iPhone 16 Pro ಮತ್ತು iPhone 16 Pro Max ಬಿಡುಗಡೆ: ರಾಶಿ ಫೀಚರ್ಸ್.. ಬೆಲೆ ಎಷ್ಟು ಗೊತ್ತಾ?
ದಿ ವೇಟ್ ಈಸ್ ಓವರ್..! ಇದುವೇ ಐಫೋನ್ ಪ್ರಿಯರು ಕಾಯುತ್ತಿದ್ದ ಹಾರ್ಟ್ ಫೇವರಿಟ್ ಫೋನ್‌ಗಳು. ಹೌದು, ಅಂತೂ ಇಂತೂ ಆಪಲ್‌ನ ಎರಡು ಹೊಸ ಐಫೋನ್‌ಗಳು ಭಾರತದಲ್ಲಿ ಬಿಡುಗಡೆಯಾಗಿವೆ. ಟೆಕ್ ದೈತ್ಯ ಆಪಲ್ ಕಂಪನಿಯು ತನ್ನ 'ಇಟ್ಸ್ ಗ್ಲೋಟೈಮ್' ಈವೆಂಟ್‌ನಲ್ಲಿ ಬಹು ನಿರೀಕ್ಷಿತ ಆಪಲ್ 16 ಸರಣಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಐಫೋನ್ 16 ಪ್ರೊ (iPhone 16 Pro) ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ (iPhone 16 Pro Max) ಅನ್ನು ಅದ್ಧೂರಿಯಾಗಿ ಲಾಂಚ್ ಮಾಡಲಾಯಿತು. ಈ ಹೊಸ ಐಫೋನ್‌ಗಳ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.
ಆಪಲ್ ಕಂಪನಿಯು ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊದಲ್ಲಿರುವ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ 'ಇಟ್ಸ್ ಗ್ಲೋಟೈಮ್' ಸಮಾರಂಭದಲ್ಲಿ ಐಫೋನ್ 16 ಸರಣಿಯನ್ನು ಲೋಕಾರ್ಪಣೆಗೊಳಿಸಿತು. ನಿರೀಕ್ಷೆಯಂತೆ ಈ ಸರಣಿಯಲ್ಲಿ ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಅನ್ನು ರಿಲೀಸ್ ಮಾಡಲಾಯಿತು. ಆಪಲ್ ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ ಅನ್ನು ದೊಡ್ಡ ಡಿಸ್ಪ್ಲೇಯೊಂದಿಗೆ ಪರಿಚಯಿಸಲಾಗಿದೆ. ಐಫೋನ್ 16 ಪ್ರೊ 6.3 ಇಂಚಿನ ಡಿಡ್ಪ್ಲೇ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ 6.9 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ.

ಐಫೋನ್ 16 ಪ್ರೊ, ಐಫೋನ್ 16 ಪ್ರೊ ಮ್ಯಾಕ್ಸ್ ಬೆಲೆ
ಐಫೋನ್ 16 ಪ್ರೊನ 128GB ಸ್ಟೋರೇಜ್ ಬೆಲೆ = 84,000 ರೂ.
ಐಫೋನ್ 16 ಪ್ರೊ ಮ್ಯಾಕ್ಸ್‌ನ 256GB ಸ್ಟೋರೇಜ್ ಬೆಲೆ = 1,00,700 ರೂ.
iPhone 16 Pro ಮೊಬೈಲ್‌ನ 128GB ಸ್ಟೋರೇಜ್ ರೂಪಾಂತರ ಬೆಲೆ 84,000 ರೂ. ($999) ನಿಂದ ಪ್ರಾರಂಭವಾಗುತ್ತದೆ. ಆದರೆ, iPhone 16 Pro Max ಫೋನಿನ 256GB ಸ್ಟೋರೇಜ್ ರೂಪಾಂತರವನ್ನು 1,00,700 ರೂ.ಗಳ ($1199) ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ನೀವು ಡೆಸರ್ಟ್ ಟೈಟಾನಿಯಂ, ನ್ಯಾಚುರಲ್ ಟೈಟಾನಿಯಂ, ವೈಟ್ ಟೈಟಾನಿಯಂ ಮತ್ತು ಬ್ಲ್ಯಾಕ್ ಟೈಟಾನಿಯಂ ಬಣ್ಣ ಆಯ್ಕೆಗಳಲ್ಲಿ 512GB ಮತ್ತು 1TB ಸ್ಟೋರೇಜ್ ರೂಪಾಂತರಗಳಲ್ಲಿ ಈ ಫೋನ್‌ಗಳನ್ನು ಖರೀದಿಸಬಹುದು.
