2025ರ ಮೂರನೇ ತ್ರೈಮಾಸಿಕ: ಮಾರಾಟವಾದ ಟಾಪ್ 10 ಸ್ಮಾರ್ಟ್‌ಫೋನ್‌ಗಳಿವು!
2025ರ ಮೂರನೇ ತ್ರೈಮಾಸಿಕದಲ್ಲಿ ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಆಪಲ್ ಮತ್ತು ಸಾಮ್ಸಂಗ್ ಕಂಪೆನಿಗಳು ಚಕ್ರಾಧಿಪತಿಗಳಾಗಿ ಆಳ್ವಿಕೆ ಮಾಡಿವೆ!. Counterpoint Research ಪ್ರಕಟಿಸಿರುವ ಇತ್ತೀಚಿನ ವರದಿಯ ಪ್ರಕಾರ, iPhone 16 ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಜಗತ್ತಿನ ಅತ್ಯಂತ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ಆಗಿ ಹೊರಹೊಮ್ಮಿದೆ. ಹೊಸ iPhone 17 ಸರಣಿಯ ಬಿಡುಗಡೆ ನಡೆದಿದ್ದರೂ, iPhone 16 ತನ್ನ ಶಕ್ತಿಶಾಲಿ ಬೇಡಿಕೆಯಿಂದಲೇ 4% ಗ್ಲೋಬಲ್ ಮಾರ್ಕೆಟ್ ಶೇರ್ ಪಡೆದುಕೊಂಡಿದೆ. iPhone 16 ಮಾತ್ರವಲ್ಲದೆ, ಆಪಲ್‌ನ ಈ iPhone 16 ಸರಣಿಯೇ ಟಾಪ್ 4 ಸ್ಥಾನಗಳನ್ನು ಕಬಳಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿಯು ಈ ಕೆಳಕಂಡಂತಿದೆ.
iPhone 16 ಸರಣಿ ಮತ್ತೆ ಟಾಪ್ ಸ್ಥಾನಗಳು
2025ರ ಮೂರನೇ ತ್ರೈಮಾಸಿಕದಲ್ಲಿ,
iPhone 16 - 1ನೇ ಸ್ಥಾನ
iPhone 16 Pro - 2ನೇ ಸ್ಥಾನ
iPhone 16 Pro Max - 3ನೇ ಸ್ಥಾನ
iPhone 16e - 4ನೇ ಸ್ಥಾನ ಪಡೆದಿವೆ.
ಹಿಂದಿನ Q3 2024ದಲ್ಲಿಯೂ ಇದೇ ರೀತಿಯ ಟ್ರೆಂಡ್ ಕಂಡುಬಂದ ಕಾರಣ, iPhone ಫ್ಲ್ಯಾಗ್‌ಶಿಪ್‌ಗಳಿಗೆ ಗ್ರಾಹಕರ ವಿಶ್ವಾಸ ಇನ್ನೂ ಬಲವಾಗಿದೆ ಎನ್ನಬಹುದು.
ಭಾರತ ಮತ್ತು ಜಪಾನ್ ಮಾರುಕಟ್ಟೆಗಳಲ್ಲಿ iPhone 16ಗೆ ಭಾರಿ ಬೇಡಿಕೆ
ಹಬ್ಬದ ಆಫರ್‌ಗಳು, ಆನ್‌ಲೈನ್ ಸೇಲ್‌ಗಳು ಮತ್ತು ಅಪ್ಗ್ರೇಡ್ ಪ್ರವೃತ್ತಿಯಿಂದ ಭಾರತದಲ್ಲಿ iPhone 16 ಮಾರಾಟ ಹೆಚ್ಚಾಗಿದೆ. ಜಪಾನ್‌ನಲ್ಲಿ ಹಿಂದಿನ ತ್ರೈಮಾಸಿಕದಲ್ಲಿ ಬೇಡಿಕೆ ಕುಂದಿದ್ದರೂ, Q3 2025ರಲ್ಲಿ ಮರುಬೇಡಿಕೆ ಕಂಡುಬಂದು ಮಾರಾಟವನ್ನು ಮತ್ತಷ್ಟು ಉತ್ತೇಜಿಸಿತು. ಈ ಎರಡು ಪ್ರಮುಖ ಮಾರುಕಟ್ಟೆಗಳು iPhone 16 ಗ್ಲೋಬಲ್ ಪರಫಾರ್ಮೆನ್ಸ್‌ಗೆ ನೇರವಾಗಿ ನೆರವಾದವು ಎಂದು ವರದಿಯು ತಿಳಿಸಿದೆ.

