Subscribe to Gizbot

ಇಂಟೆಕ್ಸ್‌ನಿಂದ ನ್ಯೂ ಆಕ್ವಾ ಸ್ಟೈಲ್ ಪ್ರೊ ರೂ 6,990 ಕ್ಕೆ

Written By:

ಸ್ಮಾರ್ಟ್‌ಫೋನ್‌ಗಳ ಅತ್ಯಾಧುನಿಕ ವಿಶೇಷತೆ ಮತ್ತು ಅದನ್ನು ಬಳಸು ಬಳಕೆದಾರರ ಸಂಖ್ಯೆ ಹೆಚ್ಚುತ್ತಿರುವಂತೆ ಸಣ್ಣ ದರದ ಫೋನ್‌ನಿಂದ ಹಿಡಿದು ದುಬಾರಿ ಬೆಲೆಯ ಫೋನ್‌ವರೆಗೆ ಫೋನ್ ಪ್ರಿಯರು ವಿವಿಧ ಫೋನ್‌ಗಳ ಪ್ರೇಮಿಗಳಾಗುತ್ತಿದ್ದಾರೆ.

ಇನ್ನು ಫೋನ್ ಅನ್ನು ತಯಾರಿಸುವ ಕಂಪೆನಿಗಳೂ ಕೂಡ ಅತಿ ವಿಶಿಷ್ಟ ಫೀಚರ್‌ಗಳನ್ನು ತಮ್ಮ ತಯಾರಿಯ ಫೋನ್‌ಗಳಲ್ಲಿ ಅಳವಡಿಸುವ ಮೂಲಕ ಗ್ರಾಹಕರಲ್ಲಿ ಒಂದು ರೀತಿಯ ಮಿಂಚನ್ನು ಉತ್ಪತ್ತಿ ಮಾಡುತ್ತಿದ್ದಾರೆ. ಕಡಿಮೆ ದರದಲ್ಲಿ ತಮ್ಮ ಫೋನ್‌ಗಳನ್ನು ಲಾಂಚ್ ಮಾಡುವ ಮೂಲಕ ಖರೀದಿಸುವವರಲ್ಲಿ ಒಂದು ರೀತಿಯ ಉತ್ಸಾಹವನ್ನು ಉತ್ಪತ್ತಿ ಮಾಡುತ್ತಿದ್ದಾರೆ.

ಬಳಕೆದಾರರಿಗೆ ಆಕ್ವಾ ಸ್ಟೈಲ್ ಪ್ರೊ ಜಾಕ್‌ಪಾಟ್ ಫೋನ್

ಈಗ ಇದೇ ವಿಧಾನವನ್ನು ಅನುಸರಿಸಿಕೊಂಡು ಇಂಟೆಕ್ಸ್ ಕಂಪೆನಿ ಅನುಷ್ಕಾ ಶೆಟ್ಟಿ ರಾಯಭಾರತ್ವದಲ್ಲಿ ನ್ಯೂ ಆಕ್ವಾ ಶ್ರೇಣಿಯ ಸ್ಮಾರ್ಟ್‌ಫೋನ್ ಆದ ಆಕ್ವಾ ಸ್ಟೈಲ್ ಪ್ರೊ ಅನ್ನು ಲಾಂಚ್ ಮಾಡಿದೆ. ಅನುಷ್ಕಾ ಶೆಟ್ಟಿಯು ಈ ಫೋನ್ ಅನ್ನು ಲಾಂಚ್ ಮಾಡಿದ್ದು, ಬ್ರ್ಯಾಂಡ್‌ನ ಮುಖ್ಯ ರಾಯಭಾರಿಯನ್ನಾಗಿ ಈ ನಟಿಯನ್ನು ಕಂಪೆನಿ ಗೊತ್ತುಪಡಿಸಿದೆ.

ಆಕ್ವಾ ಸ್ಟೈಲ್ ಪ್ರೊ 1.2 GHz ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಫೋನ್‌ನ ರಿಯರ್ ಕ್ಯಾಮೆರಾ 8 MP ಆಗಿದ್ದರೆ ಮುಂಭಾಗ ಕ್ಯಾಮೆರಾ 2 MP ಆಗಿದೆ. ಇನ್ನು ಆಕ್ವಾ ಶ್ರೇಣಿಯ ಫೋನ್‌ಗಳು ಸಾಕಷ್ಟು ಪ್ರಚಾರವನ್ನು ಕೂಡ ಪಡೆದುಕೊಂಡಿದ್ದು ಬಳಕೆದಾರರಲ್ಲಿ ಹೆಚ್ಚು ವಿಶ್ವಾಸವನ್ನು ಉತ್ಪತ್ತಿ ಮಾಡಿದೆ ಎಂದು ಕಂಪೆನಿಯ ಹಿರಿಯ ಕಾರ್ಯನಿವಾಹಕರಾದ ಸಂಜಯ್ ಕುಮಾರ್ ಕಲಿರೋನಾ ತಿಳಿಸಿದ್ದಾರೆ.

ಈ ಸ್ಮಾರ್ಟ್‌ಫೋನ್ ಅನ್ನು ನಾವು ಮುಖ್ಯವಾಗಿ ದಕ್ಷಿಣ ಭಾರತೀಯರನ್ನು ಗುರಿಯಾಗಿಸಿಕೊಂಡು ತಯಾರಿಸಿದ್ದು ಮಧ್ಯಮ ಶ್ರೇಣಿಯ ಬಳಕೆದಾರರಿಗೆ ಉಪಯೋಗವಾಗುವ ರೀತಿಯಲ್ಲಿ ಇದರ ಬೆಲೆಯನ್ನು ಇರಿಸಲಾಗಿದೆ ಎಂದು ಸಂಜರ್ ಕುಮಾರ್ ತಿಳಿಸಿದ್ದಾರೆ. ಈ ಫೋನ್ ಬೆಲೆ ರೂ 6,990 ಆಗಿದ್ದು ಬಳಕೆದಾರರಿಗೆ ಈ ಫೋನ್ ಜಾಕ್‌ಪಾಟ್ ಕೊಡುಗೆಯಾಗಿದೆ ಎಂದರೆ ತಪ್ಪಾಗಲಾರದು.

Read more about:
English summary
This article tells about intex lunaches Aqua Style Pro smartphone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot