Home
ಮೊಬೈಲ್

iPhone 16 Sale: ಐಫೋನ್​ 16 ಮಾರಾಟ ಶುರು; ಖರೀದಿಗೆ ಮುಗಿಬಿದ್ದ ಜನ.. ಸ್ಟೋರ್​ ಮುಂದೆ ಕ್ಯೂ!

iPhone 16 Sale: ಆಪಲ್ ಕಂಪನಿಯು ಇತ್ತೀಚೆಗೆ ತನ್ನ ಬಹು ನಿರೀಕ್ಷಿತ ಐಫೋನ್ 16 ಸರಣಿಯ (iPhone 16 Series) ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಅಮೆರಿಕ ಕ್ಯಾಲಿಫೋರ್ನಿಯಾದಲ್ಲಿರುವ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ 4 ಹೊಸ ಐಫೋನ್‌ಗಳನ್ನು ವಿಶ್ವಕ್ಕೆ ಪರಿಚಯಿಸಿದೆ. ಈಗಾಗಲೇ, ಐಫೋನ್‌ ಪ್ರಿಯರನ್ನು ಆಕರ್ಷಿಸುವಲ್ಲಿ ಸೈ ಎನಿಸಿಕೊಂಡಿವೆ. ಅಂದಹಾಗೆ, ಈ ಫೋನ್‌ಗಳ ಮಾರಾಟ ಇಂದಿನಿಂದ (ಸೆ.20) ಪ್ರಾರಂಭವಾಗಿದೆ. ಆಪಲ್​ ಸ್ಟೋರ್​ಗಳ ಮುಂದೆ ಜನರು ಕ್ಯೂ ನಿಂತಿದ್ದಾರೆ!

ಹೌದು, ಐಫೋನ್‌ 16 ಸರಣಿಯಲ್ಲಿ ಐಫೋನ್‌ 16, ಐಫೋನ್‌ 16 ಪ್ಲಸ್‌, ಐಫೋನ್‌ 16 ಪ್ರೊ ಹಾಗೂ ಐಫೋನ್‌ 16 ಪ್ರೊ ಮ್ಯಾಕ್ಸ್‌ ಅನ್ನು ಬಿಡುಗಡೆ ಮಾಡಲಾಗಿದೆ. ಇವು ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ಆಧಾರದ ಮೇಲೆ ಚಾಲಿತವಾಗಿವೆ. ಈ ಫೋನ್‌ಗಳನ್ನು ಖರೀದಿಸಲು ಗ್ರಾಹಕರು ಆಪಲ್ ಸ್ಟೋರ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ದೆಹಲಿ, ಮುಂಬೈ ಸೇರಿದಂತೆ ಹಲವು ಕಡೆಗಳಲ್ಲಿ ಆಪಲ್‌ ಪ್ರಿಯರು ಖರೀದಿಗೆ ವಿಶೇಷ ಆಸಕ್ತಿ ತೋರಿಸುತ್ತಿದ್ದಾರೆ.

iPhone 16 Sale: ಐಫೋನ್​ 16 ಮಾರಾಟ ಶುರು; ಆಪಲ್​ ಸ್ಟೋರ್​ಗಳ ಮುಂದೆ ಜನರ ಕ್ಯೂ!

ಹೊಸ ಐಫೋನ್‌ಗಳಲ್ಲಿ ಸುಧಾರಿತ ಕ್ಯಾಮೆರಾ ನಿಯಂತ್ರಣ ಬಟನ್ ಮತ್ತು ಆ್ಯಕ್ಷನ್ ಬಟನ್ ಎಂಬ ಎರಡು ಹೊಸ ಬಟನ್‌ಗಳನ್ನು ಪರಿಚಯಿಸಿದೆ. ಹೊಸ ವಿಶೇಷ ವಿನ್ಯಾಸದ ಎ18 ಚಿಪ್ ಅಳವಡಿಸಲಾಗಿದೆ. ನೀವು, ಇಂದಿನಿಂದ ಆಪಲ್ ಸ್ಟೋರ್ (Apple Store), ಆಪಲ್ ಇಂಡಿಯಾ ವೆಬ್‌ಸೈಟ್ (Apple India Website) ಹಾಗೂ ಅಮೆಜಾನ್ (Amazon), ಫ್ಲಿಪ್‌ಕಾರ್ಟ್‌ (Flipkart) ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಂದ ಈ ಫೋನ್‌ಗಳನ್ನು ಖರೀದಿಸಬಹುದು. ಅಥವಾ ಹತ್ತಿರದ ಸ್ಟೋರ್‌ಗಳಿಂದಲೂ ಕೊಳ್ಳಬಹುದು.

