Subscribe to Gizbot

ಇಂಟೆಕ್ಸ್ ಆಕ್ವಾ ಸ್ಟಾರ್ ಪವರ್ ಅತ್ಯುತ್ತಮ ಸ್ಮಾರ್ಟ್‌ಫೋನ್

Written By:

ಗೋವಾದಲ್ಲಿ ನಡೆದ ಈವೆಂಟ್ ಒಂದರಲ್ಲಿ ಇಂಟೆಕ್ಸ್ ಭರ್ಜರಿ ಘೋಷಣೆಯನ್ನೇ ಮಾಡಿದೆ. ತನ್ನ ಹೊಸ ಆಕ್ವಾ ಸ್ಟಾರ್ ಪವರ್ ಸ್ಮಾರ್ಟ್‌ಫೋನ್ ಅನ್ನು ಇಂಟೆಕ್ಸ್ ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದೆ.

ಇಂಟೆಕ್ಸ್ ಆಕ್ವಾ ಸ್ಟಾರ್ ಪವರ್ ಸ್ಮಾರ್ಟ್‌ಫೋನ್ ಅನ್ನು ಬಜೆಟ್ ಬೆಲೆಯಾದ ರೂ 7,490 ಕ್ಕೆ ಲಾಂಚ್ ಮಾಡಿದ್ದು ಈ ಫೋನ್ ಅತ್ಯಂತ ಆಕರ್ಷಕ ವಿಶೇಷತೆಗಳನ್ನು ಒದಗಿಸುತ್ತಿದೆ ಇದು 3000mAh ಬ್ಯಾಟರಿಯೊಂದಿಗೆ ಬಂದಿದೆ. ಈ ಫೋನ್ ನಮ್ಮ ಬಳಕೆದಾರರು ಬಯಸುವಂತಹ ಆಫರ್‌ಗಳೊಂದಿಗೆ ಬಂದಿದ್ದು ನಿಜಕ್ಕೂ ಇದು ಅತ್ಯದ್ಭುತವಾಗಿದೆ ಎಂದು ಮೊಬೈಲ್ ಬ್ಯುಸಿನೆಸ್ ಮುಖ್ಯಸ್ಥರಾದ ಸಂಜಯ್ ಕುಮಾರ್ ಕಲಿರೋನಾ ತಿಳಿಸಿದ್ದಾರೆ.

ಇಂಟೆಕ್ಸ್‌ನ ಹೊಸ ಆಕ್ವಾ ಸ್ಟಾರ್ ಪವರ್ ಬಿಡುಗಡೆ

ಇಂಟೆಕ್ಸ್ ಅನ್ನು ಬಳಸುವ ಬಳಕೆದಾರರು ಬ್ಯಾಟರಿ ಸಮಸ್ಯೆಯನ್ನು ಅನುಭವಿಸದೇ ಫೋನ್ ಅನುಭವವನ್ನು ಪಡೆಯಬೇಕು ಎಂದು ತಿಳಿಸಿದ್ದಾರೆ. ಇದು 3000mAh ಬ್ಯಾಟರಿಯೊಂದಿಗೆ ಬಂದಿರುವುದು ಇಂತಹ ವಿಶೇಷ ಅನುಭೂತಿಯನ್ನು ನೀಡುವುದಕ್ಕಾಗಿ ಎಂದು ಸಂಜಯ್ ಕುಮಾರ್ ತಿಳಿಸಿದ್ದಾರೆ. ಇದು ಹತ್ತು ಗಂಟೆಗಳ ಟಾಕ್ ಟೈಮ್ ಅನ್ನು ಕೂಡ ಒದಗಿಸುತ್ತಿದ್ದು ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆವೃತ್ತಿ ಇದರಲ್ಲಿ ಚಾಲನೆಯಾಗುತ್ತಿದೆ. ಇದು 4.5 ಇಂಚಿನ FWVGA IPSಪೂರ್ಣ ಲ್ಯಾಮಿನೇಟೆಡ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು 854 x 480 ಪಿಕ್ಸೆಲ್ ಇದರಲ್ಲಿದೆ. 1.3GHz ಕ್ವಾಡ್ ಕೋರ್ ಪ್ರೊಸೆಸದರ್ ಡಿವೈಸ್‌ನಲ್ಲಿದ್ದು 1 ಜಿಬಿ RAM ಅನ್ನು ಫೋನ್ ಪಡೆದುಕೊಂಡಿದೆ. ಹ್ಯಾಂಡ್‌ಸೆಟ್ 8 ಜಿಬಿ ಆಂತರಿಕ ಮೆಮೊರಿಯನ್ನು ಕೂಡ ಒಳಗೊಂಡಿದೆ.

ಇನ್ನು ಕ್ಯಾಮೆರಾದ ಕಡೆಗೆ ಗಮನ ನೀಡುವುದಾದರೆ, ಇದು 8ಎಮ್‌ಪಿ ಸ್ನ್ಯಾಪರ್‌ ಜೊತೆಗೆ ಆಟೋ ಫೋಕಸ್ ಮತ್ತು 2 ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಹೊಂದಿದೆ. ಇನ್ನು ಸಂಪರ್ಕ ವಿಶೇಷತೆಗಳೆಂದರೆ, 3 ಜಿ, ಬ್ಲ್ಯೂಟೂತ್, ವೈಫೈ ಮತ್ತು OTG ಬೆಂಬಲವಾಗಿದೆ.

English summary
This article tells about Intex Officially Launches Aqua Star Power 3000mAh Battery at Rs 7,490.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot