iPhone 16 Series: ಬಿಡುಗಡೆಗೂ ಮೊದಲೇ.. ಐಫೋನ್ 16 ಸರಣಿಯ ಬೆಲೆ ಸೋರಿಕೆ! ಎಷ್ಟು ಗೊತ್ತೇ?
iPhone 16 series: ಆಪಲ್ ಕಂಪನಿಯು ಐಫೋನ್ 16 ಸರಣಿಯನ್ನು (iPhone 16 series) ಮುಂದಿನ ವಾರ ಬಿಡುಗಡೆ ಮಾಡಲಿದೆ. ಈ ಸರಣಿಯಲ್ಲಿ ಕಂಪನಿಯು ನಾಲ್ಕು ಹೊಸ ಐಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಪ್ರತಿ ವರ್ಷದಂತೆ ಈ ಬಾರಿಯೂ ಬಿಡುಗಡೆಗೂ ಮುನ್ನವೇ ಈ ಫೋನ್‌ಗಳಿಗೆ ಸಂಬಂಧಿಸಿದ ಹಲವು ವಿವರಗಳು ನಿರಂತರವಾಗಿ ಸೋರಿಕೆಯಾಗಿವೆ. ಐಫೋನ್ 16 ಸರಣಿಗೆ ಸಂಬಂಧಿಸಿದ ಪ್ರಮುಖ ವಿವರಗಳನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.
ಆಪಲ್ ತನ್ನ ಐಫೋನ್ 16 ಸರಣಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಕಂಪನಿಯ ಈವೆಂಟ್ ಸೆಪ್ಟೆಂಬರ್ 9 ರಂದು 'ಗ್ಲೋಟೈಮ್' ಎಂಬ ಹೆಸರಿನೊಂದಿಗೆ ನಡೆಯಲಿದೆ. ಕಂಪನಿಯು ಹೊಸದಾಗಿ ಏನು ಪರಿಚಯಿಸಲಿದೆ ಎಂಬುದನ್ನು ತಿಳಿಯಲು ಐಫೋನ್ ಪ್ರಿಯರು ಕುತೂಹಲದಿಂದ ಕಾಯುತ್ತಿದ್ದಾರೆ. ಇತ್ತೀಚೆಗೆ, ಐಫೋನ್ 16 ಸರಣಿಯ ಬೆಲೆ, ವಿನ್ಯಾಸ ಮತ್ತು ವೈಶಿಷ್ಟ್ಯಗಳ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ. ಐಫೋನ್ 16 ಸರಣಿಯನ್ನು ಯಾವ ಬೆಲೆಗೆ ಪ್ರಾರಂಭಿಸಬಹುದು ಎಂಬುವುದನ್ನು ತಿಳಿಯಲು ಮುಂದೆ ಓದಿ.

ಐಫೋನ್ 16 ಸರಣಿಯಲ್ಲಿ ಯಾವ ಫೋನ್‌ಗಳನ್ನು ಬಿಡುಗಡೆ ಮಾಡಬಹುದು?
ಕಳೆದ ವರ್ಷದಂತೆ, ಈ ಬಾರಿಯೂ ಕಂಪನಿಯು ನಾಲ್ಕು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಿದೆ. ಐಫೋನ್ 16 ಸರಣಿಯಲ್ಲಿ, ಕಂಪನಿಯು ಮಾರುಕಟ್ಟೆಯಲ್ಲಿ iPhone 16, iPhone 16 Plus, iPhone 16 Pro ಮತ್ತು iPhone 16 Pro Max ಅನ್ನು ಲಾಂಚ್ ಮಾಡುತ್ತದೆ. ಈ ಪೈಕಿ ಐಫೋನ್ 16 ಸರಣಿಯ ಟಾಪ್ ಮಾಡೆಲ್ ಬೆಲೆ ಸುಮಾರು 2 ಲಕ್ಷ ರೂಪಾಯಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಹಲವು ವರದಿಗಳು ಹೇಳಿವೆ.
