ಐಫೋನ್ 11 ಹೇಗಿರಲಿದೆ ಗೊತ್ತಾ?..ಲೀಕ್ ಆದ ಇಮೇಜ್‌ಗಳು!!

|

ವಿಶ್ವ ಟೆಕ್ ದೈತ್ಯ ಮೊಬೈಲ್ ಕಂಪೆನಿ ಆಪಲ್ ಈ ವರ್ಷದ ನೂತನ ಐಫೋನ್ ಬಿಡುಗಡೆಗೆ ಸಜ್ಜಾಗಿದ್ದು, ಐಫೋನ್ ಸರಣಿಯ ಮುಂದಿನ ಸ್ಮಾರ್ಟ್‌ಪೋನ್ 'ಐಫೋನ್ 11' ಚಿತ್ರಗಳು ಲೀಕ್ ಆಗಿವೆ. ಆಪಲ್ ಪ್ರತಿಬಾರಿ ಹೊಸ ಐಫೋನ್ ಬಿಡುಗಡೆ ಮಾಡುತ್ತಿದೆ ಎನ್ನುವಾಗಲೂ ಟೆಕ್‌ಲೋಕದ ನಿರೀಕ್ಷೆ ದೊಡ್ಡಮಟ್ಟದಲ್ಲಿದ್ದು, ಈ ಬಾರಿಯ ಐಫೋನ್ 11 ಕೂಡ ಭಾರೀ ನಿರೀಕ್ಷೆ ಹುಟ್ಟಿಸಿದೆ.

ಐಫೋನ್ 11 ಹೇಗಿರಲಿದೆ ಗೊತ್ತಾ?..ಲೀಕ್ ಆದ ಇಮೇಜ್‌ಗಳು!!

ಹೌದು, ಟ್ವಿಟರ್‌ನಲ್ಲಿ ಇತ್ತೀಚಿಗೆ ಲೀಕ್ ಆಗಿರುವ ಹೊಸ ಐಫೋನ್ ಚಿತ್ರವೊಂದು 'ಐಫೋನ್ 11' ಆಗಿದೆ ಎಂಬ ಗಾಸಿಪ್ ಟೆಕ್‌ಲೋಕದಲ್ಲಿ ಶುರುವಾಗಿದೆ. ಈ ವರ್ಷ ಐಫೋನ್ ಸರಣಿಯಲ್ಲಿ ಹೊಸದಾಗಿ ಐಫೋನ್ 11 ಬಿಡುಗಡೆಯಾಗುವ ನಿರೀಕ್ಷೆಯನ್ನು ಮೊಬೈಲ್ ಲೋಕ ಹೊಂದಿರುವುದರಿಂದ, ತ್ರಿವಳಿ ಕ್ಯಾಮರಾ ಹೊಂದಿರುವ ಈ ಐಫೋನಿನ ಚಿತ್ರ ಇದೀಗ ಟ್ರೆಂಟ್ ಸೃಷ್ಟಿಸುತ್ತಿದೆ.

ಇದು ಅಧಿಕೃತವಾಗಿ ಐಫೋನ್ 11 ಚಿತ್ರವೆಂದು ಆಪಲ್ ಕಂಪೆನಿ ದೃಢೀಕರಿಸಿಲ್ಲವಾದರೂ, ಚೌಕಾಕಾರದ ಕ್ಯಾಮರಾ ಸೆಟಪ್‌ನಲ್ಲಿ ಮೂರು ಕ್ಯಾಮರಾ ಮತ್ತು ಡ್ಯುಯಲ್ ಫ್ಲ್ಯಾಶ್ಹೊಂದಿರುವ ನೂತನ ಐಫೋನ್ ಚಿತ್ರ ಗಮನ ಸೆಳೆದಿದೆ. ಸ್ಲಾಶ್‌ಲೀಕ್ಸ್ ಪ್ರಕಾರ, ಸೋರಿಕೆಯಾದ ಚಿತ್ರಗಳಲ್ಲಿ ಕಂಡುಬಂದಿರುವ ಐಫೋನಿನ ಚಿತ್ರ ಐಫೋನ್ XR ಕೂಡ ಆಗಿರಬಹುದು ಎಂದು ಹೇಳಿದೆ.

ಈಗಾಗಲೇ ಐಫೋನ್ 10 ಮೂಲಕ ಮೊಬೈಲ್ ಜಗತ್ತಿನಲ್ಲಿ ಫೇಸ್‌ಲಾಕ್ ಮತ್ತು ನೋಚ್ ವಿನ್ಯಾಸಗಳ ಟ್ರೆಂಡ್ ಹುಟ್ಟಿಹಾಕಿರುವ ಆಪಲ್ ಈ ಬಾರಿ ಐಫೋನ್ 11 ಅನನ್ನು ತರುವುದು ನಿಚ್ಚಳ. ಹಾಗಾಗಿ, ನಾವು ಲೀಕ್ ಆಗಿರುವ ಚಿತ್ರಗಳನ್ನು ಐಫೋನ್ 11 ಎಂದು ತಿಳಿಯಬಹುದು. ಇದು ಜುಲೈ ವೇಳೆಗೆ ಮಾರುಕಟ್ಟೆಗೆ ಬರಬಹುದು ಎಂದು ಮೊಬೈಲ್ ತಜ್ಞರು ಅಂದಾಜಿಸಿದ್ದಾರೆ.

ಸೋರಿಕೆಯಾದ ಚಿತ್ರಗಳಲ್ಲಿ ಸ್ಮಾರ್ಟ್‌ಫೋನ್ ಹೊಸ ವಿನ್ಯಾಸದಲ್ಲಿ ಹಿಂಭಾಗದಲ್ಲಿ ಮೂರು ಕ್ಯಾಮರಾ, ಒಂದು ಸೆನ್ಸರ್ ಮತ್ತು ಒಂದು ಫ್ಲ್ಯಾಶ್ ಅನ್ನು ನೀಡಲಾಗಿದೆ. ಹಿಂಭಾಗದ ಚಿತ್ರಗಳು ಮಾತ್ರ ಲೀಕ್ ಆಗಿರುವ ಈ ಐಫೋನ್ ಚಿತ್ರಗಳು ಐಫೋನ್ 11 ಅಥವಾ ಐಫೋನ್ XR ಯಾವುದೇ ಆಗಿದ್ದರೂ ಸಹ ನೂತನ ಚಿತ್ರಗಳು ಮೊಬೈಲ್ ಲೋಕದ ಗಮನಸೆಳೆದಿರುವುದು ಮಾತ್ರ ಸತ್ಯ.

Best Mobiles in India

English summary
The new iPhones could be the last ditch effort by Apple to recover some ... The leakedrenders show a sleek and shiny black iPhone with a 3D . to know more visit to kannada. gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X