Infinix: ಶೀಘ್ರದಲ್ಲೇ ಹೊಸ ಫ್ಲಿಪ್ ಫೋನ್ ಲಾಂಚ್: ಬೆಲೆ, ವಿನ್ಯಾಸ ಲೀಕ್!
ಇನ್ಫಿನಿಕ್ಸ್ ಶೀಘ್ರದಲ್ಲೇ ತನ್ನ ಮೊದಲ ಫ್ಲಿಪ್ ಫೋನ್ ಅನ್ನು ಬಿಡುಗಡೆ ಮಾಡಲಿದೆ. ಇದು ಇನ್ಫಿನಿಕ್ಸ್ ಝೀರೋ ಫ್ಲಿಪ್ 5G (Infinix Zero Flip 5G) ಎಂಬ ಹೆಸರಿನೊಂದಿಗೆ ಸದ್ದು ಮಾಡಲು ಸಜ್ಜಾಗಿದೆ. ಕಂಪನಿಯು ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ಆದರೆ, ಬಿಡುಗಡೆಯನ್ನು ಖಚಿತಪಡಿಸಿದೆ. ಫೋನಿಗೆ ಸಂಬಂಧಿಸಿದಂತೆ ಇತ್ತೀಚಿನ ಅಪ್ಡೇಟ್ ಲಭ್ಯವಾಗಿದೆ. ಈ ಮೂಲಕ ಕಂಪನಿಯ ಮೊದಲ ಫ್ಲಿಪ್ ಫೋನ್ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಾಗಿದೆ. ಬನ್ನಿ, ಇನ್ಫಿನಿಕ್ಸ್‌ನ ಮೊದಲ ಫೋಲ್ಡಬಲ್ ಝೀರೋ ಫ್ಲಿಪ್ ಫೋನ್ ಹೇಗಿರುತ್ತದೆ? ಎಂಬುವುದನ್ನು ತಿಳಿಯೋಣ.
ಹೌದು, ಇನ್ಫಿನಿಕ್ಸ್ ಝೀರೋ ಫ್ಲಿಪ್ ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇದು ಕಂಪನಿಯ ಮೊದಲ ಫ್ಲಿಪ್ ಫೋಲ್ಡಬಲ್ ಡಿವೈಸ್ ಆಗಿರುವುದರಿಂದ, ಎಲ್ಲರ ಕಣ್ಣುಗಳು ಇದರತ್ತ ನೆಟ್ಟಿದೆ. ಬಿಡುಗಡೆಗೂ ಮೊದಲು, ಟಿಪ್‌ಸ್ಟರ್ ಮುಂಬರುವ ಸ್ಮಾರ್ಟ್‌ಫೋನಿನ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದು, ಈ ಮೂಲಕ ವಿನ್ಯಾಸ ಮತ್ತು ನೂತನ ಫೋನಿನ ಲವು ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ. ಈ ಫೋನ್ 3.6 ಇಂಚಿನ ಕವರ್ ಡಿಸ್ಪ್ಲೇ, 120Hz ರಿಫ್ರೆಶ್ ದರ ಮತ್ತು 1056 x 1066 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರಲಿದೆ.

ಇನ್ಫಿನಿಕ್ಸ್ ಝೀರೋ ಫ್ಲಿಪ್ 5G ಬೆಲೆ, ಬಣ್ಣ ಸೋರಿಕೆ!
ಟಿಪ್‌ಸ್ಟರ್ ಪರಾಸ್ ಗುಗ್ಲಾನಿ ತಮ್ಮ ಎಕ್ಸ್‌ನಲ್ಲಿ ಹಂಚಿಕೊಂಡ ಪೋಸ್ಟರ್ ಪ್ರಕಾರ, ಇನ್ಫಿನಿಕ್ಸ್ ಝೀರೋ ಫ್ಲಿಪ್ 5G ಶೀಘ್ರದಲ್ಲೇ ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ಈ ಫೋನಿನ ಬೆಲೆಯನ್ನು ನಿಗದಿಪಡಿಸಲಾಗಿದೆ. ಸುಮಾರು 50,000 ಮತ್ತು 55,000 ರೂ.ಗಳ ಬೆಲೆಯಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಇದು ಭಾರತದಲ್ಲಿ ಕನಿಷ್ಠ ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಈ ಫೋನ್ Motorola Razr 50 ಮತ್ತು Tecno Phantom V Flip 5G ಫೋನಿಗೆ ಪೈಪೋಟಿ ನೀಡಲಿದೆ.
