ವಾವ್.. ಎಂಥಾ ಆಫರ್! 18,000 ರಿಯಾಯಿತಿ.. ಕಮ್ಮಿ ಬೆಲೆಗೆ iPhone 15 Plus ಲಭ್ಯ.. ಖರೀದಿ ಎಲ್ಲಿ?
ಆಪಲ್ ಕಂಪನಿಯ ಐಫೋನ್ಗಳಿಗೆ ಭಾರೀ ಡಿಮ್ಯಾಂಡ್ ಇದೆ. ಕಂಪನಿಯ ಐಫೋನ್ 15 ಪ್ಲಸ್ (iPhone 15 Plus) ಮೊಬೈಲ್ ಹಲವು ಅತ್ಯಾಕರ್ಷಕ ಫೀಚರ್ಸ್ಗಳಿಂದಲೂ ಸಹ ಸದ್ದು ಮಾಡಿದೆ. ಪ್ರಸ್ತುತ, ಈ ಸ್ಮಾರ್ಟ್ಫೋನ್ ಇ-ಕಾಮರ್ಸ್ ಸೈಟ್ ಫ್ಲಿಪ್ಕಾರ್ಟ್ನಲ್ಲಿ ಭರ್ಜರಿ ರಿಯಾಯಿತಿ ಪಡೆದಿದೆ. ಈ ಮೂಲಕ ಮತ್ತೆ ಐಫೋನ್ ಪ್ರಿಯರನ್ನು ತನ್ನತ್ತ ಸೆಳೆದಿದೆ. ನೀವು ಆಪಲ್ ಫ್ಲ್ಯಾಗ್ಶಿಪ್ ಫೋನ್ ಖರೀದಿಸಲು ಬಯಸಿದರೆ, ಇದು ನಿಮಗೆ ಉತ್ತಮ ಅವಕಾಶವಾಗಿದೆ. ಹೆಚ್ಚು ದುಡ್ಡು ಖರ್ಚು ಮಾಡದೆ, ಐಫೋನ್ 15 ಪ್ಲಸ್ ಅನ್ನು ಮನೆಗೆ ಕೊಂಡೊಯ್ಯಬಹುದು.
ಹೌದು, ಫ್ಲಿಪ್ಕಾರ್ಟ್ ಸೈಟ್ನಲ್ಲಿ ಐಫೋನ್ 15 ಪ್ಲಸ್ ಬರೋಬ್ಬರಿ 18,000 ರೂ.ಗಳ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಆಪಲ್ 2023 ರಲ್ಲಿ ಈ ಐಫೋನ್ ಅನ್ನು ಬಿಡುಗಡೆ ಮಾಡಿತ್ತು. ಇದು A16 ಬಯೋನಿಕ್ ಪ್ರೊಸೆಸರ್ನಲ್ಲಿ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 48 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಜೊತೆಗೆ 12 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಈ ಮೊಬೈಲ್ 6.1 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಫೋನಿನ ಹೊಸ ಬೆಲೆ, ಆಫರ್ಗಳು ಮತ್ತು ಇನ್ನುಳಿದ ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.

ಐಫೋನ್ 15 ಪ್ಲಸ್ ಹೊಸ ಬೆಲೆ ಮತ್ತು ಆಫರ್ಗಳು
ಐಫೋನ್ 15 ಪ್ಲಸ್ ಸ್ಮಾರ್ಟ್ಫೊನ್ 79,900 ರೂ.ಗೆ ಬಿಡುಗಡೆಯಾಗಿತ್ತು. ಪ್ರಸ್ತುತ ಈ ಐಫೋನ್ ಫ್ಲಿಪ್ಕಾರ್ಟ್ನಲ್ಲಿ ಬಿಡುಗಡೆ ಬೆಲೆಗಿಂತ ಕೇವಲ 66,999 ರೂ. ಕಡಿಮೆಗೆ ಮಾರಾಟವಾಗುತ್ತಿದೆ. ಜೊತೆಗೆ ಬ್ಯಾಂಕ್ ಆಫ್ ಬರೋಡಾ, ಎಚ್ಎಸ್ಬಿಸಿ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಸೇರಿದಂತೆ ಆಯ್ದ ಕ್ರೆಡಿಟ್ ಕಾರ್ಡ್ಗಳ ಮೇಲೆ ಹೆಚ್ಚುವರಿ ರಿಯಾಯಿತಿ ಲಭ್ಯವಿದೆ. ನೀವು ಈ ಫೋನ್ ಖರೀದಿಸಿದರೆ, 5000 ರೂ.ಗಳ ರಿಯಾಯಿತಿ ಸಿಗುತ್ತದೆ.
