9,999 ರೂ.ದರದಲ್ಲಿ ಇಂಟೆಕ್ಸ್ ಆಕ್ವಾ 5.0 ಫಾಬ್ಲೆಟ್ ಬಿಡುಗಡೆ
2011 ರಲ್ಲಿ ಸ್ಯಾಮ್ಸಂಗ್ ಸಂಸ್ಥೆಯು ತನ್ನಯ 5.3 ಇಂಚಿನ ದೊಡ್ಡ ಪರದೆಯುಳ್ಳ ಗ್ಯಾಲಾಕ್ಸಿ ನೋಟ್ ಬಿಡುಗಡೆ ಮಾಡಿದ ಬಳಿಕ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ದರ್ಶಕ ಹೊಂದಿರುವ ಸ್ಮಾರ್ಟ್‌ಪೊನ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದಾಗಿ ಗ್ರಾಹಕರ ಬೇಡಿಕೆಯನ್ನು ನೀಗಿಸುವ ಸಲುವಾಗು ಜಾಗತಿಕ ಸ್ಮಾರ್ಟ್‌ಫೋನ್ ತಯಾರಕರುಗಳು ದೊಡ್ಡ ಗಾತ್ರದ ದರ್ಶಕ ಹೊಂದಿರುವ ನೂತನ ಮಾದರಿಯ ಅಂದರೆ ಸ್ಮಾರ್ಟ್‌ಫೋನ್ ಹಾಗೂ ಟ್ಯಾಬ್ಲೆಟ್ ಮಿಶ್ರಣದಂತಿರುವ ಫಾಬ್ಲೆಟ್‌ಗಳನ್ನು ಮಾರುಕಟ್ಟೆಗೆ ತರುತ್ತಿದ್ದಾರೆ.
ಇಂತಹ ಫಾಬ್ಲೆಟ್ ಮಾರುಕಟ್ಟೆಯಲ್ಲಿ ಜಾಗತಿಕವಾಗಿ ಸ್ಯಾಮ್ಸಂಗ್, ಹೆಚ್‌ಟಿಸಿ ಹಾಗೂ ಎಲ್‌ಜಿ ಅಂತಹ ಸಂಸ್ಥೆಗಳು ಪ್ರಬಲ ಪೈಪೋಟಿಯಲ್ಲಿ ತೊಡಗಿದ್ದರೆ, ಭಾರತೀಯ ಮಾರುಕಟ್ಟೆಯಲ್ಲಿ ಸ್ಥಳೀಯ ತಯಾರಕರುಗಳಾದ ಮೈಕ್ರೋಮ್ಯಾಕ್ಸ್, ಕಾರ್ಬನ್, ಸ್ಪೈಸ್, ವಿಕೆಡ್ ಲೀಕ್, ಝಿಂಕ್ ಹಾಗೂ ಐಬಾಲ್ ಸೇರಿದಂತೆ ಹಲವು ಸ್ಥಳೀಯ ಸಂಸ್ಥೆಗಳು ಪೈಪೋಟಿ ನಡೆಸುತ್ತಿವೆ. ಅಂದಹಾಗೆ ಈ ಸಾಲಿಗೆ ಇದೀಗ ಇಂಟೆಕ್ಸ್ ಟೆಕ್ನಾಲಜೀ ಸಂಸ್ಥೆಯು ಕೂಡ ಸೇರ್ಪಡೆಯಾಗಿದ್ದು ತನ್ನಯ ನೂತನ ಇಂಡೆಕ್ಸ್ ಆಕ್ವಾ 5.0 ಫಾಬ್ಲೆಟ್ ಅನ್ನು ರೂ. 9,999 ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಅಂಹಾಗೆ ಇದೀಗ ತಾನೆ ಮಾರುಕಟ್ಟೆ ಪ್ರವೇಶಿಸಿರುವ ನೂತನ ಫಾಬ್ಲೆಟ್ ಆದಂತಹ ಇಂಟೆಕ್ಸ ಆಕ್ವಾ 5.0 ಫಾಬ್ಲೆಟ್ ಮಾರುಕಟ್ಟೆಯಲ್ಲಿನ ಇತರೇ 5 ಇಂಚಿನ ಫಾಬ್ಲೆಟ್‌ಗಳಿಗೆ ಪೈಪೋಟಿ ನೀಡಲು ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಒಮ್ಮೆ ನೋಡಿ ಬರೋಣ.
