ಮಾರುಕಟ್ಟೆಯನ್ನೇ ದಂಗಾಗಿಸಿದ ಹಾಂಕಾಂಗ್ ಮೂಲದ ಹೊಸ ಸ್ಮಾರ್ಟ್‌ಫೋನ್!..ರೆಡ್‌ಮಿ ನೋಟ್ 4 ವೇಸ್ಟ್!!

6GB RAM, ಡ್ಯಯಲ್ ಕ್ಯಾಮೆರಾ ಮತ್ತು 4350mAh ಬ್ಯಾಟರಿಯಂತಹ ಅತ್ಯಾಧನಿಕ ಫೀಚರ್‌ಗಳನ್ನು ಹೊತ್ತು 'ಇನ್ಫಿನಿಕ್ಸ್ ಝೀರೋ 5 ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕಾಲಿಟ್ಟಿದೆ.

|

ಭಾರತದ ಮೊಬೈಲ್ ಮಾರುಕಟ್ಟೆಯೇ ದಂಗಾಗುವಂತಹ ಸ್ಮಾರ್ಟ್‌ಫೋನ್ ಒಂದು ಭಾರತೀಯ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿದೆ.! ಹೌದು, ಹಾಂಕಾಂಗ್ ಮೂಲದ ಮೊಬೈಲ್ ತಯಾರಿಕ ಸಂಸ್ಥೆ ಇನ್ಫಿನಿಕ್ಸ್ 'ಇನ್ಫಿನಿಕ್ಸ್ ಝೀರೋ 5' ಎಂಬ ಸ್ಮಾರ್ಟ್‌ಫೋನ್ ಪರಿಚಯಿಸಿದ್ದು, ಈ ಫೋನ್ ಫೀಚರ್ಸ್ ಎಲ್ಲರಿಗೂ ಒಮ್ಮೆ ಶಾಕ್ ನೀಡಿದೆ.!!

6GB RAM, ಡ್ಯಯಲ್ ಕ್ಯಾಮೆರಾ ಮತ್ತು 4350mAh ಬ್ಯಾಟರಿಯಂತಹ ಅತ್ಯಾಧುನಿಕ ಫೀಚರ್‌ಗಳನ್ನು ಹೊತ್ತು 'ಇನ್ಫಿನಿಕ್ಸ್ ಝೀರೋ 5 ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕಾಲಿಟ್ಟಿದೆ. ಹಾಗಾದರೆ, ಈ ಫೋನ್ ಹೊಂದಿರುವ ಪೂರ್ತಿ ಫೀಚರ್ಸ್ ಏನು? ಈ ಸ್ಮಾರ್ಟ್‌ಫೋನ್ ಬೆಲೆ ಎಷ್ಟು? ಮತ್ತು ಖರೀದಿಸಲು ಯೋಗ್ಯವೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

'ಇನ್ಫಿನಿಕ್ಸ್ ಝೀರೋ 5 ಸ್ಮಾರ್ಟ್‌ಫೋನ್ 5.98 ಇಂಚುಗಳ (1080x1920 ಪಿಕ್ಸೆಲ್ ರೆಸೊಲ್ಯೂಷನ್) ಸಂಪೂರ್ಣ ಎಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ. ಅತ್ಯಂತ ಕಡಿಮೆ ಬೆಲೆಗೆ ಮೆಟಲ್ ಯೂನಿಬಾಡಿ ಹೊಂದಿರುವ ಈ ಫೋನ್ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳ ವಿನ್ಯಾಸವನ್ನು ಹೊಂದಿದೆ.!!

ಪ್ರೊಸೆಸರ್ ಮತ್ತು ಒಎಸ್!!

ಪ್ರೊಸೆಸರ್ ಮತ್ತು ಒಎಸ್!!

2.6GHz ಒಕ್ಟಾ ಕೋರ್ ಮೀಡಿಯಾಟೆಕ್ ಪ್ರೊಸೆಸರ್ ಜತೆಯಲ್ಲಿ Mali-T880 GPU ಸ್ಮಾರ್ಟ್‌ಫೋನ್ ಹೃದಯವನ್ನು ಆಕ್ರಮಿಸಿಕೊಂಡಿದೆ. ಆಂಡ್ರಾಯ್ಡ್ 7.1 ನೌಗಾಟ್ ಓಪರೇಟಿಂಗ್ ಸಿಸ್ಟಂನಲ್ಲಿ ಸ್ಮಾರ್ಟ್‌ಫೋನ್ ರನ್ ಆಗಲಿದ್ದು, 2.6GHz ಒಕ್ಟಾ ಕೋರ್ ಪ್ರೊಸೆಸರ್ ಇರುವುದರಿಂದ ಫೋನ್ ವೇಗಕ್ಕೆ ಸಾಟಿ ಇಲ್ಲ.!!

RAM ಮತ್ತು ಮೆಮೊರಿ!!

RAM ಮತ್ತು ಮೆಮೊರಿ!!

'ಇನ್ಫಿನಿಕ್ಸ್ ಝೀರೋ 5 ಸ್ಮಾರ್ಟ್‌ಫೋನ್ 6GB of RAM ಮತ್ತು 64GB ಮೆಮೊರಿ ಹಾಗೂ 6GB of RAM ಮತ್ತು 128GB ಇಂಟರ್ನಲ್ ಮೆಮೊರಿ ಹೊಂದಿರುವ ಎರಡು ವೆರಿಯಂಟ್‌ಗಳಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದೆ. ಫೋನ್ ಮೆಮೊರಿಯನ್ನು ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಿಕೊಳ್ಳಬಹುದಾದ ಆಯ್ಕೆ ಇದೆ.!!

ಅದ್ಬುತ ಕ್ಯಾಮೆರಾಗಳು!!

ಅದ್ಬುತ ಕ್ಯಾಮೆರಾಗಳು!!

ವೈಡ್ ಆಂಗಲ್ ಲೆನ್ಸ್, ಎಲ್‌ಇಡಿ ಫ್ಲ್ಯಾಶ್, ಸೋನಿ IMX386 ಸೆನ್ಸಾರ್ ಮತ್ತು f/2.0 ಆಪಾರ್ಚರ್ ಹೊಂದಿರುವ 12MP ಮತ್ತು 13MP ರಿಯರ್ ಕ್ಯಾಮೆರಾಗಳು ಸ್ಮಾರ್ಟ್‌ಫೋನ್ ಕ್ಯಾಮೆರಾ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಇನ್ನು ಸೆಲ್ಫಿ ಪ್ರಿಯರಿಗೆ ತಕ್ಕಂತೆ 16MP ಫ್ರಂಟ್ ಸೆಲ್ಫಿ ಕ್ಯಾಮೆರಾ (f/2.0 aperture) ಮತ್ತು ಎಲ್‌ಇಡಿ ಫ್ಲ್ಯಾಶ್ ಲಭ್ಯವಿದೆ.!!

ಬೇರೆ ಏನೆಲ್ಲಾ ಫೀಚರ್ಸ್?

ಬೇರೆ ಏನೆಲ್ಲಾ ಫೀಚರ್ಸ್?

ಮೊದಲೇ ಹೇಳಿದಂತೆ ಇನ್ಫಿನಿಕ್ಸ್ ಝೀರೋ 5 ಸ್ಮಾರ್ಟ್‌ಫೋನ್ 4350mAh ಬ್ಯಾಟರಿ ಹೊಂದಿದ್ದು, ಫಿಂಗರ್ ಪ್ರಿಂಟ್ ಸೆನ್ಸಾರ್, 4G VoLTE, 3G, WiFi, Bluetooth, GPS ಮತ್ತು USB Type-C ಎಲ್ಲಾ ಫೀಚರ್‌ಗಳೂ ಫೋನ್ ಅಲಂಕರಿಸಿವೆ.! ಇಷ್ಟೆಲ್ಲಾ ಫೀಚರ್ಸ್ ಹೊಂದಿರುವ 64GB ವೆರಿಯಂಟ್ ಬೆಲೆ 17,999 ರೂ. ಆದರೆ, 128GB ವೆರಿಯಂಟ್ ಬೆಲೆ ಕೇವಲ 19,999 ರೂ.!!

5000mAh ಬ್ಯಾಟರಿ ಫೋನ್ 'ಜಿಯೋನಿ ಎಮ್7 ಪವರ್' ಲಾಂಚ್!..ಟ್ರೆಂಡ್ ಹೆಚ್ಚಿಸಿದ ಡಿಸ್‌ಪ್ಲೇ!!5000mAh ಬ್ಯಾಟರಿ ಫೋನ್ 'ಜಿಯೋನಿ ಎಮ್7 ಪವರ್' ಲಾಂಚ್!..ಟ್ರೆಂಡ್ ಹೆಚ್ಚಿಸಿದ ಡಿಸ್‌ಪ್ಲೇ!!

Best Mobiles in India

English summary
Transsion Holdings brand Infinix, as promised, has unveiled its Zero 5 smartphone for the Indian market. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X