ಇದಲ್ಲದೆ ಇಎಂಐ ಆಫರ್ ಭಾಗವಾಗಿ, ಬ್ಯಾಂಕ್ ಆಫ್ ಬರೋಡಾ ಮತ್ತು ಕೆನರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳೊಂದಿಗೆ ಹೆಚ್ಚುವರಿ 5,500 ರೂ.ಗಳ ಡಿಸ್ಕೌಂಟ್ ನೀಡಲಾಗುತ್ತಿದೆ. ಜೊತೆಗೆ ಎಕ್ಸ್ಚೇಂಜ್ ಆಫರ್ ಅಡಿಯಲ್ಲಿ ಇನ್ನೂ ಹೆಚ್ಚು ಹಣ ಉಳಿತಾಯ ಮಾಡಬಹುದು. ಈ ಮೂಲಕ ನೀವು ಐಫೋನ್ 15 ಪ್ಲಸ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು. ಐಫೋನ್ 15 ಪ್ಲಸ್ ಹಸಿರು, ಗುಲಾಬಿ, ಹಳದಿ, ಕಪ್ಪು ಮತ್ತು ನೀಲಿ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.
ಐಫೋನ್ 15 ಪ್ಲಸ್ ವೈಶಿಷ್ಟ್ಯಗಳು
ಡಿಸ್ಪ್ಲೇ ಮತ್ತು ಪ್ರೊಸೆಸರ್ ವಿವರ
ಐಫೋನ್ 15 ಪ್ಲಸ್ ಸ್ಮಾರ್ಟ್ಫೊನ್ 6.7 ಇಂಚಿನ OLED ಡಿಸ್ಪ್ಲೇ ಹೊಂದಿದೆ. ಇದು 60Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ದೊಡ್ಡ ಡಿಸ್ಲ್ಪೇ ಬಯಸುವ ಐಫೋನ್ ಪ್ರಿಯರಿಗೆ ಇದು ಉತ್ತಮ ಆಯ್ಕೆಯಾಗಿದೆ. ಈ ಐಫೋನ್ A16 ಬಯೋನಿಕ್ ಪ್ರೊಸೆಸರ್ನೊಂದಿಗೆ ಬಿಡುಗಡೆಯಾಗಿದೆ. ಇದು ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ.
ಕ್ಯಾಮೆರಾ ಮತ್ತು ಸ್ಟೋರೇಜ್ ಆಯ್ಕೆ
ಐಫೋನ್ 15 ಪ್ಲಸ್ ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ದ್ವಿತೀಯ (ಅಲ್ಟ್ರಾವೈಡ್) ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ಮೊಬೈಲ್ 128GB ಸ್ಟೋರೇಜ್, 256GB ಸ್ಟೋರೇಜ್ ಮತ್ತು 512GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ.
ಬ್ಯಾಟರಿ ಮತ್ತು ಇತರೆ ವೈಶಿಷ್ಟ್ಯಗಳು
ಐಫೋನ್ 15 ಪ್ಲಸ್ ಫೋನ್ 4383mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಇದು ಯುಎಸ್ಬಿ ಟೈಪ್ ಸಿ ಚಾರ್ಜಿಂಗ್ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G, 4G VOLTE, 4G, 3G, 2G ಮತ್ತು ಬ್ಲೂಟೂತ್ v5.3 ಸೇರಿದಂತೆ ಹಲವು ಉತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ.


Click it and Unblock the Notifications








