Home
ಮೊಬೈಲ್

ಫುಲ್ ಪ್ಯೂವ್ ಡಿಸ್ ಪ್ಲೇ, ಫೇಸ್ ಅನ್ ಲಾಕ್ ಇರುವ ಫೋನ್ ಬೆಲೆ ಕೇಳಿದ್ರೆ ಶಾಕ್..!

By Srinidhi

ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ವಿದೇಶಿಯ ಕಂಪನಿಗಳ ಆರ್ಭಟವು ಜೋರಾಗಿದೆ. ಈ ಹಿನ್ನಲೆಯಲ್ಲಿ ದೇಶೀಯ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳು ಸಾಕಷ್ಟು ದೊಡ್ಡ ಪ್ರಮಾಣದ ಸ್ಪರ್ಧೇಯನ್ನು ಎದುರಿಸಬೇಕಾಗಿದೆ. ಅದಕ್ಕಾಗಿ ದೇಶೀಯ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ಇಂಟೆಕ್ಸ್, ಎರಡು ಆಕರ್ಷಕ ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಇವುಗಳ ಮೂಲಕ ಮಾರುಟಕ್ಟೆಯಲ್ಲಿ ಇರುವ ಸ್ಪರ್ಧೆಗೆ ನೇರಾ ಉತ್ತರವನ್ನು ನೀಡಲು ಮುಂದಾಗಿದೆ.

ಫುಲ್ ಪ್ಯೂವ್ ಡಿಸ್ ಪ್ಲೇ, ಫೇಸ್ ಅನ್ ಲಾಕ್ ಇರುವ ಫೋನ್ ಬೆಲೆ ಕೇಳಿದ್ರೆ ಶಾಕ್

ದೇಶೀಯ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ಇಂಟೆಕ್ಸ್ ಒಟ್ಟು ಎರಡು ಸ್ಮಾರ್ಟ ಪೋನ್ ಗಳನ್ನು ಪರಿಚಯ ಮಾಡಿದ್ದು, ಇನ್ಫಿ 33 ಸ್ಮಾರ್ಟ್ ಫೋನ್ ಮತ್ತು ಇನ್ಫಿ 3 ಸ್ಮಾರ್ಟ್ ಫೋನ್ ಮಾರುಟಕ್ಟೆಯಲ್ಲಿ ಕಾಣಿಸಿಕೊಂಡಿದ್ದು, ಇದು ಶಿಯೋಮಿ ಸೇರಿದಂತೆ ಬಜೆಟ್ ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡುವ ಸ್ಮಾರ್ಟ್ ಫೋನ್ ಗಳಿಗೆ ಭಾರೀ ಪ್ರಮಾಣದಲ್ಲಿ ಸೆಡ್ಡು ಹೊಡೆಯಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಈ ಎರಡು ಸ್ಮಾರ್ಟ್ ಫೋನ್ ಗಳ ಕುರಿತ ಮಾಹಿತಿಯೂ ಮುಂದಿದೆ.

ಇನ್ಫಿ 33 ಸ್ಮಾರ್ಟ್ ಪೋನ್ ವಿಶೇಷತೆ:

ಇನ್ಫಿ 33 ಸ್ಮಾರ್ಟ್ ಪೋನ್ ವಿಶೇಷತೆ:

ಇನ್ಫಿ 33 ಸ್ಮಾರ್ಟ್ ಫೋನಿನಲ್ಲಿ 5.34 ಇಂಚಿಮನ FWVGA+ ಗುಣಮಟ್ಟದ ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. 1.3GHz ಕ್ವಾಡ್ ಕೋರ್ ಪ್ರೋಸೆಸರ್ ಅನ್ನು ನೀಡಲಾಗಿದ್ದು, 1GB RAM ನೊಂದಿಗೆ 8GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಇಲ್ಲದೇ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ಉತ್ತಮ ಕ್ಯಾಮೆರಾ:

ಉತ್ತಮ ಕ್ಯಾಮೆರಾ:

ಇನ್ಫಿ 33 ಸ್ಮಾರ್ಟ್ ಫೋನಿನಲ್ಲಿ 5MP ಹಿಂಭಾಗದ ಕ್ಯಾಮೆರಾದೊಂದಿಗೆ ಡ್ಯುಯಲ್ ಎಲ್ಇಡಿ ಫ್ಲ್ಯಾಶ್ ಲೈಟ್ ಕಾಣಬಹುದು ಮತ್ತು 5MP ಸೆಲ್ಫಿ ಕ್ಯಾಮೆರಾದೊಂದಿಗೆ 3000mAh ಬ್ಯಾಟರಿಯನ್ನು ಅಳವಡಿಲಾಗಿದೆ. ಆಂಡ್ರಾಯ್ಡ್ ನೌಗಾಟ್ ದಲ್ಲಿ ಕಾರ್ಯನಿರ್ವಹಿಸಲಿದೆ.

ಇನ್ಫಿ 3 ಸ್ಮಾರ್ಟ್ ಪೋನ್ ವಿಶೇಷತೆ:

ಇನ್ಫಿ 3 ಸ್ಮಾರ್ಟ್ ಪೋನ್ ವಿಶೇಷತೆ:

ಇನ್ಫಿ 3 ಸ್ಮಾರ್ಟ್ ಪೋನ್ ಆಂಡ್ರಾಯ್ಡ್ ಗೋನಲ್ಲಿ ಕಾರ್ಯನಿರ್ವಹಿಸಲಿದ್ದು, ಇದರಲ್ಲಿ 4.95 ಇಂಚಿನ FWVGA+ ಗುಣಮಟ್ಟದ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, 1.1GHz ಕ್ವಾಡ್ ಕೋರ್ ಪ್ರೋಸೆಸರ್, 1GB RAM ಮತ್ತು 5MP ಹಿಂಬದಿ ಕ್ಯಾಮೆರಾವನ್ನು ನೀಡಲಾಗಿದೆ. ಇದಲ್ಲದೇ 2000mAh ಬ್ಯಾಟರಿ ಸಹ ಇದೆ. ಆಂಡ್ರಾಯ್ಡ್ 8.1 ಓರಿಯೋ (ಗೊ ಆವೃತ್ತಿ)ಯಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

ಇನ್ನು ಇದೆ:

ಇನ್ನು ಇದೆ:

ಈ ಎರಡು ಸ್ಮಾರ್ಟ್ ಫೋನ್ ಗಳಲ್ಲಿ ಡ್ಯುಯಲ್ ಸಿಮ್ (ನ್ಯಾನೋ) ಹಾಕಿಕೊಳ್ಳಬಹುದಾಗಿದ್ದು, ಫ್ಯೂಲ್ ವ್ಯೂ ಡಿಸ್‌ಪ್ಲೇ ವಿನ್ಯಾಸವನ್ನು ಹೊಂದಿವೆ, ಫೇಸ್ ಅನ್‌ಲಾಕ್, ಪ್ರೈವಸಿ ಸಿಸ್ಟಂ, ಆ್ಯಪ್ ಫ್ರೀಜರ್, ಸೇರಿದೆತೆ ಹಲವು ವಿಶೇಷೆಗಳನ್ನು ಇದರಲ್ಲಿ ಕಾಣಬಹುದು.

ಬೆಲೆ:

ಬೆಲೆ:

ಬಜೆಟ್ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಹೊಸ ಸ್ಮಾರ್ಟ್ ಫೋನ್ ಗಳನ್ನು ಕಾಣಬಹುದಾಗಿರುವ ಹಿನ್ನಲೆಯಲ್ಲಿ ಇಂಟೆಲ್ ಸರ್ಧಾತ್ಮಕ ಬೆಲೆಗೆ ತನ್ನ ಎರಡು ಸ್ಮಾರ್ಟ್ ಫೋನ್ ಗಳನ್ನು ಮಾರಾಟ ಮಾಡಲಿದೆ ಎನ್ನಲಾಗಿದೆ. ಇನ್ಫಿ 33 ಸ್ಮಾರ್ಟ್ ಫೋನ್ ಅನ್ನು ರೂ.5,049ಕ್ಕೆ ಮಾರಾಟ ಮಾಡುತ್ತಿದ್ದು, ಇದೇ ಮಾದರಿಯಲ್ಲಿ ರೂ. 4,649ಕ್ಕೆ ಇನ್ಫಿ 3 ಸ್ಮಾರ್ಟ್ ಫೋನ್ ಅನ್ನು ಸೇಲ್ ಮಾಡುತ್ತಿದೆ. ಕಡಿಮೆ ಬೆಲೆಗೆ ಉತ್ತಮ ಫೋನ್ ಬೇಕು ಎನ್ನುವವರು ಇದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Intex Infie 33, Infie 3 With 18:9 'Full View' Display Panels. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+