ಟಿಪ್‌ಸ್ಟರ್, ಫೋನ್ ಬ್ಲಾಸಮ್ ಗ್ಲೋ ಮತ್ತು ರಾಕ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿರುತ್ತದೆ ಎಂದು ಸೂಚಿಸುವ ಎರಡು ಪೋಸ್ಟರ್‌ಗಳನ್ನು ಸಹ ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ ತೋರಿಸಿರುವ ಮೊಬೈಲ್‌ನ ವಿನ್ಯಾಸವು ಈ ವಾರದ ಆರಂಭದಲ್ಲಿ ಚಿಲ್ಲರೆ ವ್ಯಾಪಾರಿಗಳ ವೆಬ್‌ಸೈಟ್‌ನಲ್ಲಿ ಗುರುತಿಸಲಾದ ವಿನ್ಯಾಸಕ್ಕೆ ಹೊಂದಿಕೆಯಾಗುತ್ತದೆ. ಈ ಫೋನಿನ ಬಿಡುಗಡೆಯನ್ನು ಕಂಪನಿಯು ಲೇವಡಿ ಮಾಡಿದೆ. ಆದರೆ, ಬಿಡುಗಡೆ ದಿನಾಂಕವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
ಇನ್ಫಿನಿಕ್ಸ್ ಝೀರೋ ಫ್ಲಿಪ್ 5G ವೈಶಿಷ್ಟ್ಯಗಳು (ಸೋರಿಕೆ)
ಡಿಸ್ಪ್ಲೇ: ಟಿಪ್‌ಸ್ಟರ್ ಹಂಚಿಕೊಂಡ ಪೋಸ್ಟರ್‌ಗಳ ಪ್ರಕಾರ, ಇನ್ಫಿನಿಕ್ಸ್ ಝೀರೋ ಫ್ಲಿಪ್ 5G ಫೋನ್ ಇದು 6.9 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ LTPO AMOLED ಆಂತರಿಕ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 1,080 x 2,640 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಇದಲ್ಲದೆ, 3.64 ಇಂಚಿನ ಕವರ್ ಡಿಸ್‌ಪ್ಲೇ ಇರಲಿದೆ. ಇದು 1056 x 1066 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರಲಿದೆ. ಈ ಎರಡೂ ಡಿಸ್ಪ್ಲೇಗಳು 120Hz ರಿಫ್ರೆಶ್ ದರ ಹೊಂದಿವೆ.
ಪ್ರೊಸೆಸರ್: ಇನ್ಫಿನಿಕ್ಸ್ ಝೀರೋ ಫ್ಲಿಪ್ 5G ಸ್ಮಾರ್ಟ್‌ಫೋನ್ 6nm ಮೀಡಿಯಾ ಟೆಕ್ ಡೈಮೆನ್ಶನ್ 8020 ಚಿಪ್‌ಸೆಟ್ ಹೊಂದಿರಲಿದೆ. ಜೊತೆಗೆ 8GB RAM ಮತ್ತು 512GB ಸ್ಟೋರೇಜ್ ಅನ್ನು ಒಳಗೊಂಡಿರಲಿದೆ.
ಕ್ಯಾಮೆರಾ: ಇನ್ಫಿನಿಕ್ಸ್ ಝೀರೋ ಫ್ಲಿಪ್ 5G ಮೊಬೈಲ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರಲಿದೆ. ಮತ್ತು ಹೊರಭಾಗದಲ್ಲಿ 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಇರಲಿದೆ. ಸೆಲ್ಫಿಗಾಗಿ 50 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿರುತ್ತದೆ ಎಂದು ಪೋಸ್ಟರ್ ಬಹಿರಂಗಪಡಿಸಿದೆ.
ಬ್ಯಾಟರಿ: ಇನ್ಫಿನಿಕ್ಸ್ ಝೀರೋ ಫ್ಲಿಪ್ 5G ಅನ್ನು 4720mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಲಾಗುವುದು. ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಈ ಫೋನ್ ಕಂಪನಿಯ XOS 14.5 ಸ್ಕಿನ್‌ನ ಮೇಲೆ ಆಂಡ್ರಾಯ್ಡ್ 14 ಅನ್ನು ರನ್ ಮಾಡುತ್ತದೆ.
ಇತರೆ ಫೀಚರ್ಸ್: ಇನ್ಫಿನಿಕ್ಸ್ ಝೀರೋ ಫ್ಲಿಪ್ 5G ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್ ಮತ್ತು GPS ಸೇರಿವೆ. ಸೋರಿಕೆಯಾದ ಚಿತ್ರಗಳ ಪ್ರಕಾರ, ಇದು ಕೇವಲ 7.64 ಮಿಮೀ (ಮುಚ್ಚಿದ) ದಪ್ಪವಾಗಿರುತ್ತದೆ. ಆದರೆ, ಮಡಿಸಿದಾಗ ಅದು 16.04 ಮಿಮೀ ದಪ್ಪವಾಗಿರುತ್ತದೆ.


Click it and Unblock the Notifications








