ಕೇವಲ 10,999 ರೂ.ಗೆ 'ಇನ್‌ಫೋಕಸ್ ವಿಷನ್ 3 ಪ್ರೊ' ಸ್ಮಾರ್ಟ್‌ಫೋನ್ ಬಿಡುಗಡೆ!!
ಭಾರತದ ಮೊಬೈಲ್ ಮಾರುಕಟ್ಟೆಗೆ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಿರುವ ಇನ್‌ಫೋಕಸ್ ಇದೀಗ ಮತ್ತೊಂದು ಬಜೆಟ್ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ.
ಭಾರತದ ಮೊಬೈಲ್ ಮಾರುಕಟ್ಟೆಗೆ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಿರುವ ಇನ್‌ಫೋಕಸ್ ಇದೀಗ ಮತ್ತೊಂದು ಬಜೆಟ್ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. ರೆಡ್ಮಿ ನೋಟ್ 5, ಹಾನರ್ 9 ಲೈಟ್ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಯುವಂತಂಹ 'ಇನ್‌ಫೋಕಸ್ ವಿಷನ್ 3 ಪ್ರೊ' ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಇದೀಗ ಬಿಡುಗಡೆಯಾಗಿದೆ.
5.7 ಇಂಚುಗಳ HD+ IPS ವೈಡ್ ಆಂಗಲ್ ಡಿಸ್ಪ್ಲೆ, ಡ್ಯುಯಲ್ ಕ್ಯಾಮೆರಾ ಮತ್ತು ಇನ್ನಿತರ ಪ್ರಮುಖ ವಿಶೇಷತೆಗಳನ್ನು ಹೊಂದಿರುವ 'ಇನ್‌ಫೋಕಸ್ ವಿಷನ್ 3 ಪ್ರೊ' ಸ್ಮಾರ್ಟ್‌ಫೋನ್ ಭಾರತದ ಮೊಬೈಲ್ ಮಾರುಕಟ್ಟೆಗೆ ಕೇವಲ 10,999 ರೂಪಾಯಿಗಳ ಬೆಲೆಗೆ ಕಾಲಿಟ್ಟಿದ್ದು, ಭಾರತದ ಬಜೆಟ್ ಬೆಲೆಯ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಮತ್ತಷ್ಟು ಪೈಪೋಟಿಯನ್ನು ಹೆಚ್ಚಿಸಿದೆ.

ಅಮೆರಿಕದ ಮೊಬೈಲ್ ಸಂಸ್ಥೆ ಇನ್‌ಫೋಕಸ್ ಇಂದಿನಿಂದಲೇ (ಏಪ್ರಿಲ್.20ರಿಂದ) ಪ್ರಮುಖ ಇ ಕಾಮರ್ಸ್ ಜಾಲತಾಣ ಅಮೇಜಾನ್‌ನಲ್ಲಿ ವಿಷನ್ 3 ಪ್ರೊ ಸ್ಮಾರ್ಟ್‌ಫೋನ್ ಅನ್ನು ಮಾರಟಕ್ಕಿಟ್ಟಿದೆ. ಹಾಗಾದರೆ, 'ಇನ್‌ಫೋಕಸ್ ವಿಷನ್ 3 ಪ್ರೊ' ಫೋನ್ ಒಳಗೊಂಡಿರುವ ಇನ್ನಿತರ ಫೀಚರ್ಸ್ ಯಾವುವು? ಸ್ಮಾರ್ಟ್‌ಫೋನ್ ವಿಶೇಷತೆ ಏನು?ಎಂಬುದನ್ನು ಮುಂದೆ ತಿಳಿಯಿರಿ.

ಡಿಸ್‌ಪ್ಲೇ ಮತ್ತು ವಿನ್ಯಾಸ!!
19;9 ಅನುಪಾತದ 1440x720p ರೆಸೊಲ್ಯೂಷನ್ ಸಾಮರ್ಥ್ಯವಿರುವ 5.7 ಇಂಚುಗಳ HD+ IPS ವೈಡ್ ಆಂಗಲ್ ON-CELL ಹೈ ಪಾರದರ್ಶಕ ಡಿಸ್‌ಪ್ಲೇಯನ್ನು 'ಇನ್‌ಫೋಕಸ್ ವಿಷನ್ 3 ಪ್ರೊ' ಸ್ಮಾರ್ಟ್‌ಫೋನ್ ಹೊಂದಿದೆ. ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಆಯ್ಕೆ ಮತ್ತು ಡ್ಯುಯಲ್ ರಿಯರ್ ಕ್ಯಾಮೆರಾಗಳ ವಿನ್ಯಾಸದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಪ್ರೊಸೆಸರ್ ಮತ್ತು RAM!!
ಇನ್‌ಫೋಕಸ್ ವಿಷನ್ 3 ಪ್ರೊ' ಸ್ಮಾರ್ಟ್‌ಫೋನಿನಲ್ಲಿ MTK 6750T ಮೀಡಿಯಾಟೆಕ್ ಪ್ರೊಸೆಸರ್ ಅನ್ನು ನೀಡಲಾಗಿದೆ. 4GB RAM ಮತ್ತು 64GB ಇಂಟರ್ನಲ್ ಸ್ಟೋರೆಜ್ ಅನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಮೆಮೊರಿಯನ್ನು ಎಸ್‌ಡಿ ಕಾರ್ಡ್ ಮೂಲಕ 128GB ವರೆಗೂ ವಿಸ್ತರಿಸಬಹುದು ಎಂದು ಇನ್‌ಫೋಕಸ್ ಕಂಪೆನಿ ಮಾಹಿತಿ ನೀಡಿದೆ.


ಡ್ಯುಯಲ್ ಕ್ಯಾಮೆರಾ!!
ಇದೇ ಮೊದಲ ಬಾರಿಗೆ ಇನ್‌ಫೋಕಸ್ ಕಂಪೆನಿಯ ಮೊದಲ ಬಜೆಟ್ ಸ್ಮಾರ್ಟ್‌ಫೋನ್ ಒಂದು ಡ್ಯುಯಲ್ ರಿಯರ್ ಕ್ಯಾಮೆರಾ ಹೊತ್ತು ಮೊಬೈಲ್ ಮಾರುಕಟ್ಟೆಗೆ ಪರಿಚಿತವಾಗಿದೆ. 13MP ಮತ್ತು 8 MP ಸಾಮರ್ಥ್ಯದ ಎರಡು ರಿಯರ್ ಕ್ಯಾಮೆರಾಗಳು ಹಾಗೂ 13MP ಸೆಲ್ಫಿ ಕ್ಯಾಮೆರಾವನ್ನು ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ. ಕ್ಯಾಮೆರಾ PDAF ಮತ್ತು LED ಫ್ಲ್ಯಾಶ್ ಅನ್ನು ಒಳಗೊಂಡಿದೆ.

ಇತರೆ ಏನೆಲ್ಲಾ ಫೀಚರ್ಸ್?
ಆಂಡ್ರಾಯ್ಡ್ ನೌಗಾಟ್ 7.0 ಮೂಲಕ ಕಾರ್ಯನಿರ್ವಹಿಸುವ ಇನ್‌ಫೋಕಸ್ ವಿಷನ್ 3 ಪ್ರೊ' ಸ್ಮಾರ್ಟ್‌ಫೋನ್ 4,000mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. 4G ವೋಲ್ಟ್, ಜಿಪಿಎಸ್ ಹೀಗೆ ಬಹತೇಕ ಎಲ್ಲಾ ಸಾಮಾನ್ಯ ಫೀಚರ್ಸ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಫೇಸ್ ಅನ್‌ಲಾಕ್ ಸೆನ್ಸಾರ್ ಅನ್ನು ಒಳಗೊಂಡಿರುವುದು ಮತ್ತೊಂದು ವಿಶೇಷ ಎನ್ನಬಹುದು.


Click it and Unblock the Notifications








