Infinix Zero Flip ಬಿಡುಗಡೆಗೆ ಮುಹೂರ್ತ ಫಿಕ್ಸ್: 50MP ಸೆಲ್ಫಿ ಕ್ಯಾಮೆರಾ, ಬೆಲೆ ನೋಡಿ
ಇನ್ಫಿನಿಕ್ಸ್ (Infinix) ಶೀಘ್ರದಲ್ಲೇ ತನ್ನ ಹೊಸ ಫೋಲ್ಡಬಲ್ (ಮಡಚಬಹುದಾದ) ಫೋನ್ ಅನ್ನು ಬಿಡುಗಡೆ ಮಾಡಲಿದೆ. ಇದು ಇನ್ಫಿನಿಕ್ಸ್ ಝೀರೋ ಫ್ಲಿಪ್ (Infinix Zero Flip) ಹೆಸರಿನೊಂದಿಗೆ ಮಾರುಕಟ್ಟೆಗೆ ಬರಲಿದೆ. ಇತ್ತೀಚೆಗೆ ಕಂಪನಿಯು ಈ ಫ್ಲಿಪ್ ಫೋನ್ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಅಕ್ಟೋಬರ್ 17 ರಂದು ಈ ಫೋನ್ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿ ತಿಳಿಸಿದೆ. ಪ್ರಸ್ತುತ, ಮಾರುಕಟ್ಟೆಯಲ್ಲಿ ಲಭ್ಯವಿರುವ ಫ್ಲಿಪ್ ಫೋನ್‌ಗಳಿಗಿಂತ ಕಡಿಮೆ ಬೆಲೆಯಲ್ಲಿ ಫೋನ್ ಬಿಡುಗಡೆಯಾಗಲಿದೆ.
ಹೌದು, ಇನ್ಫಿನಿಕ್ಸ್ ಝೀರೋ ಫ್ಲಿಪ್ (Infinix Zero Flip) ಭಾರತದಲ್ಲಿ ಅಕ್ಟೋಬರ್ 17 ರಂದು ಬಿಡುಗಡೆಯಾಗುತ್ತಿದೆ. ಈ ಕುರಿತು ಕಂಪನಿಯು ಟೀಸರ್ ಬಿಡುಗಡೆ ಮಾಡಿದೆ. ಇನ್ಫಿನಿಕ್ಸ್ ಝೀರೋ ಫ್ಲಿಪ್ ಫೋನ್ ಸ್ಯಾಮ್‌ಸಂಗ್ ಮತ್ತು ಮೊಟೊರೊಲಾ ಫ್ಲಿಪ್ ಫೋನ್‌ಗಳಿಗೆ ಪೈಪೋಟಿ ನೀಡುವ ಸಾಧ್ಯತೆಯಿದೆ. ಈಗಾಗಲೇ, ಇನ್ಫಿನಿಕ್ಸ್ ಝೀರೋ ಫ್ಲಿಪ್ ಜಾಗತಿಕ ಮಾರುಕಟ್ಟೆಯಲ್ಲಿ ಬಿಡಗಡೆಯಾಗಿದೆ. ಇದರ ಬೆಲೆ ಬೆಲೆ 50,100 ರೂ. ಆಗಿದೆ. ಭಾರತದಲ್ಲಿ ಕಡಿಮೆ ಬೆಲೆಗೆ ಪರಿಚಯಿಸುವ ಸಾಧ್ಯತೆಯಿದೆ.

ಇನ್ಫಿನಿಕ್ಸ್ ಝೀರೋ ಫ್ಲಿಪ್ ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಇನ್ಫಿನಿಕ್ಸ್ ಝೀರೋ ಫ್ಲಿಪ್ ಮೊಬೈಲ್ 6.9 ಇಂಚಿನ LTPO ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು ಫುಲ್ ಹೆಚ್‌ಡಿ ಪ್ಲಸ್ (1080 x 2640 ಪಿಕ್ಸೆಲ್) ರೆಸಲ್ಯೂಶನ್, 1400 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿರಲಿದೆ. ಈ ಫೋನ್ 3.64 ಇಂಚಿನ ಅಮೋಲೆಡ್ ಹೊರ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 1056 x 1066 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ದರ, 1100 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಮತ್ತು ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಒಳಗೊಂಡಿದೆ.
ಪ್ರೊಸೆಸರ್ ಸಾಮರ್ಥ್ಯ
ಇನ್ಫಿನಿಕ್ಸ್ ಝೀರೋ ಫ್ಲಿಪ್ ಫೋನ್ ಮೀಡಿಯಾ ಟೆಕ್ ಡೈಮೆನ್ಷನ್ 8020 ಚಿಪ್ಸೆಟ್ ಅನ್ನು ಹೊಂದಿರಲಿದೆ. ಇದು ಆಕ್ಟಾ-ಕೋರ್ ಪ್ರೊಸೆಸರ್ ಆಗಿರಲಿದೆ. ಇದನ್ನು 6 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ಮಾಡಲ್ಪಟ್ಟಿದೆ. ಇದರ ಗರಿಷ್ಠ ಗಡಿಯಾರದ ವೇಗ 2.6 GHz ಆಗಿರುತ್ತದೆ. ಈ ಫ್ಲಿಪ್ ಸ್ಮಾರ್ಟ್‌ಫೋನ್ XOS 14.5 ಕಸ್ಟಮ್ ಸ್ಕಿನ್ ಆಧಾರಿತ ಆಂಡ್ರಾಯ್ಡ್ 14 ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನಿಗೆ 2 ಓಎಸ್ ನವೀಕರಣಗಳು, 3 ವರ್ಷಗಳ ಭದ್ರತಾ ನವೀಕರಣಗಳು ಲಭ್ಯವಿದೆ.
ಸ್ಟೋರೇಜ್ ಆಯ್ಕೆ
ಇನ್ಫಿನಿಕ್ಸ್ ಝೀರೋ ಫ್ಲಿಪ್ ಮೊಬೈಲ್ 16GB RAM (ವಿಸ್ತರಿತ RAM ಜೊತೆಗೆ), 8GB ಸ್ಟ್ಯಾಂಡರ್ಡ್ RAM, 512GB ವರೆಗೆ ಸ್ಟೋರೇಜ್ ಆಯ್ಕೆಯನ್ನು ಒಳಗೊಂಡಿರಲಿದೆ.
ಕ್ಯಾಮೆರಾ ರಚನೆ
ಇನ್ಫಿನಿಕ್ಸ್ ಝೀರೋ ಫ್ಲಿಪ್ ಮೊಬೈಲ್ 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ GN5 OIS ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಹೊಂದಿರಲಿದೆ. ಸೆಲ್ಫಿ ಪ್ರಿಯರಿಗಾಗಿ, 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ JN1 ಆಟೋಫೋಕಸ್ ಫ್ರಂಟ್ ಕ್ಯಾಮೆರಾ ಲಭ್ಯವಿರಲಿದೆ. ಈ ಕ್ಯಾಮೆರಾಗಳು 4K 60fps ವಿಡಿಯೋವನ್ನು ರೆಕಾರ್ಡ್ ಮಾಡಬಹುದು. ಇದರೊಂದಿಗೆ ವ್ಲಾಗಿಂಗ್, ಡಿವಿ ಮೋಡ್, ಗೋಪ್ರೊ ಮೋಡ್ ಈ ಕ್ಯಾಮೆರಾದಲ್ಲಿ ಲಭ್ಯವಿದೆ.
ಬ್ಯಾಟರಿ ಬ್ಯಾಕಪ್
ಕಂಪನಿಯು ಇನ್ಫಿನಿಕ್ಸ್ ಝೀರೋ ಫ್ಲಿಪ್ ಫೋನನ್ನು 4,720mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಲಿದೆ. ಇದು 70W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. 10 ವ್ಯಾಟ್ ರಿವರ್ಸ್ ಚಾರ್ಜಿಂಗ್ ಸಹ ಲಭ್ಯವಿರಲಿದೆ.
ಇತರೆ ವೈಶಿಷ್ಟ್ಯಗಳು
ಇನ್ಫಿನಿಕ್ಸ್ ಝೀರೋ ಫ್ಲಿಪ್ ಮೊಬೈಲ್ 170.35 ಎಂಎಂ ಉದ್ದ, 73.4 ಎಂಎಂ ಅಗಲ ಮತ್ತು 7.64 ಎಂಎಂ ದಪ್ಪವನ್ನು ಹೊಂದಿರಲಿದೆ. ಇದು ಡ್ಯುಯಲ್ ಸಿಮ್, 5G, 4G, ಬ್ಲೂಟೂತ್ 5.4, Wi-Fi 6, ಯುಎಸ್‌ಬಿ ಟೈಪ್ ಸಿ ಪೋರ್ಟ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಜೆಬಿಎಲ್ ಡ್ಯುಯಲ್ ಸ್ಪೀಕರ್, ಎಕ್ಸ್ ಆಕ್ಸಿಸ್ ಲೀನಿಯರ್ ಮೋಟಾರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ.


Click it and Unblock the Notifications








