Home
ಮೊಬೈಲ್

iPhone 16: ಬರ್ತಿವೆ 4 ಹೊಸ ಐಫೋನ್: ಬೆಲೆ ಬಹಿರಂಗ.. ಏನು ವಿಶೇಷತೆ?

ಟೆಕ್‌ ದೈತ್ಯ ಆಪಲ್ ಶೀಘ್ರದಲ್ಲೇ ಐಫೋನ್ 16 ಸರಣಿಯ ಫೋನ್‌ಗಳನ್ನು ಬಿಡುಗಡೆ ಮಾಡಲಿದೆ. ಕಂಪನಿಯು ಈ ಸರಣಿಯ ನಾಲ್ಕು ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಅವುಗಳೇ.. iPhone 16, iPhone 16 Plus, iPhone 16 Pro ಮತ್ತು iPhone 16 Pro Max ಸ್ಮಾರ್ಟ್‌ಫೋನ್‌ಗಳು. ಆಪಲ್ ತನ್ನ ಮುಂಬರುವ ಫೋನ್‌ಗಳ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದರೆ, ಐಫೋನ್ 16 ಸರಣಿಯ ಹಲವು ವಿವರಗಳು ಸೋರಿಕೆಯಾಗಿವೆ. ಬನ್ನಿ, ಈ ಫೋನ್‌ಗಳ ವಿಶೇಷತೆಗಳನ್ನು ತಿಳಿಯೋಣ.

ಐಫೋನ್ 16 ಸರಣಿಯ ನಿರೀಕ್ಷಿತ ಬೆಲೆ

ಆಪಲ್ ಹಬ್ (Apple Hub) ಪ್ರಕಾರ, ಐಫೋನ್ 16 ಅನ್ನು ಆಪಲ್ ಕಂಪನಿಯು ಸುಮಾರು 67,100 ರೂ.ಗಳ ($799) ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಿದೆ. ಐಫೋನ್ 16 ಪ್ಲಸ್‌ ಫೋನಿನ ಆರಂಭಿಕ ಸುಮಾರು 75,500 ರೂ. (ಬೆಲೆ $ 899) ಇರಬಹುದು ಎಂದು ಹೇಳಲಾಗಿದೆ.

iPhone 16: ಬರ್ತಿವೆ 4 ಹೊಸ ಐಫೋನ್: ಫೀಚರ್ಸ್‌ ಲೀಕ್‌.. ಬೆಲೆ ನೋಡಿ

ಐಫೋನ್ 16 ಪ್ರೋ ಸ್ಮಾರ್ಟ್‌ಫೋನ್ ಸುಮಾರು 92,300 ರೂ.ಗಳ ($1,099) ಬೆಲೆಯನ್ನು ಹೊಂದಿರುವ ನಿರೀಕ್ಷೆಯಿದೆ. ಇದನ್ನು 256 GB ಸ್ಟೋರೇಜ್‌ ಆಯ್ಕೆಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು. ಐಫೋನ್ 16 ಸರಣಿಯ ಉನ್ನತ ರೂಪಾಂತರದ ಬಗ್ಗೆ ಹೇಳುವುದಾದರೆ, ಐಫೋನ್ 16 ಪ್ರೊ ಮ್ಯಾಕ್ಸ್‌ ಫೋನಿನ ಬೆಲೆಯು ಸುಮಾರು 1,00,700 ರೂ. ($1,199) ಹೊಂದಿರಲಿದೆ.

ಐಫೋನ್ 16 ಸರಣಿಯ ಕ್ಯಾಮೆರಾ ಹೇಗಿರಲಿದೆ?

ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಫೋನ್‌ಗಳು 48 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿರಲಿವೆ. ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್‌ ಫೋನ್ 5x ಆಪ್ಟಿಕಲ್ ಜೂಮ್ ಅನ್ನು ಸಪೋರ್ಟ್‌ ಮಾಡಲಿದೆ. ವರದಿಗಳ ಪ್ರಕಾರ, ಐಫೋನ್ 16 ಪ್ರೊ ಫೋನ್‌ಗಳು ಟೆಟ್ರಾಪ್ರಿಸಂ ಪೆರಿಸ್ಕೋಪ್ ಲೆನ್ಸ್ ಅನ್ನು ಹೊಂದಿರುವ ಸಾಧ್ಯತೆಯಿದೆ.

ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಫೋನಿನ ವೈಶಿಷ್ಟ್ಯಗಳು

ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಎರಡೂ ಫೋನ್‌ಗಳು ಆಪಲ್‌ನ ಎ18 ಚಿಪ್‌ಸೆಟ್‌ನೊಂದಿಗೆ ಬರಲಿವೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, ಇದು 8GB RAM ಅನ್ನು ಹೊಂದಿರಲಿದೆ. ಐಫೋನ್ 16 ಮೊಬೈಲ್ 60Hz ರಿಫ್ರೆಶ್ ದರದೊಂದಿಗೆ 6.1 ಇಂಚಿನ ಡಿಸ್ಲ್ಪೇಯನ್ನು ಹೊಂದಿರುವ ಸಾಧ್ಯತೆಯಿದೆ. ಐಫೋನ್ 16 ಪ್ಲಸ್ ಫೋನ್ 6.7 ಇಂಚಿನ ಡಿಸ್ಪ್ಲೇಯನ್ನು ಹೊಂದಿರುತ್ತದೆ.

ಎರಡೂ ಫೋನ್‌ಗಳು ಐಫೋನ್ 15 ಮತ್ತು ಐಫೋನ್ 15 ಪ್ಲಸ್‌ನಂತೆ ಮುಂಭಾಗದ ವಿನ್ಯಾಸವನ್ನು ಒಳಗೊಂಡಿರುತ್ತವೆ. ಐಫೋನ್ 16 ಫೋನ್ 3,561mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು ಐಫೋನ್ 15 ಫೋನಿನ 3349mAh ಬ್ಯಾಟರಿಗಿಂತ ದೊಡ್ಡದಾಗಿದೆ. ಐಫೋನ್ 16 ಪ್ಲಸ್ ಮೊಬೈಲ್ 4006mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿರಲಿದೆ. ಇದು ಐಫೋನ್ 15 ಸ್ಮಾರ್ಟ್‌ಫೋನಿನ 4383mAh ಬ್ಯಾಟರಿಗಿಂತ ಸ್ವಲ್ಪ ಚಿಕ್ಕದಾಗಿರಲಿದೆ.

iPhone 16: ಬರ್ತಿವೆ 4 ಹೊಸ ಐಫೋನ್: ಫೀಚರ್ಸ್‌ ಲೀಕ್‌.. ಬೆಲೆ ನೋಡಿ

ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್‌ ಫೋನಿನ ವೈಶಿಷ್ಟ್ಯಗಳು

ಐಫೋನ್ 16 ಪ್ರೊ 6.3 ಇಂಚಿನ ಡಿಸ್ಲ್ಪೇಯನ್ನು ಹೊಂದಿರಲಿದೆ. ಐಫೋನ್ 16 ಪ್ರೊ ಮ್ಯಾಕ್ಸ್ 6.9 ಇಂಚಿನ ಡಿಸ್ಪ್ಲೇ ಪಡೆದಿರಲಿದೆ. ಕಂಪನಿಯು ಡಿಸ್ಲ್ಪೇಯ ಗಾತ್ರವನ್ನು ಕಡಿಮೆ ಮಾಡಲಿದೆ. ಮುಂಬರುವ ಐಫೋನ್ 16 ಪ್ರೊ ಮೊಬೈಲ್‌ಗಳು ಕಂಪನಿಯ ಎ18 ಪ್ರೊ ಚಿಪ್‌ಸೆಟ್ ಅನ್ನು ಹೊಂದಿರುವ ಸಾಧ್ಯತೆಯಿದೆ. ಎರಡೂ ಫೋನ್‌ಗಳು ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳೊಂದಿಗೆ ಬರುತ್ತವೆ.

ಐಫೋನ್ 16 ಪ್ರೊ ಫೋನ್ 3,355mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುತ್ತದೆ. ಐಫೋನ್ 16 ಪ್ರೊ ಮ್ಯಾಕ್ಸ್‌ 4,676mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರಲಿದೆ. ಇನ್ನೂ, ಐಫೋನ್ 15 ಪ್ರೊ ಫೋನನ್ನು 3290mAh ಬ್ಯಾಟರಿ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್‌ 4441mAh ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಲಾಗಿದೆ.

Best Mobiles in India

English summary
iPhone 16 Series price and key specifications leaked: Know Expected Specs and more Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+