Home
ಮೊಬೈಲ್

iPhone 16 ಬೆಲೆ ಭಾರೀ ಇಳಿಕೆ: Croma Sale ನಲ್ಲಿ ಆಕರ್ಷಕ ಆಫರ್!

ನೀವು ಆಪಲ್ ಉತ್ಪನ್ನಗಳನ್ನು ಖರೀದಿಸಲು ಯೋಚಿಸಿದ್ದೀರಾ?..ಹಾಗಾದರೆ, ಇದೀಗ ನಿಮಗೆ ಉತ್ತಮ ಅವಕಾಶ ದೊರಕಿದೆ. ಜನಪ್ರಿಯ ರೀಟೇಲ್ ಫ್ಲಾಟ್‌ಫಾರ್ಮ್ Croma ಸಂಸ್ಥೆಯ "Everything Apple Sale" ಮಾರಾಟವನ್ನು ಆರಂಭಿಸಿದ್ದು, ಈ ಸೇಲ್‌ನಲ್ಲಿ iPhone, MacBook, AirPods ಮತ್ತು Apple Watch ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ಗಮನಾರ್ಹ ರಿಯಾಯಿತಿಗಳು ಲಭ್ಯವಾಗುತ್ತಿವೆ. ಇದರ ಜೊತೆಗೆ, ಬ್ಯಾಂಕ್ ಡಿಸ್ಕೌಂಟ್, ಎಕ್ಸ್‌ಚೇಂಜ್ ಬೋನಸ್‌, ವಿಶೇಷ ಕೂಪನ್‌ಗಳು ಮತ್ತು Tata Neu Coins ಬಳಸಿದರೆ ಆಪಲ್ ಉತ್ಪನ್ನಗಳ ಪರಿಣಾಮಕಾರಿ ಬೆಲೆ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.

Croma ತಿಳಿಸಿರುವಂತೆ, ಮಾರ್ಚ್ 8 ರವರೆಗೆ Everything Apple Sale ಮಾರಾಟ ನಡೆಯಲಿದ್ದು, ಗ್ರಾಹಕರು iPhone ಮಾದರಿಗಳ ಮೇಲೆ ಹೆಚ್ಚು ಆಕರ್ಷಕ ಡೀಲ್‌ಗಳನ್ನು ಪಡೆಯಬಹುದು. ಈ ಸೇಲ್‌ನಲ್ಲಿ iPhone 16 ಆರಂಭಿಕ ಬೆಲೆ ರೂ. 61,900 ಆಗಿದ್ದು, ಹಳೆಯ ಫೋನ್ ಎಕ್ಸ್‌ಚೇಂಜ್ ಮತ್ತು ಬ್ಯಾಂಕ್ ಆಫರ್‌ಗಳನ್ನು ಸೇರಿಸಿದರೆ 128GB ಮಾದರಿಯ ಪರಿಣಾಮಕಾರಿ ಬೆಲೆ ಸುಮಾರು ರೂ. 35,991ರವರೆಗೆ ಇಳಿಯಬಹುದು ಎಂದು ತಿಳಿಸಲಾಗಿದೆ. ಹೊಸ ತಂತ್ರಜ್ಞಾನ ಮತ್ತು ಉತ್ತಮ ಕ್ಯಾಮೆರಾ ಅನುಭವವನ್ನು ಕಡಿಮೆ ದರದಲ್ಲಿ ಪಡೆಯಲು ಬಯಸುವವರಿಗೆ ಇದು ಪ್ರಮುಖ ಆಯ್ಕೆಯಾಗಬಹುದು.

ಹೊಸ ತಲೆಮಾರಿನ iPhone 17 ಕೂಡ ಈ ಮಾರಾಟದಲ್ಲಿ ಸೇರಿಸಲಾಗಿದೆ. 256GB ಮಾದರಿಯು ವಿವಿಧ ಆಫರ್‌ಗಳನ್ನು ಬಳಸಿದರೆ ಸುಮಾರು ರೂ. 44,768ರ ಪರಿಣಾಮಕಾರಿ ಬೆಲೆಗೆ ಸಿಗಬಹುದು. ಇತ್ತೀಚಿನ ಪ್ರೊಸೆಸರ್ ಹಾಗೂ ಸುಧಾರಿತ ಫೀಚರ್‌ಗಳನ್ನು ಹೊಂದಿರುವ ಈ ಮಾದರಿ, ಪ್ರೀಮಿಯಂ ಫೋನ್ ಖರೀದಿಸಲು ಬಯಸುವವರಿಗೆ ಆಕರ್ಷಕ ಆಯ್ಕೆ. ಇನ್ನೂ ಬಜೆಟ್ ಸ್ನೇಹಿ ಆಯ್ಕೆಗಳನ್ನು ನೋಡಿದರೆ iPhone 15 ರೂ. 54,790ಕ್ಕೆ, iPhone 14 ರೂ. 52,190ಕ್ಕೆ ಮತ್ತು iPhone 13 ರೂ. 45,690ಕ್ಕೆ ಲಭ್ಯವಿದೆ. ವಿವಿಧ ಬೆಲೆ ಶ್ರೇಣಿಯಲ್ಲಿ ಆಯ್ಕೆಗಳು ದೊರೆಯುತ್ತಿರುವುದು ಗ್ರಾಹಕರಿಗೆ ಲಾಭಕರ.

iPhone 16 ಬೆಲೆ ಭಾರೀ ಇಳಿಕೆ: Croma Sale ನಲ್ಲಿ ಆಕರ್ಷಕ ಆಫರ್!

ಲ್ಯಾಪ್‌ಟಾಪ್ ವಿಭಾಗದಲ್ಲೂ ವಿಶೇಷ ಕಡಿತಗಳು ಗಮನ ಸೆಳೆಯುತ್ತಿವೆ. ಈ ಸೇಲ್‌ನಲ್ಲಿ MacBook Air M4 ರೂ. 85,990ರಿಂದ ಪ್ರಾರಂಭವಾಗುತ್ತದೆ. ವಿದ್ಯಾರ್ಥಿ ರಿಯಾಯಿತಿ ಮತ್ತು ಹಳೆಯ ಲ್ಯಾಪ್‌ಟಾಪ್ ಎಕ್ಸ್‌ಚೇಂಜ್ ಸೌಲಭ್ಯಗಳನ್ನು ಸೇರಿಸಿದರೆ ಪರಿಣಾಮಕಾರಿ ಬೆಲೆ ಸುಮಾರು ರೂ. 59,320ರವರೆಗೆ ಇಳಿಯಬಹುದು. ಹೆಚ್ಚಿನ ಕಾರ್ಯಕ್ಷಮತೆ ಅಗತ್ಯವಿರುವವರಿಗೆ MacBook Pro 14 ರೂ. 1,84,900ರಿಂದ ಲಭ್ಯವಿದ್ದು, ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೇಲೆ ಹೆಚ್ಚುವರಿ ಕ್ಯಾಶ್‌ಬ್ಯಾಕ್ ಸಿಗಬಹುದು.

ಆಕ್ಸೆಸರೀಸ್ ವಿಭಾಗದಲ್ಲೂ ಉತ್ತಮ ಆಫರ್‌ಗಳು ಲಭ್ಯವಿವೆ. AirPods Pro 3 ರೂ. 25,900ರಿಂದ ರೂ. 23,900ಕ್ಕೆ ಇಳಿದಿದ್ದು, Tata Neu Coins ಬಳಕೆ ಮಾಡಿದರೆ ಸುಮಾರು ರೂ. 23,310ಕ್ಕೆ ದೊರೆಯಬಹುದು. ಸ್ಮಾರ್ಟ್‌ವಾಚ್ ವಿಭಾಗದಲ್ಲಿ Apple Watch SE 3 ರೂ. 23,900 ರಿಂದ ಪ್ರಾರಂಭವಾಗುತ್ತದೆ. ಪ್ರೀಮಿಯಂ ಆಯ್ಕೆಯನ್ನು ಬಯಸುವವರಿಗೆ Apple Watch Series 11 ರೂ. 44,400ರಿಂದ ಲಭ್ಯವಿದೆ. ಆನ್‌ಲೈನ್ ಹಾಗೂ ನೇರ ಅಂಗಡಿಗಳಲ್ಲಿ ಈ ಎಲ್ಲಾ ಆಫರ್‌ಗಳು ಅನ್ವಯವಾಗುವುದರಿಂದ ಗ್ರಾಹಕರು ತಮಗೆ ಅನುಕೂಲವಾದ ರೀತಿಯಲ್ಲಿ ಖರೀದಿ ಮಾಡಬಹುದು.

ಒಟ್ಟಾರೆ, ಈ "Everything Apple Sale" ನಲ್ಲಿ ಸೀಮಿತ ಅವಧಿಗೆ ಮಾತ್ರ ಲಭ್ಯವಿರುವುದರಿಂದ ಆಸಕ್ತರು ಶೀಘ್ರ ನಿರ್ಧಾರ ಕೈಗೊಳ್ಳಬೇಕು. ಆದರೆ ಅಂತಿಮ ಬೆಲೆ ಬ್ಯಾಂಕ್ ಷರತ್ತುಗಳು, ಎಕ್ಸ್‌ಚೇಂಜ್ ಮೌಲ್ಯ ಮತ್ತು ಲಭ್ಯವಿರುವ ಸೌಲಭ್ಯಗಳ ಮೇಲೆ ಅವಲಂಬಿತವಾಗಿರುವುದರಿಂದ ಖರೀದಿಸುವ ಮೊದಲು ಎಲ್ಲಾ ವಿವರಗಳನ್ನು ಪರಿಶೀಲಿಸುವುದು ಸೂಕ್ತ. ಸರಿಯಾದ ಯೋಜನೆ ಮತ್ತು ಆಫರ್‌ಗಳ ಸಂಯೋಜನೆಯೊಂದಿಗೆ ಪ್ರೀಮಿಯಂ ಆಪಲ್ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಪಡಿಸುವ ಅವಕಾಶ ಇದಾಗಿದೆ.

Best Mobiles in India

English summary
Croma has launched its “Everything Apple Sale,” offering attractive discounts on iPhones, MacBooks, AirPods, and Apple Watch models. With bank offers, exchange bonuses, coupons, and Tata Neu Coins, customers can get Apple devices at significantly reduced effective prices until March 8.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+