ಖುಷಿ ಸುದ್ದಿ.. iPhone 15, iPhone 14 Plus ಮೇಲೆ ಬಿಗ್ ಡಿಸ್ಕೌಂಟ್! Flipkartನಲ್ಲಿ ಮಾತ್ರ
ಹೊಸ ಐಫೋನ್ ಖರೀದಿಸಲು ಬಯಸುವ ಗ್ರಾಹಕರಿಗೆ ಗುಡ್ ನ್ಯೂಸ್! ಪ್ರಸ್ತುತ, ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 15 (iPhone 15) ಮತ್ತು ಐಫೋನ್ 14 ಪ್ಲಸ್‌ನಲ್ಲಿ (iPhone 14) ಮೊಬೈಲ್ ಅನ್ನು ಭಾರೀ ಡಿಸ್ಕೌಂಟ್‌ನಲ್ಲಿ ಖರೀದಿಸಬಹುದು. ಈ ವಿಶೇಷ ಮಾರಾಟದ ಭಾಗವಾಗಿ, ನೀವು ಭರ್ಜರಿ ರಿಯಾಯಿತಿಗಳೊಂದಿಗೆ ಬ್ಯಾಂಕ್ ಆಫರ್‌ಗಳ ಕಡಿಮೆ ಬೆಲೆಗೆ ಐಫೋನ್ ತನ್ನದಾಗಿಸಿಕೊಳ್ಳಬಹುದು. ಈ ಸ್ಮಾರ್ಟ್‌ಫೋನ್‌ಗಳು ಅನೇಕ ಅತ್ಯಾಕರ್ಷಕ ವೈಶಿಷ್ಟ್ಯಗಳು ಮತ್ತು ಫೀಚರ್ಸ್‌ಗಳನ್ನು ಹೊಂದಿವೆ. ಈ ಪ್ರೀಮಿಯಂ ಫೋನ್‌ಗಳನ್ನು ಆಫರ್‌ಗಳ ಮೇಳೆ ಖರೀದಿ, ನಿಮ್ಮ ಜೇಬಿನ ಭಾರ ಕಡಿಮೆ ಮಾಡಲು ಇದು ಪರ್ಫೆಕ್ಟ್ ಟೈಮ್!
ಈ iPhone 15 ಕಳೆದ ವರ್ಷ ಬಿಡುಗಡೆಯಾಯಿತು. ಬಿಡುಗಡೆಯ ಸಮಯದಲ್ಲಿ 128GB ಸ್ಟೋರೇಜ್ ವೇರಿಯಂಟ್‌ನ ಬೆಲೆ 79,900 ರೂ. ಇತ್ತು. ಪ್ರಸ್ತುತ ಶೇ.14 ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ. ಫ್ಲಿಪ್‌ಕಾರ್ಟ್‌ನಲ್ಲಿ iPhone 15 ಬೆಲೆ 67,999 ರೂ. ಇದೆ. ಹೆಚ್ಚುವರಿಯಾಗಿ, ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಮಾಡಿದ ಖರೀದಿಗಳ ಮೇಲೆ ನೀವು 1,000 ರೂ. ಹೆಚ್ಚುವರಿ ಡಿಸ್ಕೌಂಟ್ ಪಡೆಯಬಹುದು. ಇನ್ನೂ, ಬ್ಯಾಂಕ್ ಕಾರ್ಡ್ ಮೂಲಕ ಶೇ.5 ರಷ್ಟು ಆಫರ್ ಕೂಡ ಲಭ್ಯವಿದೆ.

iPhone 15 ಸ್ಮಾರ್ಟ್‌ಫೋನ್ ವಿಶೇಷತೆಗಳು
iPhone 15 ಮೊಬೈಲ್ 6.1-ಇಂಚಿನ ಸೂಪರ್ ರೆಟಿನಾ XDR ಡಿಸ್‌ಪ್ಲೇಯನ್ನು ಹೊಂದಿದೆ. 2000 nits ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ ಲಭ್ಯವಿದೆ. ಡಿಸ್ಪ್ಲೇ ರಕ್ಷಣೆಗೆ ಸೆರಾಮಿಕ್ ಗ್ಲಾಸ್ ಅನ್ನು ಹೊಂದಿದೆ. ಮತ್ತು ಡೈನಾಮಿಕ್ ದ್ವೀಪದ ವೈಶಿಷ್ಟ್ಯವನ್ನು ಒಳಗೊಂಡಿದೆ. ಈ ಫೋನ್ A16 ಬಯೋನಿಕ್ ಚಿಪ್‌ನಿಂದ ಚಾಲಿತವಾಗಿದೆ.
ಐದು ಬಣ್ಣಗಳಲ್ಲಿ ಈ ಫೋನ್ ಲಭ್ಯ
iPhone 15 ಫೋನ್ ಐದು ಬಣ್ಣಗಳಲ್ಲಿ ಖರೀದಿಸಲು ಲಭ್ಯವಿದೆ. ಗುಲಾಬಿ, ಹಸಿರು, ನೀಲಿ, ಕಪ್ಪು ಮತ್ತು ಹಳದಿ ಬಣ್ಣಗಳಲ್ಲಿ ಲಭ್ಯವಿದೆ. 128GB, 256GB, 512GB ಇಂಟರ್ನಲ್ ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿದೆ. IP68 ರೇಟಿಂಗ್‌ನೊಂದಿಗೆ ಬರುತ್ತದೆ. USB-C ಚಾರ್ಜಿಂಗ್ ಪೋರ್ಟ್ ಅನ್ನು ಒಳಗೊಂಡಿದೆ.
ವಾವ್ ಎನಿಸುವ ಕ್ಯಾಮೆರಾ ಸೆಟಪ್
iPhone 15 ಫೋನ್ 48MP ಮುಖ್ಯ ಕ್ಯಾಮೆರಾ ಮತ್ತು 12MP ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾವನ್ನು ಹೊಂದಿದೆ . ಇದು ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 12MP ಕ್ಯಾಮೆರಾಗಳನ್ನು ಸಹ ಹೊಂದಿದೆ. ಇದು ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 3349mAh ಬ್ಯಾಟರಿ ಬ್ಯಾಕಪ್ ಸಾಮರ್ಥ್ಯವನ್ನು ಹೊಂದಿದೆ . 15W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. 20W ಚಾರ್ಜರ್‌ನೊಂದಿಗೆ ಶೇ. 50 ರಷ್ಟು ಚಾರ್ಜಿಂಗ್ ಅನ್ನು ಕೇವಲ 30 ನಿಮಿಷಗಳಲ್ಲಿ ಪೂರ್ಣಗೊಳಿಸಬಹುದು.
iPhone 14 Plus ಮೇಲೆ 17,901 ಡಿಸ್ಕೌಂಟ್
iPhone 14 Plus ಫೋನ್‌ನ 128GB ವೇರಿಯಂಟ್ ಬೆಲೆ ಫ್ಲಿಪ್‌ಕಾರ್ಟ್‌ನಲ್ಲಿ ಬಿಡುಗಡೆಯಾದ ಸಮಯದಲ್ಲಿ 79,900 ರೂ. ಇತ್ತು. ಈ ವಿಶೇಷ ಮಾರಾಟದ ಭಾಗವಾಗಿ 17,901 ರೂ. (ಶೇ.22) ರಿಯಾಯಿತಿಯನ್ನು ಪಡೆಯಬಹುದು. ಪ್ರಸ್ತುತ, ಈ ಫೋನ್ ಅನ್ನು 61,999 ರೂ.ಗೆ ಖರೀದಿಸಬಹುದು. iPhone 14 Plus ಫೋನ್ 128GB, 256GB, 512GB ಇಂಟರ್ನಲ್ ಸ್ಟೋರೇಜ್ ವೇರಿಯಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.
iPhone 14 Plusನ ಫೀಚರ್ಸ್‌ಗಳು
ದೊಡ್ಡ ಡಿಸ್‌ಪ್ಲೇ ಮತ್ತು ಬ್ಯಾಟರಿ ಬ್ಯಾಕಪ್ ಹೊರತುಪಡಿಸಿ ಐಫೋನ್ 14 ನಂತಹುದೇ ಫೀಚರ್ಸ್‌ಗಳನ್ನು ಐಫೋನ್ 14 ಪ್ಲಸ್ ಫೋನ್ ಕೂಡ ಒಳಗೊಂಡಿದೆ. iPhone 14 Plus ಸ್ಮಾರ್ಟ್‌ಫೋನ್ 1284*2778 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.67-ಇಂಚಿನ OLED ಡಿಸ್ಪ್ಲೇಯನ್ನು ಹೊಂದಿದೆ. iOS 16 Apple A15 ಬಯೋನಿಕ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಐಫೋನ್ ಮಾದರಿಯು 4323mAh ಬ್ಯಾಟರಿ ಬ್ಯಾಕಪ್ ಸಾಮರ್ಥ್ಯವನ್ನು ಪಡೆದಿದೆ. ಈ ಫೋನ್ A15 ಬಯೋನಿಕ್ SoC ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ.
ಒಟ್ಟಾರೆ, ಇಷ್ಟು ಕಡಿಮೆ ಬೆಲೆಯಲ್ಲಿ ಇದೇ ಮೊದಲ ಬಾರಿಗೆ iPhone 15 ಮತ್ತು iPhone 14 Plus ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯವಾಗುತ್ತಿದೆ. ಈ ಎರಡೂ ಮೊಬೈಲ್‌ಗಳ ರಿಯಾಯಿತಿ ಬೆಲೆ ಮತ್ತು ಫೀಚರ್ಸ್‌ಗಳನ್ನು ಮೇಲೆ ತಿಳಿಸಲಾಗಿದೆ. ನೀವು ಐಫೋನ್ ಪ್ರಿಯರಾಗಿದ್ರೆ ಅಥವಾ iPhone ಖರಿದಿಸುವ ಬಯಕೆ ಇದ್ದರೆ, ಎರಡರಲ್ಲಿ ನಿಮಗೆ ಯಾವುದು ಇಷ್ಟವೋ ಆ ಮೊಬೈಲ್ ಅನ್ನು ಖರೀದಿಸಬಹುದು.


Click it and Unblock the Notifications








