Home
ಮೊಬೈಲ್

ಐಒಎಸ್ 12ನಲ್ಲಿ ಹೊಸ ಫೀಚರ್: ಸ್ಕ್ರೀನ್ ಟೈಮ್‌ನಲ್ಲಿ ನೋಡಿ ಬಳಕೆಯ ಪ್ರಮಾಣ..!

ನಿಮ್ಮ ಐಫೋನ್ ಅಥವಾ ಐಪ್ಯಾಡ್ ಗೆ ದಾಸರಾಗಿದ್ದೀರಾ ? ನಿಮ್ಮ ಐಒಎಸ್ ಡಿವೈಜ್ ನಲ್ಲಿ ಇನ್ಸ್ಟಾಗ್ರಾಮ್, ವಾಟ್ಸಪ್, ಫೇಸ್ಬುಕ್, ಟ್ವಿಟರ್, ಯುಟ್ಯೂಬ್ ಅಥವಾ ಇನ್ನಿತರೆಯಗಳ ಸಂದೇಶಗಳನ್ನು ನೋಡುವುದು ಮತ್ತೇ ತಿರುಗಿ ನೋಡುವುದನ್ನು ನಿಲ್ಲಿಸಲಾಗುತ್ತಿಲ್ಲವೇ ? ಹಾಗಾದರೆ, ಸಿಹಿ ಸುದ್ದಿ (ಬಹುಶಃ ಕಹಿ ಕೂಡ) ಏನೆಂದರೆ ನೀವೀಗ ಐಒಎಸ್ 12 ರ ಮೂಲಕ ಪ್ರತಿ ಆಪ್ ನ ದಿನದ ಮಿತಿಯನ್ನು ನಿಗದಿಪಡಿಸಬಹುದು.

ಅಂದರೆ, ಐಫೋನ್ ಅಥವಾ ಐಪ್ಯಾಡ್ ನೀವೆನಾದರೂ ಯಾವುದೋ ಆಪ್ ದಿನದಲ್ಲಿ ಎರಡು ಗಂಟೆಗಳ ( ಅಥವಾ ನೀವು ನಿಗದಿ ಪಡಿಸಿದ ಮಿತಿ) ಕಾಲ ಉಪಯೋಗಿಸಿದಲ್ಲಿ ನಿಮಗೆ ಡಿವೈಜನ್ನು ಕೆಳಗಿಟ್ಟು ನೈಜ ಜಗತ್ತಿಗೆ ಹಿಂದಿರುಗಲು ನೆನಪು ಮಾಡಿಸುತ್ತದೆ. ಈ ಫೀಚರ್ ಗೆ ಸ್ಕ್ರೀನ್ ಟೈಮ್ ಎನ್ನುವರು ಹಾಗೂ ಇದನ್ನು ಉಪಯೋಗಿಸುವುದು ತುಂಬಾ ಸುಲಭ.

ಐಒಎಸ್ 12ನಲ್ಲಿ ಹೊಸ ಫೀಚರ್: ಸ್ಕ್ರೀನ್ ಟೈಮ್‌ನಲ್ಲಿ ನೋಡಿ ಬಳಕೆಯ ಪ್ರಮಾಣ..!

ಸ್ಕ್ರೀನ್ ಟೈಮ್ ನಿಮಗೆ ಕೆಲ ವಿವರಗಳಿರುವ ಗ್ರಾಫ್ ಅನ್ನು ನಿಮ್ಮ ಐಫೋನ್ ಅಥವಾ ಐಪ್ಯಾಡ್ ಯುಸೇಜ್ ನಲ್ಲಿ ತೋರಿಸುತ್ತದೆ. ಹೀಗೆ ಮಾಡಿ ಸೆಟ್ಟಿಂಗ್ಸ್ -> ಸ್ರ್ಕೀನ್ ಟೈಮ್ ಹೋಗಿ ಮತ್ತು ಮೇಲೆ ಇರುವ ಬಿಗ್ ಟೈಮ್ ಟೆಕ್ಸ್ಟ್ ಅನ್ನು ಒತ್ತಿ. ಇದು ನಿಮಗೆ ನೀವು ವಾರದಲ್ಲಿ ಅಥವಾ ದಿನದಲ್ಲಿ ಫೋನನ್ನು ಎಷ್ಟು ಸಮಯ ಉಪಯೋಗಿಸಿದ್ದೀರಿ ಎನ್ನುವುದನ್ನು ತೋರಿಸುತ್ತದೆ. ಅದರ ಜೊತೆಗೆ ನೀವು ಎಷ್ಟು ನೋಟಿಫಿಕೇಷನ್ ಪಡೆದಿರಿ ಮತ್ತು ಯಾವ ಆಪ್ ಹೆಚ್ಚು ನಿಮಗೆ ಕಳುಹಿಸಿದೆ ಎಂದು ತೋರಿಸುವುದಲ್ಲದೆ ನೀವು ಎಷ್ಟು ಬಾರಿ ಡಿವೈಜ್ ತೆಗೆದುಕೊಂಡಿರಿ ಎನ್ನುವುದನ್ನು ಕೂಡ ತೋರಿಸುತ್ತದೆ.

ಐಒಎಸ್ 12 ರಲ್ಲಿ ಸ್ಕ್ರೀನ್ ಟೈಮ್ ಉಪಯೋಗಿಸಿ ನಿಮ್ಮ ಆಪ್ ಉಪಯೋಗ ಮಿತಿಗೊಳಿಸುವುದು ಹೇಗೆ ?

ಐಒಎಸ್ 12 ರಲ್ಲಿ ಸ್ಕ್ರೀನ್ ಟೈಮ್ ಉಪಯೋಗಿಸಿ ನಿಮ್ಮ ಆಪ್ ಉಪಯೋಗ ಮಿತಿಗೊಳಿಸುವುದು ಹೇಗೆ ?

ಹೀಗೆ ಮಾಡಿ

1. ಸೆಟ್ಟಿಂಗ್ಸ್ > ಸ್ಕ್ರೀನ್ ಟೈಮ್

2. ಆಪ್ ಲಿಮಿಟ್ಸ್ ಒತ್ತಿ

3. ಆಡ್ ಲಿಮಿಟ್ ಒತ್ತಿ

4. ಇಲ್ಲಿ ನೀವು ಬೇಕಾದರೆ ಸಮಯದ ಮಿತಿ ನಿಗದಿ ಪಡಿಸಿ ಎಲ್ಲಾ ವರ್ಗಗಳ ಆಪ್ ಗಳಿಗೆ ಅಥವಾ ಸ್ವತಃ ನೀವೇ ಪ್ರತಿಯೊಂದು ಆಪ್ ಗೆ ಮಿತಿ ನಿಗದಿಗೊಳಿಸಿ. ಆಪ್ ನ ಎಲ್ಲಾ ವರ್ಗಗಳನ್ನು ಮಿತಿಗೊಳಿಸಬೇಕಾದರೆ ( ಉದಾ: ಗೇಮ್ಸ್, ಸಾಮಾಜಿಕ ತಾಣಗಳು ಇತ್ಯಾದಿ) ಕೆಳಗಡೆ ಬನ್ನಿ ಮತ್ತು ಪ್ರತಿ ವರ್ಗ ದ ಮುಂದೆ ಇರುವ ವೃತ್ತ ವನ್ನು ಒತ್ತಿ. ಟಿಕ್ ಚಿಹ್ನೆ ಕಾಣುವುದು ವರ್ಗ ಆಯ್ಕೆಯಾಗಿರುವುದನ್ನು ತಿಳಿಸಲು.

