Subscribe to Gizbot

ಭಾರತದಲ್ಲಿಂದು 'ಇನ್ಫಿನಿಕ್ಸ್ ಝೀರೋ 5' ಫೋನ್ ಸೇಲ್!..ಶಿಯೋಮಿ ಸೇರಿ ಚೀನಾ ಕಂಪೆನಿಗಳು ಗಢಗಢ!!

Written By:

ಆಪಲ್, ಒನ್‌ಪ್ಲಸ್ ಮತ್ತು ಶಿಯೋಮಿ ಸೇರಿದಂತೆ ಇಡೀ ಚೀನಾ ಮೊಬೈಲ್ ಕಂಪೆನಿಗಗಳನ್ನು ದಂಗಾಗಿಸಿರುವ ಹಾಂಕಾಂಗ್ ಮೂಲದ ಇನ್ಫಿನಿಟಿ ಸ್ಮಾರ್ಟ್‌ಫೋನ್ ಸೇಲ್ ಇಂದಿನಿಂದ ಆರಂಭವಾಗಿದೆ. ಅತ್ಯಂತ ಹೆಚ್ಚು ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್ ಒಂದು ಅತ್ಯಂತ ಕಡಿಮೆ ಬೆಲೆಗೆ ಭಾರತೀಯರಿಗೆ ದೊರೆಯುತ್ತಿದೆ.!!

ಉತ್ತಮ ಫೀಚರ್ಸ್‌ಗಳಿಂದ ಶಿಯೋಮಿ ಹೇಗೆ ಭಾರತದ ಮೊಬೈಲ್ ಮಾರುಕಟ್ಟೆಯನ್ನು ವಶಪಡಿಸಿಕೊಂಡಿತೊ ಅದೇ ದೃಷ್ಟಿಯಿಂದ ಇನ್ಫಿನಿಟಿ ಕೂಡ ಭಾರತದ ಮಾರುಕಟ್ಟೆಗೆ ಕಾಲಿಟ್ಟಿದೆ. ಹಾಗಾಗಿ, ಇನ್ಫಿನಿಟಿ ಹೊಸದಾಗಿ ಪರಿಚಯಿಸಿರುವ 'ಇನ್ಫಿನಿಕ್ಸ್ ಝೀರೋ 5' ಸ್ಮಾರ್ಟ್‌ಫೋನ್ ಫೀಚರ್ಸ್ ಎಲ್ಲರಿಗೂ ಭಾರಿ ಶಾಕ್ ನೀಡಿದೆ.!!

ಫ್ಲಿಪ್‌ಕಾರ್ಟ್ನಲ್ಲಿ ಈಗಾಗಲೇ ಸೇಲ್ ಆರಂಭವಾಗಿ, ಇನ್ಫಿನಿಕ್ಸ್ ಝೀರೋ 5 6GB ಮತ್ತು 128GB ವೆರಿಯಂಟ್ ಸ್ಮಾರ್ಟ್‌ಫೋನ್ ಸೋಲ್ಡ್ಔಟ್ ಆಗಿದ್ದರೆ, 6GB ಮತ್ತು 64GB ವೆರಿಯಂಟ್ ಸ್ಮಾರ್ಟ್‌ಫೋನ್ ಸೇಲ್ ನಡೆಯುತ್ತಿದೆ. ಹಾಗಾದರೆ, ಫೋನ್ ಬೆಲೆ ಎಷ್ಟು ಮತ್ತು ಏನೆಲ್ಲಾ ಫೀಚರ್ಸ್ ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ ಮತ್ತು ವಿನ್ಯಾಸ!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

'ಇನ್ಫಿನಿಕ್ಸ್ ಝೀರೋ 5 ಸ್ಮಾರ್ಟ್‌ಫೋನ್ 5.98 ಇಂಚುಗಳ (1080x1920 ಪಿಕ್ಸೆಲ್ ರೆಸೊಲ್ಯೂಷನ್) ಸಂಪೂರ್ಣ ಎಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ. ಅತ್ಯಂತ ಕಡಿಮೆ ಬೆಲೆಗೆ ಮೆಟಲ್ ಯೂನಿಬಾಡಿ ಹೊಂದಿರುವ ಈ ಫೋನ್ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳ ವಿನ್ಯಾಸವನ್ನು ಹೊಂದಿದೆ.!!

ಪ್ರೊಸೆಸರ್ ಮತ್ತು ಒಎಸ್!!

ಪ್ರೊಸೆಸರ್ ಮತ್ತು ಒಎಸ್!!

2.6GHz ಒಕ್ಟಾ ಕೋರ್ ಮೀಡಿಯಾಟೆಕ್ ಪ್ರೊಸೆಸರ್ ಜತೆಯಲ್ಲಿ Mali-T880 GPU ಸ್ಮಾರ್ಟ್‌ಫೋನ್ ಹೃದಯವನ್ನು ಆಕ್ರಮಿಸಿಕೊಂಡಿದೆ. ಆಂಡ್ರಾಯ್ಡ್ 7.1 ನೌಗಾಟ್ ಓಪರೇಟಿಂಗ್ ಸಿಸ್ಟಂನಲ್ಲಿ ಸ್ಮಾರ್ಟ್‌ಫೋನ್ ರನ್ ಆಗಲಿದ್ದು, 2.6GHz ಒಕ್ಟಾ ಕೋರ್ ಪ್ರೊಸೆಸರ್ ಇರುವುದರಿಂದ ಫೋನ್ ವೇಗಕ್ಕೆ ಸಾಟಿ ಇಲ್ಲ.!!

RAM ಮತ್ತು ಮೆಮೊರಿ!!

RAM ಮತ್ತು ಮೆಮೊರಿ!!

'ಇನ್ಫಿನಿಕ್ಸ್ ಝೀರೋ 5 ಸ್ಮಾರ್ಟ್‌ಫೋನ್ 6GB of RAM ಮತ್ತು 64GB ಮೆಮೊರಿ ಹಾಗೂ 6GB of RAM ಮತ್ತು 128GB ಇಂಟರ್ನಲ್ ಮೆಮೊರಿ ಹೊಂದಿರುವ ಎರಡು ವೆರಿಯಂಟ್‌ಗಳಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದೆ. ಫೋನ್ ಮೆಮೊರಿಯನ್ನು ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಿಕೊಳ್ಳಬಹುದಾದ ಆಯ್ಕೆ ಇದೆ.!!

ಅದ್ಬುತ ಕ್ಯಾಮೆರಾಗಳು

ಅದ್ಬುತ ಕ್ಯಾಮೆರಾಗಳು

ವೈಡ್ ಆಂಗಲ್ ಲೆನ್ಸ್, ಎಲ್‌ಇಡಿ ಫ್ಲ್ಯಾಶ್, ಸೋನಿ IMX386 ಸೆನ್ಸಾರ್ ಮತ್ತು f/2.0 ಆಪಾರ್ಚರ್ ಹೊಂದಿರುವ 12MP ಮತ್ತು 13MP ರಿಯರ್ ಕ್ಯಾಮೆರಾಗಳು ಸ್ಮಾರ್ಟ್‌ಫೋನ್ ಕ್ಯಾಮೆರಾ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಇನ್ನು ಸೆಲ್ಫಿ ಪ್ರಿಯರಿಗೆ ತಕ್ಕಂತೆ 16MP ಫ್ರಂಟ್ ಸೆಲ್ಫಿ ಕ್ಯಾಮೆರಾ (f/2.0 aperture) ಮತ್ತು ಎಲ್‌ಇಡಿ ಫ್ಲ್ಯಾಶ್ ಲಭ್ಯವಿದೆ.!!

ಬೇರೆ ಏನೆಲ್ಲಾ ಫೀಚರ್ಸ್?

ಬೇರೆ ಏನೆಲ್ಲಾ ಫೀಚರ್ಸ್?

ಇನ್ಫಿನಿಕ್ಸ್ ಝೀರೋ 5 ಸ್ಮಾರ್ಟ್‌ಫೋನ್ 4350mAh ಬ್ಯಾಟರಿ ಹೊಂದಿದ್ದು, ಫಿಂಗರ್ ಪ್ರಿಂಟ್ ಸೆನ್ಸಾರ್, 4G VoLTE, 3G, WiFi, Bluetooth, GPS ಮತ್ತು USB Type-C ಎಲ್ಲಾ ಫೀಚರ್‌ಗಳೂ ಫೋನ್ ಅಲಂಕರಿಸಿವೆ.! ಇಷ್ಟೆಲ್ಲಾ ಫೀಚರ್ಸ್ ಹೊಂದಿರುವ 64GB ವೆರಿಯಂಟ್ ಫೋನ್ ಬೆಲೆ 17,999 ರೂ ಆದರೆ 128GB ವೆರಿಯಂಟ್ ಫೋನ್ ಬೆಲೆ ಕೇವಲ 19,999 ರೂ.!!

ಓದಿರಿ:ರಿಲಯನ್ಸ್ ಸೇರಿ ಎಲ್ಲಾ ಗ್ರಾಹಕರಿಗೆ ವೊಡಾಫೋನ್ ಆಹ್ವಾನ!..ಪೋರ್ಟ್ ಆದವರಿಗೆ ಭರ್ಜರಿ ಆಫರ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The phone comes with a 12-megapixel primary camera and a 13-megapixel secondary camera for depth sensing.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot