Home
ಮೊಬೈಲ್

Infinix Note Edge ಲೀಕ್: ₹20 ಸಾವಿರದೊಳಗೆ ಎಡ್ಜ್ ಸ್ಟೈಲ್ ಫೋನ್?!

Infinix ತನ್ನ ಜನಪ್ರಿಯ Note ಸರಣಿಯಲ್ಲಿ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲು ಸಜ್ಜಾಗುತ್ತಿರುವ ಸಿಹಿಸುದ್ದಿ ದೊರೆತಿದೆ. ಮೊಬೈಲ್ ಉದ್ಯಮದಲ್ಲಿ ಹರಿದಾಡುತ್ತಿರುವ ಇತ್ತೀಚಿನ ಲೀಕ್ ಮಾಹಿತಿಯ ಪ್ರಕಾರ, ಈ ಹೊಸ ಫೋನ್‌ಗೆ Infinix Note Edge ಎಂದು ಹೆಸರಿಡಲಾಗುವ ಸಾಧ್ಯತೆ ಇದೆ. X (ಹಳೆಯ ಟ್ವಿಟರ್) ನಲ್ಲಿ ಪ್ರಸಿದ್ಧ ಟಿಪ್‌ಸ್ಟರ್ ಪರಾಸ್ ಗುಗ್ಲಾನಿ(Paras Guglani) ಹಂಚಿಕೊಂಡ ಟೀಸರ್ ನಂತರ, ಈ ಫೋನ್ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾದ್ದು, ಭಾರತದಲ್ಲಿ ಬಜೆಟ್ ಹಾಗೂ ಮಿಡ್-ರೇಂಜ್ ಬಳಕೆದಾರರನ್ನು ಗುರಿಯಾಗಿಟ್ಟುಕೊಂಡು ಈ ಡಿವೈಸ್ ಬಿಡುಗಡೆ ಆಗುವ ನಿರೀಕ್ಷೆ ಇದೆ.

ಇದೀಗ ಸೋರಿಕೆಯಾದ ಪೋಸ್ಟರ್ ಪ್ರಕಾರ, ಡಿಸೈನ್ ವಿಚಾರದಲ್ಲಿ ಮುಂಬರುವ Infinix Note Edge ಫೋನ್ ಪ್ರಮುಖ ಆಕರ್ಷಣೆಯಾಗಲಿದೆ. ಅತಿ ಸ್ಲಿಮ್ ಬಾಡಿ ಮತ್ತು ಪ್ರೀಮಿಯಂ ಲುಕ್ ಹೊಂದಿರುವ ಈ ಸ್ಮಾರ್ಟ್‌ಫೋನ್, ಎಡ್ಜ್ ಸ್ಟೈಲ್ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬರಬಹುದು. ಫೋನ್‌ನ ಹಿಂಭಾಗದಲ್ಲಿ ಮೇಲ್ಭಾಗವನ್ನೇ ಆವರಿಸುವ ದೊಡ್ಡ ಕ್ಯಾಮೆರಾ ಮಾಡ್ಯೂಲ್ ನೀಡಲಾಗಿದ್ದು, ಇದರಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್, LED ಫ್ಲ್ಯಾಶ್ ಮತ್ತು ಹೆಚ್ಚುವರಿ ಲೈಟ್ ಘಟಕ ಇರುವ ಸಾಧ್ಯತೆ ಇದೆ. ಲೀಕ್ ಚಿತ್ರಗಳ ಪ್ರಕಾರ, ಹಸಿರು ಬಣ್ಣದ ವೇರಿಯಂಟ್ ಕೂಡ ಲಭ್ಯವಾಗಬಹುದು.

Infinix Note Edge: ಸೋರಿಕೆಯಿಂದ ನಿರೀಕ್ಷಿತ ಫೀಚರ್ಸ್ ಔಟ್
ಈ Infinix Note Edge ಫೋನಿನ ಡಿಸೈನ್ ಮಾತ್ರವಲ್ಲದೆ, ಫೋನ್ ಹೊಂದಿರಬಹುದಾದ ಪ್ರಮುಖ ಫೀಚರ್ಸ್ ಮಾಹಿತಿಗಳು ಸಹ ಸೋರಿಕೆಯಾಗಿವೆ. ಇದರಲ್ಲಿ, ಪರ್ಫಾರ್ಮೆನ್ಸ್ ವಿಷಯಕ್ಕೆ ಬಂದರೆ, Infinix Note Edge ನಲ್ಲಿ ಹೊಸದಾಗಿ ಪರಿಚಯವಾಗಬೇಕಿರುವ MediaTek Dimensity 7100 ಪ್ರೊಸೆಸರ್ ಬಳಕೆಯಾಗಲಿದೆ ಎಂದು ವರದಿಯಾಗಿದೆ. 6nm ತಂತ್ರಜ್ಞಾನದಲ್ಲಿ ತಯಾರಾಗುವ ಈ ಚಿಪ್ ಉತ್ತಮ ಸ್ಪೀಡ್ ಮತ್ತು ಬ್ಯಾಟರಿ ದಕ್ಷತೆಯನ್ನು ಒದಗಿಸುವ ನಿರೀಕ್ಷೆಯಿದೆ. ದಿನನಿತ್ಯದ ಬಳಕೆ, ಮಲ್ಟಿಟಾಸ್ಕಿಂಗ್ ಮತ್ತು ಲೈಟ್ ಗೇಮಿಂಗ್‌ಗೆ ಈ ಫೋನ್ ಸೂಕ್ತ ಆಯ್ಕೆಯಾಗಬಹುದು.

Infinix Note Edge ಲೀಕ್: ₹20 ಸಾವಿರದೊಳಗೆ ಎಡ್ಜ್ ಸ್ಟೈಲ್ ಫೋನ್?!

ಡಿಸ್ಪ್ಲೇ ವಿಭಾಗದಲ್ಲೂ ಇನ್‌ಫಿನಿಕ್ಸ್ ವಿಶೇಷ ಗಮನ ನೀಡಿದೆ ಎನ್ನಲಾಗಿದೆ. ಈ Infinix Note Edge ಫೋನ್‌ನಲ್ಲಿ 1.5K ರೆಸಲ್ಯೂಶನ್ ಹೊಂದಿರುವ 3D ಕರ್ವ್ಡ್ AMOLED ಡಿಸ್ಪ್ಲೇ ಇರಲಿದೆ ಎಂದು ಹೇಳಲಾಗುತ್ತಿದೆ. ಬ್ರೈಟ್ ಕಲರ್‌ಗಳು, ಸ್ಮೂತ್ ಸ್ಕ್ರೋಲಿಂಗ್ ಮತ್ತು ಎಡ್ಜ್ ಟು ಎಡ್ಜ್ ವೀಕ್ಷಣಾ ಅನುಭವವನ್ನು ಈ ಪರದೆ ನೀಡುವ ಸಾಧ್ಯತೆ ಇದೆ. ವೀಡಿಯೊ ಸ್ಟ್ರೀಮಿಂಗ್ ಮತ್ತು ಗೇಮಿಂಗ್ ಪ್ರಿಯರಿಗೆ ಇದು ಉತ್ತಮ ಆಯ್ಕೆಯಾಗಬಹುದು.

ಬ್ಯಾಟರಿ ಸಾಮರ್ಥ್ಯದ ವಿಚಾರದಲ್ಲಿ, Infinix Note Edge ಬದಲಾವಣೆಯ ಹೆಜ್ಜೆ ಇಡುತ್ತಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ 6,500mAh ಬ್ಯಾಟರಿ ಇರಲಿದೆ ಎನ್ನಲಾಗಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ ದಿನವಿಡೀ ಅಥವಾ ಅದಕ್ಕಿಂತ ಹೆಚ್ಚು ಕಾಲ ಬಳಕೆ ಸಾಧ್ಯವಾಗಬಹುದು. ದೊಡ್ಡ ಬ್ಯಾಟರಿ ಇರುವುದರಿಂದ ಫೋನ್ ಸ್ವಲ್ಪ ದಪ್ಪವಾಗುವ ಸಾಧ್ಯತೆ ಇದ್ದರೂ, ದೀರ್ಘ ಬ್ಯಾಟರಿ ಬ್ಯಾಕಪ್ ಭಾರತೀಯ ಬಳಕೆದಾರರಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ.

ಸಾಫ್ಟ್‌ವೇರ್ ವಿಷಯದಲ್ಲಿ, ಈ ಫೋನ್ Android 16 ಮೇಲೆ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ. ಇನ್‌ಫಿನಿಕ್ಸ್ ಮೂರು ವರ್ಷಗಳ OS ಅಪ್‌ಡೇಟ್‌ಗಳು ಮತ್ತು ಐದು ವರ್ಷಗಳ ಸೆಕ್ಯುರಿಟಿ ಪ್ಯಾಚ್‌ಗಳನ್ನು ನೀಡುವ ಯೋಜನೆ ಹೊಂದಿದೆ ಎನ್ನಲಾಗಿದ್ದು, ಇದು ಈ ಬೆಲೆ ವಿಭಾಗದಲ್ಲಿ ಅಪರೂಪದ ವೈಶಿಷ್ಟ್ಯವಾಗಿದೆ. ದೀರ್ಘಕಾಲ ಬಳಕೆ ಮಾಡುವ ಗ್ರಾಹಕರಿಗೆ ಇದು ವಿಶ್ವಾಸಾರ್ಹ ಆಯ್ಕೆಯಾಗಲಿದೆ.

ಇನ್ನು ಭಾರತದಲ್ಲಿ Infinix Note Edge ಫೋನ್ ಬಿಡುಗಡೆಯು ಜನವರಿ 2026ರಲ್ಲಿ ನಡೆಯುವ ಸಾಧ್ಯತೆ ಇದೆ. ಬೆಲೆ ವಿಚಾರದಲ್ಲಿ, ಈ ಫೋನ್ ₹20,000 ಒಳಗಿನ ಆರಂಭಿಕ ಬೆಲೆಯಲ್ಲಿ ಲಭ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಅಧಿಕೃತ ಘೋಷಣೆ ಇನ್ನೂ ಬಾಕಿಯಿದ್ದರೂ, ಈ ಫೋನ್ ಮಧ್ಯಮ ವರ್ಗದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಸ್ಪರ್ಧೆಯನ್ನು ಉಂಟುಮಾಡುವ ಸಾಧ್ಯತೆ ಇದೆ. ಹೆಚ್ಚಿನ ವಿವರಗಳಿಗಾಗಿ ಕನ್ನಡ ಗಿಜ್‌ಬಾಟ್‌ನಲ್ಲಿ ಟ್ಯೂನ್ ಆಗಿರಿ.

Best Mobiles in India

English summary
Infinix is expected to launch a new smartphone called Infinix Note Edge in India soon. Teased by tipster Paras Guglani, the leaked poster suggests a slim, premium edge-style design with a large dual-camera module and a possible green color option, targeting budget and mid-range users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+