ಇಂಟೆಕ್ಸ್ ನೀಡುತಿದೆ ವಿನೂತನ GSM ಫೋನ್

Posted By: Staff
ಇಂಟೆಕ್ಸ್ ನೀಡುತಿದೆ ವಿನೂತನ GSM ಫೋನ್

ಗ್ರಾಹಕರ ಅಭಿರುಚಿ, ಆಯ್ಕೆಗೆ ತಕ್ಕಂತೆ ದಿನೇ ದಿನೇ ಮೊಬೈಲ್ ತಯಾರಕರು ನೂರಾರು ಮೊಬೈಲ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಇಂಟೆಕ್ಸ್ ಕೂಡ ಅದೇ ಹಾದಿಯಲ್ಲಿ ವಿನೂತನ ಮೊಬೈಲನ್ನು ಪರಿಚಯಿಸಿದೆ. ಗ್ರಾಹಕರಿಗೆ ಅವಶ್ಯಕವಿರುವ ಡ್ಯೂಯಲ್ ಸಿಮ್ ಮೊಬೈಲನ್ನು ಉದ್ದೇಶವಾಗಿಟ್ಟುಕೊಂಡು ಇದೀಗ ಇಂಟೆಕ್ಸ್ ಕಂಪನಿ ಇಂಟೆಕ್ಸ್ 1010 ನಿಯೋ ಮೊಬೈಲನ್ನು ಬಿಡುಗಡೆಗೊಳಿಸಿದೆ.

ಈ ಡ್ಯೂಯಲ್ ಸಿಮ್ GSM ಮೊಬೈಲ್ ನಲ್ಲಿ ಹಲವು ಆಯ್ಕೆಗಳು ನಿಮಗಾಗಿ ತೆರೆಕಂಡಿವೆ. ಮೊಬೈಲಿಂದ ಬಯಸುವ ಸಾಮಾನ್ಯ ಆಯ್ಕೆಗಳೆಲ್ಲವೂ ಈ ಮೊಬೈಲಿನಿಂದ ನೀವು ಪಡೆಯಬಹುದಾಗಿದೆ.

ತುಂಬಾ ತೆಳುವಾಗಿರುವ ಈ ಮೊಬೈಲ್ ಬಾರ್ ಫೋನ್ ವಿನ್ಯಾಸದಲ್ಲಿ ಮೂಡಿಬಂದಿದೆ. ಮನರಂಜನೆಗೆಂದು ಆಡಿಯೋ, ವಿಡಿಯೋ ಪ್ಲೇಯರ್ ನೀಡಲಾಗಿದೆ. ಎಫ್ ಎಂ ಮತ್ತು ಎಫ್ ಎಂ ಸ್ಕೆಡ್ಯೂಲಿಂಗ್ ಕೂಡ ಇದರಲ್ಲಿ ಸಾಧ್ಯವಾಗಲಿದೆ.

1.8 ಇಂಚಿನ ಸ್ಕ್ರೀನ್ ಮತ್ತು QCIF ಡಿಸ್ಪ್ಲೇ ಹೊಂದಿರುವ ಈ ಮೊಬೈಲಿನಲ್ಲಿ 1.3 ಮೆಗಾ ಪಿಕ್ಸಲ್ ಕ್ಯಾಮೆರಾ ಅಳವಡಿಸಲಾಗಿದೆ. ಜೊತೆಗೆ ಮೊಬೈಲ್ ಟ್ರ್ಯಾಕರ್ ಕೂಡ ಇದೆ. ವಿಶೇಷವಾಗಿ GPRS ಮತ್ತು WAP ಸೌಲಭ್ಯ ಒದಗಿಸಲಾಗಿದೆ. ಇನ್ನು ಮೆಮೊರಿ ಸಾಮರ್ಥ್ಯದ ವಿಷಯಕ್ಕೆ ಬಂದರೆ 16 ಜಿಬಿವರೆಗೂ ಮೆಮೊರಿ ವಿಸ್ತರಣಗೆ ಅವಕಾಶವನ್ನು ಈ ಮೊಬೈಲ್ ನಲ್ಲಿ ನೀಡಲಾಗಿದೆ.

ಆದರೆ ಈ ಇಂಟೆಕ್ಸ್ 1010 ನಿಯೋ ಮೊಬೈಲ್ ಬೆಲೆ ಇನ್ನೂ ತಿಳಿದುಬಂದಿಲ್ಲ. ಕೈಗೆಟುಕುವ ದರದಲ್ಲಿಯೇ ಈ ಮೊಬೈಲ್ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot