾಗುತ್ತದೆ. ನೀಲಿ ಬಣ್ಣದ ಆವೃತ್ತಿಗೆ ಮೆಟಾಲಿಕ್ ಫಿನಿಷ್ ನೀಡಲಾಗಿದ್ದು, ಹಸಿರು ಮಾದರಿಯಲ್ಲಿ ವಿಶೇಷ ಸಿಲ್ಕ್ ಫೈಬರ್ ಟೆಕ್ಸ್ಚರ್ ವಿನ್ಯಾಸ ಇರಲಿದೆ. ವಿಭಿನ್ನ ಲುಕ್ ಹುಡುಕುವ ಯುವ ಬಳಕೆದಾರರಿಗೆ ಇದು ಹೆಚ್ಚು ಆಕರ್ಷಕವಾಗಬಹುದು. ಇನ್ನು ಈ ಫೋನ್ Flipkart ಮೂಲಕ ಮಾರಾಟಕ್ಕೆ ಬರಲಿದೆ.
Infinix Note Edge 5G: ಪ್ರಮುಖ ವೈಶಿಷ್ಟ್ಯಗಳು
Infinix Note Edge 5G ಪೋನಿಗಾಗಿ ತೆರೆದಿರುವ ಮೀಸಲಾದ ಮೈಕ್ರೋಸೈಟ್ ಮೂಲಕ ಫೋನಿನ ವಿವಿಧ ಫೀಚರ್ಸ್ ಮತ್ತು ವೈಶಿಷ್ಟ್ಯಗಳು ಬಹಿರಂಗಪವಾಗಿವೆ. ಕಾರ್ಯಕ್ಷಮತೆ ವಿಭಾಗದಲ್ಲಿ ಈ ಸ್ಮಾರ್ಟ್‌ಫೋನ್ MediaTek Dimensity 7100 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುವುದು ಅಧಿಕೃತ. ಕಂಪೆನಿಯು ಹೇಳಿಕೊಂಡಿರುವಂತೆ, ಆನ್‌ಟುಟು ಬೆಂಚ್‌ಮಾರ್ಕಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಈ Infinix Note Edge 5G 7,50,000 ಕ್ಕೂ ಹೆಚ್ಚು ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.

Infinix Note Edge 5G ಫೋನ್ 7.2mm ದಪ್ಪವಾಗಿರುತ್ತದೆ ಮತ್ತು 6.78-ಇಂಚಿನ 1.5K 3D ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೆಯು 4,500 nits ವರೆಗೆ ಗರಿಷ್ಠ ಹೊಳಪು, TUV ಬ್ಲೂ ಲೈಟ್ ಪ್ರಮಾಣೀಕರಣ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆಯನ್ನು ನೀಡುತ್ತದೆ. ಬ್ಯಾಟರಿ ವಿಭಾಗದಲ್ಲಿ, ಈ ಫೋನ್ 45W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ದೊಡ್ಡದಾದ 6,500mAh ಬ್ಯಾಟರಿಯನ್ನು ಸಹ ಪ್ಯಾಕ್ ಮಾಡುತ್ತದೆ.
ಫೋಟೋಗ್ರಫಿ ವಿಭಾಗದಲ್ಲಿ, Infinix Note Edge 5G ಫೀನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿರುವ ಡ್ಯುಯಲ್ ರಿಯರ್ ಕ್ಯಾಮೆರಾ ವ್ಯವಸ್ಥೆ ಹೊಂದಿರಲಿದೆ. ಜೊತೆಗೆ JBL ಟ್ಯೂನ್ ಮಾಡಲಾದ ಡ್ಯುಯಲ್ ಸ್ಪೀಕರ್ ವ್ಯವಸ್ಥೆ ಉತ್ತಮ ಧ್ವನಿ ಅನುಭವ ನೀಡಲು ಸಹಾಯ ಮಾಡುತ್ತದೆ. IP65 ರೇಟಿಂಗ್‌ನಿಂದ ಧೂಳು ಮತ್ತು ನೀರಿನ ಸಿಂಪಡಣೆ ವಿರುದ್ಧ ರಕ್ಷಣೆ ಸಿಗುತ್ತದೆ. ಹಿಂಭಾಗದಲ್ಲಿರುವ RGB Halo Light ವೈಶಿಷ್ಟ್ಯವು ಫೋನ್‌ಗೆ ವಿಭಿನ್ನ ಸ್ಟೈಲ್ ನೀಡುತ್ತದೆ.
ಕಳೆದ ಜನವರಿ 19 ರಂದು ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ Infinix Note Edge 5G ಸ್ಮಾರ್ಟ್‌ಫೋನ್ ಬಿಡುಗಡೆಯಾಗಿತ್ತು. ಜಾಗತಿಕವಾಗಿ ಇದರ ಆರಂಭಿಕ ಬೆಲೆ $200 (ಸುಮಾರು ರೂ. 18,200) ಆಗಿತ್ತು ಎಂಬುದನ್ನು ನಾವು ಇಲ್ಲಿ ಗಮನಿಸಬಹುದು. ಒಟ್ಟಿನಲ್ಲಿ, ಉತ್ತಮ ಡಿಸ್ಪ್ಲೇ, ದೊಡ್ಡ ಬ್ಯಾಟರಿ, ಆಕರ್ಷಕ ವಿನ್ಯಾಸ ಮತ್ತು 5G ಸಂಪರ್ಕದೊಂದಿಗೆ Infinix Note Edge 5G ಭಾರತೀಯ ಮಾರುಕಟ್ಟೆಯಲ್ಲಿ ಬೆಲೆ-ಕಾರ್ಯಕ್ಷಮತೆ ಸಮತೋಲನವನ್ನು ಹುಡುಕುವವರಿಗೆ ಪ್ರಮುಖ ಆಯ್ಕೆಯಾಗುವ ಸಾಧ್ಯತೆ ಇದೆ.


Click it and Unblock the Notifications