ಅತೀ ಕಡಿಮೆ ಬೆಲೆಗೆ ಎರಡು ಸ್ಮಾರ್ಟ್ ಫೋನ್ ಲಾಂಚ್ ಮಾಡಿದ ಇನ್ ಟೆಕ್ಸ್..!
ಎಂಟ್ರಿ ಲೆವೆಲ್ ಸ್ಮಾರ್ಟ್ ಫೋನ್ ಗಳು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಇದೇ ಸಾಲಿಗೆ ಸೇರಿಕೊಳ್ಳಲಿದೆ ಇನ್ ಟೆಕ್ಸ್ ಆಕ್ವಾ ಜೆವೆಲ್ 2 ಮತ್ತು ಆಕ್ವಾ ಲಯನ್ಸ್ T1 ಸ್ಮಾರ್ಟ್ ಫೋನ್. ಈ ಎರಡು ಫೋನ್ ಗಳು 4G VoLTE ಸಪೋರ್ಟ್ ಮಾಡಲಿದೆ ಎನ್ನಲಾಗಿದೆ.

ರೂ. 6000ದ ಒಳಗೆ ಈ ಎರಡು ಸ್ಮಾರ್ಟ್ ಫೋನ್ ಗಳು ಲಭ್ಯವಿರಲಿದ್ದು, ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಬಜೆಟ್ ಬೆಲೆಯಲ್ಲಿ ಉತ್ತಮ ಫೋನ್ ಗಳಿದು ಎನ್ನಲಾಗಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿರುವ ಫೋನ್ ಗಳಿಗೆ ಸ್ಪರ್ಧೆಯನ್ನು ನೀಡಲಿದೆ.

ಇನ್ ಟೆಕ್ಸ್ ಆಕ್ವಾ ಜೆವೆಲ್ 2 ಸ್ಮಾರ್ಟ್ ಫೋನ್:
ಇನ್ ಟೆಕ್ಸ್ ಆಕ್ವಾ ಜೆವೆಲ್ 2 ಸ್ಮಾರ್ಟ್ ಫೋನಿನಲ್ಲಿ 5 ಇಂಚಿನ HD ಡಿಸ್ ಪ್ಲೇಯನ್ನು ಹೊಂದಿದ್ದು, 1,3GHz ಕ್ವಾಡ್ ಕೋರ್ ಸೆರೆಡ್ರಮ್ ಪ್ರೋಸೆಸರ್ ಅನ್ನು ಒಳಗೊಂಡಿದೆ. 2GB RAM ಮತ್ತು 16GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದ್ದು, 32GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.
ಹಿಂಭಾಗದಲ್ಲಿ 8MP ಕ್ಯಾಮೆರಾವನ್ನು ಕಾಣಬಹುದಾಗಿದೆ LED ಫ್ಲಾಷ್ ಲೈಟ್ ಅನ್ನು ಅಳವಡಿಸಲಾಗಿದ್ದು, 5MP ಕ್ಯಾಮೆರಾವನ್ನು ಸೆಲ್ಫಿಗಾಗಿ ನೀಡಲಾಗಿದೆ. ಇದಲ್ಲದೇ 4G VoLTE ಸಪೋರ್ಟ್ ಮಾಡಲಿದೆ ಎನ್ನಲಾಗಿದೆ. 2500mAh ಬ್ಯಾಟರಿಯನ್ನು ಅಳವಡಿಸಲಾಗಿದೆ.

ಇನ್ ಟೆಕ್ಸ್ ಆಕ್ವಾ ಲಯನ್ಸ್ T1 ಸ್ಮಾರ್ಟ್ ಫೋನ್:
ಆಕ್ವಾ ಲಯನ್ಸ್ T1 ಸ್ಮಾರ್ಟ್ ಫೋನ್ 5.2 QHD ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, 1,3GHz ಕ್ವಾಡ್ ಕೋರ್ ಸೆರೆಡ್ರಮ್ ಪ್ರೋಸೆಸರ್ ಅನ್ನು ಒಳಗೊಂಡಿದೆ. 1 GB RAM ಮತ್ತು 8 GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದ್ದು, 62 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.
ಫೋನಿನ ಹಿಂಭಾಗದಲ್ಲಿ 8MP ಕ್ಯಾಮೆರಾವನ್ನು ಕಾಣಬಹುದಾಗಿದೆ LED ಫ್ಲಾಷ್ ಲೈಟ್ ಅನ್ನು ಅಳವಡಿಸಲಾಗಿದ್ದು, 5MP ಕ್ಯಾಮೆರಾವನ್ನು ಸೆಲ್ಫಿಗಾಗಿ ನೀಡಲಾಗಿದೆ. ಇದಲ್ಲದೇ 4G VoLTE ಸಪೋರ್ಟ್ ಮಾಡಲಿದೆ ಎನ್ನಲಾಗಿದೆ. 2700mAh ಬ್ಯಾಟರಿಯನ್ನು ಅಳವಡಿಸಲಾಗಿದೆ.

ಬೆಲೆ:
ಇನ್ ಟೆಕ್ಸ್ ಆಕ್ವಾ ಜೆವೆಲ್ 2 ಬೆಲೆ ರೂ.5899 ಆಗಲಿದ್ದು, ಎರಡು ಬಣ್ಣದಲ್ಲಿ ದೊರೆಯಲಿದೆ. ಮತ್ತು ಆಕ್ವಾ ಲಯನ್ಸ್ T1 ಸ್ಮಾರ್ಟ್ ಫೋನ್ ಬೆಲೆ ರೂ. 4,999 ಆಗಲಿದ್ದು, ಮೂರು ಬಣ್ಣದಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಇದಲ್ಲದೇ ಈ ಫೋನ್ ಗಳೊಂದಿಗೆ ಜಿಯೋ 25GB ಡೇಟಾ ಆಫರ್ ಸಹ ದೊರೆಯಲಿದೆ.


Click it and Unblock the Notifications