ವಿಶೇಷತೆ
ದರ್ಶಕ: ಆಕ್ವಾ 5.0 ನಲ್ಲಿ 5 ಇಂಚಿನ ಮಲ್ಟಿ-ಟಚ್ ಕೆಪಾಸಿಟೀವ್ ಟಚ್‌ಸ್ಕ್ರೀನ್ ದರ್ಶಕ ಹಾಗೂ 800 x 480 ಪಿಕ್ಎಸ್ ರೆಸೆಲ್ಯೂಷನ್.
ಪ್ರೊಸೆಸರ್: ಡ್ಯುಯೆಲ್ ಕೋರ್ 1GHz ಪ್ರೊಸೆಸರ್.
ಆಪರೇಟಿಂಗ್ ಸಿಸ್ಟಂ: ಬಜೆಟ್ ಫಾಬ್ಲೆಟ್ ಆದ್ದರಿಂದ ಆಂಡ್ರಾಯ್ಡ್ 4.0 ಐಸಿಎಸ್ ಆಪರೇಟಿಂಗ್ ಸಿಸ್ಟಂ ನೀಡಲಾಗಿದೆ
ಕ್ಯಾಮೆರಾ: ಈ ವಿಚಾರದಲ್ಲಿ ಇಂಟೆಕ್ಸ್ ಆಕ್ವಾ 5.0 ಫಾಬಲೆಟ್‌ನಲ್ಲಿ ಆಟೋ ಫೋಸ್ ಹಾಗೂ ಎಲ್‌ಇಡಿ ಫ್ಲಾಷ್ ನೊಂದಿಗೆ 5MP ಕ್ಯಾಮೆರಾ ಹಂದಿದ್ದು ವಿಡಿಯೋ ಕರೆಗಾಗಿ ಮುಂಬದಿಯ 1.3MP ಕ್ಯಾಮೆರಾ ಹೊಂದಿದೆ.
ಮೆಮೊರಿ: 4GB ಆಂತರಿಕ ಮೆಮೊರಿ, 512MB RAM ನೀಡಲಾಗಿದ್ದು ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ 32GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.
ಕನೆಕ್ಟಿವಿಟಿ: ವೈ-ಫೈ, 3ಜಿ, ಬ್ಲೂಟೂತ್ 2.0 ಹಾಗೂ ಜಿಪಿಎಸ್ ನೀಡಲಾಗಿದೆ.
ಬ್ಯಾಟರಿ: 2,000 mAh ಬ್ಯಾಟರಿ ನೀಡಲಾಗಿದ್ದು ಬ್ಯಾಕಪ್ ಕುರಿತಾಗಿ ಯಾವುದೇ ಮಾಹಿತಿ ಲಭ್ಯವಿಲ್ಲ.
ಪ್ರಿ-ಲೋಡೆಡ್ ಆಪ್ಸ್
ಇಂಟೆಕ್ಸ್ ಆಕ್ವಾ 5.0 ಫಾಬ್ಲೆಟ್‌ನಲ್ಲಿ NQ ಆನ್ಟಿವೈರಸ್, ಫ್ಲಿಪ್‌ಕಾರ್ಟ್, ಇಂಡಿಯನ್ ರೈಲ್, ನಿಂಬಝ್, ಸ್ಕೈಪ್ ಸೇರಿದಂತೆ ಹಲವು ಜನಪ್ರಿಯ ಅಪ್ಲಿಕೇಷನ್‌ಗಳನ್ನು ನೀಡಲಾಗಿದೆ.
ಬೆಲೆ ಹಾಗೂ ಲಭ್ಯತೆ
ಖರೀದಿಸುವುದಾದರೆ ಇಂಟೆಕ್ಸ್ ಆಕ್ವಾ 5.0 ಫಾಬ್ಲೆಟ್ ಸಿಲ್ವರ್, ಬ್ಲಾಕ್ ಹಾಗೂ ಬ್ಲೂ ಕಲರ್‌ಗಳಲ್ಲಿ ರೂ. 9,999 ದರದಲ್ಲಿ ಲಭ್ಯವಿದೆ.


Click it and Unblock the Notifications









