ಕೇವಲ 6,799 ರೂ.ಗೆ ಹೊಸ Infinix Smart 10 ಫೋನ್ ಬಿಡುಗಡೆ!
ಬಜೆಟ್ ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ Infinix, ₹10,000 ಕ್ಕಿಂತ ಕಡಿಮೆ ಬೆಲೆಯ ವಿಭಾಗದಲ್ಲಿ ತನ್ನ ಹೊಸ ಸ್ಮಾರ್ಟ್‌ಫೋನ್ Infinix Smart 10 ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಸಾಧನವು ಕೈಗೆಟುಕುವ ಬೆಲೆಯಲ್ಲಿ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸಲು ಸಿದ್ಧವಾಗಿದ್ದು, HD+ ಡಿಸ್ಪ್ಲೇ, ದೊಡ್ಡ ಬ್ಯಾಟರಿ, ಮತ್ತು IP64 ನೀರಿನ ಪ್ರತಿರೋಧದಂತಹ ವೈಶಿಷ್ಟ್ಯಗಳು ಈ ಫೋನಿನಲ್ಲಿವೆ. ಹಾಗಾದರೆ, ಹೊಸ Infinix Smart 10 ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯೋಣ ಬನ್ನಿ.
Infinix Smart 10: ಸಂಪೂರ್ಣ ವೈಶಿಷ್ಟ್ಯಗಳು.
ವಿನ್ಯಾಸ ಮತ್ತು ಡಿಸ್ಪ್ಲೇ
Infinix Smart 10 120Hz ರಿಫ್ರೆಶ್ ದರ ಮತ್ತು 700 ನಿಟ್‌ಗಳ ಗರಿಷ್ಠ ಹೊಳಪಿನೊಂದಿಗೆ 6.67 ಇಂಚಿನ HD+ LCD ಡಿಸ್ಪ್ಲೇಯನ್ನು ಹೊಂದಿದೆ. ಇದು ಬಳಕೆದಾರರಿಗೆ ನಯವಾದ ವೀಕ್ಷಣೆಯ ಅನುಭವವನ್ನು ನೀಡುತ್ತದೆ. ಈ ಫೋನ್ IP64 ನೀರು ಮತ್ತು ಧೂಳು ನಿರೋಧಕ ರೇಟಿಂಗ್ನೊಂದಿಗೆ ಬರುತ್ತದೆ. ಇದರರ್ಥ ಸಾಧನವು ಧೂಳು ಮತ್ತು ನೀರಿನ ಸ್ಪ್ಲಾಶ್‌ಗಳನ್ನು ಸುಲಭವಾಗಿ ನಿಭಾಯಿಸಬಲ್ಲದು, ಆದರೆ ಇದನ್ನು ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿಸಲು ಸಾಧ್ಯವಿಲ್ಲ. ಇನ್ನು ಈ ಪೋನ್ ಡ್ಯುಯಲ್ ಸ್ಪೀಕರ್ ಸೆಟಪ್ DTS ನಿಂದ ಟ್ಯೂನ್ ಮಾಡಲ್ಪಟ್ಟಿದೆ ಮತ್ತು 300% ವರೆಗೆ ವಾಲ್ಯೂಮ್ ಬೂಸ್ಟ್‌ಗೆ ಬೆಂಬಲವನ್ನು ನೀಡುತ್ತದೆ, ಇದು ಉತ್ತಮ ಆಡಿಯೋ ಅನುಭವವನ್ನು ಖಾತ್ರಿಪಡಿಸುತ್ತದೆ ಎಂದು ಕಂಪೆನಿಯು ತಿಳಿಸಿದೆ.
ಕಾರ್ಯಕ್ಷಮತೆ ಮತ್ತು ಸಾಫ್ಟ್‌ವೇರ್
Infinix Smart 10 ಫೋನ್ ದೈನಂದಿನ ಕಾರ್ಯಗಳನ್ನು ಸುಗಮವಾಗಿ ನಿರ್ವಹಿಸಲು ಮತ್ತು ಸಾಮಾನ್ಯ ಗೇಮಿಂಗ್‌ಗೆ ಸಾಕಷ್ಟು ಶಕ್ತಿಯನ್ನು ನೀಡುವ A55 GPU ಜೊತೆಗೆ Unisoc T7250 ಪ್ರೊಸೆಸರ್ನಿಂದ ಚಾಲಿತವಾಗಿದೆ. ಇದು 4GB LPDDR4x RAM ಮತ್ತು 64GB ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. ಹೆಚ್ಚುವರಿಯಾಗಿ, ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ ಸಂಗ್ರಹಣೆಯನ್ನು 2TB ವರೆಗೆ ವಿಸ್ತರಿಸುವ ಆಯ್ಕೆಯೂ ಇದೆ. ಸಾಫ್ಟ್‌ವೇರ್ ವಿಷಯಕ್ಕೆ ಬಂದರೆ, Smart 10 Android 15 ಆಧಾರಿತ ಕಂಪನಿಯ ಇತ್ತೀಚಿನ XOS 15 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ನಾಲ್ಕು ವರ್ಷಗಳ ಕಾಲ "ಲ್ಯಾಗ್-ಮುಕ್ತ ಅನುಭವ"ಕ್ಕಾಗಿ TÜV SÜD ಪ್ರಮಾಣೀಕರಣವನ್ನು ಹೊಂದಿದೆ ಎಂದು ಹೇಳಲಾಗಿದೆ.

ಕ್ಯಾಮೆರಾ ಮತ್ತು ಇತರೆ ಪೀಚರ್ಸ್
ಕ್ಯಾಮೆರಾ ವಿಭಾಗದಲ್ಲಿ, Infinix Smart 10 ಫೋನಿನ ಹಿಂಭಾಗದಲ್ಲಿ 8MP ಪ್ರಾಥಮಿಕ ಸಂವೇದಕ ಮತ್ತು ಆಳ ಸಂವೇದಕವನ್ನು ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, ಮುಂಭಾಗದಲ್ಲಿ 8MP ಶೂಟರ್ ಇದೆ. ಹಿಂಭಾಗ ಮತ್ತು ಮುಂಭಾಗದ ಕ್ಯಾಮೆರಾ ಎರಡೂ 2K 30fps ವರೆಗೆ ವೀಡಿಯೊಗಳನ್ನು ಚಿತ್ರೀಕರಿಸುವ ಸಾಮರ್ಥ್ಯವನ್ನು ಹೊಂದಿವೆ.ಇದು ಬಜೆಟ್ ಫೋನ್‌ಗೆ ಉತ್ತಮ ವೈಶಿಷ್ಟ್ಯವಾಗಿದೆ. ಇನ್ನು ಈ ಫೋನ್ 15W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದ 5,000mAh ಬ್ಯಾಟರಿ ಹೊಂದಿದೆ. ಜೊತೆಗೆ ರಿವರ್ಸ್ ವೈರ್ಡ್ ಚಾರ್ಜಿಂಗ್‌ಗೆ ಸಹ ಬೆಂಬಲ, NFC ಮತ್ತು FM ರೇಡಿಯೋ ಬೆಂಬಲದಂತಹ ಹೆಚ್ಚುವರಿ ವೈಶಿಷ್ಟ್ಯಗಳು ಈ ಫೋನಿನಲ್ಲಿವೆ.
Infinix Smart 10 : ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Infinix Smart 10 ಫೋನ್ ಏಕೈಕ 4GB RAM ಮತ್ತು 64GB ಸ್ಟೋರೇಜ್ ರೂಪಾಂತರದಲ್ಲಿ ಲಭ್ಯವಿದ್ದು, ಇದರ ಬೆಲೆ ಕೇವಲ ₹6,799. ಈ ಬೆಲೆಗೆ, ಇದು Vivo T4 Lite, Poco M7, ಮತ್ತು Lava Storm Play ನಂತಹ ಫೋನ್‌ಗಳಿಗೆ ನೇರ ಪ್ರತಿಸ್ಪರ್ಧೆಯನ್ನು ನೀಡುತ್ತದೆ. ಗ್ರಾಹಕರು ಐರಿಸ್ ಬ್ಲೂ, ಟ್ವಿಲೈಟ್ ಗೋಲ್ಡ್, ಟೈಟಾನಿಯಂ ಸಿಲ್ವರ್, ಮತ್ತು ಸ್ಲೀಕ್ ಬ್ಲ್ಯಾಕ್ ಎಂಬ ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಈ ಫೋನ್ ಅನ್ನು ಆಯ್ಕೆ ಮಾಡಬಹುದು. ಈ ಹೊಸ ಸ್ಮಾರ್ಟ್‌ಫೋನ್ ಆಗಸ್ಟ್ 2 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ.


Click it and Unblock the Notifications








