ಇಂಟೆಕ್ಸ್ ಆಕ್ವಾ ಸ್ಮಾರ್ಟ್‌ಫೋನ್ ರೂ 5,990 ಮಾರುಕಟ್ಟೆಗೆ
ಇಂಟೆಕ್ಸ್ ಸ್ಮಾರ್ಟ್‌ಫೋನ್ ಕಂಪೆನಿಯಲ್ಲ ಹೆಚ್ಚೇನೂ ಹೆಸರು ಮಾಡಲಿಲ್ಲ ಎಂದೇ ಹೇಳಬಹುದು. ಆದರೆ ಮಾರುಕಟ್ಟೆಯಲ್ಲಿ ತನ್ನದೇ ಫ್ಲ್ಯಾಗ್‌ಶಿಪ್‌ನ ಫೋನ್‌ಗಳನ್ನು ಲಾಂಚ್ ಮಾಡುವ ತವಕದಲ್ಲಿ ಕಂಪೆನಿ ಹೆಚ್ಚು ಉತ್ಸುಕವಾಗಿದೆ. ನಿಯಮಿತವಾಗಿ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುವ ಮೂಲಕ ತನ್ನದೇ ಹೆಸರನ್ನು ಮಾರುಕಟ್ಟೆಯಲ್ಲಿ ಶಾಶ್ವತವಾಗಿಸುವ ತವಕದಲ್ಲಿ ಕಂಪೆನಿ ಇರುವುದರಿಂದ ಒಂದರ ಹಿಂದೆ ಒಂದರಂತೆ ಫೋನ್‌ಗಳ ಲಾಂಚಿಂಗ್ ಅನ್ನು ಕಂಪೆನಿ ಮಾಡುತ್ತಿದೆ.
ಇಂದು ಬೆಂಗಳೂರಿನಲ್ಲಿ ನಡೆದ ಈವೆಂಟ್ ಒಂದರಲ್ಲಿ, ಕಂಪೆನಿ ತನ್ನ ಆಕ್ವಾ ಸ್ಟೈಲ್ ಸ್ಮಾರ್ಟ್‌ಫೋನ್ ಅನ್ನು ಮಿತರದಲ್ಲಿ ಅಂದರೆ ರೂ 5,990 ಕ್ಕೆ ಬಿಡುಗಡೆ ಮಾಡಿದೆ. ಇದರೊಂದಿಗೆ ಕಂಪೆನಿಯು ಕನ್ನಡ ಚಿತ್ರರಂಗದ ಕಿಚ್ಚ ಸುದೀಪ್‌ರನ್ನು ತನ್ನ ಫೋನ್‌ಗಳ ರಾಯಭಾರಿಯಾಗಿ ಒಂದು ವರ್ಷಕ್ಕೆ ನೇಮಿಸಿಕೊಂಡಿದೆ. ಕರ್ನಾಟಕದಲ್ಲಿ ಫೋನ್‌ನ ಜಾಹಿರಾತಿನಲ್ಲಿ ಇನ್ನು ಮುಂದೆ ಸುದೀಪ್ ಅಭಿಮಾನಿಗಳಿಗೆ ಸುದೀಪ್‌ರ ದರುಶನವಾಗಲಿದೆ.
ಇಂಟೆಕ್ಸ್‌ನಂತಹ ದೊಡ್ಡ ಕಂಪೆನಿ ಜಾಹೀರಾತಿನಲ್ಲಿ ನಾನು ಭಾಗವಹಿಸುತ್ತಿರುವುದು ಮತ್ತು ಫೋನ್‌ನ ರಾಯಭಾರಿಯಾಗಿರುವುದು ನನಗೆ ಹೆಚ್ಚಿನ ಸಂತಸವನ್ನುಂಟು ಮಾಡುತ್ತಿದೆ. ಫೋನ್ ಕೂಡ ಗ್ರಾಹಕರ ಮೆಚ್ಚುಂತಹ ರೀತಿಯಲ್ಲಿ ಮೂಡಿ ಬಂದಿದ್ದು ಬೆಲೆ, ವೈಶಿಷ್ಟ್ಯ ಎರಡೂ ಅದ್ಭುತವಾಗಿದೆ ಎಂದು ಕಿಚ್ಚ ಸುದೀಪ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾರುಕಟ್ಟೆ ನಿರ್ದೇಶಕರಾದ ಕೇಶವ್ ಬನ್ಸಾಲ್ ಮಾತನಾಡುತ್ತಾ, ಕಿಚ್ಚ ಸುದೀಪ್‌ರಂತಹ ಸ್ಟೈಲ್ ಕಿಂಗ್‌ರನ್ನು ನಮ್ಮ ಫೋನ್ ರಾಯಭಾರಿಯಾಗಿ ನೇಮಿಸಿಕೊಳ್ಳುತ್ತಿರುವುದು ನಮ್ಮ ಭಾಗ್ಯವಾಗಿದ್ದು ಇದರಿಂದ ಕರ್ನಾಟಕದ ಜನತೆಯೊಂದಿಗೆ ನಾವು ಹೆಚ್ಚು ಸಂಪರ್ಕದಲ್ಲಿರಲು ಸಹಾಯಕವಾಗಿದೆ ಮತ್ತು ಫೋನ್‌ನ ಮಾರುಕಟ್ಟೆಗೂ ಸುಲಭ ಅವಕಾಶವನ್ನು ಒದಗಿಸಿಕೊಡಲಿದೆ ಎಂದು ಅವರು ತಿಳಿಸಿದ್ದಾರೆ.

#1
ಹೊಸ ಗೂಗಲ್ ಆಧಾರಿತ ಕಿಟ್‌ಕ್ಯಾಟ್ ಓಎಸ್ ಫೋನ್‌ನಲ್ಲಿ ಚಾಲನೆಯಾಗುತ್ತಿದ್ದು, ಇದು 4 ಇಂಚಿನ WVGA IPS ಡಿಸ್‌ಪ್ಲೇಯೊಂದಿಗೆ ಬಂದಿದೆ. 800x480 ಪಿಕ್ಸೆಲ್ ರೆಸಲ್ಯೂಶನ್ ಡಿವೈಸ್‌ನಲ್ಲಿದೆ. ಈ ಡ್ಯುಯಲ್ ಸಿಮ್ ಬೆಂಬಲವುಳ್ಳ ಫೋನ್ 1.3GHz ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿದ್ದು 1 ಜಿಬಿ RAM ಅನ್ನು ಹೊಂದಿದೆ.

#2
ಫೋನ್‌ನ ಆಂತರಿಕ ಸಂಗ್ರಹಣಾ ಸಾಮರ್ಥ್ಯ 4 ಜಿಬಿಯಾಗಿದ್ದು ಫೋನ್‌ನ ಕ್ಯಾಮೆರಾ ಸಾಮರ್ಥ್ಯ 5MP ಆಗಿದೆ. ಫೋನ್ ಮುಂಭಾಗ ಕ್ಯಾಮೆರಾವನ್ನು ಕೂಡ ಹೊಂದಿದ್ದು ಇದು 2MP ಆಗಿದೆ. ನಿಮಗೆ ಸೆಲ್ಫೀ ಮತ್ತು ವೀಡಿಯೊ ಚಾಟಿಂಗ್‌ಗೆ ನೆರವು ನೀಡುವ ಎಲ್ಲಾ ಸೌಲಭ್ಯವನ್ನು ಈ ಮುಂಭಾಗ ಕ್ಯಾಮೆರಾ ಒದಗಿಸಿದೆ. ನಿಮಗೆ ಇದರ ಆಂತರಿಕ ಮೆಮೊರಿ ಶಕ್ತಿಯನ್ನು 32 ಜಿಬಿ ಗೆ ವಿಸ್ತರಿಸಬಹುದಾಗಿದೆ. ಫೋನ್ 3 ಜಿ ಸಂಪರ್ಕವನ್ನು ಕೂಡ ಒದಗಿಸುತ್ತಿದೆ.

#3
ಫೋನ್ 1400mAh ಬ್ಯಾಟರಿಯನ್ನು ಹೊಂದಿದ್ದು, ಸಂಪರ್ಕ ಅಂಶಗಳೆಂದರೆ 3 ಜಿ, ಡ್ಯುಯಲ್ ಸಿಮ್, ಬ್ಲ್ಯೂಟೂತ್, ವೈ-ಫೈ ಮತ್ತು ಎಫ್‌ಎಮ್ ರೇಡಿಯೊ ಆಗಿದೆ. ಫೋನ್ ಎರಡು ಬಣ್ಣಗಳಲ್ಲಿ ಲಭ್ಯವಿದ್ದು ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ದೊರೆಯಲಿದೆ. ಇದು ಉಚಿತ ಫ್ಲಿಪ್ ಕವರ್‌ನೊಂದಿಗೆ ಬರುತ್ತಿದ್ದು ಫೋನ್ ಬೆಲೆ ರೂ 5,990 ಆಗಿದೆ. ಇಂಟೆಕ್ಸ್ ರೀಟೈಲ್ ಶಾಪ್, ಹೈಪರ್‌ಮಾರ್ಕೆಟ್ಸ್ ಮತ್ತು ಇಕಾಮರ್ಸ್ ಪೋರ್ಟಲ್‌ಗಳಲ್ಲಿ ಈ ಫೋನ್ ಅನ್ನು ನೀವು ಖರೀದಿಸಬಹುದಾಗಿದೆ.

#4
ಇಂದು ಬೆಂಗಳೂರಿನಲ್ಲಿ ನಡೆದ ಈವೆಂಟ್ ಒಂದರಲ್ಲಿ, ಕಂಪೆನಿ ತನ್ನ ಆಕ್ವಾ ಸ್ಟೈಲ್ ಸ್ಮಾರ್ಟ್‌ಫೋನ್ ಅನ್ನು ಮಿತರದಲ್ಲಿ ಅಂದರೆ ರೂ 5,990 ಕ್ಕೆ ಬಿಡುಗಡೆ ಮಾಡಿದೆ. ಇಂಟೆಕ್ಸ್‌ನಂತಹ ದೊಡ್ಡ ಕಂಪೆನಿ ಜಾಹೀರಾತಿನಲ್ಲಿ ನಾನು ಭಾಗವಹಿಸುತ್ತಿರುವುದು ಮತ್ತು ಫೋನ್‌ನ ರಾಯಭಾರಿಯಾಗಿರುವುದು ನನಗೆ ಹೆಚ್ಚಿನ ಸಂತಸವನ್ನುಂಟು ಮಾಡುತ್ತಿದೆ. ಫೋನ್ ಕೂಡ ಗ್ರಾಹಕರ ಮೆಚ್ಚುಂತಹ ರೀತಿಯಲ್ಲಿ ಮೂಡಿ ಬಂದಿದ್ದು ಬೆಲೆ, ವೈಶಿಷ್ಟ್ಯ ಎರಡೂ ಅದ್ಭುತವಾಗಿದೆ ಎಂದು ಕಿಚ್ಚ ಸುದೀಪ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications








