Home
ಮೊಬೈಲ್

ಇಂಟೆಕ್ಸ್‌ ಇಂಡೀ 5 ಸ್ಮಾರ್ಟ್‌ಫೋನ್ ಕೇವಲ 4,999 ರೂ.ಗೆ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ

By Gizbot Bureau

ಭಾರತ ಹಲವು ಭಾಷೆಗಳ, ವಿಭಿನ್ನತೆಯಲ್ಲಿ ಏಕತೆ ಇರುವ ದೇಶ. ಹಾಗಾಗಿ ಭಾರತೀಯರಿಗೆ ಸರಿಹೊಂದುವ ಫೋನ್ ಒಂದನ್ನು ಅವರ ಮಾತೃಭಾಷೆಯಲ್ಲಿ ತಯಾರಿಸುವುದೆಂದರೆ ಅಷ್ಟು ಸುಲಭದ ಮಾತಲ್ಲ. ಇಂಗ್ಲೀಷ್ ಅರಿಯದ ಮಂದಿ ಕೂಡ ಫೋನ್ ಬಳಸಬೇಕು, ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂಬುದು ನಮ್ಮ ಪ್ರಧಾನಿಯ ಕನಸು.

ಬಹುಶ್ಯಃ ಅದೇ ಕಾರಣಕ್ಕೋ ಏನೋ ಭಾರತೀಯ ಮೊಬೈಲ್ ತಯಾರಿಕಾ ಸಂಸ್ಥೆ ಹೊಸ ಪ್ರಯತ್ನಕ್ಕೆ ಮುನ್ನುಡಿ ಇಟ್ಟಿದೆ ಮತ್ತು ಭಾರತದ ಪ್ರಮುಖ 22 ಭಾಷೆಯನ್ನು ಬೆಂಬಲಿಸುವ ಫೋನ್ ಬಿಡುಗಡೆಗೆ ಸನ್ನದ್ಧವಾಗಿದೆ. ದೇಶೀಯ ಹ್ಯಾಂಡ್ ಸೆಟ್ ತಯಾರಿಕಾ ಕಂಪೆನಿ ಇಂಟೆಕ್ಸ್ ಟೆಕ್ನಾಲಜೀಸ್ ತನ್ನ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳ ಬಿಡುಗಡೆಯ ಸರಣಿಯನ್ನು ಮುಂದುವರಿಸಿದೆ. ಫ್ಲಿಪ್ ಕಾರ್ಟ್ ನಲ್ಲಿ ಎಕ್ಸ್ ಕ್ಲೂಸೀವ್ ಆಗಿ ಇಂಡೀ 5 ಫೋನನ್ನು 4,999 ರುಪಾಯಿ ಬೆಲೆಗೆ ಬಿಡುಗಡೆಗೊಳಿಸಿದೆ.

ಇಂಟೆಕ್ಸ್‌ ಇಂಡೀ 5 ಸ್ಮಾರ್ಟ್‌ಫೋನ್ 4,999 ರೂ.ಗೆ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ

ಇಂಡೀ 5 4ಜಿ-Volte ಸ್ಮಾರ್ಟ್ ಫೋನ್ ಆಗಿದ್ದು 1.25GHz ಕ್ವಾರ್ಡ್ –ಕೋರ್ ಪ್ರೊಸೆಸರ್ ನ್ನು ಹೊಂದಿದೆ ಮತ್ತು ಆಂಡ್ರಾಯಡ್ ನಗಟ್ ಆಪರೇಟಿಂಗ್ ಸಿಸ್ಟಮ್ ಮುಖಾಂತರ ರನ್ ಆಗುತ್ತದೆ.

ಎರಡು ಸಿಮ್ ಗಳನ್ನು ಬಳಸಲು ಅವಕಾಶ ನೀಡುವ ಈ ಫೋನ್ 5ಇಂಚಿನ HD IPS ಸೆಲ್ ಡಿಸ್ಪ್ಲೇಯನ್ನು ಹೊಂದಿದ್ದು 2.5Dನಲ್ಲಿ ಬಾಗಿದ ಆಕಾರವನ್ನು ಹೊಂದಿದೆ. ಸ್ಕ್ರೀನ್ ನ್ನು ಡ್ರ್ಯಾಗನ್ ಟ್ರಯಲ್ ಗ್ಲಾಸ್ ನ್ನು ಹೊಂದಿದೆ. ಇಂಡೀ 5 2ಜಿಬಿ ಮೆಮೊರಿ ಮತ್ತು 16ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಮೈಕ್ರೋ ಎಸ್ ಡಿ ಕಾರ್ಡ್ ಮುಖಾಂತರ ಸ್ಟೋರೇಜ್ ನ್ನು 128ಜಿಬಿ ವರೆಗೂ ಹಿಗ್ಗಿಸಿಕೊಳ್ಳಬಹುದಾದ ಅವಕಾಶ ಬಳಕೆದಾರರಿಗೆ ಇದೆ.