iPhone 16 ಸರಣಿಯ ವಿನ್ಯಾಸ ಸೋರಿಕೆ
ಕಂಪನಿಯು ಐಫೋನ್ 16 ಪ್ರೋನ 1TB ಸ್ಟೋರೇಜ್ ಆಯ್ಕೆಯನ್ನು ಸಹ ಪ್ರಾರಂಭಿಸುವ ಸಾಧ್ಯತೆಯಿದೆ. ಇದರ ವಿನ್ಯಾಸದಲ್ಲಿಯೂ ನೀವು ಕೆಲವು ಬದಲಾವಣೆಗಳನ್ನು ಕಾಣಬಹುದು. ವರದಿಗಳ ಪ್ರಕಾರ, ಐಫೋನ್ 16 ಪ್ರೊನಲ್ಲಿ ದೊಡ್ಡ ಡಿಸ್ಪ್ಲೇ, ತೆಳುವಾದ ಬೆಜೆಲ್‌ಗಳು ಮತ್ತು ಹೊಸ ಕ್ಯಾಮೆರಾ ವಿನ್ಯಾಸವನ್ನು ಕಾಣಬಹುದು. ಇದಲ್ಲದೆ, ಐಫೋನ್ 16 ಪ್ರೊ ಹೊಸ ಬಣ್ಣದ ಡೆಸರ್ಟ್ ಟೈಟಾನಿಯಂನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ಐಫೋನ್ 16 ಸರಣಿಯ ಬೆಲೆ (ನಿರೀಕ್ಷಿತ)
iPhone 16 ಬೆಲೆ = 67,000 ರೂ.
iPhone 16 Plus ಬೆಲೆ = 75,490 ರೂ.
iPhone 16 Pro ಬೆಲೆ = 84,000 ರೂ.
iPhone 16 Pro Max ಬೆಲೆ = 84,000 ರೂ.
ಸೋರಿಕೆಯಾದ ವಿವರಗಳ ಪ್ರಕಾರ, ಐಫೋನ್ 16 ಅನ್ನು ಭಾರತದಲ್ಲಿ ಸುಮಾರು 67,000 ರೂ.ಗಳ ($799) ಬೆಲೆಯೊಂದಿಗೆ ಪ್ರಾರಂಭವಾಗಬಹುದು. ಐಫೋನ್ 16 ಪ್ಲಸ್‌ನ ಬೆಲೆ ಅಂದಾಜು 75,490 ರೂ. ನಿಂದ ($ 899) ಪ್ರಾರಂಭವಾಗುವ ನಿರೀಕ್ಷೆಯಿದೆ. ಐಫೋನ್ 16 ಪ್ರೊ ಫೋನಿನ ಬೆಲೆ ಸುಮಾರು 84,000 ರೂ.ಗೆ ($ 999) ಪ್ರಾರಂಭವಾಗುವ ಸಾಧ್ಯತೆಯಿದೆ. ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಫೀನಿನ ಬೆಲೆ ಅಂದಾಜು 84,000 ರೂ. ($1199) ಇರುವ ನಿರೀಕ್ಷೆಯಿದೆ.
iPhone 16 ಸರಣಿ ಬಿಡುಗಡೆ ಕಾರ್ಯಕ್ರಮವನ್ನು ಎಲ್ಲಿ ವೀಕ್ಷಿಸಬಹುದು?
ಪ್ರಸ್ತುತ, ಈ ಮಾಹಿತಿಯು ಕೇವಲ ನಿರೀಕ್ಷೆಯಾಗಿದೆ. ಉಳಿದ ಸಂಪೂರ್ಣ ಮತ್ತು ನಿಖರವಾದ ಮಾಹಿತಿಯನ್ನು ನೀವು ಸೆಪ್ಟೆಂಬರ್ 9 ರಂದು ಆಪಲ್ ಈವೆಂಟ್‌ನಲ್ಲಿ ತಿಳಿಯಬಹುದು. ಐಫೋನ್ 16 ಸರಣಿ ಬಿಡುಗಡೆ ಕಾರ್ಯಕ್ರಮವು ಸ್ಟೀವ್ ಜಾಬ್ಸ್ ಥಿಯೇಟರ್, ಆಪಲ್ ಪಾರ್ಕ್, ಕ್ಯುಪರ್ಟಿನೊ, ಕ್ಯಾಲಿಫೋರ್ನಿಯಾದಲ್ಲಿ ನೇರ ಪ್ರಸಾರವಾಗಲಿದೆ. ಈ ಸಮಾರಂಭವು ಭಾರತೀಯ ಕಾಲಮಾನ ರಾತ್ರಿ 10.30 ಗಂಟೆಗೆ ಪ್ರಾರಂಭವಾಗುತ್ತದೆ. ನೀವು ಇದನ್ನು YouTube, Apple TV ಮತ್ತು ಆಪಲ್‌ನ ವೆಬ್‌ಸೈಟ್‌ನಲ್ಲಿ ಲೈವ್ ಆಗಿ ವೀಕ್ಷಿಸಬಹುದು.


Click it and Unblock the Notifications








