Infinix Zero 40 5G: ಬೆಲೆ ಬಹಿರಂಗ, ಫೀಚರ್ಸ್ ಕೂಡ ಲೀಕ್: ಬಿಡುಗಡೆಗು ಮುನ್ನ ಸಂಚಲನ!
ಇನ್ಫಿನಿಕ್ಸ್ (Infinix) ಕಂಪನಿಯು ತನ್ನ Zero 40 ಸರಣಿಯನ್ನು ವಿಸ್ತರಿಸಲು ಸಜ್ಜಾಗಿದೆ. ಇನ್ಫಿನಿಕ್ಸ್ ಜಿರೋ 40 5G (Infinix Zero 40 5G) ಹೆಸರಿನ ಹೊಸ ಫೋನ್ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಫೋನ್ ಬಿಡುಗಡೆಯ ಮೊದಲು, ಜಾಗತಿಕ ಚಿಲ್ಲರೆ ವೆಬ್‌ಸೈಟ್‌ನಲ್ಲಿ ಗುರುತಿಸಲ್ಪಟ್ಟಿದೆ. ಇದರಲ್ಲಿ ಪ್ರಮುಖ ಫೀಚರ್ಸ್, ಫೋಟೋ ಮತ್ತು ಬೆಲೆಯನ್ನು ಸಹ ಬಹಿರಂಗಪಡಿಸಲಾಗಿದೆ. ಬನ್ನಿ, ಈ ಹೊಸ ಫೋನಿನಲ್ಲಿ ಯಾವೆಲ್ಲಾ ಹೊಸ ವಿಶೇಷತೆಗಳಿವೆ ಎನ್ನುವುದನ್ನು ತಿಳಿಯೋಣ.
ಇನ್ಫಿನಿಕ್ಸ್ ಜಿರೋ 40 5G ಫೋನ್ 6.78 ಇಂಚಿನ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಅಲ್ಟಿಮೇಟ್ 6300 ಪ್ರೊಸೆಸರ್‌ನೊಂದಿಗೆ ಕಾರ್ಯ ನಿರ್ವಹಿಸಲಿದೆ. 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 5000mAh ಬ್ಯಾಟರಿ, 12 GB RAM ಮತ್ತು 256 GB ಸ್ಟೋರೇಜ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಬಿಡುಗಡೆಯಾಗಲಿದೆ. ಮುಂಬರುವ ಇನ್ಫಿನಿಕ್ಸ್ ಜಿರೋ 40 5G ಫೋನಿನ ಪೂರ್ವ-ರೀಟೇಲರ್ ಪಟ್ಟಿಗಳು ಮಲೇಷ್ಯಾದಲ್ಲಿ ಕಾಣಿಸಿಕೊಂಡಿವೆ.

