Home
ಮೊಬೈಲ್

Infinix Zero 40 5G ಫೋನ್ ಬಿಡುಗಡೆ: 108MP ಕ್ಯಾಮೆರಾ, ದೊಡ್ಡ ಬ್ಯಾಟರಿ.. ಬೆಲೆ?

Infinix Zero 40 5G Launched: ಇನ್ಫಿನಿಕ್ಸ್‌ (Infinix) ಭಾರತದಲ್ಲಿ ತನ್ನ Zero 40 ಸರಣಿಯಲ್ಲಿ ಹೊಸ ಮೊಬೈಲ್ ಅನ್ನು ಬಿಡುಗಡೆ ಮಾಡಿದೆ. ಇದು ಇನ್ಫಿನಿಕ್ಸ್‌ ಜಿರೋ 40 5G (Infinix Zero 40 5G) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಫೋನನ್ನು ಬಜೆಟ್‌ ಬೆಲೆಯಲ್ಲಿ ಪರಿಚಯಿಸಲಾಗಿದೆ. ಇ ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ ಮೂಲಕ ಮೊಬೈಲ್‌ ಅನ್ನು ಮಾರಾಟ ಮಾಡಲಾಗುತ್ತದೆ. ಬನ್ನಿ, ಈ ಹೊಸ ಫೋನಿನ ಬೆಲೆ, ಲಾಂಚ್‌ ಆಫರ್‌ಗಳು ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಕಂಪನಿಯು ಭಾರತದಲ್ಲಿ ಇನ್ಫಿನಿಕ್ಸ್‌ ಜಿರೋ 40 5G ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಈ ಫೋನ್ ನಿರೀಕ್ಷೆಯಂತೆಯೇ 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. 6.78 ಇಂಚಿನ 3D ಕರ್ವ್ಡ್ ಅಮೋಲೆಡ್ ಡಿಸ್ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಅಲ್ಟಿಮೇಟ್ ಪ್ರೊಸೆಸರ್ ಅನ್ನು ಹೊಂದಿದೆ. ಜೊತೆಗೆ, 5000mAh ಬ್ಯಾಟರಿ, 45W ವೇಗದ ಚಾರ್ಜಿಂಗ್ ಮತ್ತು 20W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಕೆಲವು ಎಐ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Infinix Zero 40 5G ಫೋನ್ ಬಿಡುಗಡೆ: 108MP ಕ್ಯಾಮೆರಾ, ದೊಡ್ಡ ಬ್ಯಾಟರಿ.. ಬೆಲೆ?

ಇನ್ಫಿನಿಕ್ಸ್‌ ಜಿರೋ 40 5G ಬೆಲೆ ಮತ್ತು ಲಭ್ಯತೆ

12GB RAM + 256GB ಸ್ಟೋರೇಜ್‌ ಬೆಲೆ = 27,999 ರೂ.
12GB RAM + 512GB ಸ್ಟೋರೇಜ್‌ ಬೆಲೆ = 30,999 ರೂ.

ಇನ್ಫಿನಿಕ್ಸ್‌ ಜಿರೋ 40 5G ಫೋನನ್ನು ಭಾರತದಲ್ಲಿ ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ನೀವು ಮೂವಿಂಗ್ ಟೈಟಾನಿಯಂ, ರಾಕ್ ಬ್ಲಾಕ್ ಮತ್ತು ವೈಲೆಟ್ ಗಾರ್ಡನ್‌ ಬಣ್ಣಗಳಲ್ಲಿ ಖರೀದಿಸಬಹುದು. ಫೋನಿನ 12GB RAM + 256GB ಸ್ಟೋರೇಜ್‌ ರೂಪಾಂತರವು 27,999 ರೂ.ಗೆ ಮಾರಾಟವಾಗಲಿದೆ. 12GB RAM + 512GB ಸ್ಟೋರೇಜ್‌ ಬೆಲೆ 30,999 ರೂ. ಇದೆ.

ಕಂಪನಿಯು ಕೆಲವು ಆಫರ್‌ಗಳನ್ನು ಪ್ರಕಟಿಸಿದೆ. ಆಯ್ದ ಬ್ಯಾಂಕ್‌ಗಳಲ್ಲಿ ಈ ಫೋನಿನ ಖರೀದಿ ಮೇಲೆ 3,000 ರೂ.ಗಳ ರಿಯಾಯಿತಿ ಲಭ್ಯವಿದೆ. ಡಿಸ್ಕೌಂಟ್‌ ಬಳಿಕ ಮೂಲ ಮಾದರಿಯು 24,999 ರೂ.ಗಳಿಗೆ ಮತ್ತು ಟಾಪ್ ಮಾಡೆಲ್ ಬೆಲೆ 27,999 ರೂ.ಗೆ ಇಳಿಕೆಯಾಗುತ್ತದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಸಿಗುತ್ತದೆ. ಸೆಪ್ಟೆಂಬರ್ 21 ರಿಂದ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಮತ್ತು ಇತರ ಚಿಲ್ಲರೆ ಮಳಿಗೆಗಳಲ್ಲಿ ಈ ಫೋನ್ ಮಾರಾಟವಾಗಲಿದೆ.