5. ಈಗ ನೀವು ಪ್ರತಿ ದಿನದ ಮಿತಿ ನಿಗದಿ ಪಡಿಸಬಹುದು ಗಂಟೆ ಮತ್ತು ನಿಮಿಷಗಳನ್ನು ಆಯ್ಕೆ ಮಾಡುವ ಮೂಲಕ. ನೀವು ಕಸ್ಟಮೈಜ್ ಡೇಸ್ ಕೂಡ ಆಯ್ಕೆ ಮಾಡಬಹುದು ದಿನದ ಆಧಾರದ ಮೇಲೆ. ಇದು ನಿಮಗೆ ವಾರಾಂತ್ಯದಲ್ಲಿ ಸಿಗುವ ಬಿಡುವಿನ ಸಮಯದಲ್ಲಿ ಹೆಚ್ಚು ಸಮಯ ಡಿವೈಜ್ ಬಳಸುವ ಯೋಚನೆ ಇದ್ದಲ್ಲಿ ಸಹಕಾರಿ.

6. ನೀವು ಪ್ರತಿ ಆಪ್ ಗೆ ಪ್ರತ್ಯೇಕವಾಗಿ ಮಿತಿ ನಿಗದಿ ಪಡಿಸಬೇಕೆಂದಿದ್ದರೆ , ಸೆಟ್ಟಿಂಗ್ಸ್ > ಸ್ಕ್ರೀನ್ ಟೈಮ್ ಮೇಲೆ ಸ್ಕ್ರೀನ್ ಟೈಮ್ ಶಬ್ದದ ಕೆಳಗೆ ಕಾಣುವ ಬಿಗ್ ಟೈಮ್ ಇಂಡಿಕೇಟರ್ ಅನ್ನು ಒತ್ತಿ.

7. ಈಗ ಕೆಳಗೆ ಬನ್ನಿ ಮತ್ತು ಅತಿಯಾಗಿ ಉಪಯೋಗಿಸುವ ಆಪ್ ಗಳ ಪಟ್ಟಿ ನೋಡಿ. ಯಾವುದನ್ನಾದರೂ ಒತ್ತಿ, ಕೆಳಗೆ ಬನ್ನಿ ಮತ್ತು ಆಡ್ ಲಿಮಿಟ್ ಅನ್ನು ಒತ್ತಿ. ಈ ರೀತಿ ನೀವು ಪ್ರತ್ಯೇಕವಾಗಿ ಕೆಲ ಆಪ್ ಅಥವಾ ಜಾಲತಾಣ ಗಳಿಗೆ ಅಥವಾ ಮಿತಿ ಹಾಕಬಹುದು.

ಐಒಎಸ್ 12 ರಲ್ಲಿ ಡೌನ್ ಟೈಮ್ ಹೇಗೆ ಇಡುವುದು ?

ಐಒಎಸ್ 12 ರಲ್ಲಿ ಡೌನ್ ಟೈಮ್ ಹೇಗೆ ಇಡುವುದು ?

ನೀವು ಒಮ್ಮೆ ಯುಸೇಜ್ ಲಿಮಿಟ್ ಒತ್ತಿದರೆ ಸಾಕು, ಪೂರ್ತಿ ಪರದೆ ಬಿಳಿಯಾಗಿ ದೊಡ್ಡ ಕಪ್ಪು ಹವರ್ ಗ್ಲಾಸ್ ಐಕಾನ್ ಪರದೆ ಮೇಲೆ ಕಾಣುವುದು ಟೈಮ್ ಲಿಮಿಟ್ ಎನ್ನುವ ಅಕ್ಷರದೊಂದಿಗೆ. ಇದನ್ನು ನೀವು ಮುಂದೂಡಬಹುದು ಇಗ್ನೊರ್ ಲಿಮಿಟ್ ಬಟನ್ ಒತ್ತಿ ಮತ್ತು ನಂತರ ರಿಮೈಂಡ್ ಮಿ ಇನ್ 15 ಮಿನಟ್ಸ್ ಅಥವಾ ಇಗ್ನೊರ್ ಫಾರ್ ಟುಡೆ ಎರಡರಲ್ಲಿ ಒಂದನ್ನು ಆಯ್ಕೆ ಮಾಡುವ ಮೂಲಕ. ಇದು ಯಾವುದೇ ಹೆಚ್ಚಿನ ಮಾಹಿತಿ ಇಲ್ಲದೆ ಮಾಡಬಹುದಾಗಿದೆ ಅನ್ಯಥಾ ನೀವು ಪಾಸ್ ಕೋಡ್ ಅನ್ನು ಲಿಮಿಟ್ ಸ್ಕೀನ್ ಟೈಮ್ ಗೆ ಹಾಕದಿದ್ದರೆ ( ವಿವರಣೆ ಕೆಳಗಿದೆ)

ಎಲ್ಲಾ ಆಪ್ ಗಳ ಉಪಯೋಗಿಸುವ ಮಿತಿಯನ್ನು ಸ್ವಲ್ಪ ಸಮಯದ ಮಟ್ಟಿಗೆ ಮಿತಿಗೊಳಿಸಲು ಕೂಡ ದಾರಿಯಿದೆ. ನಿಮಗೆ ಮಲಗುವ ಮುನ್ನ ಸಾಮಾಜಿಕ ಜಾಲತಾಣ ಉಪಯೋಗಿಸುವ ಅಭ್ಯಾಸವಿದ್ದರೆ ನೀವು ಫೋನ್ ಕೆಳಗಿಡಲು ಸಮಯವನ್ನು ನಿಗದಿ ಪಡಿಸಬಹುದು. ಅದಕ್ಕಾಗಿ ಕೆಳಗಿನಂತೆ ಮಾಡಿ.

1. ಸೆಟ್ಟಿಂಗ್ಸ್ > ಸ್ಕ್ರೀನ್ ಟೈಮ್ ಗೆ ಹೋಗಿ

2. ಈಗ ಡೌನ್ ಟೈಮ್ ಒತ್ತಿರಿ

3. ಡೌನ್ ಟೈಮ್ ಅನ್ನು ಚಾಲ್ತಿ ಮಾಡಿ ಮತ್ತು ಆರಂಭಿಕ ಸಮಯ ಹಾಗೂ ಅಂತ್ಯದ ಸಮಯ ನಿಗದಿ ಪಡಿಸಿ

ನೀವು ಕೆಲ ಆಪ್ ಗಳನ್ನು ನಿಗದಿ ಪಡಿಸಿದ ಸಮಯದ ಮಿತಿಗೆ ಹೊರತಾಗಿ ಬಳಸಬೇಕೆಂದು ಇದ್ದಲ್ಲಿ ಕೆಳಗಿನಂತೆ ಮಾಡಿ.

1. ಸೆಟ್ಟಿಂಗ್ಸ್ > ಸ್ಕ್ರೀನ್ ಟೈಮ್ ಗೆ ಹೋಗಿ

2. ಆಲ್ವೇಜ್ ಅಲೌವ್ಡ್ ಒತ್ತಿರಿ

3. ಈಗ ಅನುಮತಿ ನೀಡಬೇಕೆಂದಿರುವ ಆಪ್ ಗಳನ್ನು ಆಯ್ಕೆ ಮಾಡಿ .

ಐಒಎಸ್ 12 ರಲ್ಲಿ ಪೇರೆಂಟಲ್ ಕಂಟ್ರೋಲ್ಸ್ ಹೇಗೆ ಉಪಯೋಗಿಸುವುದು ಮಕ್ಕಳಿಗಾಗಿ ಮಿತಿ ಇಡಲು

ಐಒಎಸ್ 12 ರಲ್ಲಿ ಪೇರೆಂಟಲ್ ಕಂಟ್ರೋಲ್ಸ್ ಹೇಗೆ ಉಪಯೋಗಿಸುವುದು ಮಕ್ಕಳಿಗಾಗಿ ಮಿತಿ ಇಡಲು

ಪಾಲಕರಾಗಿ ನೀವು ಸ್ಕ್ರೀನ್ ಟೈಮ್ ಉಪಯೋಗಿಸುತ್ತಿದ್ದಲ್ಲಿ , ನೀವು ಸುಲಭವಾಗಿ ಸ್ಕ್ರೀನ್ ಟೈಮ್ ಪಾಸ್ ಕೋಡ್ ಅನ್ನು ಮಕ್ಕಳಿಗಾಗಿ ಇಡಬಹುದು. ಈ ಸ್ಕ್ರೀನ್ ಟೈಮ್ ಹೇಗೆ ಕೆಲಸ ಮಾಡುತ್ತೆ ? ನೀವು ಟೈಮ್ ಲಿಮಿಟ್ ಒತ್ತಿದಾಗ ಅದು ನಿಮಗೆ 2 ಆಯ್ಕೆ ತೋರಿಸುತ್ತದೆ. ಇಗ್ನೋರ್ ದ ಲಿಮಿಟ್ ಫಾರ್ ಟುಡೆ ಅಥವಾ ರಿಮೈಂಡ್ ಯು ಅಗೇನ್ ಇನ್ 15 ಮಿನಟ್ಸ್. ನೀವು ಸ್ಕ್ರೀನ್ ಟೈಮ್ ಪಾಸ್ ಕೋಡ್ ಇಟ್ಟಲ್ಲಿ ಈ ಆಯ್ಕೆಗಳು ಚಾಲ್ತಿಗೆ ಬರುವುದಿಲ್ಲ ಪಾಸ್ ಕೋಡ್ ಹಾಕದ ಹೊರತು. ಇದೊಂದು ಪರಿಣಾಮಕಾರಿಯಾದ ಪೇರೆಂಟಿಂಗ್ ಕಂಟ್ರೊಲ್ ಫೀಚರ್ ಎನ್ನಬಹುದು. ಇದಕ್ಕಾಗಿ ಕೆಳಗಿನ ಮಾಹಿತಿ ನೋಡಿ.

1. ಸೆಟ್ಟಿಂಗ್ಸ್ > ಸ್ಕ್ರೀನ್ ಟೈಮ್ ಗೆ ಹೋಗಿ

2. ಯೂಸ್ ಸ್ಕ್ರೀನ್ ಪಾಸ್ ಕೋಡ್ ಮೇಲೆ ಒತ್ತಿರಿ

3. ಈಗ ನಾಲ್ಕು ಅಂಕೆಗಳ ಪಾಸ್ ಕೋಡ್ ಹಾಕಿ, ಮತ್ತೇ ಕೇಳಿದಾಗ ಇನ್ನೊಮ್ಮೆ ಹಾಕಿ.

ಇದು ನಿಮಗೆ ನಿಮ್ಮ ಮಕ್ಕಳು ಡಿವೈಜ್ ಉಪಯೋಗಿಸುವಾಗ ಪಾಸ್ ಕೋಡ್ ಹಾಕದೆ ಮುಂದೆ ಹಾಕಲು ಬಿಡುವುದಿಲ್ಲ.

ಸ್ಕ್ರೀನ್ ಟೈಮ್ ನ ಕಂಟೆಂಟ್ ಆಂಡ್ ಪ್ರೈವಸಿ ರಿಸ್ಟ್ರಿಕ್ಷನ್ಸ್ ನಿಮಗೆ ಲೊಕೇಷನ್ ಸರ್ವಿಸಸ್, ಮೈಕ್ರೊ ಫೋನ್, ಬ್ಲೂಟೂತ್, ಮೊಬೈಲ್ ಡಾಟಾ ಚೇಂಜಸ್ ಅನ್ನು ಕೂಡ ಚಾಲು/ಬಂದ್ ಮಾಡಲು ಅನುಮತಿ ನೀಡುತ್ತದೆ.

ಅದಕ್ಕಿಂತ ಇನ್ನೂ ಹೆಚ್ಚಿನದು ಇದೆ ಮತ್ತು ಡಿವೈಜ್ ಅನ್ನು ಬೇರೆಯವರು ಉಪಯೋಗಿಸುತ್ತಿದ್ದಲ್ಲಿ ಸೆಟ್ಟಿಂಗ್ಸ್ ಮೂಲಕ ಲಾಕ್ ಮಾಡಬಹುದು.

ನಿಮ್ಮ ಮಗು ಐಕ್ಲೌಡ್ ಕುಟುಂಬದ ಭಾಗವಾಗಿದ್ದಲ್ಲಿ , ನೀವು ದೂರದಿಂದಲೇ ನಿಯಂತ್ರಿಸಬಹುದು ಹಾಗೂ ಅವರ ಐಒಎಸ್ ಡಿವೈಜ್ ನ ಸ್ಕ್ರೀನ್ ಟೈಮ್ ನೋಡಬಹುದು. ಇದರರ್ಥ ನೀವು ಅವರ ಯುಸೇಜ್ ಬಗ್ಗೆ ವರದಿ ಪಡೆಯಬಹುದು ಮತ್ತು ಅವರನ್ನು ಕೆಲ ಆಪ್ ಗಳ ಉಪಯೋಗವನ್ನು ನಿಯಂತ್ರಿಸಬಹುದು ( ಅಥವಾ ಎಲ್ಲವನ್ನು ನಿಯಂತ್ರಿಸಬಹುದು) ನಿಮ್ಮ ಐಒಎಸ್ ಡಿವೈಜ್ ನಿಂದಲೆ.

ನಿಮ್ಮ ಮಗು ಐಕ್ಲೌಡ್ ಕುಟುಂಬದ ಭಾಗವಾದಲ್ಲಿ , ನೀವು ಅವರನ್ನು ಕುಟುಂಬದ ಪಟ್ಟಿ ಯಲ್ಲಿ ಕಾಣಬಹುದು ಸೆಟ್ಟಿಂಗ್ಸ್ ನ ಕೆಳಗಿರುವ ಸ್ಕೀನ್ ಟೈಮ್ ಕೆಳಗೆ. ಮಗುವಿನ ಹೆಸರಿನ ಮೇಲೆ ಒತ್ತಿರಿ ಮತ್ತು ಅವರ ಸ್ಕ್ರೀನ್ ಟೈಮ್ ಸೆಟ್ಟಿಂಗ್ಸ್ ಅನ್ನು ನಿಯಂತ್ರಿಸಬಹುದು.

ಐಒಎಸ್ 12 ರಲ್ಲಿ ಸ್ಕ್ರೀನ್ ಟೈಮ್ ಅನ್ನು ಡಿಸೇಬಲ್ ಮಾಡುವುದು ಹೇಗೆ ?

ಐಒಎಸ್ 12 ರಲ್ಲಿ ಸ್ಕ್ರೀನ್ ಟೈಮ್ ಅನ್ನು ಡಿಸೇಬಲ್ ಮಾಡುವುದು ಹೇಗೆ ?

ಐಒಎಸ್ 12 ನಲ್ಲಿ ಆಪ್ ಯುಸೇಜ್ ನ ಮಿತಿಯನ್ನು ರದ್ದು ಗೊಳಿಸಲು

1. ಸೆಟ್ಟಿಂಗ್ಸ್ > ಸ್ಕ್ರೀನ್ ಟೈಮ್ ಗೆ ಹೋಗಿ

2. ಕೆಳಗೆ ಬನ್ನಿ ಮತ್ತು ಟರ್ನ್ ಆಫ್ ಸ್ಕ್ರೀನ್ ಟೈಮ್ ಮೇಲೆ ಒತ್ತಿ

Best Mobiles in India

English summary
iOS 12 Screen Time: How to View Usage Reports, Limit Usage, or Monitor and Restrict Kids' Usage. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+