Infinixನ ಈ ಫೋನ್‌ಗೆ ಭರ್ಜರಿ ಡಿಸ್ಕೌಂಟ್.. 2,200 ಕ್ಯಾಶ್‌ಬ್ಯಾಕ್: ಈಗ ಬಿಟ್ಟರೆ ಮತ್ತೆ ಸಿಗಲ್ಲ!
ಈಗ ಬಿಟ್ಟರೆ ಮತ್ತೆ ಸಿಗಲ್ಲ..! Infinixನ ಈ ಫೋನ್ ಮೇಲೆ ಶೇ.22ರಷ್ಟು ಡಿಸ್ಕೌಂಟ್, 2,200 ಕ್ಯಾಶ್‌ಬ್ಯಾಕ್. ನಿಮಗೆ ಇಲ್ಲಿದೆ ಭರ್ಜರಿ ಆಫರ್. ಹೌದು, ಇ ಕಾಮರ್ಸ್ ವೆಬ್‌ಸೈಟ್‌ನಲ್ಲಿ ಈಗ ಭರ್ಜರಿ ಆಫರ್ ಶುರುವಾಗಿದೆ. ಅಮೇಜಾನ್, ಫ್ಲಿಪ್‌ಕಾರ್ಟ್‌ನಲ್ಲಿ ಮೊಬೈಲ್ ಪ್ರಿಯರು ಶಾಪಿಂಗ್ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇ ಕಾಮರ್ಸ್ ವೆಬ್‌ಸೈಟ್‌ಗಳು ಗ್ರಾಹಕರ ಜೇಬಿನ ಭಾರ ಕಡಿಮೆ ಮಾಡಲು ಮುಂದಾಗುತ್ತಿವೆ. ಅತ್ಯುತ್ತಮ ಫೀಚರ್, ಒಳ್ಳೆಯ ಹೈ ಕ್ವಾಲಿಟಿ, ಉತ್ತಮ ತಂತ್ರಜ್ಞಾನದ ಫೋನ್ ಖರೀದಿಸುವ ಬಯಕೆ ಹೊಂದಿದ್ದರೆ ಇದು ನಿಮಗೆ ಪರ್ಫೆಕ್ಟ್ ಟೈಮ್. Infinixನ ಈ ಫೋನ್ ಖರೀದಿಸಿದರೆ ನಿಮಗೆ ಭರಪೂರ ಆಫರ್ ಸಿಗುತ್ತದೆ.
ಪ್ರಸಿದ್ಧ Infinix ಕಂಪನಿ ಒಂದರ ಹಿಂದೆ ಒಂದರಂತೆ ಅತ್ಯಾಕರ್ಷಕ ಮೊಬೈಲ್‌ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಈಗಾಗಲೇ ಹಲವು ಫೋನ್‌ಗಳು ಗ್ರಾಹರನ್ನು ಸೆಳೆಯುವಲ್ಲಿ ಸಫಲವಾಗಿವೆ. ಮಾರುಕಟ್ಟೆಯಲ್ಲಿ ಇನ್ಫಿನಿಕ್ಸ್ ಕಂಪನಿಯ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು Infinix ತನ್ನ ಗ್ರಾಹಕರಿಗೆ ಆಗಾಗ್ಗೆ ಆಫರ್‌ಗಳನ್ನು ಘೋಷಿಸುತ್ತದೆ. ಅದರಂತೆ Infinix Smart 8 Plus ಖರೀದಿ ಮೇಲೆ ಫ್ಲಿಪ್‌ಕಾರ್ಟ್‌ನಲ್ಲಿ ಭಾರೀ ಡಿಸ್ಕೌಂಟ್ ಘೋಷಿಸಲಾಗಿದೆ. Flipkart ಏನೆಲ್ಲಾ ರಿಯಾಯಿತಿ ಘೋಷಿಸಿದೆ? ಅಂತ ತಿಳಿಯೋಣ ಬನ್ನಿ.

Infinix Smart 8 Plus ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಒಳಗೊಂಡಿದೆ. HD ಪ್ಲಸ್ ಡಿಸ್‌ಪ್ಲೇಯೊಂದಿಗೆ ಪ್ರೀಮಿಯಂ ವಿನ್ಯಾಸವನ್ನು ಹೊಂದಿದೆ. 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 18W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. 8GB RAM, 2TB ಸ್ಟೋರೇಜ್ ಸಾಮರ್ಥ್ಯ ಹೊಂದಿದ್ದು, ಇದು ಬಜೆಟ್ ಫೋನ್ ಪ್ರಿಯರನ್ನು ಆಕರ್ಷಿಸುತ್ತಿದೆ. ಈ ಮೊಬೈಲ್ ತ್ವರಿತ ರಿಯಾಯಿತಿ ಕೊಡುಗೆಯೊಂದಿಗೆ ಲಭ್ಯವಿದೆ. ಈ Infinix ಫೋನ್‌ನ ಬೆಲೆ ಮತ್ತು ಫೀಚರ್ಸ್‌ಗಳ ವಿವರಗಳು ಇಲ್ಲಿವೆ.
Infinix Smart 8 Plus ಡಿಸ್‌ಪ್ಲೇ ಹೇಗಿದೆ?
Infinix Smart 8 Plus ಸ್ಮಾರ್ಟ್‌ಫೋನ್ 6.6 ಇಂಚಿನ ಐಪಿಎಸ್ ಎಲ್ಸಿಡಿ ಪ್ಯಾನಲ್ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 720 x 1612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ, ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಇನ್ನು ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಮತ್ತು 500 ನಿಟ್ಸ್ ಬ್ರೈಟ್‌ನೆಸ್ ಲೆವೆಲ್ ಅನ್ನು ನೀಡಲಿದೆ.
ಈ ಮೊಬೈಲ್‌ನ ಪ್ರೊಸೆಸರ್ ಯಾವುದು?
Infinix Smart 8 Plus ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಹಿಲಿಯೋ G36 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು XOS 13 ಆಧಾರಿತ ಆಂಡ್ರಾಯ್ಡ್ 13 GO ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64 GB ಹಾಗೂ 4GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯದ ವೇರಿಯೆಂಟ್ ಆಯ್ಕೆಗಳಲ್ಲಿ ಬರಲಿದೆ. ಇದಲ್ಲದೆ ಮೆಮೊರ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ಸಹ ವಿಸ್ತರಿಸುವುದಕ್ಕೆ ಅವಕಾಶ ನೀಡಲಾಗಿದೆ.
Infinix Smart 8 Plus ಕ್ಯಾಮೆರಾ ಸೆಟಪ್ ಏನು?
Infinix Smart 8 Plus ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದ್ದು, ಎಐ ಲೆನ್ಸ್ ಮತ್ತು ಕ್ವಾಡ್ ನೇತೃತ್ವದ ಫ್ಲ್ಯಾಷ್ ಅನ್ನು ಹೊಂದಿದೆ. ಇದಲ್ಲದೆ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ.
ಈ ಫೋನ್‌ನ ಬ್ಯಾಟರಿ ಬ್ಯಾಕಪ್ ಅದ್ಭುತ
Infinix Smart 8 Plus ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VoLTE, ವೈ-ಫೈ 802.11 ಎಸಿ, ಬ್ಲೂಟೂತ್ ಮತ್ತು 3.5 ಎಂಎಂ ಆಡಿಯೊ ಜ್ಯಾಕ್ ಒಳಗೊಂಡಿದೆ. ಇದಲ್ಲದೆ ಸ್ಮಾರ್ಟ್‌ಪೋನ್ ಸೈಡ್ ಫೇಸಿಂಗ್ ಫಿಂಗರ್ ಪ್ರಿಂಟ್ ಸೆನ್ಸಾರ್ ಸಹ ಬೆಂಬಲಿಸಲಿದೆ.
Infinix Smart 8 Plus 8 ಬೆಲೆ ಎಷ್ಟು?