ಭಾರತದಲ್ಲಿ ಐಫೋನ್ 16 ಸರಣಿಯ ಬೆಲೆ

ಐಫೋನ್‌ 16 ಬೆಲೆ

128GB ಸ್ಟೋರೇಜ್ ಬೆಲೆ = 79,900 ರೂ.
256GB ಸ್ಟೋರೇಜ್ ಬೆಲೆ = 89,900 ರೂ.
512GB ಸ್ಟೋರೇಜ್ ಬೆಲೆ = 1,09,900 ರೂ.

ಐಫೋನ್ 16 ಪ್ಲಸ್ ಬೆಲೆ

128GB ಸ್ಟೋರೇಜ್ ಬೆಲೆ = 89,999 ರೂ.
256GB ಸ್ಟೋರೇಜ್ ಬೆಲೆ = 99,999 ರೂ.
512GB ಸ್ಟೋರೇಜ್ ಬೆಲೆ = 1,19,900 ರೂ.

ಐಫೋನ್‌ 16 ಪ್ರೊ ಬೆಲೆ

128GB ಸ್ಟೋರೇಜ್ ಬೆಲೆ = 1,19,900 ರೂ.
256GB ಸ್ಟೋರೇಜ್ ಬೆಲೆ = 1,29,900 ರೂ.
512GB ಸ್ಟೋರೇಜ್ ಬೆಲೆ = 1,49,900 ರೂ.
1TB ಸ್ಟೋರೇಜ್ ಬೆಲೆ = 1,69,900 ರೂ.

ಐಫೋನ್‌ 16 ಪ್ರೊ ಮ್ಯಾಕ್ಸ್‌ ಬೆಲೆ

256GB ಸ್ಟೋರೇಜ್ ಬೆಲೆ = 1,44,900 ರೂ.
512GB ಸ್ಟೋರೇಜ್ ಬೆಲೆ = 1,64,900 ರೂ.
1TB ಸ್ಟೋರೇಜ್ ಬೆಲೆ = 1,84,900 ರೂ.

ಐಫೋನ್ 16 ಸರಣಿಯ ವೈಶಿಷ್ಟ್ಯಗಳು

ಆಪಲ್ ಐಫೋನ್ 16 ಸರಣಿಯಲ್ಲಿ ಹಲವು ವಿಭಿನ್ನ ವೈಶಿಷ್ಟ್ಯಗಳಿವೆ. ಹೊಸ ಸರಣಿಯ ಫೋನ್‌ಗಳು ಏರೋಸ್ಪೇಸ್ ದರ್ಜೆಯ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿವೆ. ಗ್ಲಾಸ್ ಬ್ಯಾಕ್ ಫೋನ್‌ಗಳಿಗಿಂತ ಎರಡು ಪಟ್ಟು ಹೆಚ್ಚು ಬಾಳಿಕೆ ಬರುತ್ತವೆ ಎಂದು ಕಂಪನಿ ತಿಳಿಸಿದೆ. ಐಫೋನ್ 16 ಮೊಬೈಲ್ 6.1 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದನ್ನು ವೆನಿಲ್ಲಾ ರೂಪಾಂತರದೊಂದಿಗೆ ವಿನ್ಯಾಸಗೊಳಿಸಲಾಗಿದೆ. iOS 18ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಬ್ರೈಟ್​ನೆಸ್​ ಅನ್ನು 2000 ನಿಟ್‌ಗಳವರೆಗೆ ಹೆಚ್ಚಿಸಬಹುದು.

ಐಫೋನ್ 16 ಪ್ಲಸ್ ಮೊಬೈಲ್ 6.7 ಡಿಸ್ಪ್ಲೇಯನ್ನು ಹೊಂದಿದೆ. ಇದು ಸೂಪರ್ ರೆಟಿನಾ XDR OLED ಡಿಸ್ಪ್ಲೇಯನ್ನು ಒಳಗೊಂಡಿದೆ. ಹಿಂಭಾಗದಲ್ಲಿ 48 ಮೆಗಾಪಿಕ್ಸೆಲ್ ವೈಡ್ ಆ್ಯಂಗಲ್ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಹೊಂದಿದೆ. ಸೆಲ್ಫಿಗಾಗಿ ಮುಂಭಾಗ 12 ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. ಕ್ಯಾಮೆರಾ ನಿಯಂತ್ರಣ ಬಟನ್‌ನೊಂದಿಗೆ ಫೋಟೋ ಮತ್ತು ವಿಡಿಯೋಗಳನ್ನು ಬಹಳ ಸುಲಭವಾಗಿ ತೆಗೆಯಲು ಸುಧಾರಿತ ವೈಶಿಷ್ಟ್ಯವಿದೆ.

Best Mobiles in India

English summary
iPhone 16 series goes on sale in India, with long lines at Apple stores
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+