ಇನ್ಫಿನಿಕ್ಸ್‌ ಜಿರೋ 40 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ: ಇನ್ಫಿನಿಕ್ಸ್‌ ಜಿರೋ 40 5G ಫೋನ್ 6.78 ಇಂಚಿನ 3D ಕರ್ವ್ಡ್ ಅಮೋಲೆಟ್ ಡಿಸ್ಪ್ಲೇಯನ್ನು ಹೊಂದಿದೆ. ಇದು 144Hz ರಿಫ್ರೆಶ್ ದರ, 1,300 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್, 1,500Hz ಸ್ಪರ್ಶ ಮಾದರಿ ದರವನ್ನು ಒಳಗೊಂಡಿದೆ. ಜೊತೆಗೆ, ಭದ್ರತೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ ಮತ್ತು TÜV ರೈನ್‌ಲ್ಯಾಂಡ್ ಐ-ಕೇರ್ ಮೋಡ್ ಪ್ರಮಾಣೀಕರಣವನ್ನು ಸಹ ಪಡೆದಿದೆ.

ಪ್ರೊಸೆಸರ್: ಇನ್ಫಿನಿಕ್ಸ್‌ ಜಿರೋ 40 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಅಲ್ಟಿಮೇಟ್ ಪ್ರೊಸೆಸರ್ ಅನ್ನು ಹೊಂದಿದೆ. ಇದು ಆರ್ಮ್ ಕಾರ್ಟೆಕ್ಸ್-A78 ಕೋರ್ ಹೊಂದಿರುವ ಆಕ್ಟಾ-ಕೋರ್ ಸಿಪಿಯು ಆಗಿದೆ. ಈ ಫೋನ್ XOS 14.5 ಜೊತೆಗೆ ಆಂಡ್ರಾಯ್ಡ್14 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಸ್ಟೋರೇಜ್‌: ಇನ್ಫಿನಿಕ್ಸ್‌ ಜಿರೋ 40 5G ಸ್ಮಾರ್ಟ್‌ಫೋನ್ 12GB RAM ಮತ್ತು 512GB ವರೆಗಿನ ಇಂಟರ್ನಲ್ ಸ್ಟೋರೇಜ್‌ ಒಳಗೊಂಡಿದೆ. ಇದರೊಂದಿಗೆ ವಿಸ್ತೃತ RAM ತಂತ್ರಜ್ಞಾನವನ್ನೂ ಒದಗಿಸಲಾಗಿದೆ.

ಕ್ಯಾಮೆರಾ: ಇನ್ಫಿನಿಕ್ಸ್‌ ಜಿರೋ 40 5G ಫೋನಿನಲ್ಲಿ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಒದಗಿಸಲಾಗಿದೆ. ಇದರಲ್ಲಿ OIS ತಂತ್ರಜ್ಞಾನದೊಂದಿಗೆ 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಮತ್ತು 2 ಮೆಗಾಪಿಕ್ಸೆಲ್ ಕ್ಯಾಮೆರಾ ಲೆನ್ಸ್ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ಕ್ಯಾಮೆರಾದೊಂದಿಗೆ ಹಲವು ಎಐ (AI) ವೈಶಿಷ್ಟ್ಯಗಳು ಸಹ ಲಭ್ಯವಿದೆ.

ಬ್ಯಾಟರಿ: ಇನ್ಫಿನಿಕ್ಸ್‌ ಜಿರೋ 40 5G ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಲಭ್ಯವಿದೆ. ಜೊತೆಗೆ, ಈ ಫೋನ್ 20W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ನೀವು ಸುದೀರ್ಘ ಬ್ಯಾಕಪ್ ಜೊತೆಗೆ ಫೋನನ್ನು ತ್ವರಿತವಾಗಿ ಚಾರ್ಜ್ ಮಾಡಬಹುದು.

ಎಐ ವೈಶಿಷ್ಟ್ಯಗಳು: ಇನ್ಫಿನಿಕ್ಸ್‌ ಜಿರೋ 40 5G ಎಐ ಚಾಲಿತ ಸೂಟ್ ಅನ್ನು ಹೊಂದಿದೆ. ಇದರಲ್ಲಿ ಎಐ ಎರೇಸರ್, ಎಐ ವಾಲ್‌ಪೇಪರ್, ಎಐ ಕಟ್-ಔಟ್ ಸ್ಟಿಕ್ಕರ್ ವೈಶಿಷ್ಟ್ಯ, ಎಐ ವ್ಲಾಗ್, ಎಐ ಇಮೇಜ್ ಜನರೇಟರ್, ಎಐ ಟ್ರಾನ್ಸ್‌ಲೇಟ್ ಮತ್ತು ಕಂಟೆಂಟ್ ರಚಿಸಲು ಎಐ ಟೆಕ್ಸ್ಟ್ ಜನರೇಟರ್‌ನಂತಹ ಹಲವು ವೈಶಿಷ್ಟ್ಯಗಳು ಲಭ್ಯವಿದೆ.

ಇತರೆ ವೈಶಿಷ್ಟ್ಯಗಳು: ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಸ್ಮಾರ್ಟ್‌ಫೋನ್‌ ಡ್ಯುಯಲ್ ಸಿಮ್ 5G, 4G, ಬ್ಲೂಟೂತ್, Wi-Fi 6e, ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, IR ಬ್ಲಾಸ್ಟರ್, ಪ್ರಾಕ್ಸಿಮಿಟಿ ಸೆನ್ಸಾರ್, ಸ್ಟಿರಿಯೊ ಸ್ಪೀಕರ್‌ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
Infinix ZERO 40 5G with 50MP AF front camera launched in India: know Price, Specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+