ಕ್ಯಾಮರಾ ವಿಚಾರವನ್ನು ಹೇಳುವುದೇ ಆದರೆ ಸೆಲ್ಫೀ ತೆಗೆದುಕೊಳ್ಳಲು 8ಎಂಪಿ ಕ್ಯಾಮರಾ ಬೆಂಬಲವಿದ್ದು ಆಟೋ ಫ್ಲ್ಯಾಶ್ ಇದೆ. ಇನ್ನುಹಿಂಭಾಗದಲ್ಲೂ ಕೂಡ 8ಎಂಪಿ ಕ್ಯಾಮರಾವಿದ್ದು ಎಲ್ ಇಡಿ ಫ್ಲಾಶ್ ಇದೆ. ಇಂಡೀ5 ಫೋನ್ 4000 mAh ನ ಬ್ಯಾಟರಿಯನ್ನು ಹೊಂದಿದೆ.

ಇಂಟೆಕ್ಸ್‌ ಇಂಡೀ 5 ಸ್ಮಾರ್ಟ್‌ಫೋನ್ 4,999 ರೂ.ಗೆ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ

ಕನೆಕ್ಟಿವಿಟಿ ವಿಚಾರದಲ್ಲಿ WLAN, ಜಿಪಿಎಸ್, ಬ್ಲೂಟೂತ್ ವಿ 4.0, 3.5ಎಂಎಂ ಜಾಕ್ ಮತ್ತು OTG ಬೆಂಬಲವಿದೆ. ಇಂಡೀ5 ಸ್ವಿಫ್ಟ್ ಕೀಬೋರ್ಡ್ ಹೊಂದಿದ್ದು ಇದು ಭಾರತದ 22 ಪ್ರಮುಖ ಭಾಷೆಗಳಿಗೆ ಬೆಂಬಲ ನೀಡುತ್ತದೆ. ಜೊತೆಗೆ 100 ಅಂತರಾಷ್ಟ್ರೀಯ ಭಾಷೆಗಳನ್ನೂ ಪ್ರೊತ್ಸಾಹಿಸುತ್ತದೆ ಎಂದು ಕಂಪೆನಿ ತಿಳಿಸಿದೆ. ಇದೆಲ್ಲದರ ಜೊತೆಗೆ QR ಕೋಡ್ ಸ್ಕ್ಯಾನರ್, ಪ್ರೀ ಇನ್ಸ್ಟಾಲ್ಡ್ ಮ್ಯೂಸಿಕ್ ಸ್ಟ್ರೀಮಿಂಗ್ ಮತ್ತು ವೀಡಿಯೋ ಸ್ಟ್ರೀಮಿಂಗ್ ಗಳಿದೆ ಉದಾಹರಣೆಗೆ ಗಾನಾ ಮತ್ತು ಅಮೇಜಾನ್ ಪ್ರೈಮ್ ವೀಡಿಯೋಗಳು ಪ್ರೀ ಇನ್ಸ್ಟಾಲ್ ಆಘಿದೆ. ಕಪ್ಪು ಬಣ್ಣದ ಆವೃತ್ತಿಯಲ್ಲಿ ಮೊಬೈಲ್ ಲಭ್ಯವಾಗುತ್ತದೆ.

ಇಂಡೀ 5 ಬಿಡುಗಡೆಯ ಬಗ್ಗೆ ಮಾತನಾಡಿರುವ ಇಂಟೆಕ್ಸ್ ಟೆಕ್ನಾಲಜಿ ಕಂಪೆನಿಯ ಡೈರೆಕ್ಟರ್ ಆಗಿರುವ ನಿಧಿ ಮಾರ್ಕಾಂಡೇ ಬದಲಾಗುತ್ತಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಇಂಡೀ5 ಅತ್ಯಂತ ಕಡಿಮೆ ಬೆಲೆಯ ಅತ್ಯುತ್ತಮ ಫೋನ್ ಆಗಿದೆ. ಬಳಕೆದಾರರ ಅಗತ್ಯತೆ ಮತ್ತು ಬೇಡಿಕೆಗಳಿಗೆ ಅನುಸಾರವಾಗಿ ಈ ಫೋನ್ ತಯಾರಾಗಿದೆ. ಈ ಫೋನ್ ಬಳಕೆದಾರರಿಗೆ ತಮ್ಮ ಮಾತೃಭಾಷೆಯನ್ನು ಅನುಭವಿಸಲು ಅವಕಾಶ ನೀಡುತ್ತದೆ. ಈ ನಿಟ್ಟಿನಲ್ಲಿ ಇಂಡೀ5 ಬಳಕೆದಾರರ ಮನಸ್ಸನ್ನು ತಲುಪುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

ಆದರೆ ಎಷ್ಟರಮಟ್ಟಿಗೆ ಇಂಡೀ5 ಗ್ರಾಹಕರ ಮನಸೆಳೆಯುವಲ್ಲಿ ಯಶಸ್ವಿಯಾಗಲಿದೆ ಎಂಬುದನ್ನು ಕಾದುನೋಡಬೇಕು.

Best Mobiles in India

English summary
Intex launches Flipkart exclusive Indie 5, priced at Rs 4,999. to know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+