ಇನ್ಫಿನಿಕ್ಸ್ ಜಿರೋ 40 5G ಫೋನಿನ ಬೆಲೆ
ಜಾಗತಿಕ ಚಿಲ್ಲರೆ ವೆಬ್‌ಸೈಟ್‌ನಲ್ಲಿ ಇನ್ಫಿನಿಕ್ಸ್ ಜಿರೋ 40 5G ಫೋನಿನ ಬೆಲೆಯನ್ನು ಪಟ್ಟಿ ಮಾಡಲಾಗಿದೆ. ಅದರಂತೆ, ಈ ಹೊಸ ಫಫೋನ್ 1,699 MYR ಅಂದರೆ ಸುಮಾರು 32,000 ರೂ.ಗಳಲ್ಲಿ ಬಿಡುಗಡೆಯಾಗಲಿದೆ. ಇದು ರಾಕ್ ಬ್ಲಾಕ್, ಮೂವಿಂಗ್ ಟೈಟಾನಿಯಂ ಮತ್ತು ವೈಲೆಟ್ ಗಾರ್ಡನ್ ಅನ್ನು ಒಳಗೊಂಡಿರುವ ಮೂರು ಬಣ್ಣಗಳಲ್ಲಿ ಲಭ್ಯವಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇನ್ಫಿನಿಕ್ಸ್ ಜಿರೋ 40 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ಮಾಹಿತಿಯ ಪ್ರಕಾರ, ಇನ್ಫಿನಿಕ್ಸ್ ಜಿರೋ 40 5G ಫೋನ್ 6.78 ಇಂಚಿನ ಕರ್ವ್ಡ್ ಎಡ್ಜ್ AMOLED ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 1080 x 2436 ಪಿಕ್ಸೆಲ್ ರೆಸಲ್ಯೂಶನ್ ಮತ್ತು 144Hz ರಿಫ್ರೆಶ್ ದರದ ಹೊಂದಿರುವ ಸಾಧ್ಯತೆಯಿದೆ.
ಪ್ರೊಸೆಸರ್: ಕಂಪನಿಯು ಮುಂಬರುವ ಇನ್ಫಿನಿಕ್ಸ್ ಜಿರೋ 40 5G ಫೋನಿನಲ್ಲಿ MediaTek ಡೈಮೆನ್ಸಿಟಿ 8200 ಅಲ್ಟಿಮೇಟ್ ಚಿಪ್‌ಸೆಟ್ ಅನ್ನು ಅಳವಡಿಸಬಹುದು. ಇದು ಗೇಮಿಂಗ್ ಸೇರಿದಂತೆ ಇತರ ಕಾರ್ಯಾಚರಣೆಗಳಲ್ಲಿ ಬಳಕೆದಾರರಿಗೆ ಪ್ರಬಲ ಅನುಭವವನ್ನು ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.
ಸ್ಟೋರೇಜ್: ಈ ಮೊಬೈಲ್ 12GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಒಳಗೊಂಡಿರಲಿದೆ. ಅಷ್ಟೇ ಅಲ್ಲ, ಇದು 12GB ವರ್ಚುವಲ್ RAMಗೆ ಬೆಂಬಲವನ್ನು ಸಹ ಹೊಂದಿರುತ್ತದೆ. ಇದರ ಸಹಾಯದಿಂದ ಒಟ್ಟು 24GB RAM ಅನ್ನು ಬಳಸಬಹುದು.
ಆಪರೇಟಿಂಗ್ ಸಿಸ್ಟಮ್: ಮುಂಬರುವ ಈ ಮೊಬೈಲ್ XOS 14.5 ಇಂಟರ್‌ಫೇಸ್‌ನೊಂದಿಗೆ Android 14 ನಲ್ಲಿ ಕೆಲಸ ಮಾಡಬಹುದು. ಇದು 2 Android OS ನವೀಕರಣಗಳನ್ನು ಮತ್ತು 3 ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯುತ್ತದೆ ಎಂದು ಹೇಳಲಾಗುತ್ತಿದೆ.

ಕ್ಯಾಮೆರಾ: ಇನ್ಫಿನಿಕ್ಸ್ ಜಿರೋ 40 5G ಫೋನಿನಲ್ಲಿ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಒದಗಿಸಲಾಗುವುದು. ಹಿಂದಿನ ಪ್ಯಾನೆಲ್‌ನಲ್ಲಿ, OIS ತಂತ್ರಜ್ಞಾನದೊಂದಿಗೆ 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಇತರ ಲೆನ್ಸ್ ಅನ್ನು ಅಳವಡಿಸಲಾಗುತ್ತದೆ.
ಬ್ಯಾಟರಿ: ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆಯಿದೆ. ಈ ದೊಡ್ಡ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೈರ್ಡ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ಒದಗಿಸಬಹುದು. ಮಾಹಿತಿಯ ಪ್ರಕಾರ, Infinix Zero 40 5G ಫೋನ್ 164.31 x 74.47 x 7.9mm ದಪ್ಪ ಹೊಂದಿರಲಿದೆ.
ಇತರೆ ಫೀಚರ್ಸ್: ಈ ಫೋನ್ ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸಂವೇದಕ, ರಿಮೋಟ್ ಕಂಟ್ರೋಲ್ ಸಾಮರ್ಥ್ಯಗಳಿಗಾಗಿ ಐಆರ್ ಬ್ಲಾಸ್ಟರ್ ಮತ್ತು ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP54 ರೇಟಿಂಗ್‌ನೊಂದಿಗೆ ಬರಬಹುದು.


Click it and Unblock the Notifications