Samsung Galaxy A ಸರಣಿ: ಬಜೆಟ್ ಸೆಗ್ಮೆಂಟ್ ಕಿಂಗ್
ಜಾಗತಿಕ ಟಾಪ್ 10 ಪಟ್ಟಿಯಲ್ಲಿ ಆಪಲ್ ಹೊರತಾಗಿ ಸ್ಥಾನ ಪಡೆಯಲು ಯಶಸ್ವಿಯಾದ ಏಕೈಕ ಬ್ರಾಂಡ್ Samsung ಆಗಿದೆ. ಅದರ Galaxy A ಸರಣಿಯ ಹಲವು ಮಾದರಿಗಳು ಕಡಿಮೆ ಬೆಲೆಯ ವಿಭಾಗದಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
Galaxy A16 5G - 5ನೇ ಸ್ಥಾನ
Galaxy A06 - 6ನೇ ಸ್ಥಾನ
Galaxy A36 - 7ನೇ ಸ್ಥಾನ
Galaxy A56 - 8ನೇ ಸ್ಥಾನ
Galaxy A16 - 9ನೇ ಸ್ಥಾನ ಪಡೆದಿವೆ
ಈ ಫಲಿತಾಂಶ Samsungಗೆ ಬಜೆಟ್ ಮತ್ತು ಮಿಡ್-ರೇಂಜ್ ಸೆಗ್ಮೆಂಟ್‌ನಲ್ಲಿ ಇನ್ನೂ ಬಲವಾದ ಹಿಡಿತವಿದೆ ಎಂಬುದನ್ನು ತೋರಿಸುತ್ತದೆ.
ಹೊಸ iPhone 17 Pro Max: ಕಡಿಮೆ ಲಭ್ಯತೆಯಿದ್ದರೂ ಟಾಪ್ 10ಕ್ಕೆ
ಸೆಪ್ಟೆಂಬರ್ ಅಂತ್ಯದ ವೇಳೆಗೆ ಬಿಡುಗಡೆಯಾದರೂ, iPhone 17 Pro Max ಕೇವಲ ಕೆಲವು ವಾರಗಳ ಮಾರಾಟದ ಅವಧಿಯಲ್ಲಿ ಟಾಪ್ 10ರ 10ನೇ ಸ್ಥಾನಕ್ಕೆ ತಲುಪಿದೆ. ಇದು ಆಪಲ್‌ನ ಹೊಸ ಫ್ಲ್ಯಾಗ್‌ಶಿಪ್‌ಗೂ ಆರಂಭಿಕ ಹಂತದಲ್ಲೇ ಜಾಗತಿಕ ಬೇಡಿಕೆ ಬಲವಾಗಿರುವುದನ್ನು ಸೂಚಿಸುತ್ತದೆ.
2025ರ ಮೂರನೇ ತ್ರೈಮಾಸಿಕದ ದೊಡ್ಡ ಚಿತ್ರ: ಆಪಲ್ ಮತ್ತು ಸಾಮ್ಸಂಗ್ ಸಂಪೂರ್ಣ ಪ್ರಭುತ್ವ
ಒಟ್ಟಾರೆಯಾಗಿ, Q3 2025ರ ಟಾಪ್ 10 ಸ್ಮಾರ್ಟ್‌ಫೋನ್ ಪಟ್ಟಿಯನ್ನು ಗಮನಿಸಿದರೆ, ಆಪಲ್‌ನ ಪ್ರೀಮಿಯಂ iPhone 16 ಸರಣಿ ಮತ್ತು ಸಾಮ್ಸಂಗ್ನ Galaxy A ಸರಣಿ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಆಕ್ರಮಿಸಿವೆ. ಈ ಬಾರಿ ಚೀನಾ ಕಂಪೆನಿಗಳು ಸೇರಿದಂತೆ ಯಾವುದೇ ಇತರೆ ಬ್ರಾಂಡ್‌ಗಳು ಟಾಪ್ 10ಕ್ಕೆ ಪ್ರವೇಶಿಸಲಿಲ್ಲ ಎಂಬುದು ಸ್ವಲ್ಪ ಆಶ್ಚರ್ಯಕರವಾಗಿದೆ. ಜಾಗತಿಕ ಮಾರಾಟದ ಈ ಸಂಖ್ಯೆಗಳು 2025ರ ಎರಡನೇಾರ್ಧದಲ್ಲಿ iPhone 17 ಸರಣಿಯ ಪ್ರದರ್ಶನ ಹೇಗಿರಬಹುದು ಎಂಬುದರ ಬಗ್ಗೆ ಹೆಚ್ಚಿನ ನಿರೀಕ್ಷೆ ಹುಟ್ಟಿಸಿವೆ.


Click it and Unblock the Notifications