ಈ ಎರಡು ಪ್ರಮುಖ ಐಫೋನ್‌ಗಳ ಮಾರಾಟವು ಸೆಪ್ಟೆಂಬರ್ 20 ರಿಂದ ಪ್ರಾರಂಭವಾಗಲಿದೆ. ಶುಕ್ರವಾರದಿಂದ ಮುಂಗಡ ಬುಕ್ಕಿಂಗ್ ಆರಂಭವಾಗಲಿದೆ. ನೀವು ಆಪಲ್‌ನ ವೆಬ್‌ಸೈಟ್ ಮತ್ತು ಅಧಿಕೃತ ಚಿಲ್ಲರೆ ವ್ಯಾಪಾರಿಗಳ ಮೂಲಕ ಈ ಫೋನ್‌ಗಳನ್ನು ಖರೀದಿಸಬಹುದು.
ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್‌ನ ವೈಶಿಷ್ಟ್ಯಗಳು
ಆಪಲ್ ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಅನ್ನು ಕ್ರಮವಾಗಿ 6.3 ಇಂಚಿನ ಮತ್ತು 6.9 ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಇದು 120Hz ರಿಫ್ರೆಶ್ ರೇಟ್, 2,000 ನಿಟ್ಸ್ ವರೆಗೆ ಗರಿಷ್ಠ ಬ್ರೈಟ್‌ನೆಸ್ ಮತ್ತು ಆಪಲ್‌ನ ಅಪ್‌ಗ್ರೇಡ್ ಮಾಡಿದ ಸೆರಾಮಿಕ್ ಶೀಲ್ಡ್ ರಕ್ಷಣೆಯನ್ನು ಹೊಂದಿದೆ.
ಎರಡೂ ಐಫೋನ್ 16 ಪ್ರೊ ಮಾದರಿಗಳು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿವೆ. ಇದು 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಇದೆ. 12 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮರಾ ಮತ್ತು 5x ಆಪ್ಟಿಕಲ್ ಜೂಮ್ ಕಾರ್ಯಕ್ಷಮತೆಯನ್ನು ನೀಡುವ 'ಟೆಟ್ರಾಪ್ರಿಸಂ' ಪೆರಿಸ್ಕೋಪ್ ಲೆನ್ಸ್, 12 ಮೆಗಾಪಿಕ್ಸೆಲ್ TrueDepth ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 4K 120fps ರೆಕಾರ್ಡಿಂಗ್ ಅನ್ನು ಸಹ ಬೆಂಬಲಿಸುತ್ತವೆ.
ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಸ್ಮಾರ್ಟ್‌ಫೋನ್‌ಗಳು iOS 18 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. ಮತ್ತು ಆಪಲ್‌ನ ಎರಡನೇ ತಲೆಮಾರಿನ 3nm A18 Pro ಚಿಪ್‌ಸೆಟ್ ಹೊಂದಿದೆ. ಕಳೆದ ವರ್ಷದ ಮಾದರಿಗಳಿಗೆ ಹೋಲಿಸಿದರೆ ಕಾರ್ಯಕ್ಷಮತೆಯಲ್ಲಿ XX ಹೆಚ್ಚಳವನ್ನು ನೀಡುವುದಾಗಿ ಕಂಪನಿ ಹೇಳಿದೆ. ಎರಡೂ ಫೋನ್‌ಗಳು ಎಲ್ಲಾ ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳಿಗೆ ಬೆಂಬಲವನ್ನು ನೀಡುತ್ತವೆ.
ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಫೋನ್ 1TB ವರೆಗೆ ಸ್ಟೋರೇಜ್ ಒಳಗೊಂಡಿದೆ. ಈ ಫೋನ್‌ಗಳು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಹೊಂದಿವೆ. ಈ ಐಫೋನ್‌ಗಳು ಡ್ಯುಯಲ್ ಸಿಮ್, 5G, 4G LTE, Wi-Fi 6E, ಬ್ಲೂಟೂತ್, GPS ಮತ್ತು NFC, ಮತ್ತು USB 3.0 ಟೈಪ್-C ಪೋರ್ಟ್ ಅನ್ನು ಒಳಗೊಂಡಿವೆ.


Click it and Unblock the Notifications








