Home
ಮೊಬೈಲ್

iPhone 16: ಇಂದು ಐಫೋನ್ 16 ಸರಣಿಯ ಆರ್ಡರ್‌ ಶುರು: ಬುಕ್ಕಿಂಗ್ ಹೇಗೆ?

iPhone 16 Series: ಆಪಲ್ ಕಂಪನಿಯು ಇತ್ತೀಚಿಗಷ್ಟೇ ಬಹು ನಿರೀಕ್ಷಿತ ಐಫೋನ್ 16 ಸರಣಿಯ (Iphone 16 Series) ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಅಮೆರಿಕ ಕ್ಯಾಲಿಫೋರ್ನಿಯಾದಲ್ಲಿರುವ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ನಾಲ್ಕು ಹೊಸ ಐಫೋನ್‌ಗಳನ್ನು ವಿಶ್ವಕ್ಕೆ ಪರಿಚಯಿಸಿತ್ತು. ಈಗಾಗಲೇ ಐಫೋನ್‌ ಪ್ರಿಯರನ್ನು ಆಕರ್ಷಿಸುವಲ್ಲಿ ಸೈ ಎನಿಸಿಕೊಂಡಿವೆ. ಈ ಫೋನ್‌ಗಳ ಬುಕ್ಕಿಂಗ್ ಭಾರತದಲ್ಲಿ ಇಂದಿನಿಂದ (ಸೆ.13) ಶುರುವಾಗಲಿದೆ. ಸೆ.20 ರಿಂದ ಮಾರಾಟ ಶುರುವಾಗಲಿದೆ. ಬನ್ನಿ, ಐಫೋನ್‌ 16 ಸರಣಿಯ ಬೆಲೆ ಎಷ್ಟು? ಮತ್ತು ಆಫರ್‌ಗಳನ್ನು ತಿಳಿಯೋಣ.

ಐಫೋನ್‌ 16 ಸರಣಿಯಲ್ಲಿ ಐಫೋನ್‌ 16, ಐಫೋನ್‌ 16 ಪ್ಲಸ್‌, ಐಫೋನ್‌ 16 ಪ್ರೊ ಹಾಗೂ ಐಫೋನ್‌ 16 ಪ್ರೊ ಮ್ಯಾಕ್ಸ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಇಂದು (ಸೆ.13) ಆಪಲ್ ಸ್ಟೋರ್ (Apple Store), ಆಪಲ್ ಇಂಡಿಯಾ ವೆಬ್‌ಸೈಟ್ (Apple India Website) ಹಾಗೂ ಅಮೆಜಾನ್ (Amazon), ಫ್ಲಿಪ್‌ಕಾರ್ಟ್‌ (Flipkart) ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಂದ ಬುಕ್ ಮಾಡಬಹುದು. ಅಥವಾ ಹತ್ತಿರದ ಸ್ಟೋರ್‌ಗಳಿಂದ ಪ್ರೀ ಬುಕ್ ಮಾಡಬಹುದು. ಹೊಸ ಐಫೋನ್‌ಗಳನ್ನು ಸೆ.20 ರಿಂದ ಖರೀದಿಸಬಹುದು.

iPhone 16: ಇಂದು ಐಫೋನ್ 16 ಸರಣಿಯ ಆರ್ಡರ್‌ ಶುರು: ಬುಕ್ಕಿಂಗ್ ಹೇಗೆ?

ಐಫೋನ್ 16 ಸರಣಿಯ ಫೋನ್‌ಗಳನ್ನು ಮುಂಗಡವಾಗಿ ಬುಕ್ಕಿಂಗ್ ಮಾಡುವುದು ಹೇಗೆ?

1. ಐಫೋನ್‌ 16 ಸರಣಿಯ ಅನ್ನು ಮುಂಗಡವಾಗಿ ಆರ್ಡರ್ ಮಾಡಲು, ಆಪಲ್ ಇಂಡಿಯಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

2. ಮೊದಲು ನೀವು ಖರೀದಿಸಲು ಬಯಸುವ ಐಫೋನ್ 16 ಬಣ್ಣವನ್ನು ಆಯ್ಕೆ ಮಾಡಿ. ಇಲ್ಲಿ ನೀಲಿ (ಅಲ್ಟ್ರಾಮರೀನ್), ಹಸಿರು (ಟೀಲ್), ಗುಲಾಬಿ, ಬಿಳಿ ಮತ್ತು ಕಪ್ಪು ಬಣ್ಣದ ಆಯ್ಕೆಗಳು ಲಭ್ಯವಿರುತ್ತವೆ. ನಿಮಗೆ ಬೇಕಾದ ಬಣ್ಣವನ್ನು ಕ್ಲಿಕ್ ಮಾಡಿ.

3. ಬಣ್ಣವನ್ನು ಆಯ್ಕೆ ಮಾಡಿದ ಬಳಿಕ, ಐಫೋನ್ 16 ಸ್ಟೋರೇಜ್‌ ಅನ್ನು ಆಯ್ಕೆ ಮಾಡಿ. 128GB, 256GB ಮತ್ತು 512GB ಸ್ಟೋರೇಜ್‌ನಲ್ಲಿ ಒಂದನ್ನು ಆಯ್ಕೆಮಾಡಿ.

4. ಬಳಿಕ ಹಳೆಯ ಫೋನನ್ನು ಎಕ್ಸ್‌ಚೇಂಜ್‌ ಮಾಡಿಕೊಳ್ಳುವ ಆಯ್ಕೆಯು ಕಾಣಿಸಿಕೊಳ್ಳುತ್ತದೆ. ನೀವು ಫೋನನ್ನು ಎಕ್ಸ್‌ಚೇಂಜ್‌ ಮಾಡಲು ಬಯಸಿದರೆ ಅದರ ವಿವರಗಳನ್ನು ನಮೂದಿಸಿ. ಮತ್ತು ನೀವು ಅದನ್ನು ನೀಡಲು ಬಯಸದಿದ್ದರೆ ನಂತರ ನೋ ಟ್ರೇಡ್-ಇನ್ ಅನ್ನು ಆಯ್ಕೆಮಾಡಿ.

5. ಆಪಲ್‌ ಕೇರ್‌ ಪ್ಲಸ್ (AppleCare+) ಕವರೇಜ್ ಖರೀದಿಸಲು ಒಂದು ಆಯ್ಕೆ ಇರುತ್ತದೆ. ಇದಕ್ಕಾಗಿ 14,900 ರೂ. ಕೇಳಲಾಗುತ್ತದೆ. ನೀವು ಇದನ್ನು ತೆಗೆದುಕೊಳ್ಳಲು ಬಯಸದಿದ್ದರೆ ಆಪಲ್‌ ಕೇರ್‌ ಪ್ಲಸ್ ಕವರೇಜ್ ಇಲ್ಲ ಎಂಬ ಆಪ್ಷನ್ ಕ್ಲಿಕ್ ಮಾಡಿ.

6. ಬಳಿಕ, ಅಂತಿಮವಾಗಿ Continue ಬಟನ್ ಒತ್ತಿರಿ. ಮತ್ತು ನೀವು ಮುಂಗಡ ಆರ್ಡರ್ ಮೊತ್ತವನ್ನು ಪಾವತಿಸಿದ ತಕ್ಷಣ ನಿಮ್ಮ ಹೊಸ ಐಫೋನ್ 16 ಅನ್ನು ಮುಂಗಡವಾಗಿ ಬುಕ್ಕಿಂಗ್ ಮಾಡಲಾಗುತ್ತದೆ.

ಐಫೋನ್ 16 ಬುಕ್ಕಿಂಗ್ ಯಾವಾಗ ಪ್ರಾರಂಭ?

ಐಫೋನ್ 16 ಅನ್ನು ಮುಂಗಡವಾಗಿ ಆರ್ಡರ್ ಮಾಡುವ ಮೂಲಕ, ನಿಮ್ಮ ಹೆಸರನ್ನು ಆಪಲ್ ಮೊದಲು ಐಫೋನ್ ನೀಡುವವರ ಪಟ್ಟಿಗೆ ಸೇರಿಸುತ್ತದೆ. ಐಫೋನ್ 16 ಸರಣಿಯ ಬುಕಿಂಗ್ ಇಂದು (ಸೆಪ್ಟೆಂಬರ್ 13) ಸಂಜೆ 5.30 ಗಂಟೆಗೆ ಪ್ರಾರಂಭವಾಗುತ್ತದೆ. ಹೊಸ ಐಫೋನ್‌ಗಳನ್ನು ಮುಂಗಡವಾಗಿ ಆರ್ಡರ್ ಮಾಡಿದವರಿಗೆ ಮೊದಲು ಮಾರಾಟ ಮಾಡಲಾಗುತ್ತದೆ. ಇದರಲ್ಲಿ ಐಫೋನ್ 16, ಐಫೋನ್ 16 ಪ್ಲಸ್, ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್‌ ಸಹ ಒಳಗೊಂಡಿರುತ್ತದೆ. ಸೆಪ್ಟೆಂಬರ್ 20 ರಿಂದ ಮಾರಾಟ ಪ್ರಾರಂಭವಾಗಲಿದೆ.

ಭಾರತದಲ್ಲಿ ಐಫೋನ್ 16 ಸರಣಿಯ ಬೆಲೆ

ಐಫೋನ್‌ 16 ಬೆಲೆ

128GB ಸ್ಟೋರೇಜ್ ಬೆಲೆ = 79,900 ರೂ.
256GB ಸ್ಟೋರೇಜ್ ಬೆಲೆ = 89,900 ರೂ.
512GB ಸ್ಟೋರೇಜ್ ಬೆಲೆ = 1,09,900 ರೂ.

ಐಫೋನ್ 16 ಪ್ಲಸ್ ಬೆಲೆ

128GB ಸ್ಟೋರೇಜ್ ಬೆಲೆ = 89,999 ರೂ.
256GB ಸ್ಟೋರೇಜ್ ಬೆಲೆ = 99,999 ರೂ.
512GB ಸ್ಟೋರೇಜ್ ಬೆಲೆ = 1,19,900 ರೂ.

ಐಫೋನ್‌ 16 ಪ್ರೊ ಬೆಲೆ

128GB ಸ್ಟೋರೇಜ್ ಬೆಲೆ = 1,19,900 ರೂ.
256GB ಸ್ಟೋರೇಜ್ ಬೆಲೆ = 1,29,900 ರೂ.
512GB ಸ್ಟೋರೇಜ್ ಬೆಲೆ = 1,49,900 ರೂ.
1TB ಸ್ಟೋರೇಜ್ ಬೆಲೆ = 1,69,900 ರೂ.

ಐಫೋನ್‌ 16 ಪ್ರೊ ಮ್ಯಾಕ್ಸ್‌ ಬೆಲೆ

256GB ಸ್ಟೋರೇಜ್ ಬೆಲೆ = 1,44,900 ರೂ.
512GB ಸ್ಟೋರೇಜ್ ಬೆಲೆ = 1,64,900 ರೂ.
1TB ಸ್ಟೋರೇಜ್ ಬೆಲೆ = 1,84,900 ರೂ.

Best Mobiles in India

English summary
iphone 16 series booking will start from today in india: Check price, specifications and more details here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+