ಈ Infinix Smart 8 Plus ಫೋನ್‌ನ 4GB RAM + 128GB ಸ್ಟೋರೇಜ್ ಮಾದರಿಯ ಬೆಲೆ 9,999 ರೂ. ಇದೆ. ಪ್ರಸ್ತುತ ಫ್ಲಿಪ್‌ಕಾರ್ಟ್ ಸೈಟ್‌ನಲ್ಲಿ ಶೇ.22ರಷ್ಟು ರಿಯಾಯಿತಿಯೊಂದಿಗೆ ಲಭ್ಯವಿದೆ. ನೀವು ಇದನ್ನು 7,799 ರೂ. ಬಜೆಟ್‌ನಲ್ಲಿ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್ ಟಿಂಬರ್ ಬ್ಲ್ಯಾಕ್, ಗ್ಯಾಲಕ್ಸಿ ವೈಟ್ ಮತ್ತು ಹೊಳೆಯುವ ಚಿನ್ನದಂತಹ ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.
ಶೇ.5 ರಷ್ಟು ಕ್ಯಾಶ್‌ಬ್ಯಾಕ್, 2,200 ಡಿಸ್ಕೌಂಟ್
ಬ್ಯಾಂಕ್ ಆಫರ್ ಮೊದಲ ಫ್ಲಿಪ್‌ಕಾರ್ಟ್ UPI ವಹಿವಾಟಿನ ಮೇಲೆ 200 ರೂ. ಮತ್ತು ಅದಕ್ಕಿಂತ ಹೆಚ್ಚಿನ 50 ರೂ. ರಿಯಾಯಿತಿ ಪಡೆಯಬಹುದು. ಆಕ್ಸಿಸ್ ಬ್ಯಾಂಕ್ ಕಾರ್ಡ್ ಮೇಲೆ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಸೌಲಭ್ಯವಿದೆ. ಬ್ಯಾಂಕ್‌ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಹಿವಾಟುಗಳ ಮೇಲೆ 500 ರೂ. ರಿಯಾಯಿತಿ ಲಭ್ಯವಿದೆ. ಇನ್ನೂ, ಕ್ಯಾಶ್‌ಬ್ಯಾಕ್/ಕೂಪನ್ ಬಳಸಿ ಹೆಚ್ಚುವರಿ 2,200 ಡಿಸ್ಕೌಂಟ್ ಪಡೆಯಬಹುದು.
ಒಟ್ಟಾರೆ, ಸ್ಮಾರ್ಟ್‌ಫೋನ್ ಕಂಪನಿಗಳಿಗೆ ಭಾರತ ದೊಡ್ಡ ಮಾರುಕಟ್ಟೆ. ವರ್ಷದ ಹನ್ನೆರಡು ತಿಂಗಳು, ಕಂಪನಿಗಳು ಹೊಸ ಮೊಬೈಲ್‌ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತವೆ. ಹಾಗೆಯೇ, ಬಿಡುಗಡೆಯಾಗಿರುವ ಮೊಬೈಲ್‌ಗಳ ಮೇಲೆ ಆಫರ್‌ಗಳನ್ನು ನೀಡುತ್ತವೆ. ಅದರಂತೆ Infinix Smart 8 Plus ಫೋನ್ ಖರೀದಿ ಮೇಲೆಯೂ ಭಾರೀ ಡಿಸ್ಕೌಂಟ್ ಇರಲಿದೆ. ನೀವೇನಾದ್ರೂ ಫೋನ್ ಖರೀದಿಸುವ ಆಸೆಯನ್ನು ಹೊಂದಿದ್ರೆ, ಬಜೆಟ್ ಫ್ರೆಂಡ್ಲಿ ಸೆಗ್ಮೆಂಟ್‌ನ್ನು ನೀವು ಟಾರ್ಗೆಟ್ ಮಾಡ್ತಾ ಇದ್ರೆ ಈ ಫೋನ್ ನಿಮಗೆ ಬೆಸ್ಟ್ ಚಾಯ್ಸ್.


Click it and Unblock the Notifications








